ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramya: ಯುದ್ಧ ಬೇಡ, ಯುದ್ಧವಾದ್ರೆ ಸಾಯೋದು ನಮ್ಮ ಸೈನಿಕರೇ ಎಂದ ನಟಿ ರಮ್ಯಾ

Actress Ramya: ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಮಾಡೋದ್ರಿಂದ ಯಾರು ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದ್ದರಿಂದ ನಮ್ಮ ಸೈನಿಕರೇ ಸಾಯೋದು. ಉಗ್ರರು ಹೇಗೆ ಒಳಗೆ ಬಂದರು, ಹೀಗೆಲ್ಲಾ ಆಗಲು ಏನು ನ್ಯೂನತೆ ಅನ್ನೋದನ್ನು ತಿಳಿದುಕೊಳ್ಳಬೇಕು ಎಂದು ನಟಿ ರಮ್ಯಾ ತಿಳಿಸಿದ್ದಾರೆ.

ಯುದ್ಧವಾದ್ರೆ ಸಾಯೋದು ನಮ್ಮ ಸೈನಿಕರೇ ಎಂದ ನಟಿ ರಮ್ಯಾ

Profile Prabhakara R May 2, 2025 5:08 PM

ಬೆಂಗಳೂರು: ಯುದ್ಧ ಬೇಡ. ಯುದ್ಧದಿಂದ ಯಾರೂ ಉದ್ಧಾರ ಆಗಲ್ಲ, ಅದರಿಂದ ನಮ್ಮ ಸೈನಿಕರೇ ಸಾಯೋದು. ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ ಎಂದು ನಟಿ ರಮ್ಯಾ ಹೇಳೀದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terrorist Attack) ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಪಹಲ್ಗಾಮ್‌ನಲ್ಲಿ ದಾಳಿ ಆಗಿರುವುದು ಗುಪ್ತಚರ ವೈಫಲ್ಯ ಕಾರಣ. ಉಗ್ರರು ಹೇಗೆ ಒಳಗೆ ಬಂದರು, ಹೀಗೆಲ್ಲಾ ಆಗಲು ಏನು ನ್ಯೂನತೆ ಅನ್ನೋದನ್ನು ತಿಳಿದುಕೊಳ್ಳಬೇಕು. ಈಗ ಸರ್ಕಾರದವರು ಏನು ಆ್ಯಕ್ಷನ್ ತೆಗೆದುಕೊಳ್ತಾರೆ ಅಂತ ನೋಡಬೇಕು ಎಂದಿದ್ದಾರೆ.

ಈ ಹಿಂದೆ ಉಪೇಂದ್ರ ಜತೆಗಿನ ಸಿನಿಮಾವೊಂದಕ್ಕೆ ಕಾಶ್ಮೀರಕ್ಕೆ ಹೋಗಿ ಬಂದಿದ್ದೇನೆ. ಆಗ ನಾವು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವಾಗ ಫುಲ್ ಸೆಕ್ಯೂರಿಟಿ ಕೊಟ್ಟಿದ್ದರು. ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಮಾಡೋದ್ರಿಂದ ಯಾರು ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದ್ದರಿಂದ ನಮ್ಮ ಸೈನಿಕರೇ ಸಾಯೋದು. ನಾವು ನಾಯಕರನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ. ಇನ್ನೊಂದು ಬಾರಿ ಈ ತರ ನಡೆಯದೇ ಇರೋ ಹಾಗೇ ನೋಡಿಕೊಳ್ಳಬೇಕು. ಅದು ಬಿಟ್ಟು ಯುದ್ಧನೇ ಪರಿಹಾರ ಅಲ್ಲ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Pahalgam Terrorist Attack: ಭಾರತದ ಗಡಿದಾಟುತ್ತಿದ್ದಂತೆ ಪಾಕಿಸ್ತಾನ ಪ್ರಜೆಗೆ ಹೃದಯಾಘಾತ

ನರೇಂದ್ರ ಮೋದಿ ಅವರ ಮುಂದಿನ ನಿರ್ಧಾರ ಏನಿರಬಹುದು ಎಂದು ನಿಜವಾಗಲೂ ಗೊತ್ತಿಲ್ಲ. ನಾವು ಇಲ್ಲಿ ಇದ್ದೀವಿ, ಇದರ ಬಗ್ಗೆ ಕಾಮೆಂಟ್ ಮಾಡೋದು ಸುಲಭ. ಆದರೆ ಅಲ್ಲಿದ್ದವರಿಗೆ ಒಳಗೆ ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂದು ಗೊತ್ತಿರುತ್ತದೆ. ಹಾಗಾಗಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು. ನಾವು ಸಾಮಾನ್ಯ ಜನರು, ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸೋದ್ರಿಂದ ಟೆರರಿಸಂ ನಿಲ್ಲತ್ತದೆ ಎಂದು ಹೇಳಿದ್ರು. ಅದು ಇದುವರೆಗೂ ನಿಂತಿಲ್ಲ. ಅದಕ್ಕೆ ಉತ್ತರ ನಾಯಕರೇ ಹೇಳಬೇಕು ಎಂದು ರಮ್ಯಾ ಪ್ರಶ್ನಿಸಿದರು.