ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indo-Pak War: 1971ರ ಯುದ್ಧದಲ್ಲಿ ವಶಪಡಿಸಿಕೊಂಡ ಭೂಮಿಯನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸಿದ್ರಂತೆ ಇಂದಿರಾ ಗಾಂಧಿ

ಪಹಲ್ಗಾಮ್ ದಾಳಿ ( terror attack), ಶಿಮ್ಲಾ ಒಪ್ಪಂದದಿಂದ (Shimla Agreement ) ಪಾಕಿಸ್ತಾನ ಹಿಂದೆ ಸರಿದಿರುವುದು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಒತ್ತಾಯಗಳು ಹೆಚ್ಚಾಗುವಂತೆ ಮಾಡಿದೆ. ಇದಕ್ಕಾಗಿ 1971ರ ಯುದ್ಧ ಕಾಲದಲ್ಲಿ ಭಾರತ ತೋರಿದ್ದ ಕಠಿಣ ನಿಲುವನ್ನು ಮತ್ತೆ ಪ್ರದರ್ಶಿಸಬೇಕಿದೆ. ಈ ನಡುವೆ 1971ರ ಯುದ್ಧದ ಬಳಿಕ ಪಾಕಿಸ್ತಾನಕ್ಕೆ ಭಾರತ ಮರಳಿಸಿರುವ ಭೂಭಾಗದ ಬಗ್ಗೆ ಮತ್ತೆ ಚರ್ಚೆ ಪ್ರಾರಂಭವಾಗಿದೆ.

1971ರ ಯುದ್ಧದಲ್ಲಿ ಗೆದ್ದ ಭೂಮಿಯನ್ನು ಪಾಕ್ ಗೆ ಮರಳಿಸಿದ ಭಾರತ

ನವದೆಹಲಿ: ಕಾಶ್ಮೀರದಲ್ಲಿ (kashmir) ನಡೆದ ಪಹಲ್ಗಾಮ್ (Pahalgam) ನ ಬೈಸರನ್ ಕಣಿವೆಯಲ್ಲಿ ನಡೆದ ಉಗ್ರರ ದಾಳಿಯ (Pahalgam terror attack) ಬಳಿಕ ಭಾರತೀಯ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನ (Pakistan) ಶಿಮ್ಲಾ ಒಪ್ಪಂದದಿಂದ ( Shimla Agreement ) ಹಿಂದೆ ಸರಿದು ಯುದ್ಧಕ್ಕೆ ಕರೆ ನೀಡಿದೆ. ಇದು 1971ರ ಯುದ್ಧ ಸನ್ನಿವೇಶವನ್ನು ನೆನಪಿಸುವಂತೆ ಮಾಡಿದೆ. 1971ರ ಯುದ್ಧದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಕೆಲವು ಭೂಭಾಗವನ್ನು ವಶಪಡಿಸಿಕೊಂಡಿದ್ದು 1972 ರಲ್ಲಿ ಇಂದಿರಾ ಗಾಂಧಿ ಅವುಗಳನ್ನು ಹಿಂದಿರುಗಿಸಿದ್ದರು. ಇದೀಗ ಅಂತಹ ಸನ್ನಿವೇಶ ಮತ್ತೊಮ್ಮೆ ನಿರ್ಮಾಣವಾಗಬಹುದೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಪಹಲ್ಗಾಮ್ ದಾಳಿ, ಶಿಮ್ಲಾ ಒಪ್ಪಂದದಿಂದ ಪಾಕಿಸ್ತಾನ ಹಿಂದೆ ಸರಿದಿರುವುದು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವ ಒತ್ತಾಯಗಳು ಹೆಚ್ಚಾಗುವಂತೆ ಮಾಡಿದೆ. ಇದಕ್ಕಾಗಿ 1971ರ ಯುದ್ಧ ಕಾಲದಲ್ಲಿ ಭಾರತ ತೋರಿದ್ದ ಕಠಿಣ ನಿಲುವನ್ನು ಮತ್ತೆ ಪ್ರದರ್ಶಿಸಬೇಕಿದೆ. ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಆಘಾತ ದೇಶಾದ್ಯಂತ ಪ್ರತಿಧ್ವನಿಸುತ್ತಿದ್ದು, ಇದಕ್ಕೆ ಕೇಂದ್ರವು ತ್ವರಿತವಾಗಿ ಮತ್ತು ಹೆಚ್ಚು ನಿರ್ಣಾಯಕವಾಗಿ ಪ್ರತಿಕ್ರಿಯಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿಯ ತುರ್ತು ಸಭೆಯಲ್ಲಿ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ ಸರ್ಕಾರ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿದ ಬಳಿಕ ಪಾಕಿಸ್ತಾನವು ಭಾರತದೊಂದಿಗಿನ ಶಿಮ್ಲಾ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದೆ. ಇದರಿಂದ 1971ರ ಯುದ್ಧದ ಬಳಿಕ ಪಾಕಿಸ್ತಾನಕ್ಕೆ ಭಾರತ ಮರಳಿಸಿರುವ ಭೂಭಾಗದ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ.

1971ರ ಯುದ್ಧದ ಸಮಯದಲ್ಲಿ ಭಾರತವು ವಶಪಡಿಸಿಕೊಂಡ ಪ್ರದೇಶಗಳಲ್ಲಿ ಕರ್ತಾರ್‌ಪುರ್ ಸಾಹಿಬ್ ಕೂಡ ಒಂದು. ಇದು ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದ್ದ ಸ್ಥಳವಾಗಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ ಕೆಲವು ವಿಶ್ಲೇಷಕರು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಕುರಿತು ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಈಗಿನ ಸನ್ನಿವೇಶ ಕಳೆದುಹೋದ ನೆಲವನ್ನು ಮರಳಿ ಪಡೆಯಲು "ಸುವರ್ಣ ಅವಕಾಶ" ಎಂಬುದಾಗಿ ಹಲವಾರು ಮಂದಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Supreme Court: ಭಾರತ ತೊರೆಯಲು ಪಾಕ್‌ ಪ್ರಜೆಗಳಿಗೆ ಸೂಚನೆ; ಸುಪ್ರೀಂ ಕೋರ್ಟ್‌ ಮೊರೆ ಹೋದ ವ್ಯಕ್ತಿ

1971ರ ಯುದ್ಧದಲ್ಲಿ ಏನಾಗಿತ್ತು?

1971ರ ಯುದ್ಧದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಸೈನ್ಯವನ್ನು ಸಂಪೂರ್ಣ ಸೋಲಿಸಿ 15,000 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಭೂಭಾಗವನ್ನು ವಶಪಡಿಸಿಕೊಂಡಿತು. ಈ ವೇಳೆ 93,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಭಾರತೀಯ ಸೇನೆಯ ಮುಂದೆ ಶರಣಾದರು. ಇದು ಎರಡನೇ ಮಹಾಯುದ್ಧದ ಅನಂತರ ನಡೆದ ಅತಿದೊಡ್ಡ ಮಿಲಿಟರಿ ಶರಣಾಗತಿಗಳಲ್ಲಿ ಒಂದಾಗಿದೆ.

ಈ ವೇಳೆ ಭಾರತೀಯ ಸೇನೆಯು ವಶಪಡಿಸಿಕೊಂಡ ಪ್ರದೇಶಗಳಲ್ಲಿ ಪಂಜಾಬ್ ಪ್ರದೇಶಗಳು, ಸಿಂಧ್‌ನ ಕೆಲವು ಭಾಗಗಳು ಮತ್ತು ಬಾಲ್ಟಿಸ್ತಾನ್ ಮತ್ತು ಪಿಒಕೆಯಲ್ಲಿನ ಹಳ್ಳಿಗಳು ಸೇರಿವೆ. ಆಗ ಪ್ರಧಾನಿ ಇಂದಿರಾ ಗಾಂಧಿಯವರು ಉದಾರತೆಯ ಪ್ರದರ್ಶನ ಮಾಡಿದರು. ಗೆದ್ದಿರುವ ಭೂಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು. 1972ರಲ್ಲಿ ಶಿಮ್ಲಾ ಒಪ್ಪಂದ ಮಾಡಿಕೊಂಡು ಭಾರತವು ವಶಪಡಿಸಿಕೊಂಡ ಎಲ್ಲಾ ಭೂಮಿಯನ್ನು ಹಿಂದಿರುಗಿಸಿ, ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಇದು ಜಾಗತಿಕವಾಗಿ ಪ್ರಶಂಸಿಸಲ್ಪಟ್ಟರೂ ಈ ನಿರ್ಧಾರ ದೇಶದಲ್ಲಿ ಇಂದಿಗೂ ವಿವಾದಾತ್ಮಕವಾಗಿಯೇ ಉಳಿದಿದೆ.

1971ರ ಯುದ್ದಕ್ಕೂ ಮೊದಲು ಈಗಿನ ಬಾಂಗ್ಲಾದೇಶ ಆಗ ಪೂರ್ವ ಪಾಕಿಸ್ತಾನವಾಗಿತ್ತು. ಅಲ್ಲಿ ಮಿಲಿಟರಿ ದಬ್ಬಾಳಿಕೆ ಉಂಟಾದಾಗ ಭಾರತವು ಲಕ್ಷಾಂತರ ನಿರಾಶ್ರಿತರಿಗೆ ತನ್ನ ಬಾಗಿಲು ತೆರೆದಿತ್ತು. ಆಗ ಪ್ರಧಾನಿ ಇಂದಿರಾ ಗಾಂಧಿಯವರು ಸೇನಾ ಮುಖ್ಯಸ್ಥ ಜನರಲ್ ಸ್ಯಾಮ್ ಮಾಣೆಕ್ಷಾ ಅವರನ್ನು ಸಂಪರ್ಕಿಸಿ ಮಿಲಿಟರಿ ಹಸ್ತಕ್ಷೇಪಕ್ಕೆ ಸಿದ್ಧತೆ ನಡೆಸಿದರು.

ಸುಮಾರು 13 ದಿನಗಳ ಯುದ್ಧದಲ್ಲಿ ಪಾಕಿಸ್ತಾನ ಸೈನ್ಯ ಶರಣಾಗುವಂತೆ ಮಾಡುವಲ್ಲಿ ಮತ್ತು ಬಾಂಗ್ಲಾದೇಶವು ಸಾರ್ವಭೌಮ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು. ಯುದ್ಧದ ಕೊನೆಯಲ್ಲಿ ಭಾರತವು ಮಿಲಿಟರಿ ಮತ್ತು ರಾಜತಾಂತ್ರಿಕವಾಗಿ ಮೇಲುಗೈ ಸಾಧಿಸಿದ್ದರೂ ಅದು ಸಂಯಮವನ್ನು ಕಾಯ್ದುಕೊಂಡಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ಒತ್ತಾಯವೂ ಕಾರಣವಾಗಿತ್ತು.