ಕುಖ್ಯಾತ ಕಳ್ಳರ ಬಂಧನ, ಲಕ್ಷಾಂತರ ಮೌಲ್ಯದ ಆಭರಣಗಳು ಜಪ್ತಿ
ಪಟ್ಟಣದ ಹೊರವಲಯದಲ್ಲಿ ತಿಮಾಕಲಹಳ್ಳಿಯಲ್ಲಿ ೨೦೨೩ ರ ಏಪ್ರಿಲ್ ೨೭ ರಂದು ನರಸಿಂಹಮೂರ್ತಿ ಮತ್ತು ೨೮ ರಂದು ಸುಧಾಕರ್ ಎಂಬುವವರ ಮನೆಗಳಲ್ಲಿ ಕಳ್ಳತನಗಳಾಗಿವೆ ಎಂದು ಪೊಲೀಸರಿಗೆ ದೂರು ನೀಡಲಾಗಿರುತ್ತದೆ. ಈ ಪ್ರಕರಣಗಳನ್ನು ಭೇದಿಸಲು ಪೊಲೀಸರು ತಂಡಗಳನ್ನು ರಚನೆ ಮಾಡಿ, ಆರೋಪಿಗಳಿಗಾಗಿ ಪತ್ತೆ ಹಚ್ಚಲಾಗಿದ್ದು, ಕಳುವಾದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ

ಬಾಗೇಪಲ್ಲಿ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಎಸ್ಪಿ ಕುಶಾಲ್ ಚೌಕ್ಸೆಯವರು ಕಳ್ಳತನ ಪ್ರಕರಣಗಳನ್ನು ಭೇದಿಸಿದ ಪೊಲೀಸರೊಂದಿಗೆ ಇರುವುದು

ಬಾಗೇಪಲ್ಲಿ: ಪಟ್ಟಣದ ಪೊಲೀಸರು ಕಳ್ಳತನ ಪ್ರಕರಣಗಳನ್ನು ಬೇಧಿಸಿ ಸುಮಾರು 30 ಲಕ್ಷ ರೂಪಾಯಿಗಳು ಬೆಲೆಬಾಳುವಂತಹ ಚಿನ್ನಾಭರಣಗಳನ್ನು ಹಾಗೂ ೩ ಲಕ್ಷ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಶುಕ್ರವಾರ ಎಸ್ಪಿ ಕುಶಾಲ್ ಚೌಕ್ಸೆಯವರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಪಟ್ಟಣದ ಹೊರವಲಯದಲ್ಲಿ ತಿಮಾಕಲಹಳ್ಳಿಯಲ್ಲಿ ೨೦೨೩ ರ ಏಪ್ರಿಲ್ ೨೭ ರಂದು ನರಸಿಂಹಮೂರ್ತಿ ಮತ್ತು ೨೮ ರಂದು ಸುಧಾಕರ್ ಎಂಬುವವರ ಮನೆಗಳಲ್ಲಿ ಕಳ್ಳತನಗಳಾಗಿವೆ ಎಂದು ಪೊಲೀಸರಿಗೆ ದೂರು ನೀಡಲಾಗಿರುತ್ತದೆ. ಈ ಪ್ರಕರಣಗಳನ್ನು ಭೇದಿಸಲು ಪೊಲೀಸರು ತಂಡಗಳನ್ನು ರಚನೆ ಮಾಡಿ, ಆರೋಪಿಗಳಿಗಾಗಿ ಪತ್ತೆ ಹಚ್ಚಲಾಗಿದ್ದು, ಕಳುವಾದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ಉಮಾಶಂಕರ್(೨೭), ಜಗನ್ನಾಥ (೩೩) ಎಂದು ತಿಳಿಸಿದರು.
ಇದನ್ನೂ ಓದಿ: Chikkanayakanahalli (Tumkur) News: ಗುಣಮಟ್ಟದ ಹಾಲು ಪೂರೈಕೆಯಲ್ಲಿ ತಾಲ್ಲೂಕು ಉತ್ತಮ ದೃಢತೆ
ರಾಜ್ಯದ ಮತ್ತಷ್ಟು ಪ್ರಕರಣಗಳು ಬಯಲಿಗೆ
ಆರೋಪಿತರು ವಿಚಾರಣಾ ಸಮಯದಲ್ಲಿ ಪೊಲೀಸ್ ಠಾಣಾ ಪ್ರಕರಣಗಳಲ್ಲಿ ಮಾತ್ರವಲ್ಲದೆ ಕರ್ನಾಟಕ ರಾಜ್ಯದ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ರುವುದನ್ನು ಒಪ್ಪಿಕೊಂಡಿರುತ್ತಾರೆ. ಬಾಗೇಪಲ್ಲಿ ಮತ್ತು ಕೊಳ್ಳೆಗಾಲ ಠಾಣೆಗಳಲ್ಲಿ ತಲಾ ಎರಡೆರಡು, ಬನ್ನೇರುಘಟ್ಟ ಪೊಲೀಸ್ ಠಾಣೆ ,ಹೊನ್ನಾಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.
ಈ ಪ್ರಕರಣಗಳಲ್ಲಿ ಆರೋಪಿಗಳಿಂದ ಕಳ್ಳತನ ಮಾಡಿರುವ ಸುಮಾರು ೨೮.೦೭೨ ಲಕ್ಷ ಮೌಲ್ಯದ ಒಟ್ಟು ೩೧೯ ಗ್ರಾಂ ಬಂಗಾರದ ಒಡವೆಗಳು ಮತ್ತು ಸು.೧.೮೮ ಲಕ್ಷ ಬೆಲೆ ಬಾಳುವ ೨ ಕೆ.ಜಿ ಬೆಳ್ಳಿ ವಸ್ತುಗಳ, ಕೃತ್ಯಕ್ಕೆ ಉಪಯೋಗಿಸಿರುವ ಸ್ಯಾಂಟ್ರೋ ಕಾರ್ ಅನ್ನು ಪಡೆದುಕೊಳ್ಳಾಲಾಗಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಎಸ್ಪಿಯವರ ಸೂಚನೆಯಂತೆ ಮತ್ತು ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಪ್ರಶಾಂತ್ ಆರ್ ವರ್ಣಿ ರವರ ಸಾರಥ್ಯದಲ್ಲಿ ಕಾರ್ಯಚರಣೆ ನಡೆಸಲಾಯಿತು. ಈ ತಂಡದಲ್ಲಿ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಮುನಿ ರತ್ನಂ ಪಿ (ಅಪರಾಧ ವಿಭಾಗ), ಹಾಗೂ ಸಿಬ್ಬಂದಿಯಾದ ವೆಂಕಟರವಣ, ನಾಗೇಶ್ , ಕೃಷ್ಣಪ್ಪ, ಶ್ರೀನಾಥ, ಶ್ರೀಪತಿ, ಖದೀರ್ ಅಹ್ಮದ್, ಮೋಹನ್,ಕುಮಾರ್, ವೆಂಕಟಶಿವ, ಶಂಕರಪ್ಪ,ನೂರ್ ಬಾಷಾ, ರವಿಕುಮಾರ್, ಮುರಳಿಕೃಷ್ಣಪ್ಪರವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿ ಯಾಗಿದ್ದಾರೆ.