Viral Video: ವರನ ಡಾನ್ಸ್ ನೋಡಿ ವಧು ಫುಲ್ ಶಾಕ್- ವಿಡಿಯೊ ವೈರಲ್!
ಮದುವೆಯೊಂದರಲ್ಲಿ ವರನು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದು ಅದು ವಧುವನ್ನು ಮುಜುಗರಕ್ಕೀಡು ಮಾಡಿದೆ. ಆದರೆ ವರನು ಯಾವುದೇ ಬೇಸರವಿಲ್ಲದೇ ಅತಿಥಿಗಳ ಮನೋರಂಜನೆಗಾಗಿ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆದು ವೈರಲ್(Viral Video) ಆಗಿದೆ.


ಮದುವೆ ಎಂದರೆ ಸಂಭ್ರಮ, ಸಡಗರವಿರುತ್ತದೆ.ಖುಷಿಯಿಂದ ವರನ ಕಡೆಯವರು, ವಧುವಿನ ಕಡೆಯವರು ಡ್ಯಾನ್ಸ್ ಮಾಡುತ್ತಾರೆ.ಇದಕ್ಕೆ ಸಂಬಂಧಪಟ್ಟ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಆದರೆ ಇದೀಗ ವರನೊಬ್ಬ ಖುಷಿಯಿಂದ ಕುಣಿದು ಕುಪ್ಪಳಿಸಿದ ವಿಡಿಯೊಂದು ಸಖತ್ ಸದ್ದು ಮಾಡುತ್ತಿದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ವರನು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ್ದು ಅದು ವಧುವನ್ನು ಮುಜುಗರಕ್ಕೀಡು ಮಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾ ನೆಟ್ಟಿಗರ ಗಮನ ಸೆಳೆದು ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ವರನು ತನ್ನ ಮದುವೆಯಲ್ಲಿ ಡ್ಯಾನ್ಸ್ ಮಾಡುವುದು ಸೆರೆಯಾಗಿದೆ. ಇದರಲ್ಲಿ ವರನು ವಧುವಿನ ಬಳಿಗೆ ಬಂದ ಕೂಡಲೇ ಡ್ಯಾನ್ಸ್ ಮಾಡುತ್ತಾ ವಧುವನ್ನು ಕೂಡ ಡ್ಯಾನ್ಸ್‌ವಂತೆ ಸನ್ನೆ ಮಾಡಿ ಕರೆದಿದ್ದಾನೆ. ಆದರೆ ಅವಳು ಡ್ಯಾನ್ಸ್ ಮಾಡದೇ ಸುಮ್ಮನಾಗಿದ್ದಾಳೆ. ವರ ಮಾತ್ರ ಇದ್ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಅತಿಥಿಗಳ ಮನೋರಂಜನೆಗಾಗಿ ಸಖತ್ ಆಗಿ ಕುಣಿದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಮತ್ತು ಈ ವಿಡಿಯೊ 1.6 ಮಿಲಿಯನ್ ವ್ಯೂವ್ಸ್ ಮತ್ತು ಸಾವಿರಾರು ಲೈಕ್‍ಗಳನ್ನು ಗಳಿಸಿದೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. "ನನಗೆ ಹಾಗೆ ನೃತ್ಯ ಮಾಡಲು ಗೊತ್ತಿಲ್ಲ, ಅದಕ್ಕಾಗಿಯೇ ನಾನು ಇನ್ನೂ ಒಂಟಿಯಾಗಿದ್ದೇನೆ" ಎಂದು ಒಬ್ಬರು ಬರೆದಿದ್ದಾರೆ, ಇನ್ನೊಬ್ಬರು "ಅವರು ನೃತ್ಯ ಮಾಡುತ್ತಿದ್ದಾರೆ, ಆದರೆ ನನಗೆ ಮುಜುಗರವಾಗುತ್ತಿದೆ!" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅಂಗಡಿ ಮಾಲೀಕನ ಕಣ್ಣಿಗೆ ಖಾರದ ಪುಡಿ ಎರಚಿ ರಾಬರಿ! ಶಾಕಿಂಗ್ ವಿಡಿಯೊ ಇಲ್ಲಿದೆ
ಈ ಹಿಂದೆ ಮದುವೆಯ ದಿನ ವರನೊಬ್ಬ ಬಾಲಿವುಡ್ ಹಾಡು ‘ಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಕುಣಿದು ಕುಪ್ಪಳಿಸಿದ್ದನು. ವರನ ಈ ಕೃತ್ಯದಿಂದ ವಧುವಿನ ತಂದೆ ಕೋಪಗೊಂಡು ಮದುವೆಯನ್ನೇ ರದ್ದುಗೊಳಿಸಿದ ಘಟನೆ ದೆಹಲಿಯಲ್ಲಿ ನಡೆದಿತ್ತು . ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ವರನು ಮೆರವಣಿಗೆಯೊಂದಿಗೆ ವಿವಾಹ ಸ್ಥಳಕ್ಕೆ ಬರುವಾಗ, ಅವನ ಸ್ನೇಹಿತರು ಡ್ಯಾನ್ಸ್ ಮಾಡಲು ಒತ್ತಾಯಿಸಿದ್ದರು ಮತ್ತು ಜನಪ್ರಿಯ ಬಾಲಿವುಡ್ ಹಾಡು ಪ್ಲೇ ಮಾಡಿ ಎಲ್ಲರೂ ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಆದರೆ ವರನ ಡ್ಯಾನ್ಸ್ ವಧುವಿನ ತಂದೆಗೆ ಹಿಡಿಸಲಿಲ್ಲ. ಅನುಚಿತ ಪ್ರದರ್ಶನದಿಂದ ಕೋಪಗೊಂಡ ವಧುವಿನ ತಂದೆ ತಕ್ಷಣ ಮಧ್ಯಪ್ರವೇಶಿಸಿ, ಮದುವೆಯನ್ನು ನಿಲ್ಲಿಸಿ ಅದನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದಾನೆ. ವರನ ವರ್ತನೆಯು ತನ್ನ ಕುಟುಂಬದ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಅವಮಾನಿಸಿದೆ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದರು. ಇದರಿಂದ ವರನ ಡ್ಯಾನ್ಸ್ ಅವನ ಮದುವೆಗೆ ಕುತ್ತಾಗಿದೆ.