ಮೆಜೆಂಟಾ ಮೊಬಿಲಿಟಿಗೆ ಹೆಚ್ಚುವರಿ 20 ಯುನಿಟ್: 350 ಏಸ್ ಇವಿಗಳನ್ನು ವಿತರಿಸಿದ ಟಾಟಾ ಮೋಟಾರ್ಸ್
10 ನಗರಗಳಲ್ಲಿ ನಿಯೋಜನೆಯಾಗಿರುವ ಟಾಟಾ ಏಸ್ ಇವಿಗಳು, ಮೆಜೆಂಟಾ ಮೊಬಿಲಿಟಿಯಿಂದ ನಿರ್ವಹಿಸಲ್ಪಡುತ್ತಿದ್ದು, ಈಗಾಗಲೇ ಒಟ್ಟಾರೆಯಾಗಿ ಸುಮಾರು 50 ಲಕ್ಷ ಕಿಲೋಮೀಟರ್‌ಗಳನ್ನು ಕ್ರಮಿಸಿವೆ. ಇದರಿಂದ ಸುಮಾರು 2,500 ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರುವು ದನ್ನು ತಡೆಗಟ್ಟಲಾಗಿದೆ


ಮೆಜೆಂಟಾ ಮೊಬಿಲಿಟಿಗೆ ಹೆಚ್ಚುವರಿಯಾಗಿ 20 ಯುನಿಟ್ ಗಳನ್ನು ಒದಗಿಸುವ ಮೂಲಕ ಅವರಿಗೆ ಒಟ್ಟು 350 ಏಸ್ ಇವಿಗಳನ್ನು ವಿತರಿಸಿದ ಟಾಟಾ ಮೋಟಾರ್ಸ್; ಈ ಮೂಲಕ ನಾಲ್ಕು ಚಕ್ರದ ಇ- ಕಾರ್ಗೋ ಉತ್ಪನ್ನ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಬಲಪಡಿಸಿ ಕೊಂಡಿದೆ.
ಮೆಜೆಂಟಾ ಮೊಬಿಲಿಟಿಯ ಏಸ್ ಇವಿ ವಾಹನಗಳು ಈಗ 10 ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ ಸುಮಾರು 50 ಲಕ್ಷ ಕಿಲೋಮೀಟರ್ ಗಳನ್ನು ಕ್ರಮಿಸಿವೆ.
ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಹೆಚ್ಚುವರಿ 20 ಯುನಿಟ್ ಗಳನ್ನು ವಿತರಿಸುವ ಮೂಲಕ ಮೆಜೆಂಟಾ ಮೊಬಿಲಿಟಿಯ ಏಸ್ ಇವಿ ವಾಹನಗಳ ಸಂಖ್ಯೆಯನ್ನು 350ಕ್ಕೆ ಹೆಚ್ಚಿಸಿಕೊಂಡಿದೆ. 2023ರಲ್ಲಿ ಟಾಟಾ ಮೋಟಾರ್ಸ್ ಮತ್ತು ಮೆಜೆಂಟಾ ಮೊಬಿಲಿಟಿ ನಡುವೆ 500 ಏಸ್ ಇವಿಗಳನ್ನು ನಿಯೋಜಿಸಲು ಆಗಿರುವ ಒಪ್ಪಂದದ ಭಾಗವಾಗಿ ಟಾಟಾ ಏಸ್ ಇವಿ ಯುನಿಟ್ ಗಳನ್ನು ವಿತರಿಸಲಾಗಿದೆ.
10 ನಗರಗಳಲ್ಲಿ ನಿಯೋಜನೆಯಾಗಿರುವ ಟಾಟಾ ಏಸ್ ಇವಿಗಳು, ಮೆಜೆಂಟಾ ಮೊಬಿಲಿಟಿಯಿಂದ ನಿರ್ವಹಿಸಲ್ಪಡುತ್ತಿದ್ದು, ಈಗಾಗಲೇ ಒಟ್ಟಾರೆಯಾಗಿ ಸುಮಾರು 50 ಲಕ್ಷ ಕಿಲೋಮೀಟರ್‌ಗಳನ್ನು ಕ್ರಮಿಸಿವೆ. ಇದರಿಂದ ಸುಮಾರು 2,500 ಟನ್ ಗಳಷ್ಟು ಇಂಗಾಲದ ಡೈ ಆಕ್ಸೈಡ್ ವಾತಾವರಣ ಸೇರುವುದನ್ನು ತಡೆಗಟ್ಟಲಾಗಿದೆ. ದೇಶದ ಅತ್ಯಂತ ಅತ್ಯಾಧುನಿಕ, ಶೂನ್ಯ- ಹೊರಸೂಸುವಿಕೆಯ ಈ ವಾಣಿಜ್ಯ ವಾಹನವು ಇ-ಕಾಮರ್ಸ್, ಪಾರ್ಸೆಲ್ ಮತ್ತು ಕೊರಿಯರ್, ಎಫ್‌ಎಂಸಿಜಿ, ಎಫ್‌ಎಂಸಿಡಿ ಮತ್ತು ಡೈರಿ ಉದ್ಯಮಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಕುರಿತು ಮಾತನಾಡಿದ ಮೆಜೆಂಟಾ ಮೊಬಿಲಿಟಿಯ ಸಂಸ್ಥಾಪಕ ಮತ್ತು ಸಿಇಓ ಮ್ಯಾಕ್ಸನ್ ಲೂಯಿಸ್ ಅವರು , “ಟಾಟಾ ಏಸ್ ಇವಿ ನಿರಂತರವಾಗಿ ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚು ಸಮಯ ಕಾರ್ಯ ನಿರ್ವಹಿಸುವ ಸಾಮರ್ಥ್ಯ, ಅತ್ಯುತ್ತಮ ರೇಂಜ್ ಮತ್ತು ಚಾಲಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸುತ್ತಾ ಬಂದಿದೆ. ಈಗಾಗಲೇ 350 ವಾಹನಗಳನ್ನು ನಮ್ಮ ಸಮೂಹಕ್ಕೆ ಸೇರಿಸಿಕೊಂಡಿದ್ದು, ಇನ್ನೂ 150 ವಾಹನಗಳು ಬರಲಿವೆ. ಈ ಮೂಲಕ ನಾವು ಭಾರತದಾದ್ಯಂತ ನಮ್ಮ ಹಸಿರು ಸರಕು ಸಾಗಾಣಿಕಾ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ. ಟಾಟಾ ಮೋಟಾರ್ಸ್ ನ ವಿಶ್ವಾಸಾರ್ಹ ಸರ್ವೀಸ್ ವ್ಯವಸ್ಥೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವು 16 ನಗರಗಳಲ್ಲಿ ನಮ್ಮ ವ್ಯಾಪ್ತಿ ವಿಸ್ತರಿಸುವ ಮತ್ತು ಇಂಗಾಲ- ಮುಕ್ತಗೊಳಿಸುವ ಪ್ರಯಾಣದಲ್ಲಿ ಅವರನ್ನು ನಮ್ಮ ಮುಖ್ಯ ಪಾಲುದಾರರನ್ನಾಗಿಸಿದೆ,” ಎಂದರು.
ಇದನ್ನೂ ಓದಿ: Bangalore News: ಭೂತಾನ್‌ನ ಬೋಧನಾ ಸಮುದಾಯಕ್ಕಾಗಿ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಸಬಲೀಕರಣ' ಇಮ್ಮರ್ಸಿವ್ ಕಾರ್ಯಕ್ರಮ ಪ್ರಾರಂಭ
ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ನ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ (ಎಸ್‌ಸಿವಿ ಪಿಯು) ಶ್ರೀ ಪಿನಾಕಿ ಹಲ್ದಾರ್ ಅವರು, “ಹೊಸತನ, ಪ್ರಾಯೋಗಿಕತೆ ಮತ್ತು ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಮೂಲಕ ಭಾರತದ ಇ-ಕಾರ್ಗೋ ವಿಭಾಗವನ್ನು ಪರಿವರ್ತಿಸಲು ನಾವು ಹೆಮ್ಮೆ ಪಡುತ್ತೇವೆ. ಮೆಜೆಂಟಾ ಮೊಬಿಲಿಟಿಯು ಏಸ್ ಇವಿಯ ಮೇಲೆ ತೋರಿಸಿರುವ ನಿರಂತರ ವಿಶ್ವಾಸವು ಈ ವಾಹನದ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಅತ್ಯುತ್ತಮ ಪಾಲು ದಾರಿಕೆ ಶಕ್ತಿಗೆ ಸಾಕ್ಷಿಯಾಗಿದೆ. ನಾವು ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸುತ್ತಿಲ್ಲ, ಬದಲಿಗೆ ಭಾರತದ ನಗರಗಳಾದ್ಯಂತ ಶುದ್ಧವಾದ, ಸ್ಮಾರ್ಟ್ ಲಾಜಿಸ್ಟಿಕ್ಸ್ ವ್ಯವಸ್ಥೆಯ ಅಡಿಪಾಯ ಹಾಕುತ್ತಿದ್ದೇವೆ. ಪ್ರತಿಯೊಂದು ಏಸ್ ಇವಿ ವಿತರಣೆಯು ಶೂನ್ಯ- ಹೊರಸೂಸುವಿಕೆಯ ಕಾರ್ಗೋ ಸಾರಿಗೆಯನ್ನು ಜನಪ್ರಿಯಗೊಳಿಸುವ ಮತ್ತು ರಾಷ್ಟ್ರದ ಹಸಿರು ಸಾರಿಗೆ ಚಳವಳಿಯನ್ನು ವೇಗ ವಾಗಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ,” ಎಂದು ಹೇಳಿದರು.
ಟಾಟಾ ಏಸ್ ಇವಿ ಆಕರ್ಷಕವಾದ 161 ಕಿಮೀ ಪ್ರಮಾಣೀಕೃತ ರೇಂಜ್ ಅನ್ನು ಒದಗಿಸುತ್ತದೆ ಮತ್ತು 1000 ಕೆಜಿ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸಣ್ಣ ವಾಣಿಜ್ಯ ವಾಹನವು ಟಾಟಾ ಮೋಟಾರ್ಸ್ ನ ಫ್ಲೀಟ್ ಎಡ್ಜ್ ಕನೆಕ್ಟೆಡ್ ವಾಹನ ವೇದಿಕೆಯಿಂದ ಚಾಲಿತವಾಗಿದ್ದು, ವಾಹನ ಮತ್ತು ಚಾಲಕರ ಕಾರ್ಯಕ್ಷಮತೆಯ ಬಗ್ಗೆ ಸಂಪೂರ್ಣ ಒಳನೋಟಗಳನ್ನು ಒದಗಿಸುತ್ತದೆ. ರೀಜನರೇಟಿವ್ ಬ್ರೇಕಿಂಗ್ ಮತ್ತು ಅತ್ಯಾಧುನಿಕ ಬ್ಯಾಟರಿ ಕೂಲಿಂಗ್ ಸಿಸ್ಟಮ್ ಹೊಂದಿರುವ ಈ ವಾಹನವು ಸ್ಥಿರವಾಗಿ, ಅಡೆತಡೆಯಿಲ್ಲದೆ ಕಾರ್ಯಾಚರಣೆ ಮಾಡಲು ಅನುವು ಮಾಡಿಕೊಡುತ್ತದೆ.
200ಕ್ಕೂ ಹೆಚ್ಚು ವಿಶೇಷ ಇವಿ ಸೇವಾ ಕೇಂದ್ರಗಳ ಬೆಳೆಯುತ್ತಿರುವ ಜಾಲದ ಬೆಂಬಲ ಹೊಂದಿರುವ ಏಸ್ ಇವಿ, ವಾಹನ ಮಾಲೀಕರಿಗೆ ಅತ್ಯುತ್ತಮ ಭರವಸೆಯನ್ನು ನೀಡುತ್ತದೆ. ಭಾರತದಾದ್ಯಂತ ಏಸ್ ಇವಿಯ 8,000ಕ್ಕಿಂತ ಹೆಚ್ಚು ಯುನಿಟ್ ಗಳು ಮಾರಾಟವಾಗಿದ್ದು, ಈಗಾಗಲೇ 6 ಕೋಟಿ ಕಿಲೋ ಮೀಟರ್ ಗಳನ್ನು ಕ್ರಮಿಸಿರುವೆ ಮತ್ತು ಇವು ಭಾರತದ ಇ- ಮೊಬಿಲಿಟಿ ಕ್ಷೇತ್ರವನ್ನು ಮುನ್ನಡೆ ಸುತ್ತಿದೆ.