Viral News: 28 ವರ್ಷಗಳಿಂದ ಡ್ರೈವಿಂಗ್ ಲೈಸನ್ಸ್ ಇಲ್ಲದೇ ವಾಹನ ಚಲಾಯಿಸಿದ ವ್ಯಕ್ತಿ; ವಿಷಯ ಕೇಳಿ ಪೊಲೀಸರು ಫುಲ್ ಸುಸ್ತು
ಫ್ರಾನ್ಸ್‌ನಲ್ಲಿ ವ್ಯಕ್ತಿಯೊಬ್ಬ ಕಳೆದ 28 ವರ್ಷಗಳಿಂದ ಡ್ರೈವಿಂಗ್ ಲೈಸನ್ಸ್ ಇಲ್ಲದೇ ತನ್ನ ವಾಹನವನ್ನು ಓಡಿಸಿದ್ದಾನೆ. ಇತ್ತೀಚೆಗೆ ಸಂಚಾರಿ ತಪಾಸಣೆಯ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಕಟ್ಟುನಿಟ್ಟಾದ ಸಂಚಾರ ಕಾನೂನುಗಳನ್ನು ಹೊಂದಿರುವ ಈ ದೇಶದಲ್ಲಿ, ಇಷ್ಟು ದಿನ ಅವನು ಹೇಗೆ ಗಮನಕ್ಕೆ ಬರಲಿಲ್ಲ ಎಂದು ಪೊಲೀಸರು ಶಾಕ್ ಆಗಿದ್ದಾರೆ.


ಪ್ಯಾರಿಸ್: ವಾಹನ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಹೊಂದಿರಲೇಬೇಕು. ಒಂದು ವೇಳೆ ಅವರ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ಅವರನ್ನು ಪೊಲೀಸರು ಹಿಡಿದು ಭಾರೀ ದಂಡ ವಿಧಿಸುತ್ತಾರೆ. ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಓಡಿಸಲು ಭಯಪಡುತ್ತಾರೆ. ಆದರೆ ಫ್ರಾನ್ಸ್‌ನಲ್ಲಿ ವ್ಯಕ್ತಿಯೊಬ್ಬ ಡ್ರೈವಿಂಗ್ ಲೈಸನ್ಸ್ ಇಲ್ಲದೆ ತನ್ನ ವಾಹನವನ್ನು ಓಡಿಸಿದ್ದಾನಂತೆ. ಇತ್ತೀಚೆಗೆ ಸಂಚಾರ ತಪಾಸಣೆಯ ವೇಳೆ ಟ್ರಾಫಿಕ್ ಪೊಲೀಸರು ಆತನನ್ನು ತಡೆದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಈತ ಕಳೆದ 28 ವರ್ಷಗಳಿಂದ ಡ್ರೈವಿಂಗ್ ಲೈಸನ್ಸ್ ಇಲ್ಲದೇ ವಾಹನ ಚಲಾಯಿಸಿದ್ದಾನೆ. ಇದನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ. ಕಳೆದ ವಾರ ನಿಯಮಿತ ಸಂಚಾರ ತಪಾಸಣೆಯ ಸಮಯದಲ್ಲಿ ಆ ವ್ಯಕ್ತಿ ಸಿಕ್ಕಿಹಾಕಿಕೊಂಡಿದ್ದಾನೆ ಮತ್ತು 1997ರಿಂದ ತನ್ನ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲ ಎಂದು ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ. ಪೊಲೀಸರು ಅವನನ್ನು ಇಷ್ಟು ವರ್ಷಗಳ ಕಾಲ ಯಾಕೆ ಹಿಡಿಯಲಿಲ್ಲ ಎಂದು ತಲೆಕೆಡಿಸಿಕೊಂಡಿದ್ದಾರೆ.
ಪೊಲೀಸರು ತಿಳಿಸಿದ ಪ್ರಕಾರ, ಈ ತಿಂಗಳಲ್ಲಿ ಅಧಿಕಾರಿಗಳು ಚೆಕ್‌ಪೋಸ್ಟ್‌ನಲ್ಲಿ ಆತನ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರು ವಿಮೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕಂಡುಕೊಂಡಿದ್ದಾರೆ. ಹಾಗಾಗಿ ಅವನ ಬಳಿ ವಾಹನದ ದಾಖಲೆಗಳನ್ನು ಕೇಳಿದರು. ಆದರೆ ತನ್ನ ದಾಖಲೆಯ ಅವಧಿ ಮುಗಿದಿದೆ ಮತ್ತು ರಿನಿವಲ್‍ಗಾಗಿ ತಾನು ಅರ್ಜಿ ಸಲ್ಲಿಸಿಲ್ಲ ಎಂದು ಅವನು ಪೊಲೀಸರಿಗೆ ತಿಳಿಸಿದ್ದಾನೆ. ಹಾಗಾಗಿ ಅವರು ಆತನ ಡ್ರೈವಿಂಗ್ ಲೈಸನ್ಸ್ ಕೇಳಿದ್ದಾರೆ. ಆದರೆ ಆಗ ಆತ ತಿಳಿಸಿದ ಆಘಾತಕಾರಿ ವಿಚಾರವೆಂದರೆ ಆ ವ್ಯಕ್ತಿ 1997ರಿಂದ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುತ್ತಿದ್ದ ಎಂಬುದು. ಕಟ್ಟುನಿಟ್ಟಾದ ಸಂಚಾರ ಕಾನೂನುಗಳನ್ನು ಹೊಂದಿರುವ ಈ ದೇಶದಲ್ಲಿ, ಇಷ್ಟು ದಿನ ಅವನು ಹೇಗೆ ತಮ್ಮ ಗಮನಕ್ಕೆ ಬರಲಿಲ್ಲ ಎಂದು ಪೊಲೀಸರು ಆಶ್ಚರ್ಯಚಕಿತರಾಗಿದ್ದಾರಂತೆ. ಆತನ ಮೇಲೆ ಕಾನೂನು ಕ್ರಮ ಕೈಗೊಂಡಿದ್ದು, ಆ ವ್ಯಕ್ತಿ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ:Viral Video: ಹೆಣ್ಣು ಚಿರತೆ, ಮರಿಗಳೊಂದಿಗೆ 'ಸೆಲ್ಫಿ' ತೆಗೆದುಕೊಂಡ ಭೂಪ; ಇದೆಂಥ ಹುಚ್ಚು ಧೈರ್ಯ ನೋಡಿ
ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದ 17 ವರ್ಷದ ಅಪ್ರಾಪ್ತ ಹುಡುಗ ಬೈಕ್ ಓಡಿಸಿ ಇನ್ನೊಂದು ಬೈಕ್‍ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ ಕಾರಣ ಆತನ 42 ವರ್ಷದ ತಂದೆಯ ವಿರುದ್ಧ ಎಲ್ ಡಿವಿಷನ್ ಸಂಚಾರ ಪೊಲೀಸರು ದೂರು ದಾಖಲಿಸಿದ್ದರು. ಈ ಘಟನೆ ಮಹಾರಾಷ್ಟ್ರದ ಗೋದ್ರೇಜ್ ಗಾರ್ಡನ್ ಸಿಟಿ ಕ್ರಾಸ್‌ರೋಡ್ಸ್ ಬಳಿ ಸಂಭವಿಸಿತ್ತು. ಅಪ್ರಾಪ್ತನ ಬೈಕ್ ಮುಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಅವನ ತಲೆ ಮತ್ತು ದೇಹಕ್ಕೆ ಗಾಯವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ನಡೆದಿದ ತನಿಖೆಯಲ್ಲಿ ಬೈಕನ್ನು ಹುಡುಗನ ತಂದೆಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂಬುದು ತಿಳಿದುಬಂದಿತ್ತು. ಹಾಗಾಗಿ ಅಪ್ರಾಪ್ತನಿಗೆ ಡ್ರೈವಿಂಗ್ ಲೈಸನ್ಸ್ ಇರಲಿಲ್ಲ. ಆದರೂ ತಂದೆ ಅವನಿಗೆ ಬೈಕ್ ಓಡಿಸಲು ಅನುಮತಿ ನೀಡಿದ್ದಕ್ಕೆ ಎಲ್ ಡಿವಿಷನ್ ಸಂಚಾರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.