Seetha Rama Serial: ಹೌದು ನಾನು ಸಿಹಿ ಅಲ್ಲ: ಸೀತಮ್ಮನ ಮುಂದೆ ಸತ್ಯ ಒಪ್ಪಿಕೊಂಡ ಸುಬ್ಬಿ
ಸುಬ್ಬಿ, ಸೀತಮ್ಮ.. ಯಾಕೆ ಅಳ್ತಾ ಇದ್ದೀಯಾ.. ಏನಾಯ್ತು ಎಂದು ಕೇಳುತ್ತಾಳೆ. ಸೀತಾಳನ್ನು ಸುಬ್ಬಿ ಮುಟ್ಟಲು ಬಂದಾಗ, ನನ್ನ ಮುಟ್ಟಬೇಡ ಯಾರು ನೀನು ನನ್ನ ಮಗಳು ಅಂತ ಹೇಳಿಕೊಂಡು ಯಾಕೆ ಇಲ್ಲಿ ಬಂದಿದ್ದೀಯಾ? ಎಂದು ಸೀತಾ ಪ್ರಶ್ನಿಸಿದ್ದಾಳೆ. ಆಗ ಸುಬ್ಬಿ, ನಾನು ಸಿಹಿ ಸೀತಮ್ಮ.. ನಿನ್ನ ಮಗಳು ಸಿಹಿ ಎಂದು ಎರಡು ಮೂರು ಬಾರಿ ಹೇಳಿದ್ದಾಳೆ.

Seetha rama

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರಾವಾಹಿಯಲ್ಲಿ ಕಥಾ ನಾಯಕಿ ಸೀತಾಗೆ ಇಷ್ಟುದಿನ ಮುಚ್ಚಿಟ್ಟಿದ್ದ ಬಹುದೊಡ್ಡ ಸತ್ಯ ಗೊತ್ತಾಗಿ ಹೋಗಿದೆ. ಇಷ್ಟುದಿನ ತನ್ನ ಜೊತೆ ಇದ್ದಿದ್ದು ನನ್ನ ಮಗಳು ಸಿಹಿ ಅಲ್ಲ.. ಆಕೆ ಮಗಳಂತೆ ಕಾಣುವ ಸುಬ್ಬಿ ಎಂಬ ಸತ್ಯ ಇದೀಗ ಸೀತಾಗೆ ತಿಳಿದುಹೋಗಿದೆ. ಅಷ್ಟೇ ಅಲ್ಲದೆ ಸಿಹಿ ಬದುಕಿಲ್ಲ.. ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಕೂಡ ಗೊತ್ತಾಗಿದೆ. ಮತ್ತೊಂದೆಡೆ ನಾನು ಸಿಹಿ ಅಲ್ಲ ಎಂಬ ಸತ್ಯವನ್ನೂ ಸುಬ್ಬಿ ಸೀತಮ್ಮನ ಮುಂದೆ ಒಪ್ಪಿಕೊಂಡಿದ್ದಾಳೆ. ಒಂದರ ಹಿಂದೆ ಒಂದರಂತೆ ಸೀತಾಗೆ ಶಾಕ್ ಆಗಿದ್ದು ಧಾರಾವಾಹಿಯ ಕಥೆ ದೊಡ್ಡ ತಿರುವು ಪಡೆದುಕೊಂಡಿದೆ. ಇದು ಸೀರಿಯಲ್ ಮುಗಿಸುವ ತಂತ್ರವ ಅಥವಾ ಕುಸಿದಿರುವ ಟಿಆರ್ಪಿಯನ್ನು ಮೇಲೆತ್ತಲು ಮಾಡಿರುವ ಪ್ಲ್ಯಾನ್ ಹಾ? ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಸಿಹಿ ಸತ್ತು ಹೋಗಿದ್ದಾಳೆ ಹಾಗೂ ಇಲ್ಲಿರುವುದು ಸುಬ್ಬಿ ಎಂಬುದು ಸೀತಾಳಿಗೆ ಬಿಟ್ಟು ಮತ್ತೆಲ್ಲರಿಗೂ ತಿಳಿದಿತ್ತು. ಸೀತಾಳಿಂದ ಈ ರಹಸ್ಯವನ್ನು ಮರೆಮಾಚಲು ರಾಮ್ ಎಲ್ಲಿಲ್ಲದ ಪ್ರಯತ್ನ ಮಾಡಿದ್ದ. ಆದರೆ, ಈ ಒಂದು ಸತ್ಯ ಇದೀಗ ಭಾರ್ಗವಿ ಬಾಯಿಂದ ಹೊರಬಿದ್ದು, ಸೀತಾಳಿಗೆ ತಲುಪಿದೆ. ಭಾರ್ಗವಿಯ ಕೆಟ್ಟ ಕೆಲಸಗಳನ್ನು ಇಲ್ಲಿಯವರೆಗೂ ತನ್ನೊಳಗೆ ಹುದುಗಿಸಿಟ್ಟುಕೊಂಡಿದ್ದ ಸತ್ಯಜೀತ್, ಆ ಸತ್ಯವನ್ನು ಅಪ್ಪ ಸೂರ್ಯ ಪ್ರಕಾಶ್ ಮುಂದೆ ಹೇಳಲು ಮುಂದಾಗುತ್ತಾನೆ.
ಅಶೋಕನ ತಂದೆ-ತಾಯಿ ಸಾವಿಗೆ ರಾಮನ ಚಿಕ್ಕಪ್ಪ ಸತ್ಯ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಇದಕ್ಕೆ ಕಾರಣ ಭಾರ್ಗವಿ ಎಂದು ಸತ್ಯಜೀತ್ ಹೇಳಿದ್ದಾನೆ. ಆದರೆ, ಭಾರ್ಗವಿ ತನ್ನದೇ ಶೈಲಿಯಲ್ಲಿ ಮಾತಿನ ಮೂಲಕ ಮರಳು ಮಾಡಲು ಮುಂದಾಗಿದ್ದಾಳೆ. ಅಂದ್ರೆ ಆ ಕೊಲೆನಾ ನಾನು ಮಾಡಿದ್ದು ಅಂತಾನಾ? ಅಲ್ಲಿ ಆ ಅಶೋಕ ಸಿಹಿ ಸಾವಿಗೆ ನಾನೇ ಕಾರಣ ಅಂತ ಹೇಳ್ತಿದ್ದಾನೆ. ಇಲ್ಲಿ ವಾಣಿ- ಇಂದ್ರ ಕೊಲೆ ನಾನೇ ಮಾಡಿದ್ದು ಅಂತ ಹೇಳ್ತಿದ್ದಾನೆ ಎಂದಿದ್ದಾಳೆ ಭಾರ್ಗವಿ.
ಇಲ್ಲಿ ಸಿಹಿ ಸಾವಿಗೆ ನಾನೇ ಕಾರಣ ಅಂತ ಹೇಳ್ತಿದ್ದಾನೆ ಎಂಬ ಮಾತು ಬಂದಾಗ ಅಲ್ಲಿಗೆ ಸೀತಾ ಬಂದಿದ್ದಾಳೆ. ನಮ್ಮ ಸಿಹಿ ಸತ್ತು ಹೋಗಿದ್ದಾಳಾ ಎಂದು ಗಾಬರಿಯಲ್ಲಿಯೇ ಸೀತಾ ಪ್ರಶ್ನೆ ಮಾಡಿದ್ದಾಳೆ. ಆಗ ಎಲ್ಲ ವಿಚಾರ ಬೆಳಕಿಗೆ ಬಂದಿದೆ. ರಾಮ್ ಎಷ್ಟೇ ಸಮಾಧಾನ ಪಡಿಸಿದರೂ ಸೀತಾ ಕೇಳುತ್ತಿಲ್ಲ. ಇದೇವೇಳೆ ಅಶೋಕನ ಜೊತೆಗೆ ಸುಬ್ಬಿ ಮನೆಯೊಳಗೆ ಬರುತ್ತಾಳೆ. ಆಗ ಸೀತಾ ಸಿಹಿಯ ಫೋಟೋ ಎದುರು ಕುಳಿತುಕೊಂಡು ಅಳುತ್ತಾ ಇರುತ್ತಾಳೆ.
ಇದನ್ನು ಕಂಡು ಸುಬ್ಬಿ, ಸೀತಮ್ಮ.. ಯಾಕೆ ಅಳ್ತಾ ಇದ್ದೀಯಾ.. ಏನಾಯ್ತು ಎಂದು ಕೇಳುತ್ತಾಳೆ. ಸೀತಾಳನ್ನು ಸುಬ್ಬಿ ಮುಟ್ಟಲು ಬಂದಾಗ, ನನ್ನ ಮುಟ್ಟಬೇಡ ಯಾರು ನೀನು ನನ್ನ ಮಗಳು ಅಂತ ಹೇಳಿಕೊಂಡು ಯಾಕೆ ಇಲ್ಲಿ ಬಂದಿದ್ದೀಯಾ? ಎಂದು ಸೀತಾ ಪ್ರಶ್ನಿಸಿದ್ದಾಳೆ. ಆಗ ಸುಬ್ಬಿ, ನಾನು ಸಿಹಿ ಸೀತಮ್ಮ.. ನಿನ್ನ ಮಗಳು ಸಿಹಿ ಎಂದು ಎರಡು ಮೂರು ಬಾರಿ ಹೇಳಿದ್ದಾಳೆ. ಆದರೆ, ಇದನ್ನ ಒಪ್ಪದ ಸೀತಾ, ನನ್ನ ಹತ್ರ ಸುಳ್ಳು ಹೇಳಬೇಡ, ನನ್ಗೆ ಎಲ್ಲ ಸತ್ಯ ಗೊತ್ತಾಗಿದೆ.. ನೀನು ಯಾರು?, ನೀನು ನನ್ನ ಮಗಳು ಸಿಹಿ ಅಲ್ಲ ಅಂದಮೇಲೆ ನೀನು ಯಾರು ಹೇಳು ಎಂದು ಗದರಿದ್ದಾಳೆ. ಆಗ ಸುಬ್ಬಿ, ಹೌದು ನಾನು ಸಿಹಿ ಅಲ್ಲ.. ಎಂಬ ಸತ್ಯವನ್ನು ತೆರೆದಿಟ್ಟಿದ್ದಾಳೆ. ಸದ್ಯ ಎಲ್ಲ ಸತ್ಯ ಸೀತಾಳಿಗೆ ಗೊತ್ತಾಗಿದೆ. ಈಗ ಸೀತಾ ಏನು ಮಾಡುತ್ತಾಳೆ?, ಸುಬ್ಬಿಯನ್ನು ಒಪ್ಪಿಗೊಳ್ಳುತ್ತಾಳ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
Puttakkana Makkalu: ಪುಟ್ಟಕ್ಕನ ಮಕ್ಕಳು ಮುಕ್ತಾಯ ಆಗುತ್ತೆ ಎಂದವರಿಗೆ ಮತ್ತೊಂದು ಟ್ವಿಸ್ಟ್ ಕೊಟ್ಟ ನಿರ್ದೇಶಕರು