Viral Video: ಕಿಟಿಕಿಯ ಮೂಲಕ ಬಸ್ ಹತ್ತಲು ಪ್ರಯತ್ನಿಸಿ ನಗೆಪಾಟಲಿಗೀಡಾದ ವ್ಯಕ್ತಿ; ವಿಡಿಯೊ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಿ!
ಇಲ್ಲೊಬ್ಬ ವ್ಯಕ್ತಿ ತನಗೆ ಸೀಟು ಸಿಗುವುದಿಲ್ಲವೆಂದು ಬಸ್‍ನ ಕಿಟಿಕಿಯ ಮೂಲಕ ನುಸುಳಲು ಪ್ರಯತ್ನಿಸಿದ್ದಾನೆ. ಕೊನೆಗೆ ಕಿಟಿಕಿಯ ಗ್ಲಾಸ್ ಕಿತ್ತುಹೋಗಿ ಅದರ ಜತೆಗೆ ಕೆಳಗೆ ಬಿದ್ದಿದ್ದಾನೆ. ಈ ಘೋರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರು ಬಿದ್ದು ಬಿದ್ದು ನಕ್ಕಿದ್ದಾರೆ.


ಪ್ರತಿದಿನ ಕಚೇರಿ, ಕಾಲೇಜಿಗೆ ಹೋಗಲು ಬಸ್ ಪ್ರಯಾಣ ಮಾಡುವವರ ಪರದಾಟ ಹೇಳತೀರದು. ಕೆಲವರು ಬಸ್‍ನಲ್ಲಿ ನೂಕುನುಗ್ಗಲು ಇದ್ದರೂ ಅಪಾಯಕಾರಿಯಾಗಿ ನೇತಾಡುತ್ತಾ ಪ್ರಯಾಣಿಸುತ್ತಾರೆ. ಇನ್ನು ಕೆಲವರು ನೂಕುನುಗ್ಗಲಿನ ನಡುವೆ ಸೀಟು ಪಡೆಯಲು ಬಯಸುತ್ತಾರೆ. ಅದಕ್ಕಾಗಿ ಕೆಲವರು ಕರವಸ್ತ್ರವನ್ನು ತಮ್ಮ ಸೀಟುಗಳ ಮೇಲೆ ಹಾಕಿದರೆ, ಇನ್ನು ಕೆಲವರು ಕಿಟಕಿಯ ಮೂಲಕ ಬಸ್ಸನ್ನು ಹತ್ತಲು ಪ್ರಯತ್ನಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಒಂದು ತಮಾಷೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ಬಸ್‌ನ ಬಾಗಿಲಿನಲ್ಲಿ ನೂಕುನುಗ್ಗಲು ಇದ್ದುದರಿಂದ ತನಗೆ ಸೀಟು ಸಿಗುವುದಿಲ್ಲವೆಂದು ಬಸ್‍ನ ಕಿಟಿಕಿಯ ಮೂಲಕ ನುಸುಳಲು ಪ್ರಯತ್ನಿಸಿ ಕೆಳಗೆ ಬಿದ್ದಿದ್ದಾನೆ. ಈ ಘೋರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ವ್ಯಕ್ತಿ ಕಿಟಕಿಯ ಮೂಲಕ ಬಸ್ಸಿನೊಳಗೆ ಹತ್ತಲು ಪ್ರಯತ್ನಿಸುವುದು ಸೆರೆ ಹಿಡಿಯಲಾಗಿದೆ. ಆತ ಬಸ್‍ನ ಕಿಟಿಕಿಯನ್ನು ಓಪನ್ ಮಾಡಿ ಕಿಟಕಿ ಹಿಡಿದುಕೊಂಡು ಅದರೊಳಗೆ ತನ್ನ ಕಾಲುಗಳನ್ನು ಹಾಕಿದಾಗ, ಕಿಟಕಿಯ ಗಾಜು ಅವನ ಭಾರವನ್ನು ತಾಳಲಾರದೆ ತುಂಡಾಗಿದೆ. ಇದರಿಂದ ಆ ವ್ಯಕ್ತಿ ಕೂಡ ಕೆಳಗೆ ಬಿದ್ದಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
Kaam karne ja raha tha kaand kar ke aa gaya 😂 pic.twitter.com/G3K8Oa9Pgc
— 𝑴𝒊𝒔𝒉𝒌𝒂♡ (@Mishka_Shine) May 18, 2025
ಅದೃಷ್ಟವಶಾತ್, ಬಸ್ ಚಲಿಸದ ಕಾರಣ ಅವನಿಗೆ ಯಾವುದೇ ಗಂಭೀರ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಕೂಡಲೇ ವೈರಲ್ ಆಗಿದ್ದು ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಲಕ್ಷಾಂತರ ವ್ಯೂವ್ಸ್ ಮತ್ತು 1 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಸಾವಿರಾರು ಪಕ್ಷಿಗಳಿಗೆ ಟೆರೇಸ್ ಮೇಲೆ ಆಶ್ರಯ ನೀಡಿದ ದಂಪತಿ; ವಿಡಿಯೊ ವೈರಲ್
“ಅಂತಹ ಬಸ್‌ಗೆ ಯಾರು ಹತ್ತುತ್ತಾರೆ?" ಎಂದು ಒಬ್ಬ ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಸ್ಮೈಲ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.