ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nelamangala PLD Bank: 25 ವರ್ಷಗಳ ನಂತರ ಕಾಂಗ್ರೆಸ್‌ ತೆಕ್ಕೆಗೆ ನೆಲಮಂಗಲ ಪಿಎಲ್‌ಡಿ ಬ್ಯಾಂಕ್; ಮೈತ್ರಿಗೆ ಮುಖಭಂಗ

Nelamangala PLD Bank: ನೆಲಮಂಗಲ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸಾದಿಕ್ ಪಾಷಾ ಆಯ್ಕೆಯಾಗಿದ್ದಾರೆ. ಈ ಮೂಲಕ 25 ವರ್ಷಗಳ ನಂತರ ಕಾಂಗ್ರೆಸ್‌ ಪಕ್ಷ ಗದ್ದುಗೆ ಏರಿದೆ. ಅಧ್ಯಕ್ಷ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಶ್ರೀನಿವಾಸ್ ಬಿ.ಎಂ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದಿಕ್ ಪಾಷಾ ನಾಮಪತ್ರ ಸಲ್ಲಿಕೆ ಮಾಡಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಹನುಮೇಗೌಡ. ಬಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಾಶ್ ಎಚ್.ಕೆ ನಾಮಪತ್ರ ಸಲ್ಲಿಸಿದ್ದರು.

25 ವರ್ಷಗಳ ನಂತರ ಕಾಂಗ್ರೆಸ್‌ ತೆಕ್ಕೆಗೆ ನೆಲಮಂಗಲ ಪಿಎಲ್‌ಡಿ ಬ್ಯಾಂಕ್

Profile Prabhakara R May 10, 2025 4:09 PM

ನೆಲಮಂಗಲ: ಕಾಂಗ್ರೆಸ್ ಪಕ್ಷದ ರಾಜಕೀಯ ಚದುರಂಗದಾಟದಲ್ಲಿ ಮೈತ್ರಿ ಪಕ್ಷದ ಮುಖಂಡರ ಲೆಕ್ಕಚಾರ ಮುಳುಗಿ ಹೋಗಿದ್ದು, ಪಿಎಲ್‌ಡಿ ಬ್ಯಾಂಕ್‌ (Nelamangala PLD Bank) ಅಧ್ಯಕ್ಷರಾಗಿ ಸಾದಿಕ್ ಪಾಷಾ ಆಯ್ಕೆಯಾಗುವ ಮೂಲಕ 25 ವರ್ಷಗಳ ನಂತರ ಕಾಂಗ್ರೆಸ್‌ ಪಕ್ಷ ಗದ್ದುಗೆ ಏರಿದೆ. ಇದರಿಂದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ತೀವ್ರ ಮುಖಭಂಗವಾಗಿದೆ. ನಗರದ ತಾಲೂಕು ಕಚೇರಿ ಸಮೀಪದ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಕಚೇರಿಯಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಶ್ರೀನಿವಾಸ್ ಬಿ.ಎಂ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾದಿಕ್ ಪಾಷಾ ನಾಮಪತ್ರ ಸಲ್ಲಿಕೆ ಮಾಡಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಮೈತ್ರಿ ಅಭ್ಯರ್ಥಿಯಾಗಿ ಹನುಮೇಗೌಡ. ಬಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಕಾಶ್ ಎಚ್.ಕೆ ನಾಮಪತ್ರ ಸಲ್ಲಿಸಿದ್ದರು.

ಪಿಎಲ್‌ಡಿ ಬ್ಯಾಂಕ್‌ನ ಚುನಾಯಿತ 14 ಸದಸ್ಯರು, 1 ನಾಮನಿರ್ದೇಶಿತರು ಸೇರಿದಂತೆ ಒಟ್ಟಾರೆ 15 ನಿರ್ದೇಶಕರು ಮತ ಚಲಾವಣೆ ಮಾಡಿದರು. ಜಿದ್ದಾಜಿದ್ದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಾದಿಕ್ ಪಾಷ 8 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನ ಪಡೆದರೆ ಮೈತ್ರಿ ಅಭ್ಯರ್ಥಿ ಶ್ರೀನಿವಾಸ್ 7 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪ್ರಕಾಶ್ ಎಚ್.ಕೆ 8 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಹನುಮೇಗೌಡ.ಬಿ 7 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದಾರೆ.



ಮೈತ್ರಿಗೆ ಭಾರಿ ಮುಖಭಂಗ

ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಬೆಂಬಲಿತರಾಗಿ ಗೆಲುವು ಪಡೆದಿದ್ದ 10 ನಿರ್ದೇಶಕರಲ್ಲಿ 3 ನಿರ್ದೇಶಕರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ, ಕಾಂಗ್ರೆಸ್ ಬೆಂಬಲಿತ 4 ನಿರ್ದೇಶಕರು, ನಾಮನಿರ್ದೇಶಿತ ಒಬ್ಬರು ಸೇರಿದಂತೆ 8 ನಿರ್ದೇಶಕರ ಬಲದೊಂದಿಗೆ ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಸೇರಿದ ಸಾದಿಕ್ ಪಾಷ, ಕಾಂಗ್ರೆಸ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕೈಚೆಲ್ಲಿದ ಮೈತ್ರಿ ಪಕ್ಷದ ಮುಖಂಡರು ತೀವ್ರ ಮುಖಭಂಗ ಅನುಭವಿಸಿದ್ದು, ಕೆಲ ಮುಖಂಡರು ಪೂರ್ವಗ್ರಹ ಪೀಡಿತರಂತೆ ಮಾತನಾಡಿದ್ದು ಮೈತ್ರಿ ಪಕ್ಷದ ಸೋಲಿಗೆ ಕಾರಣವಾಗಿರಬಹುದು ಎಂಬ ಮಾತುಗಳು ಕೇಳಿಬಂದಿವೆ.

ಸಂಭ್ರಮಾಚರಣೆ

ಬೆಳಗ್ಗೆಯಿಂದ ಸಂಭ್ರಮದಲ್ಲಿದ್ದ ಕೆಲ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದ್ದರು. ಆದರೆ ಚುನಾವಣೆ ನಂತರ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ಗೆಲುವು ಸಾಧಿಸುತ್ತಿದಂತೆ ಕೈ ಮುಖಂಡರು, ಕಾರ್ಯಕರ್ತರು ಜೈಕಾರ ಹಾಕುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ರೈತ ಮಹಿಳೆಯರ ಬೆಂಬಲ

ಕಾಂಗ್ರೆಸ್ ಪಕ್ಷ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಗೆಲುವು ಸಾಧಿಸಲು ಮೂವರು ರೈತ ಮಹಿಳೆಯರು ಪ್ರಮುಖ ಪಾತ್ರ ವಹಿಸಿದರು. ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಗಂಗಲಕ್ಷ್ಮಮ್ಮ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಮಿಂಚಿದ್ದಾರೆ.

ಅಭಿನಂದನೆ

ಅಧ್ಯಕ್ಷ ಸಾದಿಕ್ ಪಾಷಾ, ಉಪಾಧ್ಯಕ್ಷ ಪ್ರಕಾಶ್ ಎಚ್.ಕೆ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ನೀಡಿದ ಸೋಮಶೇಖರ್, ಗಂಗಲಕ್ಷ್ಮಮ್ಮ, ವೆಂಕಟಲಕ್ಷ್ಮಮ್ಮ, ಎಸ್.ಹರೀಶ್‌ ಬಾಬು, ಜಯಮ್ಮ, ನಾಮನಿರ್ದೇಶಿತ ಸದಸ್ಯ ವಕೀಲ ರಘುನಾಥ್‌ಗೆ ಶಾಸಕ ಎನ್.ಶ್ರೀನಿವಾಸ್, ಮಾಜಿ ಎಂಎಲ್‌ಸಿ ಬಿಎಂಎಲ್ ಕಾಂತರಾಜು, ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ,ಮಾಜಿ ಅಧ್ಯಕ್ಷ ಎನ್.ಪಿ ಹೇಮಂತ್ ಕುಮಾ‌ರ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಹೋರಾಡುತ್ತಿರುವಾಗ ನನ್ನ ಜನ್ಮದಿನಾಚರಣೆ ಬೇಡ- ಡಿ.ಕೆ. ಶಿವಕುಮಾರ್

ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ,ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಎನ್.ಪಿ ಹೇಮಂತ್ ಕುಮಾ‌ರ್. ನಗರಸಭೆ ಅಧ್ಯಕ್ಷ ಗಣೇಶ್, ಸದಸ್ಯ ಪಿ.ಪ್ರದೀಪ್, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಅಗಳಕುಪ್ಪೆ ಗೋವಿಂದರಾಜು, ಮಾಚನಾಯಕನಹಳ್ಳಿ ಎಂ.ಕೆ ನಾಗರಾಜು, ಟಿ.ನಾಗರಾಜು, ಜಗದೀಶ್, ಸಿಎಂ.ಗೌಡ, ಹಸಿರುವಳ್ಳಿಕುಮಾರ್, ವಾಸು,ಹನುಮಂತರಾಜು, ಚಿಕ್ಕಹನುಮೇಗೌಡ, ಶೈಲೇಂದ್ರ, ವೆಂಕಟೇಶ್, ನರಸಿಂಹಮೂರ್ತಿ, ಬೀರಗೊಂಡನಹಳ್ಳಿ ರಮೇಶ್, ಮಧು, ಪುರುಷೋತ್ತಮ್. ಮಂಜುನಾಥ್ ಗೌಡ,ರಮೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.