ಬೆಳೆ ವಿಮೆ ಮಾಡಿಸಲು ಅವಕಾಶ
ದಾಳಿಂಬೆ ಬೆಳಗೆ ವಿಮಾ ಮೊತ್ತವಾಗಿ ೧,೨೭,೦೦೦ ರೂ. ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಹೆಕ್ಟೆರ್ ಗೆ ರೈತರು ಪಾವತಿಸಬೇಕಾದ ಮೊತ್ತ ೬,೩೫೦ ರೂ.ಗಳು ಆಗಿದೆ. ಅಂದರೆ ಪ್ರತಿ ಎಕರೆಗೆ ರೈತರು ಪಾವತಿಸ ಬೇಕಾದ ಮೊತ್ತ-೨,೫೪೦ ರೂ. ಗಳನ್ನು ಪಾವತಿಸಬೇಕಾಗಿದೆ. ಬೆಳೆ ವಿಮೆ ಪ್ರಕ್ರಿಯೆ ನಿರ್ವಹಣೆಗೆ ಜಿಲ್ಲೆ ಯಲ್ಲಿ ಟಾಟಾ ಎಐಜಿ ಜನರಲ್ ಇನ್ಸುರೆನ್ಸ್ ಕಂಪನಿ ಆಯ್ಕೆಯಾಗಿದೆ. ಬೆಳೆ ವಿಮೆಯನ್ನು ಜುಲೈ ೩೧ ರ ವರೆಗೆ ಪಾವತಿಸಬಹುದು.


ಚಿಕ್ಕಬಳ್ಳಾಪುರ : ೨೦೨೫ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಮೂರು ಹೋಬಳಿಯ ಎಲ್ಲಾ ಪಂಚಾಯ್ತಿಗಳಿಗೂ ಅನ್ವಯವಾಗುವಂತೆ ದ್ರಾಕ್ಷಿ, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಎಲ್ಲಾ ದ್ರಾಕ್ಷಿ, ದಾಳಿಂಬೆ ಮತ್ತು ಮಾವು ಬೆಳೆಗಾರರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿ ಪ್ರಕೃತಿ ವಿಕೋಪದಿಂದ ಆಗುವ ಆರ್ಥಿಕ ನಷ್ಟವನ್ನು ವಿಮಾ ಕಂಪನಿಗಳಿAದ ಪಡೆದು ಉಪಯೋಗ ಮಾಡಿಕೊಳ್ಳುವಂತೆ ಕೋರಿದೆ.
ದ್ರಾಕ್ಷಿ ಬೆಳೆಗೆ ವಿಮಾ ಮೊತ್ತವಾಗಿ ೨,೮೦,೦೦೦ ರೂ.ಗಳನ್ನು ನಿಗಧಿಪಡಿಸಲಾಗಿದೆ. ವಿಮೆ ಮಾಡಿಸುವ ರೈತರು ಪ್ರತಿ ಹೆಕ್ಟೆರ್ ಗೆ ಪಾವತಿಸಬೇಕಾದ ಮೊತ್ತ ೧೪,೦೦೦ ರೂ.ಗಳು ಆಗಿದೆ, ಅಂದರೆ ಪ್ರತಿ ಎಕರೆಗೆ ಮೊತ್ತ-೫,೬೦೦ ರೂ.ಗಳನ್ನು ಪಾವತಿಸಬೇಕಾಗಿದೆ.
ಇದನ್ನೂ ಓದಿ: Chikkaballapur News: ಮುಖ್ಯಮಂತ್ರಿಗಳಿಗೆ ಗಂಟೆಗಟ್ಟಲೆ ಕಾದ ಮಾಧ್ಯಮ ಮಿತ್ರರು
ಮಾವು ಬೆಳೆಗೆ ವಿಮಾ ಮೊತ್ತವಾಗಿ ೮೦,೦೦೦ ರೂ. ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಹೆಕ್ಟೆರ್ ಗೆ ರೈತರು ಪಾವತಿಸಬೇಕಾದ ಮೊತ್ತ ೪,೦೦೦ ರೂ.ಗಳು ಆಗಿದೆ, ಅಂದರೆ ಪ್ರತಿ ಎಕರೆಗೆ ರೈತರು ಪಾವತಿಸಬೇಕಾದ ಮೊತ್ತ-೧,೬೦೦ ರೂ. ಗಳನ್ನು ಪಾವತಿಸಬೇಕಾಗಿದೆ.
ದಾಳಿಂಬೆ ಬೆಳಗೆ ವಿಮಾ ಮೊತ್ತವಾಗಿ ೧,೨೭,೦೦೦ ರೂ. ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಹೆಕ್ಟೆರ್ ಗೆ ರೈತರು ಪಾವತಿಸಬೇಕಾದ ಮೊತ್ತ ೬,೩೫೦ ರೂ.ಗಳು ಆಗಿದೆ. ಅಂದರೆ ಪ್ರತಿ ಎಕರೆಗೆ ರೈತರು ಪಾವತಿಸಬೇಕಾದ ಮೊತ್ತ-೨,೫೪೦ ರೂ. ಗಳನ್ನು ಪಾವತಿಸಬೇಕಾಗಿದೆ. ಬೆಳೆ ವಿಮೆ ಪ್ರಕ್ರಿಯೆ ನಿರ್ವಹಣೆಗೆ ಜಿಲ್ಲೆಯಲ್ಲಿ ಟಾಟಾ ಎಐಜಿ ಜನರಲ್ ಇನ್ಸುರೆನ್ಸ್ ಕಂಪನಿ ಆಯ್ಕೆಯಾಗಿದೆ. ಬೆಳೆ ವಿಮೆಯನ್ನು ಜುಲೈ ೩೧ ರ ವರೆಗೆ ಪಾವತಿಸಬಹುದು.
ರೈತರ ವಂತಿಕೆಯನ್ನು ಸಂಬಂಧಪಟ್ಟ ಬ್ಯಾಂಕ್, ಸೇವಾ ಸಿಂಧು ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ಪ್ರೀಮಿಯಂ ಪಾವತಿಸಿ ಸ್ವೀಕೃತಿ ಪಡೆಯುವುದು.
ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಕಸಬಾ ಮತ್ತು ಮಂಡಿಕಲ್ಲು ಹೋಬಳಿ-೯೭೪೨೬೯೭೫೭೧ ಹಾಗೂ ನಂದಿ ಹೋಬಳಿ-೯೮೪೪೩೬೫೫೩೪ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಶಕರು-೯೬೨೦೦೬೯೨೪೯, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು-೯೯೧೬೩೭೫೨೧೬ ಗೆ ಸಂಪರ್ಕಿಸಬಹುದೆAದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.