ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deputy Lokaykta: ಉಪಲೋಕಾಯುಕ್ತ ಫಣೀಂದ್ರ ಅವರಿಂದ ದೂರುದಾರ ಅಧಿಕಾರಿಗಳ ಸಭೆ: ಸ್ಥಳದಲ್ಲಿಯೇ ಪ್ರಕರಣ ಇತ್ಯರ್ಥ

ನಮ್ಮ ಬಳಿ ಎಷ್ಟೇ ದಿನ ಪ್ರಕರಣ ಇಟ್ಟುಕೊಂಡರು ಕೆಲ ಪ್ರಕರಣಗಳು ಬಗೆಹರಿಯುವುದಿಲ್ಲ. ಪ್ರತಿ ದಿನ ೨೫೦-೩೦೦ ಪ್ರಕರಣಗಳು ದಾಖಲಾಗುತ್ತವೆ. ನಮ್ಮಲ್ಲಿರುವುದು ಕೇವಲ 40 ಜನ ಸಿಬ್ಬಂದಿ ಮಾತ್ರ. ಅರ್ಜಿಗಳು ನನ್ನ ಬಳಿ ಬರುವಷ್ಟರಲ್ಲಿ ತಿಂಗಳಾದರೂ ಅಚ್ಚರಿಯಿಲ್ಲ. ಆದ್ದರಿಂದ, ಅಧಿಕಾರಿಗಳು ಜನರೊಂದಿಗೆ ಅನುಚಿತವಾಗಿ ವರ್ತಿಸಬಾರದು

ಮೊದಲ ದಿನವೇ ೬೦ ಅರ್ಜಿ ಇತ್ಯರ್ಥ

ಉಪಲೋಕಾಯುಕ್ತ ಫಣೀದ್ರ ಅವರು ಜಿಲ್ಲಾಡಳಿತ ಭವನದಲ್ಲಿ ದೂರುದಾರರ, ಎದುರುದಾರರ ಸಭೆ ನಡೆಸಿದರು.

Profile Ashok Nayak May 7, 2025 3:41 PM

ಚಿಕ್ಕಬಳ್ಳಾಪುರ : ಉಪಲೋಕಾಯುಕ್ತ ಫಣೀಂದ್ರ ಅವರು ಜಿಲ್ಲಾಡಳಿತ ಭವನದಲ್ಲಿ ಲೋಕಾ ಯುಕ್ತ ಇಲಾಖೆಗೆ ಸಾರ್ವಜನಿಕರು ಸಲ್ಲಿಸಿದ್ದ ದೂರುಗಳ ಸಂಬಂಧ ದೂರುದಾರರು ಮತ್ತು ಎದುರುದಾರರ ವಿಚಾರಣೆ ಒಂದೇ ದಿನ 60 ಅರ್ಜಿಗಳ ವಿಲೇವಾರಿ ಮಾಡಿ ಜನಸಾಮಾನ್ಯರಲ್ಲಿ ನ್ಯಾಯದಾನದ ಬಗ್ಗೆ ಭರವಸೆ ಮೂಡಿಸಿದರು. ಮೊದಲಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದ ಉಪ ಲೋಕಾಯುಕ್ತ ನ್ಯಾ.ಕೆ ಎನ್ ಪಣೀಂದ್ರ ಅವರು, ಸಾರ್ವಜನಿಕರಿಗೆ ಎಲ್ಲಿ, ಯಾರಿಗೆ ಅರ್ಜಿ ಸಲ್ಲಿಸಬೇಕು ಎಂಬ ಕಾನೂನು ತಿಳಿವಳಿಕೆ ಇರುವುದಿಲ್ಲ. ಜನರಿಂದ ಅರ್ಜಿಗಳನ್ನು ಸ್ವೀಕರಿಸಿ, ಎಲ್ಲಿಗೆ ಹೋಗಬೇಕು ಎಂಬುದರ ಕುರಿತು ಉಚಿತ ಕಾನೂನು ಸಲಹೆ ಕೊಡಲು ನಾವು ಸಿದ್ಧ. ೩ ಲಕ್ಷ ಆದಾಯ ಮಿತಿ ಇರುವವರು ಕೋರ್ಟ್ ಶುಲ್ಕ ಕಟ್ಟುವಂತಿಲ್ಲ ಎಂದು ಹೇಳಿದರು.

ನಮ್ಮ ಬಳಿ ಎಷ್ಟೇ ದಿನ ಪ್ರಕರಣ ಇಟ್ಟುಕೊಂಡರು ಕೆಲ ಪ್ರಕರಣಗಳು ಬಗೆಹರಿಯುವುದಿಲ್ಲ. ಪ್ರತಿ ದಿನ ೨೫೦-೩೦೦ ಪ್ರಕರಣಗಳು ದಾಖಲಾಗುತ್ತವೆ. ನಮ್ಮಲ್ಲಿರುವುದು ಕೇವಲ 40 ಜನ ಸಿಬ್ಬಂದಿ ಮಾತ್ರ. ಅರ್ಜಿಗಳು ನನ್ನ ಬಳಿ ಬರುವಷ್ಟರಲ್ಲಿ ತಿಂಗಳಾದರೂ ಅಚ್ಚರಿಯಿಲ್ಲ. ಆದ್ದರಿಂದ, ಅಧಿಕಾರಿಗಳು ಜನರೊಂದಿಗೆ ಅನುಚಿತವಾಗಿ ವರ್ತಿಸಬಾರದು. ಪ್ರಕರಣ ನಿಮ್ಮ ವ್ಯಾಪ್ತಿಗೆ ಬರದೇ ಇದ್ದಲ್ಲಿ ಎಲ್ಲಿಗೆ ಹೋಗಬೇಕು ಎಂಬ ಕುರಿತು ಹೇಳಿ ಕಳಿಸಬೇಕು ಎಂದು ಸಲಹೆ ನೀಡಿದರು.

ಸುಮಾರು ೧೦.೩೦ಗಂಟೆಗೆ ಮೊದಲ ದೂರನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು ಎದುರು ದಾರರು ಮತ್ತು ದೂರುದಾರರನ್ನು ಕರೆಸಿ ಪರಸ್ಪರರ ಅಹವಾಲನ್ನು ಆಲಿಸಿದರು.

ಇದನ್ನೂ ಓದಿ: Chikkaballlapur News: ಎರಡನೇ ದಿನದ ಕರ್ನಾಟಕ ಲೋಕಾಯುಕ್ತ ಸಾರ್ವಜನಿಕ ಕುಂದು ಕೊರತೆಗಳ ವಿಚಾರಣಾ ಸಭೆ

ಮೊದಲ ದೂರುದಾರರೊಬ್ಬರು ಮಾತನಾಡಿ, ನಮ್ಮ ಖಾತೆ ದುರಸ್ತಿ ಆಗಬೇಕು. ೩ ತಿಂಗಳೊಳಗೆ ಖಾತೆ ಮಾಡಿಕೊಡುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ, ಆದೇಶ ಬಂದು ಒಂದು ವರ್ಷವಾದರೂ ಖಾತೆ ಮಾಡಿಲ್ಲ. ನಿತ್ಯ ಕಚೇರಿ ಅಲೆಯುವಂತಾಗಿದೆ ಎಂದು ಗೋಳಿಟ್ಟರು.

ಇದಕ್ಕೆ ಕುಪಿತಗೊಂಡ ನ್ಯಾಯಮೂರ್ತಿಗಳು,  ಒಂದು ಖಾತೆ ಮಾಡಲು ೫ ವರ್ಷ ಬೇಕೆನ್ರೀ ? ಎಷ್ಟು ವರ್ಷ ಬೇಕು ನಿಮಗೆ. ಯೋಗ್ಯತೆ ಇಲ್ಲ ಎಂದು ಬರೆದುಕೊಡಿ.ನಾಚಿಕೆ ಆಗಲ್ವಾ.? ಇವರ ಮೇಲೆ ನ್ಯಾಯಂಗ ನಿಂದನೆ ಪ್ರಕರಣ ಹಾಕಿ. ಕುತ್ತಿಗೆಗೆ ಬರಬೇಕು ಇವರಿಗೆ. ಆಗ ಗೊತ್ತಾಗುತ್ತದೆ. ಇಷ್ಟು ದಿನಗಳಾದರೂ ಖಾತೆ ಮಾಡಿಲ್ಲ. ಏನು ಮಾಡಬೇಕು ನಿಮಗೆ? ಈ ಕುರಿತು ಇಲಾಖೆ ತನಿಖೆಗೆ ಆದೇಶ ಮಾಡಬೇಕಾಗುತ್ತದೆ ಎಂದು ತಹಶೀಲ್ದಾರ್ ಅನಿಲ್ ವಿರುದ್ಧ ಸಿಡಿಮಿಡಿಗೊಂಡರು.

ಈವೇಳೆ ಸಮಜಾಯಿಷಿ ನೀಡಿದ ತಹಶೀಲ್ದಾರ್ ಅನಿಲ್ ಕುಮಾರ್, ಸ್ವಾಮಿ ಅದು ೧.೨.೫ ರೀತಿ ಖಾತೆ ದುರಸ್ತಿ ಆಗಬೇಕಿದೆ.ಈಗ ತಂತ್ರಾAಶ ಬೇರೆ ಬಂದಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇವರ ನೆರವಿಗೆ ಡಿ.ಸಿ ಬಂದರೂ ತೃಪ್ತರಾಗದ ಉಪಲೋಕಾಯುಕ್ತರು ನಿಮ್ಮ ನಿರ್ಲಕ್ಷö್ಯ ಧೋರಣೆ ಸಹಿಸಿ ಸಾಕಾಗಿದೆ.ಸಂಪೂರ್ಣ ಕಂದಾಯ ಇಲಾಖೆಯನ್ನೇ ಕೋರ್ಟ್ಗೆ ಎಳೆಯುತ್ತೇನೆ. ಆಗುವುದಿಲ್ಲ ಎಂದರೆ ಹಿಂಬರಹ ಕೊಡಿ. ನಿಮ್ಮನ್ನು ಕೋರ್ಟ್ಗೆ ಎಳೆಯುತ್ತೇನೆ. ಅರ್ಜಿ ಕೊಟ್ಟು ೬ ವರ್ಷ ಆಗಿದೆ,ಇತ್ಯರ್ಥಪಡಿಸಲಾಗದೆ ಅಲೆದಾಡಿಸುತ್ತಿದ್ದೀರಿ,ರೈತ ಸತ್ತ ಮೇಲೆ ಮಾಡಿಕೊಡುತ್ತೀರಾ ಎಂದು ಗರಂ ಆದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು, ರೀ ವಿವೇಕ್ ಖಾತೆ ಮಾಡಲು ಏನು ಅವಕಾಶ ಇದೆ ಅದನ್ನ ಸರಿಯಾಗಿ ತಿಳಿಸಿ ಎಂದು ಎಡಿಎಲ್‌ಆರ್ ವಿವೇಕ್ ಮಹದೇವ್ ಮತ್ತು ತಹಶೀಲ್ದಾರ್ ಅನಿಲ್ ಕುಮಾರ್‌ಗೆ ಹೇಳಿದರು.

ಬಳಿಕ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅನಿಲ್ ಕುಮಾರ್ ಅವರು, ಇನ್ನು ೫ ದಿನಗಳಲ್ಲಿ ಆರ್.ಟಿ.ಸಿ ಕೊಡುತ್ತೇವೆ ಮತ್ತು ಒಂದು ತಿಂಗಳಲ್ಲಿ ಪೂರ್ತಿ ಪ್ರಕರಣ ಸಮಸ್ಯೆ ಬಗೆಹರಿಸುತ್ತೇವೆ ಎಂದು ನ್ಯಾಯಮೂರ್ತಿಗಳಲ್ಲಿ ವಿನಂತಿ ಮಾಡಿಕೊಂಡರು. ಅದರಂತೆ ನ್ಯಾಯಮೂರ್ತಿಗಳು ತಿಂಗಳ ಅನುಮತಿ ನೀಡಿ ಆದೇಶ ಹೊರಡಿಸಿದರು.

ಸರಕಾರಿ ಜಾಗದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದು ದೂರಿರುವ ಮಂಜುನಾಥ್ ಎಂಬುವರ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಕೆಇಬಿ ಅಧಿಕಾರಿಗಳನ್ನು ವಿಚಾರಿಸಿದರು. ಕೆರೆಯಲ್ಲಿ ಬೋರ್‌ವೆಲ್ ಇರುವ ಪ್ರಕರಣ ನ್ಯಾಯಾಲಯ ದಲ್ಲಿದೆ. ಪ್ರಕರಣ ನ್ಯಾಯಾದಲ್ಲಿರುವಾದ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಪ್ರಕರಣ ಇತ್ಯರ್ಥ ಆದ ಬಳಿಕ ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಲಹೆ ನೀಡಿದರು.

ನಂತರದ ಪ್ರಕರಣವೊಂದರಲ್ಲಿ, ರೈತರೊಬ್ಬರು ಜಮೀನು ದುರಸ್ತಿಗೆ ಅರ್ಜಿ ಕೊಟ್ಟು ೭ ವರ್ಷ ಗಳಾಗಿವೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೋಡಿ ಮಾಡಿಕೊಟ್ಟಿಲ್ಲ ಎಂದು ನ್ಯಾಯ ಮೂರ್ತಿಗಳಿಗೆ ದೂರು ಹೇಳಿದರು.

ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು ಅಧಿಕಾರಿ ವರ್ಗವನ್ನು ಉತ್ತರಿಸುವಂತೆ ಕೇಳಿದರು. ಈ ವಿಚಾರವಾಗಿ ತಡಬಡಾಯಿಸುತ್ತಿದ್ದ ಅಧಿಕಾರಿಗಳನ್ನು ನೋಡಿದ ನ್ಯಾಯಮೂರ್ತಿ ಗಳು, ತಹಶೀಲ್ದಾರ್ ಮಹೇಶ್ ಪತ್ರಿ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಈ ಪ್ರಕರಣದ ನಿಮಗೆ 10 ದಿನಗಳ ಹಿಂದೆಯೇ ನೋಟಿಸ್ ಕಳಿಸಲಾಗಿದೆ. ಆದರೂ, ಉತ್ತರಿಸಲು ತಡಬಡಾಯಿಸುತ್ತಿದ್ದೀರಿ. ಪ್ರಕರಣ ಕುರಿತು ಮೊದಲೇ ನೋಡಿಕೊಂಡು ಬರಬೇಕು ಎಂಬ ಜ್ಞಾನ ಬೇಡವಾ? ಎಂದು ತಹಶೀಲ್ದಾರ್ ಹಾಗೂ ಎಡಿಎಲ್‌ಆರ್ ಅವರ ವಿರುದ್ಧ ಸಿಟ್ಟಾದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅವರು, ಪರಿಶೀಲನೆ ನಡೆಸಿ ಬಗೆಹರಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ನಿವೃತ್ತಿ ಪಿಂಚಣಿ, ಕಂದಾಯ ಇಲಾಖೆ, ಸಾರ್ವಜನಿಕ ಆಸ್ತಿ ,ರಸ್ತೆ ಒತ್ತುವರಿ, ಪಾದಚಾರಿ ಮಾರ್ಗ ಒತ್ತುವರಿ,ಶೌಚಾಲಯ ಸಮಸ್ಯೆ, ತಹಶೀಲ್ದಾರ್ ಭೇಟಿ ಸಮಯ ನಿಗಧಿಸೇರಿದಂತೆ ಸುಮಾರು 60 ಪ್ರಕರಣಗಳನ್ನು ಇತ್ಯರ್ಥ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಡಿಎಫ್‌ಒ ಗಿರೀಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿಲ್ಪಾ, ಲೋಕಾಯುಕ್ತ ಎಸ್ಪಿ ಆಂಟೋನಿ ಜಾನ್ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.