Kodi Mutt Swamiji: ಮಹಾನಾಯಕರಿಗೆ ಅಪಮೃತ್ಯು, ದಿಲ್ಲಿಗೂ ಅಪಾಯ: ಕೋಡಿಮಠದ ಶ್ರೀಗಳಿಂದ ಕಾಲಜ್ಞಾನ
ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲ್ಲಬಹುದು ಅಥವಾ ಅಪಘಾತದಲ್ಲಿ ಅವರು ಸಾಯಬಹುದು ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ಭವಿಷ್ಯ ಹೇಳಿದ್ದಾರೆ.

ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಬಾಗಲಕೋಟೆ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೊಸತೊಂದು ಕಾಲಜ್ಞಾನ (Kodi Sri prediction) ನುಡಿದಿದ್ದಾರೆ. ಪ್ರಕೃತಿ ವಿಕೋಪಗಳು, ಸುನಾಮಿ, ಭೂಕಂಪ, ರಾಜ್ಯ ರಾಜಕಾರಣ ಹಾಗೂ ದೇಶದ ಕುರಿತಂತೆ ಭವಿಷ್ಯ ಹೇಳಿ ಕೋಡಿ ಮಠದ ಶ್ರೀಗಳು ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ಅವರು, ಮತ್ತೊಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದು, ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ ಎಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿಂದು ಮಾತನಾಡಿರುವ ಕೋಡಿಮಠದ ಸ್ವಾಮೀಜಿ, ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲ್ಲಬಹುದು ಅಥವಾ ಅಪಘಾತದಲ್ಲಿ ಅವರು ಸಾಯಬಹುದು ಎಂದು ಆಘಾತಕಾರಿ ಭವಿಷ್ಯ ಹೇಳಿದ್ದಾರೆ.
ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂದು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ.
ಕೆಲವು ದಿನಗಳ ಹಿಂದೆ ಅವರು ಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದರು. ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಹತ್ತೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೂಳಾದೀತು. ಈ ಮಾತನ್ನು ಮೊದಲೇ ನಾನು ಹೇಳಿದ್ದೆ. ಈ ಮಾತನ್ನು ಹೇಳಿದ ಎರಡು ದಿನಗಳಲ್ಲೇ, ಕಾಶ್ಮೀರದಲ್ಲಿ ಸಾಮೂಹಿಕ ಹತ್ಯಾಕಾಂಡವಾಯಿತು ಎಂದು ಕೋಡಿಮಠದ ಶ್ರೀಗಳು ಹೇಳಿದ್ದರು.
ಈ ಸಮಸ್ಯೆ ಬರೀ ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆಲ್ಲಾ ಹೆಚ್ಚಾಗಲಿದೆ. ಉತ್ತರದ ಭಾಗದಲ್ಲಿ ಅಂದರೆ ಅದು ಕಾಶ್ಮೀರ, ಜಗವೆಲ್ಲಾ ಕೂಳಾದೀತು ಅದು ವಿಶ್ವದೆಲ್ಲಡೆ ಹರಡಲಿದೆ. ಇದು ದೊಡ್ಡ ಮಟ್ಟದಲ್ಲಿ ಆಗುವ ಸಂಭವವಿದೆ. ಮತಾಂಧ ಕಲಹ ಹೆಚ್ಚುತ್ತೆ, ಮರಣ ಮೃದಂಗ ಹೆಚ್ಚುತ್ತೆ. ಇದರಲ್ಲಿ ಬಹಳಷ್ಟು ಸಾವುನೋವುಗಳಾಗಲಿವೆ. ಆಳುವ ಅರಸರು ಇದನ್ನು ಆಲೋಚಿಸಬೇಕು. ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು ಯುದ್ಧ ಬೇಕಾ ಬೇಡವಾ ಎನ್ನುವುದನ್ನು ಆಲೋಚಿಸಬೇಕು. ಸನ್ಯಾಸಿಗಳಾದ ನಾವು, ಜಪತಪದ ಮೂಲಕ ನಮ್ಮ ನಾಡಿಗೆ ಒಳಿತಾಗಲಿ ಎಂದಷ್ಟೇ ಚಿಂತಿಸಬೇಕು ಎಂದು ಶ್ರೀಗಳು ಹೇಳಿದ್ದರು.
ಇದನ್ನೂ ಓದಿ: Kodi Mutt Swamiji: ಭಾರತ-ಪಾಕ್ ನಡುವೆ ಉಗ್ವಿಗ್ನ ಸ್ಥಿತಿ; ಯುದ್ಧದ ಬಗ್ಗೆ ಕೋಡಿಮಠ ಶ್ರೀ ಹೇಳಿದ್ದೇನು?