ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Retro box office collection: ಇಳಿಕೆ ಕಂಡ ʼರೆಟ್ರೋʼ ಸಿನಿಮಾ ಕಲೆಕ್ಷನ್‌: ಒಟ್ಟು ಗಳಿಸಿದ್ದೆಷ್ಟು?

ತಮಿಳಿನ ʼರೆಟ್ರೋ' ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಮೇ 1ರಂದು ಚಿತ್ರ ತೆರೆಕಂಡಿದೆ. ಆ್ಯಕ್ಷನ್, ರೊಮ್ಯಾಂಟಿಕ್, ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ಪರ್ಫಾಮೆನ್ಸ್‌ಗೆ ಪ್ರೇಕ್ಷಕರು ಮನ ಸೋತಿದ್ದಾರೆ. ನಿರೀಕ್ಷೆಯಂತೆ ಚಿತ್ರವು ಮೊದಲ ದಿನ ಸೂಪರ್ ಕಲೆಕ್ಷನ್ ಮಾಡಿದರೆ ಬಳಿಕ ಗಳಿಕೆ ಇಳಿಕೆಯಾಗಿದೆ. ಹಾಗಾದರೆ ಒಟ್ಟು ಗಳಿಸಿದ್ದೆಷ್ಟು?

ʼರೆಟ್ರೋʼ ಸಿನಿಮಾಕ್ಕೆ ರೆಸ್ಪಾನ್ಸ್ ಹೇಗಿದೆ? ಚಿತ್ರದ ಕಲೆಕ್ಷನ್ ಎಷ್ಟು?

Retro box office collection

Profile Pushpa Kumari May 4, 2025 3:54 PM

ಚೆನ್ನೈ: ಕಾಲಿವುಡ್ ಸ್ಟಾರ್ ನಟ ಸೂರ್ಯ ನಟಿಸಿದ ರೆಟ್ರೋ (Retro) ಸಿನಿಮಾ ಈಗಾಗಲೇ  ಬಿಡುಗಡೆಯಾಗಿದೆ. ಕಾರ್ತಿಕ್ ಸುಬ್ಬರಾಜ್ (Karthik Subbaraj) ನಿರ್ದೇಶನದ 'ರೆಟ್ರೋ' ಸಿನಿಮಾ ಮೇಕಿಂಗ್ ಹಂತದಲ್ಲೇ  ಬಹಳಷ್ಟು ಕುತೂಹಲ ಕೆರಳಿಸಿತ್ತು.‌ ಸಂತೋಷ್ ನಾರಾಯಣ್ ಸಂಗೀತವು‌ ಚಿತ್ರದ ಮತ್ತೊಂದು ಹೈಲೈಟ್‌. ಸಿನಿಮಾ ಬಿಡುಗಡೆಗೂ ಮುನ್ನವೇ ಸಾಂಗ್ಸ್ ಹಾಗೂ ಟ್ರೈಲರ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿತ್ತು. ಆದರೂ ಸೂರ್ಯ ಹಾಗೂ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಕಾಂಬಿನೇಷನ್‌ ಈ ಚಿತ್ರ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡುವುದರಲ್ಲಿ ಸೋತಿದೆ.

'ರೆಟ್ರೋ' ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿ ಈಗಾಗಲೇ ಪ್ರಾರಂಭಿಕ ಹಂತದಿಂದಲೇ ಸಖತ್​ ಸುದ್ದಿ ಮಾಡಿದೆ. ಕೊನೆಗೂ ರಿಲೀಸ್‌ ಆಗಿದ್ದು, ಆ್ಯಕ್ಷನ್, ರೊಮ್ಯಾಂಟಿಕ್, ಗ್ಯಾಂಗ್‌ಸ್ಟರ್ ಸಿನಿಮಾದಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ಪರ್ಫಾಮೆನ್ಸ್‌ ಗೆ ಪ್ರೇಕ್ಷ ಕರು ಮನ ಸೋತಿದ್ದಾರೆ. 70 ಮತ್ತು 80ರ ದಶಕದ ನಡುವೆ ನಡೆಯುವ ಕಥೆಯನ್ನು 'ರೆಟ್ರೋ' ಹೊಂದಿದೆ. ಗ್ಯಾಂಗ್‌ಸ್ಟರ್‌ ಮತ್ತು ಪ್ರೇಮ ಕಥೆಯಾಗಿರುವ ʼರೆಟ್ರೋʼ ಹಲವು ರೀತಿಯ ಅಂಶಗಳನ್ನೂ ಒಳಗೊಂಡಿದೆ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಿನಿಪ್ರಿಯರ ಗಮನ ಸೆಳೆದಿತ್ತು‌. ನಿರೀಕ್ಷೆಯಂತೆ ಚಿತ್ರದ ಮೊದಲ ದಿನ ಸೂಪರ್ ಕಲೆಕ್ಷನ್ ಆಗಿತ್ತು. ಆದರೆ ಎರಡನೇ ದಿನ ಸಿನಿಮಾದ ಗಳಿಕೆ ಇಳಿಕೆ ಕಂಡಿದೆ.

ಬಹು ನಿರೀಕ್ಷಿತ ಚಿತ್ರ ʼರೆಟ್ರೋʼಕ್ಕೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲು ಸಾಧ್ಯವಾಗಿಲ್ಲ. ಮೊದಲ ದಿನಕ್ಕೆ ಚಿತ್ರವು 19.25 ಕೋಟಿ ರೂ. ಸಂಗ್ರಹಿಸಿ ಭರ್ಜರಿ ಗಳಿಕೆ ಕಂಡಿದ್ದರೂ, 2ನೇ ದಿನ 50% ಇಳಿಕೆಯನ್ನು ಕಂಡು 7.75 ಕೋಟಿ ರೂ. ಮಾತ್ರವೇ ಸಂಗ್ರಹಿಸಿತು. 3ನೇ ದಿನವಾದ ಶನಿವಾರ ವಾರಾಂತ್ಯವಾಗಿದ್ದರೂ ಕೇವಲ 6.49 ಕೋಟಿ ರೂ. ಗಳಿಸಿದ್ದು ಚಿತ್ರ ತಂಡಕ್ಕೆ ನಿರಾಸೆ ಉಂಟು ಮಾಡಿದೆ. ಇದರಿಂದ 3 ದಿನಗಳಲ್ಲಿ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹವು 33.49 ಕೋಟಿ ರೂ. ಆಗಿದೆ.

ʼರೆಟ್ರೋʼ ಚಿತ್ರದಲ್ಲಿ ಸೂರ್ಯ ಪಾರಿವೇಲ್ ಕಣ್ಣನ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಅವರು ರುಕ್ಮಿಣಿಯಾಗಿ ಮೋಡಿ ಮಾಡಿದ್ದಾರೆ. ಸೂರ್ಯ, ಪೂಜಾ ಹೆಗ್ಡೆ ಅವರಲ್ಲದೆ ಈ ಚಿತ್ರದಲ್ಲಿ ಜಯರಾಮ್, ಜೋಜು ಜಾರ್ಜ್, ಕರುಣಾಕರನ್, ನಾಸರ್ ಮತ್ತು ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟಿ ಶ್ರಿಯಾ ಶರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ: Pendrive Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದ ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ʼಪೆನ್‌ಡ್ರೈವ್ʼ ಚಿತ್ರ

ಚಿತ್ರದ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ: “ಥಿಯೇಟರ್‌ಗಳಲ್ಲಿ ಚಿತ್ರದ ಪರ ಘೋಷಣೆ ಕೂಗಿದ ಮತ್ತು ಬೆಂಬಲ ತೋರಿಸಿದ ಪ್ರೇಕ್ಷಕರಿಗೆ ʼರೆಟ್ರೋʼ ತಂಡದ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು...ಇದು ಒಳ್ಳೆಯ ದಿನಗಳ ಆರಂಭ. ಆದರೆ ನಾನು ತುಂಬಾ ಭಾವುಕನಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಲೆಕ್ಷನ್‌ ಏರಿಕೆಯಾಗುತ್ತ ಎನ್ನುವುದನ್ನು ಕಾದು ನೋಡಬೇಕಿದೆ.