ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

INDW vs SLW: ಭಾರತದ ಅಜೇಯ ಓಟಕ್ಕೆ ಬ್ರೇಕ್‌ ಹಾಕಿದ ಶ್ರೀಲಂಕಾ

ಭಾರತ ಪರ 6ನೇ ಕ್ರಮಾಂಕದಲ್ಲಿ ಆಡಲಿಳಿದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಚಾ ಘೋಷ್‌ 48 ಎಸೆತಗಳಿಂದ 58(3 ಸಿಕ್ಸರ್‌, 5 ಬೌಂಡರಿ) ರನ್‌ ಬಾರಿಸಿದರು. ಉಳಿದಂತೆ ಜೆಮಿಮಾ ರೋಡ್ರಿಗಸ್‌(37), ನಾಯಕಿ ಹರ್ಮನ್‌ಪ್ರೀತ್‌ ಕೌರ್‌(30) ಮತ್ತು ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್(35) ರನ್‌ ಬಾರಿಸಿದರು.

ಭಾರತದ ಅಜೇಯ ಓಟಕ್ಕೆ ಬ್ರೇಕ್‌ ಹಾಕಿದ ಶ್ರೀಲಂಕಾ

Profile Abhilash BC May 4, 2025 5:59 PM

ಕೊಲಂಬೊ: ಮಹಿಳಾ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಆತಿಥೇಯ ಶ್ರೀಲಂಕಾ ಸೋಲಿನ ಶಾಕ್‌ ನೀಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾ 3 ವಿಕೆಟ್‌ ಅಂತದ ಗೆಲುವು ಸಾಧಿಸಿತು. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಈ ಪಂದ್ಯ ಗೆದ್ದಿದ್ದರೆ, ಫೈನಲ್‌ ಸ್ಥಾನ ಖಚಿತವಾಗುತ್ತಿತ್ತು. ಫೈನಲ್‌ ಸ್ಥಾನಕ್ಕೇರಲು ಭಾರತ ಬುಧವಾರ ನಡೆಯುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಬೇಕಿದೆ.

ಇಲ್ಲಿನ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಸಂಘಟಿತ ಬ್ಯಾಟಿಂಗ್‌ ನೆರವಿನಿಂದ 9 ವಿಕೆಟ್‌ಗೆ 275 ರನ್‌ ಕಲೆಹಾಕಿತು. ಜವಾಬಿತ್ತ ಶ್ರೀಲಂಕಾ ಹರ್ಷಿತಾ ಸಮರವಿಕ್ರಮ(53) ಮತ್ತು ನೀಲಾಕ್ಷಿ ಡಿ ಸಿಲ್ವಾ(56) ಬಾರಿಸಿದ ಅರ್ಧಶತಕದ ಬಲದಿಂದ 5 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗೆ 278 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

ಚೇಸಿಂಗ್‌ ವೇಳೆ ಲಂಕಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲ ಡಬಲ್‌ ಡಿಜಿಟ್‌ ಮೊತ್ತ ಪೇರಿಸಿ ತಂಡಕ್ಕೆ ನೆರವಾದರು. ವಿಷ್ಮಿ ಗುಣರತ್ನೆ(33), ಹರ್ಷಿತಾ ಸಮರವಿಕ್ರಮ(53), ನೀಲಾಕ್ಷಿ ಡಿ ಸಿಲ್ವಾ(56), ಕವಿಶಾ ದಿಲ್ಹಾರಿ(35) ರನ್‌ ಬಾರಿಸಿದರೆ, ನಾಯಕಿ ಚಾಮರಿ ಅತಪಟ್ಟು 23 ರನ್‌ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಅಜೇಯ 23 ರನ್‌ ಬಾರಿಸಿದ ಅನುಷ್ಕಾ ಸಂಜೀವನಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ಪರ ಸ್ಪಿನ್‌ ಆಲ್‌ರೌಂಡರ್‌ ಸ್ನೇಹ ರಾಣಾ 45 ರನ್‌ಗೆ 3 ವಿಕೆಟ್‌ ಕಿತ್ತು ತಂಡದ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು. ಉಳಿದಂತೆ ಅರುಂಧತಿ ರೆಡ್ಡಿ, ನಲ್ಲಪುರರೆಡ್ಡಿ ಚರಣಿ ಮತ್ತು ಪ್ರತೀಕಾ ರಾವಲ್ ತಲಾ ಒಂದು ವಿಕೆಟ್‌ ಪಡೆದರು.

ಇದನ್ನೂ ಓದಿ IPL 2025: ವಿರಾಟ್‌ ಕೊಹ್ಲಿಗೆ ಧನ್ಯವಾದ ತಿಳಿಸಿದ ಯಶ್‌ ದಯಾಳ್‌ ತಂದೆ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಭಾರತ ಪರ 6ನೇ ಕ್ರಮಾಂಕದಲ್ಲಿ ಆಡಲಿಳಿದ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಚಾ ಘೋಷ್‌ 48 ಎಸೆತಗಳಿಂದ 58(3 ಸಿಕ್ಸರ್‌, 5 ಬೌಂಡರಿ) ರನ್‌ ಬಾರಿಸಿದರು. ಉಳಿದಂತೆ ಜೆಮಿಮಾ ರೋಡ್ರಿಗಸ್‌(37), ನಾಯಕಿ ಹರ್ಮನ್‌ಪ್ರೀತ್‌ ಕೌರ್‌(30) ಮತ್ತು ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್(35) ರನ್‌ ಬಾರಿಸಿದರು. ಉಪನಾಯಕಿ ಸ್ಮೃತಿ ಮಂಧಾನ 18 ರನ್‌ ಗಳಿಸಿದ ವೇಳೆ ರನೌಟ್‌ ಆದರು. ಲಂಕಾ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಸುಗಂಧಿಕಾ ಕುಮಾರಿ ಮತ್ತು ಚಾಮರಿ ಅತಪಟ್ಟು ತಲಾ 3 ವಿಕೆಟ್‌ ಕಿತ್ತು ಮಿಂಚಿದರು.