Ranveer Allahbadia: ಸಿನಿಮಾ ಟ್ರೈಲರ್ ಮೀರಿಸುವಂತೆ ಲೈಫ್ ಜರ್ನಿ ಅನಾವರಣಗೊಳಿಸಿದ ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ
ಅತೀ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಭಾರತೀಯ ಯುಟ್ಯೂಬರ್‌ಗಳಲ್ಲಿ ರಣವೀರ್ ಅಲ್ಲಾಬಾಡಿಯಾ ಕೂಡ ಒಬ್ಬರು. ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್ ಎಂಬ ಕಾರಣಕ್ಕೆ ಇವರಿಗೆ ಸೋಶಿಯಲ್ ಮಿಡಿಯಾದ ಅನೇಕ ಪ್ರಶಸ್ತಿಗಳು ಸಿಲ್ವರ್, ಗೋಲ್ಡನ್ ಯುಟ್ಯೂಬ್ ಪ್ಲೇ ಬಟನ್ ಸಹ ಲಭ್ಯವಾಗಿತ್ತು. ಇದೀಗ ಅವರು ಯೂಟ್ಯೂಬ್‌ನಲ್ಲಿನ ತಮ್ಮ 10 ವರ್ಷಗಳ ಯಶಸ್ವಿ ಜರ್ನಿಯನ್ನು ಡೈಮಂಡ್ ಪ್ಲೇ ಬಟನ್ ಅನ್ನು ಅನಾವರಣಗೊಳಿಸುವ ಮೂಲಕ ಸಲೆಬ್ರೇಟ್ ಮಾಡಿದ್ದಾರೆ.

Ranveer Allahbadia

ನವದೆಹಲಿ: ಈಗಂತೂ ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಒಂದಲ್ಲ ಒಂದು ವಿಚಾರದಿಂದ ಜನರಿಗೆ ಹತ್ತಿರವಾಗುತ್ತಲೇ ಇರುತ್ತಾರೆ. ಒಳ್ಳೊಳ್ಳೆ ಕಂಟೆಂಟ್ ಮೂಲಕ ಹೆಚ್ಚು ವೀವ್ಸ್ ಪಡೆದು ಪ್ರಸಿದ್ಧರಾದ ಭಾರತೀಯ ಕಂಟೆಂಟ್ ಕ್ರಿಯೇಟರ್‌ಗಳಲ್ಲಿ ರಣವೀರ್ ಅಲ್ಲಾಬಾಡಿಯಾ (Ranveer Allahbadia) ಕೂಡ ಒಬ್ಬರು. ಜೀವನದಲ್ಲಿ ಸಾಧನೆ ಮಾಡಿ ಯಶಸ್ವಿಯಾದ ವ್ಯಕ್ತಿಗಳ ಸಂದರ್ಶನ ಮಾಡಿ ಅವರ ಯಶೋಗಾಥೆಯನ್ನು ಪಾಡ್‌ಕಾಸ್ಟ್ ಮೂಲಕ ಪ್ರಸಾರ ಮಾಡುವ ಅವರು ಡಿಜಿಟಲ್ ಕ್ಷೇತ್ರದಲ್ಲಿ ಬೀರ್‌ಬೈಸೆಪ್ಸ್ ಎಂದು ಖ್ಯಾತಿ ಪಡೆದಿದ್ದಾರೆ. ಅತ್ಯುತ್ತಮ ಕಂಟೆಂಟ್ ಕ್ರಿಯೆಟರ್ ಎಂಬ ಕಾರಣಕ್ಕೆ ಇವರಿಗೆ ಸೋಶಿಯಲ್ ಮಿಡಿಯಾದ ಅನೇಕ ಪ್ರಶಸ್ತಿಗಳು, ಸಿಲ್ವರ್, ಗೋಲ್ಡನ್ ಯುಟ್ಯೂಬ್ ಪ್ಲೇ ಬಟನ್ ಸಹ ಲಭ್ಯವಾಗಿದೆ. ಇದೀಗ ಯುಟ್ಯೂಬ್‌ನಲ್ಲಿ 10 ವರ್ಷಗಳ ಯಶಸ್ವಿ ಜರ್ನಿಯನ್ನು ಪೂರ್ಣಗೊಳಿಸಿದ ಅವರು ಡೈಮಂಡ್ ಪ್ಲೇ ಬಟನ್ ಅನ್ನು ಅನಾವರಣ ಗೊಳಿಸುವ ಮೂಲಕ ಸಲೆಬ್ರೇಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಹಾಗೂ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯುಟ್ಯೂಬ್ ಡೈಮೆಂಡ್ ಪ್ಲೇ ಬಟನ್ ಎನ್ನುವುದು 10 ಮಿಲಿಯನ್ (1 ಕೋಟಿ) ಚಂದಾದಾರರನ್ನು ದಾಟಿದ ಬ್ಲಾಗರ್‌ಗಳಿಗೆ ನೀಡುವ ಪ್ರಶಸ್ತಿ. 2014ರಲ್ಲಿ ತಮ್ಮ ಫಿಟ್‌ನೆಸ್ ಬಗ್ಗೆ ಹಂಚಿಕೊಳ್ಳುತ್ತಾ ಯುಟ್ಯೂಬ್ ಜರ್ನಿ ಆರಂಭಿಸಿದ ಅವರು ಬಳಿಕ ವೈಯಕ್ತಿಕ ಅಪ್‌ಡೇಟ್, ಸಾಧಕರ ಅನಾವರಣ ಹೀಗೆ ಭಿನ್ನ ವಿಭಿನ್ನವಾದ ಪ್ರಯೋಗಗಳನ್ನು ಮಾಡುತ್ತಾ ಲಕ್ಷಾಂತರ ಜನರನ್ನು ತಮ್ಮತ್ತ ಸೆಳೆದಿದ್ದಾರೆ. ಡಾ.ಎಸ್. ಜೈಶಂಕರ್, ಕುನಾಲ್ ಶಾ, ಗ್ಲೆನ್ ಮೆಕ್‌ಗ್ರಾತ್, ಸದ್ಗುರು, ವಿಕ್ರಮ್ ಸಂಪತ್, ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ಗ್ಯಾರಿ ವೇನರ್‌ಚುಕ್, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಹೀಗೆ ಅನೇಕ ಗಣ್ಯರ ಸಂದರ್ಶನವನ್ನು ತಮ್ಮ ಪಾಡ್‌ಕಾಸ್ಟ್‌ನಲ್ಲಿ ಮಾಡಿದ್ದಾರೆ. 10 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಇದೀಗ ಯುಟ್ಯೂಬ್‌ನಲ್ಲಿ ಹೊಂದಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಅಲ್ಲಾಬಾಡಿಯಾ ಅವರು ಕಂಪ್ಲೀಟ್ ಜರ್ನಿಯನ್ನು ಚಿಕ್ಕದಾಗಿ ಅನಾವರಣಗೊಳಿಸಿದ್ದಾರೆ. ಡೈಮಂಡ್ ಪ್ಲೇ ಬಟನ್ ಅನ್ನು ಅನಾವರಣಗೊಳಿಸುವುದನ್ನು ಸಿನಿಮಾ ಟ್ರೈಲರ್ ರೇಂಜ್‌ನಲ್ಲಿ ರೆಡಿ ಮಾಡಿದ್ದಾರೆ. ಯುಟ್ಯೂಬ್ ಆರಂಭಿಕ ದಿನಗಳು, ಸೆಲೆಬ್ರಿಟಿಗಳ ಜತೆಗಿನ ಫೋಟೊ, ಕೆಲವು ಕಾಂಟ್ರವರ್ಸಿ ವಿಚಾರಗಳು ಹೀಗೆ ಎಲ್ಲ ಮಿಶ್ರ ಫೋಟೊಗಳ ಕೊಲೇಜ್ ವಿಡಿಯೊ ಇದಾಗಿದೆ. ಒಂದು ಮಗು ಈ ದಿನದ ಕನಸು ಕಂಡಿತು.... ಕಳೆದ 10 ವರ್ಷಗಳಿಂದ ಕಂಡ ದೊಡ್ಡ ಕನಸು...ಧನ್ಯವಾದಗಳು ಎಂದು ತನ್ನ 10 ವರ್ಷದ ಯುಟ್ಯೂಬ್ ಜರ್ನಿಗೆ ಕ್ಯಾಪ್ಶನ್ ಹಾಕಿದ್ದಾರೆ. ಹಾಸ್ಯನಟ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಅಲ್ಲಾಬಾಡಿಯಾ ಕಾಣಿಸಿಕೊಂಡಿದ್ದರ ವಿವಾದವು ಕೂಡ ಈ ಕ್ಲಿಪ್‌ನಲ್ಲಿದೆ.
ಇದನ್ನು ಓದಿ: Viral Video: ಮದ್ವೆಯ ಜೋಶ್‌ನಲ್ಲಿ ಈ ವ್ಯಕ್ತಿ ಮಾಡಿದ ಕೆಲ್ಸವನ್ನೊಮ್ಮೆ ನೋಡಿ; ವಿಡಿಯೊ ವೈರಲ್
ʼಇಂಡಿಯಾಸ್ ಗಾಟ್ ಲೆಟೆಂಟ್ʼ ಕಾಮಿಡಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದು ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ತಂದೆ ತಾಯಿಯ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದ ರಣವೀರ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕಾಸ್ಟ್ ಅನ್ನು ನಿಷೇಧಿಸುವಂತೆ ಆಗ್ರಹ ಕೇಳಿಬಂದಿತ್ತು. ಸುಪ್ರೀಂ ಕೋರ್ಟ್ ರಣವೀರ್ ಅಂತಾರಾಷ್ಟ್ರೀಯ ಪ್ರಯಾಣ ಮಾಡದಂತೆ ಪಾಸ್ ಪೋರ್ಟ್ ರದ್ದುಗೊಳಿಸಲು ಆದೇಶ ಸಹ ನೀಡಿತ್ತು.
ತಮ್ಮ ಒಂದು ಹೇಳಿಕೆ ಇಷ್ಟೆಲ್ಲಾ ಟೀಕೆಗೆ ಗುರಿಯಾಗಿದೆ ಎಂಬುದು ಅರಿವಾಗಿ ರಣವೀರ್ ಮಹಿಳಾ ಆಯೋಗ ಹಾಗೂ ಇತರರಿಗೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಹೀಗಾಗಿ ಅವರ ಪಾಸ್‌ಪೋರ್ಟ್ ವಾಪಸ್ ನೀಡಿ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶವನ್ನು ನೀಡಿ ಇನ್ನು ಮುಂದೆ ಇಂತಹ ನಡವಳಿಕೆ ತೋರದಂತೆ ಸುಪ್ರೀಂ ಕೋರ್ಟ್ ಎಚ್ಚರಿಸಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಖಾಸಗಿ ಸುದ್ದಿವಾಹಿನಿಯಲ್ಲಿ ಸಾಕಷ್ಟು ಸುದ್ದಿ ಹರಿದಾಡಿದ್ದು ಅದರ ಕ್ಲಿಪ್ ಸಹ ಇದೇ ವಿಡಿಯೊದಲ್ಲಿದೆ.