ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಪಾಕಿಸ್ತಾನ ಪ್ರಧಾನಿ ಶೆಹಬಾಝ್‌ ಶರಿಫ್‌ ವಿರುದ್ಧ ದಾನಿಶ್‌ ಕನೇರಿಯಾ ಕಿಡಿ!

Danish Kaneria slams Pakistan PM: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಝ್‌ ಶರಿಫ್‌ ವಿರುದ್ಧ ಪಾಕ್‌ ಸ್ಪಿನ್‌ ದಿಗ್ಗಜ ದಾನಿಶ್‌ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್‌ ಭಯೋತ್ಪಾದಕ ದಾಳಿ: ಪಾಕ್‌ ಪ್ರಧಾನಿ ವಿರುದ್ಧ ಕನೇರಿಯಾ ಕಿಡಿ!

ಪಾಕ್‌ ಪ್ರಧಾನಿಯನ್ನು ಟೀಕಿಸಿದ ದಾನಿಶ್‌ ಕನೇರಿಯಾ.

Profile Ramesh Kote Apr 24, 2025 4:53 PM

ನವದೆಹಲಿ: ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ (Pahalgam Terror Attack)ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಿರುವ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್‌ ಶರಿಫ್‌ (Shehbaz Sharif) ವಿರುದ್ಧ ಪಾಕ್‌ ಸ್ಪಿನ್‌ ದಂತಕತೆ ದಾನಿಶ್‌ ಕನೇರಿಯಾ (Danish Kaneria) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಪ್ರಿಲ್‌ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದರು. ಇದರ ಪರಿಣಾಮ 26 ಮಂದಿ ಪ್ರವಾಸಿಗರು ಸಾವಿಗೀಡಾಗಿದ್ದರು. ಈ ದುರ್ಘಟನೆಯನ್ನು ವಿಶ್ವದ ಹಲವು ನಾಯಕರು ಖಂಡಿಸಿದ್ದರು. ಆದರೆ, ಪಾಕ್‌ ಪ್ರಧಾನಿ ಮಾತ್ರ ಇದರ ಬಗ್ಗೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.

ಪಹಲ್ಗಾನ್‌ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ ಮೌನ ವಹಿಸಿರುವ ಪಾಕಿಸ್ತಾನ ಪ್ರಧಾನ ಮಂತ್ರಿಯನ್ನು ದಾನಿಶ್‌ ಕನೇರಿಯಾ ಪ್ರಶ್ನೆ ಮಾಡಿದ್ದಾರೆ. ಈ ಘಟನೆ ಬಗ್ಗೆ ಇನ್ನೂ ಶೆಹಬಾಜ್‌ ಶರಿಫ್‌ ಬಾಯಿ ಬಿಚ್ಚಿಲ್ಲ. 'ಭಯೋತ್ಪಾದಕರಿಗೆ ಆಶ್ರಯ ನೀಡಿ ಪೋಷಿಸುತ್ತಿದ್ದಾರೆ' ಎಂದು ಪಾಕ್‌ ಪ್ರಧಾನಿಯನ್ನು ಕನೇರಿಯಾ ಆರೋಪ ಮಾಡಿದ್ದಾರೆ.

Pahalgam Attack: ಪಹಲ್ಗಾಮ್‌ ದಾಳಿ ಹತ್ತು ನಿಮಿಷದಲ್ಲಿ ನಡೆದು ಹೋಗಿತ್ತು...

"ಒಂದು ವೇಳೆ ಫಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಪಾತ್ರ ಇಲ್ಲವಾದಲ್ಲಿ ಪಾಕ್‌ ಪ್ರಧಾನ ಮಂತ್ರಿ ಶೆಹಬಾಜ್‌ ಶರಿಫ್‌ ಇನ್ನೂ ಏಕೆ ಈ ದುರ್ಘಟನೆಯನ್ನು ಖಂಡಿಸಿಲ್ಲ? ನಿಮ್ಮ ಪಡೆಗಳು ತಕ್ಷಣ ಏಕೆ ಇಷ್ಟೊಂದು ಜಾಗೃತಗೊಂಡಿವೆ? ಏಕೆಂದರೆ ಈ ಘಟನೆ ಬಗ್ಗೆ ನಿಮಗೆ ಆಳವಾಗಿ ತಿಳಿದಿದೆ ಹಾಗೂ ಇದರ ಸತ್ಯ ಏನೆಂದು ನಿಮಗೆ ತಿಳಿದಿದೆ ಎಂದರ್ಥ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು," ಎಂದು ದಾನಿಶ್‌ ಕನೇರಿಯಾ ಟ್ವೀಟ್‌ ಮಾಡುವ ಮೂಲಕ ತಮ್ಮ ಪ್ರಧಾನ ಮಂತ್ರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.



ಪಹಲ್ಗಾಮ್‌ ಭಯೋತ್ಪದಕ ದಾಳಿಯ ಘಟನೆಯ ಬಗ್ಗೆ ಭಾರತದಾದ್ಯಂತ ಕ್ರೀಡಾಪಟುಗಳು ಅಘಾತ ವ್ಯಕ್ತಪಡಿಸಿದ್ದರು ಹಾಗೂ ಈ ದಾಳಿಯಲ್ಲಿ ಸಾವಿಗೀಡಾದವರ ಕಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಕೂಡ ಪ್ರತಿಕ್ರಿಯೆ ನೀಡಿತ್ತು. ಬುಧವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಮುಂಬೈ ಇಂಡಿಯನ್ಸ್‌ ನಡುವಣ ಪಂದ್ಯದ ವೇಳೆ ಒಂದು ನಿಮಿಷ ಮೌನಾಚರಣೆಯನ್ನು ನಡೆಸಲಾಗಿತ್ತು.



ಎರಡೂ ತಂಡಗಳ ಆಟಗಾರರು, ಅಂಪೈರ್‌ಗಳು ಪಂದ್ಯದ ವೇಳೆ ಕಪ್ಪು ಪಟ್ಟಿಯನ್ನು ಕಟ್ಟಿದ್ದರು ಹಾಗೂ ಪಹಲ್ಗಾಮ್‌ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದ್ದರು. ಇದಲ್ಲದೆ, ಈ ದುಃಖದ ಸಮಯದಲ್ಲಿ ಕ್ರಿಕೆಟ್ ಭ್ರಾತೃತ್ವವು ರಾಷ್ಟ್ರದ ಜೊತೆ ದೃಢವಾಗಿ ನಿಂತಿದ್ದರಿಂದ ಆಟದ ಸಮಯದಲ್ಲಿ ಯಾವುದೇ ಪಟಾಕಿಗಳು ಮತ್ತು ಚಿಯರ್‌ಲೀಡರ್‌ಗಳು ಇರಲಿಲ್ಲ. ಟಾಸ್‌ ವೇಳೆ ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳ ನಾಯಕರು ಕೂಡ ಈ ಘಟನೆಯನ್ನು ಖಂಡಿಸಿದ್ದರು.

Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ; ಪಾಕಿಸ್ತಾನ ಹೈಕಮಿಷನ್ ಹೊರಗೆ ಭಾರಿ ಪ್ರತಿಭಟನೆ

"ಮೊದಲನೆಯದಾಗಿ ಭಯೋತ್ಪಾದಕ ದಾಳಿಯಿಂದ ಹುತಾತ್ಮರಾದವರಿಗೆ ನನ್ನ ಸಂತಾಪವನ್ನು ತಿಳಿಸಲು ಬಯಸುತ್ತೇನೆ. ನಾವು ಒಂದು ತಂಡ ಮತ್ತು ಫ್ರಾಂಚೈಸಿಯಾಗಿ ಅಂತಹ ಯಾವುದೇ ದಾಳಿಯನ್ನು ಖಂಡಿಸುತ್ತೇವೆ," ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದರು.

"ಇದು ನಮಗೂ ಹೃದಯ ವಿದ್ರಾವಕವಾಗಿದೆ. ನಮ್ಮ ಆಲೋಚನೆಗಳು ಹಾಗೂ ಭಾವನೆಗಳು ಹುತಾತ್ಮರಾದ ಮತ್ತು ಅವರ ಕುಟುಂಬಗಳೊಂದಿಗೆ ಇವೆ," ಎಂದು ಕಮ್ಮಿನ್ಸ್ ಹೇಳಿದರು.