ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hubballi news: ʼಇನ್ನಷ್ಟು ಸಿಸಿಟಿವಿ ಅಳವಡಿಸಿʼ: ಹುಬ್ಬಳ್ಳಿಯ ಮೃತ ಬಾಲಕಿ ಮನೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭೇಟಿ

ಈಗಷ್ಟೇ ಹುಟ್ಟಿದ ಮಕ್ಕಳನ್ನು ಸಹ ಕಾಮುಕರು ಬಿಡುತ್ತಿಲ್ಲ. ನಮ್ಮ ಮಕ್ಕಳನ್ನು ನಾವು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕು. ಅದು ನಮ್ಮ ಜವಾಬ್ದಾರಿ ಕೂಡ ಹೌದು ಎಂದರು. ನಂತರ ಕೆಎಂಸಿಆರ್‌ಐಗೆ ಭೇಟಿ ನೀಡಿ ವೈದ್ಯರ ಜತೆ ಚರ್ಚಿಸಿದರು. ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದರು.

ಹುಬ್ಬಳ್ಳಿಯ ಮೃತ ಬಾಲಕಿ ಮನೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭೇಟಿ

ಮೃತ ಬಾಲಕಿ ಮನೆಗೆ ನಾಗಲಕ್ಷ್ಮಿ ಚೌಧುರಿ ಭೇಟಿ

ಹರೀಶ್‌ ಕೇರ ಹರೀಶ್‌ ಕೇರ Apr 15, 2025 1:10 PM

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ (Hubballi news) ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ (Murder Case) ಬಾಲಕಿ ಮನೆಗೆ ನಿನ್ನೆ ರಾಜ್ಯ ಮಹಿಳಾ ಮತ್ತು ಮಕ್ಕಳ ಆಯೋಗದ (Woman And children Commission) ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದರು. ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಮಗುವಿನ ಗುಪ್ತಾಂಗ ಹಾಗೂ ದೇಹದ ಇತರೆಡೆ ಗಾಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿವೆ. ವಿಧಿ ವಿಜ್ಞಾನ ಪ್ರಯೋಗಾಲಯ ಇದನ್ನು ಪರೀಕ್ಷಿಸಿ ನೀಡಿದ ವರದಿಯಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಹುಬ್ಬಳ್ಳಿಗೆ ಮಂಗಳವಾರ ರಾತ್ರಿ ಭೇಟಿ ನೀಡಿದ ಅವರು ಮೃತ ಬಾಲಕಿ ಮನೆಯವರಿಗೆ ಸಾಂತ್ವನ ಹೇಳಿ ಮೃತಳ ಪೋಷಕರಿಗೆ ಧೈರ್ಯ ಹೇಳಿದರು. ನಂತರ ಸುದ್ದಿಗಾರೊಂದಿಗೆ ಅವರು ಮಾತನಾಡಿ, ವರದಿ ನಂತರ ಮಗುವಿನ ಸಾವಿನ ಕುರಿತ ವಿವರ ಸ್ಪಷ್ಟವಾಗಲಿದೆ. ಮಗು ಯಾವುದೋ ಕಾಯಿಲೆಯಿಂದ ಸತ್ತಿಲ್ಲ. ಅವಳ ಮೇಲೆ ದೌರ್ಜನ್ಯ ಎಸಗುವಾಗ ನೋವಿನಿಂದ ಕೂಗಿ ಒದ್ದಾಡಿದ್ದಾಳೆ. ಆಗ ಹಂತಕ ಅವಳ ಕತ್ತು ಹಿಸುಕಿ ಸಾಯಿಸಿರುವ ಶಂಕೆ ಇದೆ ಎಂದರು.



ಈಗಷ್ಟೇ ಹುಟ್ಟಿದ ಮಕ್ಕಳನ್ನು ಸಹ ಕಾಮುಕರು ಬಿಡುತ್ತಿಲ್ಲ. ನಮ್ಮ ಮಕ್ಕಳನ್ನು ನಾವು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳಬೇಕು. ಅದು ನಮ್ಮ ಜವಾಬ್ದಾರಿ ಕೂಡ ಹೌದು ಎಂದರು. ನಂತರ ಕೆಎಂಸಿಆರ್‌ಐಗೆ ಭೇಟಿ ನೀಡಿ ವೈದ್ಯರ ಜತೆ ಚರ್ಚಿಸಿದರು. ಗಾಯಗೊಂಡ ಪೊಲೀಸರ ಆರೋಗ್ಯ ವಿಚಾರಿಸಿದರು.

ಸಿಸಿಟಿವಿ ಕ್ಯಾಮೆರಾ ಹೆಚ್ಚು ಹಾಕಿ

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಹೆಚ್ಚಿಗೆ ಅಳವಡಿಸಬೇಕು. ಸಾಕ್ಷಿ ಪತ್ತೆಹಚ್ಚಲು ಪೊಲೀಸ್ ಇಲಾಖೆಗೆ ಅದು ತುಂಬಾ ಅನುಕೂಲವಾಗಿದೆ. ಕೃತ್ಯ ಎಸಗಿದವರಿಗೆ ಭಯ ಬರುವ ಹಾಗೆ ಫಾಸ್ಟ್ ಟ್ರಾಕ್ ಕೋರ್ಟ್‌ನಲ್ಲಿ ಶಿಕ್ಷೆಯಾಗಬೇಕು. ನಮ್ಮಲ್ಲಿರುವ ಕಾನೂನು ವ್ಯವಸ್ಥೆ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ಈ ಕುರಿತು ಪತ್ರ ಬರೆಯುತ್ತೇನೆ ಎಂದು ನಾಗಲಕ್ಷ್ಮಿ ಹೇಳಿದರು.

ಇದನ್ನೂ ಓದಿ: Hubli Girl Murder: ಹುಬ್ಬಳ್ಳಿ ಬಾಲಕಿ ಕೊಲೆ ಪ್ರಕರಣ; ಎನ್‌ಕೌಂಟರ್‌ನಲ್ಲಿ ಬಿಹಾರದ ಆರೋಪಿ ಹತ್ಯೆ!