ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PSI Annapoorna: ಲೇಡಿ ಸಿಂಗಂಗೆ ಮೆಚ್ಚುಗೆಯ ಮಹಾಪೂರ

ಹುಬ್ಬಳ್ಳಿಯ ಅಶೋಕ ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಬಾಲಕಿಯನ್ನು ಕೊಲೆ ಮಾಡಿದ್ದ ಆರೋಪಿ ಬಿಹಾರ ಮೂಲದ ರಿತೇಶ್‌ನನ್ನು ಪ್ರಕರಣ ನಡೆದ ದಿನವೇ ಎನ್‌ಕೌಂಟರ್ ಮಾಡಲಾಗಿದೆ. ಆ ಮೂಲಕ ಶೀಘ್ರವೇ ನ್ಯಾಯ ಕೊಡಿಸಿದ್ದಾರೆ ಎಂದು ಜನರು ಅವರಿಗೆ ಲೇಡಿ ಸಿಂಗಂ ಎಂದು ಬಿರುದು ನೀಡಿದ್ದಾರೆ.

ಲೇಡಿ ಸಿಂಗಂಗೆ ಮೆಚ್ಚುಗೆಯ ಮಹಾಪೂರ

Profile Ashok Nayak Apr 15, 2025 9:46 AM

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಐದು ವರ್ಷದ ಹೆಣ್ಣು ಮಗುವಿನ ಕೊಲೆ ಪ್ರಕರಣ

ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಘಟಕದಲ್ಲಿ ಇದು ಮೊದಲನೇ ಎನ್‌ಕೌಂಟರ್

ಮಹಿಳಾ ಪಿಎಸ್‌ಐ ದಿಟ್ಟ ಹೆಜ್ಜೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ

ಹುಬ್ಬಳ್ಳಿ: ಐದು ವರ್ಷದ ಹೆಣ್ಣು ಮಗುವನ್ನು ಅಪಹರಣ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿಯನ್ನು ಎನ್‌ಕೌಂಟರ್ ಮಾಡಿರುವ ಮಹಿಳಾ ಪಿಎಸ್‌ಐ ಅನ್ನಪೂರ್ಣ ಅವರಿಗೆ ರಾಜ್ಯಾದ್ಯಂತ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿವೆ. ಹುಬ್ಬಳ್ಳಿಯ ಅಶೋಕ ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಬಾಲಕಿಯನ್ನು ಕೊಲೆ ಮಾಡಿದ್ದ ಆರೋಪಿ ಬಿಹಾರ ಮೂಲದ ರಿತೇಶ್‌ನನ್ನು ಪ್ರಕರಣ ನಡೆದ ದಿನವೇ ಎನ್‌ಕೌಂಟರ್ ಮಾಡಲಾಗಿದೆ. ಆ ಮೂಲಕ ಶೀಘ್ರವೇ ನ್ಯಾಯ ಕೊಡಿಸಿದ್ದಾರೆ ಎಂದು ಜನರು ಅವರಿಗೆ ಲೇಡಿ ಸಿಂಗಂ ಎಂದು ಬಿರುದು ನೀಡಿದ್ದಾರೆ.

ಎಂಎಸ್‌ಸಿ ಚಿನ್ನದ ಪದಕ ವಿಜೇತೆ: ಸದ್ಯ ಅಶೋಕನಗರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಕೆಲಸ ಮಾಡುತ್ತಿರುವ ಅನ್ನಪೂರ್ಣ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನ ಗಟ್ಟಿ ಗ್ರಾಮದವರು. 2018ನೇ ಬ್ಯಾಚ್‌ನಲ್ಲಿ ಪಿಎಸ್‌ಐ ಹುದ್ದೆಗೆ ನೇಮಕಗೊಂಡ ಅವರು, ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದಾರೆ. ಬಾಲ್ಯದ ತಂದೆಯನ್ನು ಕಳೆದುಕೊಂಡು, ತಾಯಿಯ ನೆರಳಲ್ಲಿ ಬದುಕಿದ್ದ ಅವರು, ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದು, ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್‌ಸಿ ಪದವಿ ಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಇದನ್ನೂ ಓದಿ: Terrorist Encounter: ಕಿಶ್ತ್ವಾರ್‌ನಲ್ಲಿ ಸೇನೆಯಿಂದ ಭರ್ಜರಿ ಕಾರ್ಯಾಚರಣೆ; ಜೈಶ್ ಕಮಾಂಡೋ ಸೇರಿದಂತೆ ಮೂವರ ಎನ್‌ಕೌಂಟರ್‌

ಅನ್ನಪೂರ್ಣ ಅವರು ಈ ಮೊದಲು ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅದಾದ ಬಳಿಕ ಅಶೋಕ ನಗರ ಠಾಣೆಗೆ ವರ್ಗಾವಣೆ ಗೊಂಡು ಅಲ್ಲಿಯೇ ಕೆಲಸವನ್ನು ಮುಂದುವರಿ ಸಿದ್ದರು. ಈಗ ಐದು ವರ್ಷದ ಬಾಲಕಿಯ ಕೊಲೆ ಕೇಸ್‌ನ ಆರೋಪಿಯ ಎನ್‌ಕೌಂಟರ್ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದಾರೆ. ಆರೋಪಿ ಹಲ್ಲೆಯಿಂದ ಗಾಯಗೊಂಡಿರುವ ಲೇಡಿ ಸಿಂಗಂ ಅನ್ನಪೂರ್ಣ ಸೇರಿ ಇನ್ನಿಬ್ಬರು ಸಿಬ್ಬಂದಿ ಕೆಎಂಸಿ ಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಕರ್ನಾಟಕ ದಲ್ಲಿ ಇದು ಮೊದಲನೇ ಎನ್‌ಕೌಂಟರ್ ಆಗಿದ್ದು, ಇಂಥ ಕೃತ್ಯ ಎಸಗುವವರಿಗೆ ತಕ್ಕ ಸಂದೇಶ ರವಾನೆಯಾಗಿದೆ ಎಂದು ಸಾರ್ವಜನಿಕರು ಸಂಭ್ರಮಿಸಿದ್ದಾರೆ.

*

ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡುವಂತೆ ಸಿಎಂ, ಡಿಸಿಎಂ, ಮತ್ತು ಗೃಹ ಸಚಿವರಿಗೆ ಶಿಫಾರಸು ಮಾಡುತ್ತೇನೆ. ಹುಬ್ಬಳ್ಳಿ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಕ್ಕಾಗಿ ಅನ್ನಪೂರ್ಣ ಅವರನ್ನು ಅಭಿನಂದಿಸುತ್ತೇನೆ. ಅವರ ನಡೆ ಬೇರೆ ಅಧಿಕಾರಿಗಳಿಗೆ ದಾರಿದೀಪ ವಾಗಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಂಥ ಪಿಡುಗು ನಿರ್ಮೂಲನೆ ಯಾಗಬೇಕು.

-ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ