ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಸ್ಮಾರ್ಟ್ ಫೋನ್ ಗೆ ಪ್ರೀ- ಆರ್ಡರ್ ಪ್ರಾರಂಭ; ಆರಂಭಿಕ ಬೆಲೆ ರೂ.109,999
ಸ್ಟೈಲ್ ಮತ್ತು ಪವರ್ ಅನ್ನು ಗಮನ ದಲ್ಲಿಟ್ಟುಕೊಂಡು ರಚಿಸಲಾದ ಗ್ಯಾಲಕ್ಸಿ ಎಸ್25 ಎಡ್ಜ್, ಗಟ್ಟಿ ಮುಟ್ಟಾದ ಟೈಟಾನಿಯಂ ದೇಹವನ್ನು ಹೊಂದಿದ್ದು, ಪ್ರೀಮಿಯಂ, ಉನ್ನತ-ಮಟ್ಟದ ಕಾರ್ಯ ಕ್ಷಮತೆಯನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಸ್25 ಎಡ್ಜ್, ಎಸ್ ಸರಣಿಯ ಅದ್ಭುತ ಗ್ಯಾಲಕ್ಸಿ ಎಐ ಆಧರಿತ ಕ್ಯಾಮೆರಾವನ್ನು ಹೊಂದಿದ್ದು, ಸೃಜನಶೀಲತೆಗೆ ಹೊಸ ವ್ಯವಸ್ಥೆ ಕಲ್ಪಿಸಿಕೊಡುತ್ತದೆ


ಗ್ಯಾಲಕ್ಸಿ ಎಸ್25 ಎಡ್ಜ್ ಅನ್ನು ಪ್ರೀ- ಆರ್ಡರ್ ಮಾಡುವ ಗ್ರಾಹಕರಿಗೆ ರೂ.12,000 ಮೌಲ್ಯದ ಉಚಿತ ಸ್ಟೋರೇಜ್ ಅಪ್ ಗ್ರೇಡ್ ಸೌಲಭ್ಯ ಲಭ್ಯ.
ಗ್ರಾಹಕರು ಈ ಸ್ಮಾರ್ಟ್ ಫೋನ್ ಗೆ 9 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಪಡೆಯಬಹುದು.
ಬೆಂಗಳೂರು: ಭಾರತದ ಅತಿ ದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಆಗಿರುವ ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಎಸ್ ಸರಣಿಯ ಅತ್ಯಂತ ತೆಳುವಾದ ಫೋನ್ ಆಗಿರುವ ತನ್ನ ವಿಶಿಷ್ಟ ಗ್ಯಾಲಕ್ಸಿ ಎಸ್25 ಎಡ್ಜ್ ಸ್ಮಾರ್ಟ್‌ಫೋನ್ ಗೆ ಪ್ರೀ- ಆರ್ಡರ್ ಗಳನ್ನು ಇಂದು ಆರಂಭಿಸಿದೆ. ಆಸಕ್ತ ಗ್ರಾಹರು ಇಂದಿನಿಂದ ಪ್ರೀ ಆರ್ಡರ್ ಮಾಡಬಹುದಾಗಿದೆ. ಸ್ಟೈಲ್ ಮತ್ತು ಪವರ್ ಅನ್ನು ಗಮನ ದಲ್ಲಿಟ್ಟುಕೊಂಡು ರಚಿಸಲಾದ ಗ್ಯಾಲಕ್ಸಿ ಎಸ್25 ಎಡ್ಜ್, ಗಟ್ಟಿಮುಟ್ಟಾದ ಟೈಟಾನಿಯಂ ದೇಹವನ್ನು ಹೊಂದಿದ್ದು, ಪ್ರೀಮಿಯಂ, ಉನ್ನತ-ಮಟ್ಟದ ಕಾರ್ಯ ಕ್ಷಮತೆಯನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಸ್25 ಎಡ್ಜ್, ಎಸ್ ಸರಣಿಯ ಅದ್ಭುತ ಗ್ಯಾಲಕ್ಸಿ ಎಐ ಆಧರಿತ ಕ್ಯಾಮೆರಾವನ್ನು ಹೊಂದಿದ್ದು, ಸೃಜನಶೀಲತೆಗೆ ಹೊಸ ವ್ಯವಸ್ಥೆ ಕಲ್ಪಿಸಿ ಕೊಡುತ್ತದೆ.
ತೆಳುವಾದ ಮತ್ತು ಗಟ್ಟಿಮುಟ್ಟಾದ ಸ್ಮಾರ್ಟ್ ಫೋನ್
ಕೇವಲ 5.8 ಎಂಎಂ ದಪ್ಪದ ಚಾಸಿಸ್ ಹೊಂದಿರುವ ಗ್ಯಾಲಕ್ಸಿ ಎಸ್25 ಎಡ್ಜ್ ಸ್ಮಾರ್ಟ್ ಫೋನ್ ಅತ್ಯಾಕರ್ಷಕ ವಿನ್ಯಾಸ ಹೊಂದಿದೆ. ವಿನ್ಯಾಸದ ಎಲ್ಲಾ ವಿಶೇಷ ಅಂಶಗಳನ್ನು ಹೊಂದಿರುವುದು ಈ ಫೋನ್ ನ ಎಂಜಿನಿಯರಿಂಗ್ ಸಾಧನೆಯಾಗಿದೆ. 163 ಗ್ರಾಂ ತೂಕದ ಈ ಸೊಗಸಾದ ಫೋನ್, ಆಕರ್ಷಕ ರೂಪ ಮತ್ತು ಅತ್ಯುತ್ತಮ ಕಾರ್ಯದ ಸಂಯೋಜನೆಯಾಗಿದ್ದು, ತೆಳುವಾದ ಸ್ಮಾರ್ಟ್ ಫೋನ್ ಗಳ ವಿಭಾಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ ಮತ್ತು ಗ್ಯಾಲಕ್ಸಿ ಎಸ್ ಸರಣಿಯ ವಿಶಿಷ್ಟ ವಿನ್ಯಾಸಕ್ಕೆ ನಿಷ್ಠವಾಗಿದೆ.
ಇದನ್ನೂ ಓದಿ: IPL 2025: MI vs DC ಪಂದ್ಯ ಮಳೆಯಿಂದ ರದ್ದಾದರೆ ಯಾವ ತಂಡಕ್ಕೆ ಲಾಭ? ಇಲ್ಲಿದೆ ಲೆಕ್ಕಾಚಾರ!
ಈ ಫೋನ್ ಸೊಗಸಾದ ಆಕಾರದ ಜೊತೆಗೆ ಅಸಾಧಾರಣ ಬಾಳಿಕೆಯೂ ಬರುತ್ತದೆ. ಆಕರ್ಷಕ ಎಡ್ಜ್ ಗಳನ್ನು ಹೊಂದಿರುವ ಅಂಚುಗಳು ಮತ್ತು ಗಟ್ಟಿಮುಟ್ಟಾದ ಟೈಟಾನಿಯಂ ಫ್ರೇಮ್, ದೈನಂದಿನ ಬಳಕೆಗೆ ದೀರ್ಘಕಾಲೀನ ರಕ್ಷಣೆಯನ್ನು ಒದಗಿಸುತ್ತವೆ. ಗ್ಯಾಲಕ್ಸಿ ಎಸ್25 ಎಡ್ಜ್ ನ ಮುಂಭಾಗದ ಡಿಸ್ ಪ್ಲೇಗೆ ಹೊಸ ಕಾರ್ನಿಂಗ್® ಗೊರಿಲ್ಲಾ® ಗ್ಲಾಸ್ ಸೆರಾಮಿಕ್ 2 ಬಳಸಲಾಗಿದೆ, ಇದು ಗಟ್ಟಿ ಮುಟ್ಟಾದ ಗಾಜಿನ ಸೆರಾಮಿಕ್ ಆಗಿದ್ದು, ಉನ್ನತ ಮಟ್ಟದ ಬಾಳಿಕೆಯನ್ನು ಒದಗಿಸುತ್ತದೆ.
200 ಎಂಪಿ ಕ್ಯಾಮೆರಾ ಸೌಲಭ್ಯ
ಗ್ಯಾಲಕ್ಸಿ ಎಸ್25 ಎಡ್ಜ್ ನ ತೆಳುವಾದ ಮತ್ತು ಹಗುರವಾದ ವಿನ್ಯಾಸವು ಬಳಕೆದಾರರಿಗೆ ಯಾವುದೇ ಸಮಯದಲ್ಲಿ, ಎಲ್ಲಿಯೇ ಇದ್ದರೂ ನೆನಪಲ್ಲಿ ಉಳಿಯುವ ಕ್ಷಣಗಳನ್ನು ಸುಲಭವಾಗಿ ಸೆರೆ ಹಿಡಿಯಲು ಮತ್ತು ಅವರ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. 200 ಎಂಪಿ ವೈಡ್ ಲೆನ್ಸ್, ಗ್ಯಾಲಕ್ಸಿ ಎಸ್ ಸರಣಿಯ ಅದ್ಭುತ ಕ್ಯಾಮೆರಾ ಅನುಭವವನ್ನು ಎತ್ತಿಹಿಡಿ ಯುತ್ತದೆ ಮತ್ತು ನೈಟೋಗ್ರಫಿಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಇದರ ಅತಿ- ಉನ್ನತ ರೆಸಲ್ಯೂಶನ್ ನಿಂದಾಗಿ, ಬಳಕೆದಾರರು ಅದ್ಭುತವಾದ ಫೋಟೋಗಳನ್ನು ಪಡೆಯುತ್ತಾರೆ ಮತ್ತು ಕಡಿಮೆ ಬೆಳಕಿನ ವಾತಾವರಣದಲ್ಲಿ ಶೇ.40ರಷ್ಟು ಉತ್ತಮ ಪ್ರಕಾಶಮಾನತೆಯೊಂದಿಗೆ ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಈ ಫೋನ್ 12 ಎಂಪಿ ಅಲ್ಟ್ರಾ-ವೈಡ್ ಸೆನ್ಸಾರ್ ಆಟೋ ಫೋಕಸ್ ವೈಶಿಷ್ಟ್ಯವನ್ನು ಹೊಂದಿದ್ದು, ಇದು ಸ್ಪಷ್ಟ ಮತ್ತು ವಿವರವಾದ ಮ್ಯಾಕ್ರೋ ಫೋಟೋ ಗ್ರಫಿ ಮಾಡುವ ಶಕ್ತಿಯನ್ನು ಒದಗಿಸುತ್ತದೆ. ಇದರಿಂದ ಇನ್ನಷ್ಟು ಸೃಜನಶೀಲ ಸ್ವಾತಂತ್ರ್ಯ ಪ್ರಾಪ್ತ ವಾಗುತ್ತದೆ.
ಗ್ಯಾಲಕ್ಸಿ ಎಸ್25 ಎಡ್ಜ್, ಗ್ಯಾಲಕ್ಸಿ ಎಸ್25ನಲ್ಲಿ ಒದಗಿಸಲಾದ ಅದೇ ಪ್ರೊವಿಶುವಲ್ ಎಂಜಿನ್ ನಿಂದ ಪ್ರಯೋಜನ ಪಡೆಯುತ್ತದೆ. ಈ ಫೀಚರ್ ಬಟ್ಟೆ ಅಥವಾ ಸಸ್ಯಗಳ ಅತ್ಯಂತ ಸೂಕ್ಷ್ಮ ವಿವರಗಳನ್ನು ಕಟ್ಟಿಕೊಡುತ್ತದೆ ಮತ್ತು ಭಾವಚಿತ್ರಗಳಲ್ಲಿ ಸಹಜ, ಜೀವಂತ ಚರ್ಮದ ಟೋನ್ ಗಳು ಕಾಣಿಸುವ ಉನ್ನತ ಮಟ್ಟದ ಫೋಟೋಗ್ರಫಿ ಅನುಭವ ಒದಗಿಸುತ್ತದೆ. ಗ್ಯಾಲಕ್ಸಿ ಎಐ ಆಧರಿತ ಎಡಿಟಿಂಗ್ ಫೀಚರ್ ಗಳಾದ ಆಡಿಯೊ ಎರೇಸರ್ ಮತ್ತು ಡ್ರಾಯಿಂಗ್ ಅಸಿಸ್ಟ್ ನಂತಹ ಜನಪ್ರಿಯ ಫೀಚರ್ ಗಳನ್ನು ಗ್ಯಾಲಕ್ಸಿ ಎಸ್25 ಸರಣಿಯಿಂದ ಎರವಲು ತರಲಾಗಿದೆ.
ತೆಳುವಾದ ದೇಹ, ಉನ್ನತ ಕಾರ್ಯಕ್ಷಮತೆ
ಗ್ಯಾಲಕ್ಸಿ ಎಸ್25 ಎಡ್ಜ್ ಪ್ರೀಮಿಯಂ ಕಾರ್ಯಕ್ಷಮತೆಯನ್ನು ಒದಗಿಸಲು ನಿರ್ಮಿತವಾಗಿದ್ದು, ಇದು ಸ್ನಾಪ್ ಡ್ರಾಗನ್ 8® ಎಲೈಟ್ ಮೊಬೈಲ್ ಪ್ಲಾಟ್ ಫಾರ್ಮ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದರ ಕ್ವಾಲ್ಕಮ್ ಟೆಕ್ನಾಲಜೀಸ್, ಇಂಕ್. ಮೂಲಕ ಕಸ್ಟಮೈಸ್ ಮಾಡಲಾದ ಚಿಪ್‌ಸೆಟ್, ಗ್ಯಾಲಕ್ಸಿ ಎಸ್25 ಎಡ್ಜ್ ನ ಆನ್-ಡಿವೈಸ್ ಎಐ ಸಂಸ್ಕರಣಾ ಸಾಮರ್ಥ್ಯಗಳಿಗೆ ಅದ್ಭುತ ಶಕ್ತಿಯನ್ನು ಒದಗಿಸು ತ್ತದೆ ಮತ್ತು ದಿನವಿಡೀ ವೇಗವಾಗಿ ಕಾರ್ಯನಿರ್ವಹಿಸಲು ಶಕ್ತಿ ಒದಗಿಸುತ್ತದೆ. ಗ್ಯಾಲಕ್ಸಿ ಎಸ್25 ಎಡ್ಜ್, ತನ್ನ ತೆಳುವಾದ ಆದರೆ ವಿಶಾಲವಾದ ವೇಪರ್ ಚೇಂಬರ್ ಕಾರಣದಿಂದ ನಿರಂತರವಾಗಿ ಬಳಕೆ ಮಾಡಿದರೂ ತಂಪಾಗಿರುತ್ತದೆ ಮತ್ತು ಇದು ಸ್ಥಿರವಾಗಿ ಶಾಖ ಹರಡುವಿಕೆಗೆ ಸಹಾಯ ಮಾಡುತ್ತದೆ.
ಗ್ಯಾಲಕ್ಸಿ ಎಸ್ ಸರಣಿಯ ಪ್ರಸಿದ್ಧ ಕಾರ್ಯಕ್ಷಮತೆಯ ಮಾನದಂಡಗಳಿಗೆ ತಕ್ಕಂತೆ ಮೂಡಿ ಬಂದಿರುವ ಗ್ಯಾಲಕ್ಸಿ ಎಸ್25 ಎಡ್ಜ್, ಪ್ರೊಸ್ಕೇಲರ್ ಫೀಚರ್ ಮೂಲಕ ಅತ್ಯಾಧುಮಿಕ ಮತ್ತು ದಕ್ಷ ಎಐ ಇಂಜ್ ಪ್ರೊಸೆಸಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಫೀಚರ್ ಡಿಸ್ಪ್ಲೇ ಇಮೇಜ್ ಸ್ಕೇಲಿಂಗ್ ಗುಣಮಟ್ಟದಲ್ಲಿ ಶೇ.40ರಷ್ಟು ಸುಧಾರಣೆಯನ್ನು ಒದಗಿಸುತ್ತದೆ. ಜೊತೆಗೆ ಸ್ಯಾಮ್‌ಸಂಗ್ ನ ಕಸ್ಟಮೈಸ್ಡ್ ಮೊಬೈಲ್ ಡಿಜಿಟಲ್ ನ್ಯಾಚುರಲ್ ಇಮೇಜ್ ಎಂಜಿನ್ (ಎಂಡಿಎನ್ಎಲ್ಇ) ಸಂಯೋ ಜನೆಯನ್ನು ಹೊಂದಿದೆ.
ಗ್ಯಾಲಕ್ಸಿ ಎಐ ಸೌಲಭ್ಯ
ಗ್ಯಾಲಕ್ಸಿ ಎಸ್25 ಎಡ್ಜ್, ಗ್ಯಾಲಕ್ಸಿ ಎಐ ಅನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಂಡಿದ್ದು, ಅತ್ಯಂತ ಸಹಜ ಮತ್ತು ಅತ್ಯುತ್ತಮವಾಗಿ ಮೊಬೈಲ್ ಎಐ ಅನುಭವಗಳನ್ನು ಒದಗಿಸುತ್ತದೆ. ಬಳಕೆದಾರರು ವೈಯಕ್ತಿಕ, ಬಹು-ಮಾದರಿಯ ಎಐ ಸಾಮರ್ಥ್ಯಗಳನ್ನು ಹೊಂದಲಿದ್ದಾರೆ, ಜೊತೆಗೆ ಅವರ ವೈಯ ಕ್ತಿಕ ಡೇಟಾ ಯಾವಾಗಲೂ ಸುರಕ್ಷಿತವಾಗಿರುತ್ತದೆ ಎಂಬ ಮಾನಸಿಕ ಶಾಂತಿಯನ್ನು ಹೊಂದಿರು ತ್ತಾರೆ.
ಗ್ಯಾಲಕ್ಸಿ ಎಸ್25 ಸರಣಿಯಂತೆಯೇ, ಗ್ಯಾಲಕ್ಸಿ ಎಸ್25 ಎಡ್ಜ್, ಬಹು ಆಪ್ ಗಳಲ್ಲಿ ಸುಲಭವಾಗಿ, ನಿರಾಳವಾಗಿ ಕಾರ್ಯನಿರ್ವಹಿಸುವ ಎಐ ಏಜೆಂಟ್ ಗಳನ್ನು ಹೊಂದಿದ್ದು, ಇದು ಕೆಲಸಗಳನ್ನು ಸುಲಭವಾಗಿ ಮಾಡಲು ನಿಜವಾದ ಎಐ ಸಂಗಾತಿಯಾಗಿ ಸಹಾಯ ಮಾಡುತ್ತದೆ. ಗ್ಯಾಲಕ್ಸಿ ಎಐ, ದೈನಂದಿನ ಚಟುವಟಿಕೆಗಳೊಂದಿಗೆ ಉತ್ತಮವಾಗಿ ಸಂಯೋಜನೆಗೊಳ್ಳುತ್ತದೆ. ನೌ ಬ್ರೀಫ್ ಮತ್ತು ನೌ ಬಾರ್, ಥರ್ಡ್ ಪಾರ್ಟಿ ಆಪ್ ಗಳ ಸಂಯೋಜನೆಯನ್ನು ಒಳಗೊಂಡಿದ್ದು, ದೈನಂದಿನ ಪ್ರಯಾಣ, ಊಟ, ಮತ್ತು ಇತರ ಸಂದರ್ಭಗಳಲ್ಲಿ ಇದು ರಿಮೈಂಡರ್ ಒದಗಿಸುವ ಮೂಲಕ ಹೆಚ್ಚಿನ ಸೌಕರ್ಯ ವನ್ನು ಒದಗಿಸುತ್ತವೆ.
ಗೂಗಲ್ ನೊಂದಿಗಿನ ಗ್ಯಾಲಕ್ಸಿಯ ಆಳವಾದ ಸಂಯೋಜನೆಯಿಂದಾಗಿ, ಗ್ಯಾಲಕ್ಸಿ ಎಸ್25 ಎಡ್ಜ್, ಜೆಮಿನಿಯ ಇತ್ತೀಚಿನ ಸುಧಾರಣೆಗಳನ್ನು ಬಳಕೆದಾರರಿಗೆ ಒದಗಿಸುತ್ತದೆ. ಉದಾಹರಣೆಗೆ, ಜೆಮಿನಿ ಲೈವ್ ನ ಹೊಸ ಕ್ಯಾಮೆರಾ ಮತ್ತು ಸ್ಕ್ರೀನ್ ಶೇರಿಂಗ್ ಸಾಮರ್ಥ್ಯಗಳನ್ನು ಬಳಕೆದಾರರು ಹೊಂದ ಬಹುದಾಗಿದ್ದು, ತಮ್ಮ ಸ್ಕ್ರೀನ್ ನಲ್ಲಿ ಅಥವಾ ಸುತ್ತಮುತ್ತಲಿನ ಪ್ರಪಂಚದಲ್ಲಿ ಏನನ್ನು ಕಾಣುತ್ತಾರೆ ಎಂಬುದನ್ನು ಜೆಮಿನಿ ಲೈವ್ ಗೆ ತೋರಿಸಬಹುದು. ಜೊತೆಗೆ ಲೈವ್ ಸಂಭಾಷಣೆಯಲ್ಲಿ ಅದರೊಂ ದಿಗೆ ಸಂವಹನ ನಡೆಸಬಹುದು.
ಗ್ಯಾಲಕ್ಸಿ ಎಸ್25 ಎಡ್ಜ್ ನಲ್ಲಿ ಗ್ಯಾಲಕ್ಸಿ ಎಐ ಆಧರಿತ ಅನುಭವಗಳು ಕೇವಲ ಅನುಕೂಲತೆ ಮಾತ್ರವೇ ಒದಗಿಸುವುದಿಲ್ಲ, ಜೊತೆಗೆ ಅವುಗಳನ್ನು ಪ್ರೈವೆಸಿಯನ್ನು ಮೂಲಾಧಾರವಾಗಿ ಇರಿಸಿ ಕೊಂಡು ವಿನ್ಯಾಸಗೊಳಿಸಲಾಗಿದೆ. ಆನ್-ಡಿವೈಸ್ ಎಐ ಪ್ರೊಸೆಸಿಂಗ್ ಸ್ಯಾಮ್ ಸಂಗ್ ನಾಕ್ಸ್ ವಾಲ್ಟ್ ಮೂಲಕ ಗ್ರಾಹಕರ ಡೇಟಾವನ್ನು ಸುರಕ್ಷಿತವಾಗಿಡುತ್ತದೆ. ಜೊತೆಗೆ ವೈಯಕ್ತಿಕಗೊಳಿಸಿದ ಮೊಬೈಲ್ ಅನುಭವಗಳು ಒದಗಿಸಿದರೂ ಗೌಪ್ಯತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡುವು ದಿಲ್ಲ ಎಂಬ ವಿಚಾರವನ್ನು ಸಾರುತ್ತದೆ.
ಬೆಲೆ, ಲಭ್ಯತೆ ಮತ್ತು ಪ್ರೀ- ಆರ್ಡರ್ ಆಫರ್ ಗಳು
ಗ್ಯಾಲಕ್ಸಿ ಎಸ್25 ಎಡ್ಜ್ ಇಂದಿನಿಂದ ಎಲ್ಲಾ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ರಿಟೇಲ್ ಮಳಿಗೆಗಳಲ್ಲಿ ಪ್ರೀ-ಆರ್ಡರ್ ಮಾಡಲು ಲಭ್ಯವಿದೆ. ಗ್ಯಾಲಕ್ಸಿ ಎಸ್25 ಎಡ್ಜ್ ಅನ್ನು ಪ್ರೀ-ಆರ್ಡರ್ ಮಾಡುವ ಗ್ರಾಹಕರಿಗೆ ರೂ.12,000 ಮೌಲ್ಯದ ಉಚಿತ ಸ್ಟೋರೇಜ್ ಅಪ್ ಗ್ರೇಡ್ ಸೌಲಭ್ಯ ಲಭ್ಯ ವಿರುತ್ತದೆ. ಗ್ರಾಹಕರು 9 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಸಹ ಪಡೆಯ ಬಹುದು. ಗ್ಯಾಲಕ್ಸಿ ಎಸ್25 ಎಡ್ಜ್ ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಜೆಟ್‌ಬ್ಲಾಕ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಸ್25 ಎಡ್ಜ್ ಮತ್ತು ಗ್ಯಾಲಕ್ಸಿ ಎಸ್25 ಸರಣಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು samsung.comಗೆ ಭೇಟಿ ನೀಡಿ.
ಬೆಲೆ
ಮಾಡೆಲ್ ರಾಮ್ ಸ್ಟೋರೇಜ್ ಬಣ್ಣಗಳು ಎಂಓಪಿ (ರೂ. ಗಳಲ್ಲಿ)
ಗ್ಯಾಲಕ್ಸಿ ಎಸ್25 ಎಡ್ಜ್ 12 ಜಿಬಿ 256 ಜಿಬಿ ಟೈಟಾನಿಯಂ ಸಿಲ್ವರ್ ಮತ್ತು ಟೈಟಾನಿಯಂ ಜೆಟ್‌ಬ್ಲಾಕ್ 109,999
- 12 ಜಿಬಿ 512 ಜಿಬಿ 121,999
ಪ್ರೀ-ಆರ್ಡರ್ ಆಫರ್ ಗಳು
ಮಾಡೆಲ್ ಗಳು ಆಫರ್ ಗಳು ನೋ ಕಾಸ್ಟ್ ಇಎಂಐ
ಗ್ಯಾಲಕ್ಸಿ ಎಸ್25 ಎಡ್ಜ್ ರೂ. 12000 ಮೌಲ್ಯದವರೆಗಿನ ಸ್ಟೋರೇಜ್ ಅಪ್ ಗ್ರೇಡ್ ಪ್ರಯೋಜನಗಳು
(ಪ್ರೀ- ಬುಕ್ 256 ಜಿಬಿ ಮತ್ತು 512 ಜಿಬಿ ಪಡೆಯಿರಿ) 9 ತಿಂಗಳವರೆಗೆ