ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack : ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತಕ್ಕೆ ಪರಮಾಣು ಬಾಂಬ್‌ ಬೆದರಿಕೆ ಹಾಕಿದ ಪಾಕ್‌ ರಾಯಭಾರಿ

ಕಳೆದ ತಿಂಗಳು ನಡೆದ ಪಹಲ್ಗಾಮ್ (Pahalgam Terror Attack) ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ , ರಷ್ಯಾದಲ್ಲಿ ಇರುವ ಪಾಕಿಸ್ತಾನದ ರಾಯಭಾರಿ ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

ಭಾರತಕ್ಕೆ ಪರಮಾಣು ಬಾಂಬ್‌ ಬೆದರಿಕೆ ಹಾಕಿದ ಪಾಕ್‌ ರಾಯಭಾರಿ

Profile Vishakha Bhat May 4, 2025 12:02 PM

ಇಸ್ಲಾಮಾಬಾದ್:‌ ಕಳೆದ ತಿಂಗಳು ನಡೆದ ಪಹಲ್ಗಾಮ್ (Pahalgam Terror Attack) ಭಯೋತ್ಪಾದಕ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ , ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಭಾರತಕ್ಕೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಪಾಕಿಸ್ತಾನ ರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ "ಪೂರ್ಣ ಪ್ರಮಾಣದ ಶಕ್ತಿಯನ್ನು" ಬಳಸುತ್ತದೆ ಎಂದು ಅವರು ಹೇಳಿದರು. ಆರ್‌ಟಿಗೆ ನೀಡಿದ ಸಂದರ್ಶನದಲ್ಲಿ, ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, ಸೋರಿಕೆಯಾದ ಕೆಲವು ದಾಖಲೆಗಳು ಭಾರತವು ಪಾಕಿಸ್ತಾನದ ಕೆಲವು ಪ್ರದೇಶಗಳ ಮೇಲೆ ದಾಳಿ ಮಾಡುತ್ತದೆ ಎಂದು ಹೇಳಿದೆ. ನಾನು ಭಾರತಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಭಾರತದ ಉನ್ಮಾದ ಮಾಧ್ಯಮಗಳು ಮತ್ತು ಆ ಕಡೆಯಿಂದ ಹೊರಬರುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಭಾರತದ ಕಡೆಯಿಂದ ಬರುತ್ತಿರುವ ಬೇಜಾವಬ್ದಾರಿ ಹೇಳಿಕೆಗಳು ನಮ್ಮನ್ನು ಇಂತಹ ಕ್ರಮ ಕೈಗೊಳ್ಳುವಂತೆ ಪ್ರೇರೇಪಿತರನ್ನಾಗಿ ಮಾಡಿದೆ. ಪಾಕಿಸ್ತಾನದ ಕೆಲವು ಪ್ರದೇಶಗಳ ಮೇಲೆ ದಾಳಿ ಮಾಡಲು ನಿರ್ಧರಿಸಿರುವ ಇತರ ಕೆಲವು ದಾಖಲೆಗಳು ಸೋರಿಕೆಯಾಗಿವೆ. ಒಂದು ವೇಳೆ ಅದು ನಿಜವಾಗಿದ್ದರೆ, ನಾವು ಭಾರತವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.



ಮುಂದುವರಿದು, ಭಾರತ ಮತ್ತು ಪಾಕಿಸ್ತಾನದ ವಿಷಯಕ್ಕೆ ಬಂದರೆ, ಸಂಖ್ಯಾ ಬಲದ ಚರ್ಚೆಯಲ್ಲಿ ನಾವು ಭಾಗಿಯಾಗಲು ಬಯಸುವುದಿಲ್ಲ. ನಮ್ಮ ಬಳಿಯೂ ಪರಮಾಣು ಬಲವಿದೆ, ನಾವೂ ಅದನ್ನು ಉಪಯೋಗಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. "ಪಾಕಿಸ್ತಾನದ ಜನರ ಬೆಂಬಲದೊಂದಿಗೆ" ಸಶಸ್ತ್ರ ಪಡೆಗಳು "ಪೂರ್ಣ ಪ್ರಮಾಣದ ಶಕ್ತಿಯೊಂದಿಗೆ" ಪ್ರತಿಕ್ರಿಯಿಸುತ್ತವೆ ಎಂದು ಜಮಾಲಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಪಹಲ್ಗಾಮ್‌ ಉಗ್ರರ ದಾಳಿ; ಮೃತಪಟ್ಟ ಮುಸ್ಲಿಂ ಯುವಕನ ಸಹೋದರನಿಗೆ ವಕ್ಫ್ ಮಂಡಳಿಯಿಂದ ಉದ್ಯೋಗ ಘೋಷಣೆ

ಇದಕ್ಕೂ ಮೊದಲು, ಪಾಕಿಸ್ತಾನ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದರು , ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಮತ್ತು 130 ಪರಮಾಣು ಬಾಂಬ್‌ಗಳನ್ನು ಭಾರತಕ್ಕಾಗಿಯೇ ಇಡಲಾಗಿದೆ ಎಂದು ಹೇಳಿದ್ದಾರೆ. ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ಭಾರತ ಧೈರ್ಯ ಮಾಡಿದರೆ ಯುದ್ಧಕ್ಕೆ ಸಿದ್ದವಾಗಬೇಕು ಎಂದು ಅವರು ಹೇಳಿದ್ದಾರೆ. ಬುಧವಾರ ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನದ ಮತ್ತೊಬ್ಬ ಸಚಿವ ಅತಾವುಲ್ಲಾ ತರಾರ್, ತಮ್ಮ ದೇಶಕ್ಕೆ "ವಿಶ್ವಾಸಾರ್ಹ ಗುಪ್ತಚರ ಮಾಹಿತಿ" ಸಿಕ್ಕಿದೆ. ಮುಂದಿನ 24 ರಿಂದ 36 ಗಂಟೆಗಳಲ್ಲಿ ಭಾರತ ಮಿಲಿಟರಿ ದಾಳಿ ನಡೆಸುತ್ತದೆ ಎಂದು ಆರೋಪಿಸಿದ್ದಾರೆ.