ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: ಪಹಲ್ಗಾಮ್‌ ಉಗ್ರರ ದಾಳಿ; ಮೃತಪಟ್ಟ ಮುಸ್ಲಿಂ ಯುವಕನ ಸಹೋದರನಿಗೆ ವಕ್ಫ್ ಮಂಡಳಿಯಿಂದ ಉದ್ಯೋಗ ಘೋಷಣೆ

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ 26 ಜನರ ಪೈಕಿ ಕಾಶ್ಮೀರದ ಸ್ಥಳೀಯ ನಿವಾಸಿ ಕುದುರೆ ನಿರ್ವಾಹಕ ಸೈಯದ್ ಆದಿಲ್ ಹುಸೇನ್ ಶಾ ಒಬ್ಬರು. ಪ್ರವಾಸಿಗರನ್ನು ರಕ್ಷಿಸುವಾಗ ಮಡಿದ ಆತನ ಕುಟುಂಬಕ್ಕೆ ನೆರವಾಗುವಂತೆ ಸಹೋದರ ಸೈಯದ್ ನಜಕತ್ ಹುಸೇನ್ ಶಾ ಅವರಿಗೆ ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿಯು ಉದ್ಯೋಗವನ್ನು ನೀಡಿದೆ.

ಉಗ್ರರ ದಾಳಿಯಲ್ಲಿ ಮೃತಪಟ್ಟ ಮುಸ್ಲಿಂ ಯುವಕನ ಸಹೋದರನಿಗೆ ಉದ್ಯೋಗ

Profile Vishakha Bhat May 2, 2025 6:25 PM

ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam Terror Attack) ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟಿದ 26 ಜನರ ಪೈಕಿ ಕಾಶ್ಮೀರದ ಸ್ಥಳೀಯ ನಿವಾಸಿ ಕುದುರೆ ನಿರ್ವಾಹಕ ಸೈಯದ್ ಆದಿಲ್ ಹುಸೇನ್ ಶಾ ಒಬ್ಬರು. ಪ್ರವಾಸಿಗರನ್ನು ರಕ್ಷಿಸುವಾಗ ಮಡಿದ ಆತನ ಕುಟುಂಬಕ್ಕೆ ನೆರವಾಗುವಂತೆ ಸಹೋದರ ಸೈಯದ್ ನಜಕತ್ ಹುಸೇನ್ ಶಾ ಅವರಿಗೆ ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿಯು ಉದ್ಯೋಗವನ್ನು ನೀಡಿದೆ. 25 ಪ್ರವಾಸಿಗರನ್ನು ಬಲಿತೆಗೆದುಕೊಂಡ ಈ ದಾಳಿಯಲ್ಲಿ ಸಾವನ್ನಪ್ಪಿದ ಏಕೈಕ ಸ್ಥಳೀಯ ವ್ಯಕ್ತಿ 30 ವರ್ಷದ ಸೈಯದ್ ಆದಿಲ್ ಹುಸೇನ್ ಶಾ. ಅವರು ತಮ್ಮ ಕುದುರೆಯ ಮೇಲೆ ಪ್ರವಾಸಿಗರ ಮಾರ್ಗದರ್ಶನ ನೀಡುತ್ತಿದ್ದಾಗ ಉಗ್ರರ ದಾಳಿ ನಡೆದಿತ್ತು.

ಮನೆಗೆ ಆಧಾರ ಸ್ತಂಭವಾಗಿ ನಿಂತಿದ್ದ ಸೈಯದ್ ಆದಿಲ್ ಹುಸೇನ್ ಶಾ ದಾಳಿ ನಡೆದ ಸಂದರ್ಭದಲ್ಲಿ ಉಗ್ರರ ಬಳಿ ಶಸ್ತ್ರವನ್ನು ಕಸಿಯಲು ಪ್ರಯತ್ನಿಸಿ, ಅವರ ಬಳಿ ದಯವಿಟ್ಟು ಪ್ರವಾಸಿಗರನ್ನು ಏನೂ ಮಾಡಬೇಡಿ ಎಂದು ಕೋರಿಕೊಂಡಿದ್ದರು. ಅದೇ ಸಮಯದಲ್ಲಿ ಉಗ್ರರು ಆತನ ಎದೆಗೆ ಮೂರು ಗುಂಡುಗಳನ್ನು ಹೊಡೆದಿದ್ದರು. ಸಾಯುವ ಮೊದಲು ಷಾ ಹಲವು ಪ್ರವಾಸಿಗರನ್ನು ರಕ್ಷಿಸಿದ್ದಲ್ಲದೆ, ಮಾನವೀಯತೆಯನ್ನು ಮೆರೆದಿದ್ದರು. ನಾನು ಧೈರ್ಯ ತಂದುಕೊಂಡು ನನ್ನ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಕೆಳಗೆ ಬರುವಾಗ, ನನ್ನ ತಾಯಿಯ ಕಾಲಿಗೆ ಗಾಯಗಳಾಗಿದ್ದವು. ಒಬ್ಬ ಪೋನಿ ರೈಡರ್ ನಮಗೆ ಬೆಂಬಲ ನೀಡಿದ್ದರು ಎಂದು ಷಾ ಬಗ್ಗೆ ಪುಣೆಯ ಪ್ರವಾಸಿಗನೊಬ್ಬ ತಿಳಿಸಿದ್ದ.

ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಬಳಿಕ ಭಾರತ ರಾಜತಾಂತ್ರಿಕ ನಡೆಯನ್ನು ಕೈಗೊಂಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದೆ. ವೀಸಾ ರದ್ದಾಗಿ ಭಾರತದಲ್ಲಿ ಸಿಲುಕಿರುವ ತನ್ನ ನಾಗರಿಕರಿಗೆ ವಾಘಾ ಗಡಿ ಮೂಲಕ ದೇಶಕ್ಕೆ ಮರಳಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಶುಕ್ರವಾರ ಘೋಷಿಸಿದೆ. ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ಬಳಿ ಇರುವ ಅಟ್ಟಾರಿ-ವಾಘಾ ಗಡಿಯನ್ನು ಏಪ್ರಿಲ್ 30 ರವರೆಗೆ ತೆರೆದಿಟ್ಟು, ಗುರುವಾರ ಬಂದ್ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: Pahalgam Attack: ಪಹಲ್ಗಾಮ್ ದಾಳಿ ಬಳಿಕ ಗಗನಕ್ಕೇರಿದ ಕಾಶ್ಮೀರಿ ಕೇಸರಿ ಬೆಲೆ- ಕೆಜಿಗೆ ₹5 ಲಕ್ಷ ರೂ.

ಪಾಕ್ ಸೈನಿಕರು ಬಿಟ್ಟು ಓಡಿಹೋಗುತ್ತಿರುವುದು ಪಾಕಿಸ್ತಾನ ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯ. ಮಾಧ್ಯಮ ವರದಿಗಳ ಪ್ರಕಾರ, ಭಾರತದೊಂದಿಗಿನ ಯುದ್ಧದ ಬೆದರಿಕೆಯ ಮಧ್ಯೆ, ಸೇನಾ ಸಿಬ್ಬಂದಿ ಪಾಕಿಸ್ತಾನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಲಾಯನ ಮಾಡುತ್ತಿದ್ದಾರೆ. ಇನ್ನು 4500 ಸೈನಿಕರು ಮತ್ತು 250 ಅಧಿಕಾರಿಗಳು ಈಗಾಗಲೇ ತಮ್ಮ ಹುದ್ದೆಗಳಿಂದ ಪಲಾಯನ ಮಾಡಿದ್ದಾರೆ. ಭಾರತವು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಪ್ರಮುಖ ಭಯೋತ್ಪಾದಕ ದಾಳಿ ನಡೆದಿದ್ದು 26 ಜನರು ಸಾವನ್ನಪ್ಪಿದ್ದರು. ಈ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿರಬಹುದು ಎಂದು ಏಜೆನ್ಸಿಗಳು ಪ್ರತಿಪಾದಿಸುತ್ತಿವೆ.