Salman Khan: ಜೀವ ಬೆದರಿಕೆ ಬೆನ್ನಲ್ಲೇ ಸ್ನೇಹಿತನ ಮದ್ವೆಯಲ್ಲಿ ಸಲ್ಮಾನ್ ಖಾನ್ ಭಾಗಿ- ವಿಡಿಯೊ ಫುಲ್ ವೈರಲ್
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಇತ್ತೀಚೆಗೆ ಜೀವ ಬೆದರಿಕೆ ಬಂದ ಕಾರಣ ನಟ ಸಲ್ಮಾನ್ ಖಾನ್ ಅವರು ಅನೇಕ ಸಭೆ ಸಮಾರಂಭಕ್ಕೆ ಗೈರಾಗಿದ್ದರು. ಆದರೆ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ತಮ್ಮ ಸ್ನೇಹಿತ ಅಯಾಜ್ ಖಾನ್ ಮತ್ತು ಝೀಬಾ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಮದುವೆ ಸಮಾರಂಭಕ್ಕೆ ನಟ ಸಲ್ಮಾನ್ ಖಾನ್ ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ..


ನವದೆಹಲಿ: ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಅವರು ವೃತ್ತಿಜೀವನಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕ ಜೀವನದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಸಿನಿಮಾ, ರಿಯಾಲಿಟಿ ಶೋ, ಇತರ ಇವೆಂಟ್‌ನಲ್ಲಿ ಭಾಗಿಯಾಗುವ ಇವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಇದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಇತ್ತೀಚೆಗೆ ಬೆದರಿಕೆ ಬಂದ ಕಾರಣ ನಟ ಸಲ್ಮಾನ್ ಖಾನ್ ಅವರು ಅನೇಕ ಸಭೆ ಸಮಾರಂಭಕ್ಕೆ ಗೈರಾಗಿದ್ದರು. ಆದರೆ ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ತಮ್ಮ ಸ್ನೇಹಿತ ಅಯಾಜ್ ಖಾನ್ ಮತ್ತು ಝೀಬಾ ಅವರ ವಿವಾಹ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದಾರೆ. ಈ ಮದುವೆ ಸಮಾರಂಭಕ್ಕೆ ನಟ ಸಲ್ಮಾನ್ ಖಾನ್ ಅವರಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.
ಸ್ನೇಹಿತ ಅಯಾಜ್ ಖಾನ್ ಅವರ ಮದುವೆ ಕಾರ್ಯಕ್ರಮಕ್ಕಾಗಿ ನಟ ಸಲ್ಮಾನ್ ಖಾನ್ ಅವರು ಮುಂಬೈ ಗೆ ಆಗಮಿಸಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ಅವರ ಸುರಕ್ಷತೆಗಾಗಿ ವೈ-ಪ್ಲಸ್ ಭದ್ರತೆಯನ್ನು ಒದಗಿಸಿದ್ದಾರೆ. ನಟ ಸಲ್ಮಾನ್ ಖಾನ್ ಅವರು ಮದುವೆ ಕಾರ್ಯಕ್ರಮದಲ್ಲಿ ಮದುಮಕ್ಕಳಿಗೆ ಪ್ರೀತಿಯಿಂದ ಶುಭ ಹಾರೈಸಿದ್ದು ಅಯಾಜ್ ಖಾನ್ ಈ ವಿಡಿಯೋ ವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಸಲ್ಮಾನ್ ಬ್ಲೂ ಶರ್ಟ್, ಗ್ರೇ ಕಲರ್ ಜಾಕೆಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಮತ್ತು ಶೂಗಳನ್ನು ಧರಿಸಿ ಸ್ಟೈಲಿಶ್ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟ ಸಲ್ಮಾನ್ ಗೆ ದೊಡ್ಡ ಮಟ್ಟಿಗಿನ ಅಭಿಮಾನಿ ಬಳಗವಿದ್ದು ನಟನೊಂದಿಗೆ ಸಂವಹನ ನಡೆಸಲು ದೊಡ್ಡ ಜನಸಮೂಹ ಅವರ ಸುತ್ತಲೂ ನೆರೆದಿದ್ದು ಭದ್ರತಾ ಪಡೆಗಳಿಗೆ ವ್ಯವಸ್ಥೆ ಸರಿಮಾಡಲು ಸಾಕಷ್ಟು ತೊಡಕಾಗಿದೆ.
ಸಲ್ಮಾನ್ ಖಾನ್ ಅವರ ಸಹೋದರ ಸೊಹೈಲ್ ಖಾನ್ ಕೂಡ ತಮ್ಮ ಮಗ ನಿರ್ವಾನ್ ಖಾನ್ ಅವರೊಂದಿಗೆ ಮದುವೆ ಯಲ್ಲಿ ಭಾಗವಹಿಸಿದ್ದರು. ಸೊಹೈಲ್ ಬ್ಲ್ಯಾಕ್ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿ ಸ್ಟೈಲಿಶ್ ಆಗಿ ಕಂಡು ಬಂದಿದ್ದಾರೆ. ನಿರ್ವಾನ್ ಖಾನ್ ಕೂಡ ಬ್ಲ್ಯಾಕ್ ಟಿ-ಶರ್ಟ್ ಮತ್ತು ಮೆರೂನ್ ಜಾಕೆಟ್ ಜೊತೆ ಡೆನಿಮ್ ಧರಿಸಿ ವಿಭಿನ್ನವಾಗಿ ಕಂಡಿದ್ದಾರೆ. ಸೂರಜ್ ಪಂಚೋಲಿ, ಉರ್ವಶಿ ಧೋಲಾಕಿಯಾ ಮತ್ತು ರಿಧಿಮಾ ಪಂಡಿತ್ ಇತರ ಸೆಲೆಬ್ರಿಟಿಗಳು ಕೂಡ ಈ ಮದುವೆಯಲ್ಲಿ ಹಾಜರಾಗಿದ್ದಾರೆ.
ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಅವರ ಅಪಾರ್ಟ್ಮೆಂಟ್ಗೆ 23 ವರ್ಷದ ಛತ್ತಿಸ್ ಗಡದ ಜಿತೇಂದ್ರ ಕುಮಾರ್ ಸಿಂಗ್ ತಾನು ಅಭಿಮಾನಿ ಎಂದು ಹೇಳಿ ಮನೆಗೆ ನುಗ್ಗಿದ್ದ ಘಟನೆ ನಡೆದಿತ್ತು. ನಟ ಸಲ್ಮಾನ್ ಖಾನ್ ಅವರಿಗೆ ವೈ ಪ್ಲಸ್ ಭದ್ರತೆ ನೀಡಿದರು ಇಂತಹ ಅಚಾತುರ್ಯ ನಡೆಯುವ ಬಗ್ಗೆ ಅಭಿಮಾನಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: Salman Khan: ಸಲ್ಮಾನ್ ಖಾನ್ ಜೀವಕ್ಕೆ ಅಪಾಯ; ಏಕಾ ಏಕಿ ನಟನ ಮನೆಗೆ ನುಗ್ಗಿದ ವ್ಯಕ್ತಿ !
ಸಲ್ಮಾನ್ ಖಾನ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದ ಸಿಕಂದರ್ ಸಿನಿಮಾ ಅಂದು ಕೊಂಡ ಮಟ್ಟಕ್ಕೆ ಯಶಸ್ಸು ತಂದುಕೊಟ್ಟಿಲ್ಲ. ಬಳಿಕ ನಿರ್ದೇಶಕ ಹರೀಶ್ ಶಂಕರ್ ಅವರು ಸಲ್ಮಾನ್ ಖಾನ್ ಅವರ ಜೊತೆ ಹೊಸ ಸಿನಿಮಾ ಮಾಡಲು ಕಾಲ್ ಶೀಟ್ ಕೇಳಿದ್ದಾರೆ ಎಂಬ ಸುದ್ದಿ ಸಹ ಹರಿದಾಡಿದೆ. ಸಲ್ಮಾನ್ ಖಾನ್ ಅವರ ಈ ಹೊಸ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಲು ಮುಂದಾಗಿದ್ದು ಸಲ್ಮಾನ್ ಖಾನ್ ಕಾಲ್ ಶೀಟ್ ನೀಡಿದ್ರೆ ಶೀಘ್ರವೇ ಸಿನಿಮಾ ಶೂಟಿಂಗ್ ಆರಂಭ ಆಗಲಿದೆ.