ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್: ಬೆಳ್ಳಿ ಗೆದ್ದ ಕಿದಂಬಿ ಶ್ರೀಕಾಂತ್
Malaysia Masters 2025: ದೀರ್ಘಕಾಲದಿಂದ ಗಾಯದ ಮತ್ತು ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ 32 ವರ್ಷದ ಶ್ರೀಕಾಂತ್ ಆರು ವರ್ಷದ ಬಳಿಕ ಆಡಿದ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ ಪಂದ್ಯವಾಗಿತ್ತು. 2019ರಲ್ಲಿ ಆಡಿದ ಕೊನೆಯ ಇಂಡಿಯಾ ಓಪನ್ ಫೈನಲ್‌ನಲ್ಲಿ ರನ್ನರ್ ಅಪ್ ಆಗಿದ್ದರು.


ಕೌಲಾಲಂಪುರ: ಭಾನುವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್(Malaysia Masters 2025) ಟೂರ್ನಿಯಲ್ಲಿ ಭಾರತದ ಕಿದಂಬಿ ಶ್ರೀಕಾಂತ್(Kidambi Srikanth) ರನ್ನರ್ ಅಪ್ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು. ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ವಿಶ್ವದ 4 ನೇ ಶ್ರೇಯಾಂಕಿತ ಲಿ ಶಿ ಫೆಂಗ್(Li Shi Feng) ವಿರುದ್ಧ 11-21, 9-21 ನೇರ ಗೇಮ್‌ನಿಂದ ಪರಾಭವಗೊಂಡರು.
ದೀರ್ಘಕಾಲದಿಂದ ಗಾಯದ ಮತ್ತು ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ 32 ವರ್ಷದ ಶ್ರೀಕಾಂತ್ ಆರು ವರ್ಷದ ಬಳಿಕ ಆಡಿದ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ ಪಂದ್ಯವಾಗಿತ್ತು. 2019ರಲ್ಲಿ ಆಡಿದ ಕೊನೆಯ ಇಂಡಿಯಾ ಓಪನ್ ಫೈನಲ್‌ನಲ್ಲಿ ರನ್ನರ್ ಅಪ್ ಆಗಿದ್ದರು.
ಸೆಮಿಫೈನಲ್‌ನಲ್ಲಿ ಜಪಾನಿನ ಯುಶಿ ಟನಕ ವಿರುದ್ಧ 21-18, 24-22 ಅಂತರದ ಜಯ ಸಾಧಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಆದರೆ ಫೈನಲ್‌ನಲ್ಲಿ ಇದೇ ಪ್ರದರ್ಶನ ತೋರುವಲ್ಲಿ ವಿಫಲರಾದರು. ವಿಶ್ವದ ನಂ.4 ಆಟಗಾರನಾಗಿರುವ ಫೆಂಗ್ ಸೆಮಿಯಲ್ಲಿ ಜಪಾನಿನ ಕೋಡೈ ನರವೋಕ ವಿರುದ್ಧ 21-15, 21-15 ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿದ್ದರು.
ಇದನ್ನೂ ಓದಿ IPL 2025: ಪಂಜಾಬ್‌ಗೆ ಸೋಲು; ಆರ್‌ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ