ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕನ್ನಿಕಾಳ ಪ್ಲ್ಯಾನ್ ಮತ್ತೆ ಫೇಲ್: ಭಾಗ್ಯಾಗೆ ಸಿಕ್ಕೇ ಬಿಡ್ತು ಫುಡ್ ಲೈಸನ್ಸ್

Bhagya Lakshmi Kannada Serial April 21st Episode: ಕನ್ನಿಕಾಗೆ ಭಾರೀ ಅವಮಾನ ಉಂಟಾಗಿದೆ. ಅತ್ತ ಭಾಗ್ಯಳಿಗೆ ಸಿಗಬೇಕಿದ್ದ ಫುಡ್ ಲೈಸನ್ಸ್, ನ್ಯಾಯವಾಗಿಯೇ ಸಿಕ್ಕಿದೆ, ಅಹಂಕಾರದ ಮಾತಾಡಿದ್ದ ಫುಡ್ ಇನ್ಸ್‌ಪೆಕ್ಟರ್‌ಗೆ ಸಸ್ಪೆಂಡ್ ಆದೇಶವನ್ನು ನಿರ್ದೇಶಕರು ನೀಡಿದ್ದಾರೆ. ಸದ್ಯ ಭಾಗ್ಯಾಳ ಮುಂದಿನ ಹಾದಿ ಸುಗಮವಾಗಿದೆ.

ಕನ್ನಿಕಾಳ ಪ್ಲ್ಯಾನ್ ಮತ್ತೆ ಫೇಲ್: ಭಾಗ್ಯಾಗೆ ಸಿಕ್ಕೇ ಬಿಡ್ತು ಫುಡ್ ಲೈಸನ್ಸ್

Bhagya Lakshmi Serial

Profile Vinay Bhat Apr 21, 2025 11:18 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಭಾಗ್ಯಾಗೆ ಕೆಡುಕು ಬಯಸಲು ತಾಂಡವ್ ಹಾಗೂ ಶ್ರೇಷ್ಠಾ, ಕನ್ನಿಕಾ ಜೊತೆ ಸೇರಿ ನಾನಾ ಪ್ರಯುತ್ನ ಮಾಡುತ್ತಿದ್ದಾರೆ. ಆದರೆ, ಈ ವರೆಗೆ ಇವರು ಮಾಡಿರುವ ಯಾವ ಪ್ಲ್ಯಾನ್ ಕೂಡ ಯಶಸ್ಸು ಕಂಡಿಲ್ಲ. ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಇವರಿಗೆಲ್ಲ ಸೆಡ್ಡು ಹೊಡೆದು ಭಾಗ್ಯ ಮುಂದೆ ಸಾಗುತ್ತಲೇ ಇದ್ದಾಳೆ. ಈಗ ಮತ್ತೊಂದು ಸಂಕಷ್ಟದಿಂದ ಭಾಗ್ಯ ಪಾರಾಗಿ ಬಂದಿದ್ದಾಳೆ. ಎಂದಿನಿಂತೆ ತಾಂಡವ್, ಶ್ರೇಷ್ಠಾ, ಕನ್ನಿಕಾಗೆ ಮತ್ತೆ ದೊಡ್ಡ ಮುಜುಗರ ಉಂಟಾಗಿದೆ.

ಭರ್ಜರಿ ಯಶಸ್ವಿಯಾಗಿ ನಡೆಯುತ್ತಿದ್ದ ಭಾಗ್ಯಾಳ ಫುಡ್ ಬ್ಯುಸಿನೆಸ್ ಕೈ ತುತ್ತು ಬಂದ್ ಮಾಡಲು ತಾಂಡವ್-ಶ್ರೇಷ್ಠಾ ಕನ್ನಿಕಾ ಜೊತೆ ಸೇರಿ ಪ್ಲ್ಯಾನ್ ಮಾಡಿದ್ದರು. ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆಗೆ ಬಂದು ಫುಡ್ ಲೈಸನ್ಸ್ ಇಲ್ಲದೆ ಇದೆಲ್ಲ ಮಾಡುವಂತಿಲ್ಲ ಎಂದು ಹೇಳಿ ಆಹಾರವನ್ನು ಪರೀಕ್ಷೆಗೆ ಕಳುಹಿಸಿದ್ದರು. ಕನ್ನಿಕಾ ತನ್ನ ಇನ್​ಫ್ಯುಲೆನ್ಸ್ ಸಹಾಯದಿಂದ ಆಹಾರ ಅಧಿಕಾರಿಗಳಿಗೆ ಹಣ ಕೊಟ್ಟು ಭಾಗ್ಯಾಳ ಫುಡ್ ಟೆಸ್ಟ್ ರಿಸಲ್ಟ್ ನೆಗೆಟಿವ್ ಬರುವಂತೆ ಮಾಡುವ ಹೊಸ್ತಿಲಲ್ಲಿದ್ದಳು. ಆದರೆ, ಇಲ್ಲಿ ಕನ್ನಿಕಾಗೆ ಹಿನ್ನಡೆ ಆಗಿದೆ.

ಫುಡ್ ಆಫೀಸರ್ಸ್ ಭಾಗ್ಯ ಮನೆಯಿಂದ ಜಪ್ತಿ ಮಾಡಿದ್ದ ಆಹಾರವನ್ನು ಇಲಾಖೆಯ ಸಿಬ್ಬಂದಿ ಮನಸೋ ಇಚ್ಛೆ ಸವಿದಿದ್ದರು. ಆದರೆ ಇನ್ಸ್‌ಪೆಕ್ಟರ್ ಮಾತ್ರ, ಕನ್ನಿಕಾ ಸೂಚನೆಯಂತೆ ಭಾಗ್ಯಳಿಗೆ ಫುಡ್ ಲೈಸನ್ಸ್ ತಪ್ಪಿಸಲು ಸಂಚು ರೂಪಿಸಿದ್ದ. ಹೀಗಾಗಿ ಅವನು ಹಾಳಾಗಿರುವ ಆಹಾರವನ್ನು ಲ್ಯಾಬ್‌ಗೆ ಕಳುಹಿಸಲು ಮುಂದಾಗಿದ್ದ. ಆದರೆ, ಭಾಗ್ಯಳಿಗೆ ಇಲ್ಲಿ ಕನ್ನಿಕಾ ಕುತಂತ್ರ ಕೆಲಸ ಮಾಡಿರುವುದು ಮತ್ತು ಇನ್ಸ್‌ಪೆಕ್ಟರ್ ದುಡ್ಡು ಪಡೆದುಕೊಂಡಿರುವುದು ಮೊದಲೇ ಗೊತ್ತಿತ್ತು. ಹೀಗಾಗಿ ಆಕೆ ಹೆದರದೇ, ನೇರವಾಗಿ ಆಹಾರ ಇಲಾಖೆಯ ನಿರ್ದೇಶಕರ ಬಳಿ ಹೋಗಿ, ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ.

ನಿರ್ದೇಶಕರು ಕೂಡ ಅವಳ ಕಷ್ಟ ಕೇಳಿ, ಭಾಗ್ಯಳಿಗೆ ನ್ಯಾಯ ಕೊಡಿಸಿದ್ದಾರೆ. ಜತೆಗೆ ಕುತಂತ್ರ ಮಾಡಲು ಬಂದ ಕನ್ನಿಕಾಗೆ ಸರಿಯಾಗಿಯೇ ಬುದ್ದಿ ಹೇಳಿ ಕಳುಹಿಸಿದ್ದಾರೆ. ಭಾಗ್ಯ ಎದುರೇ ಕನ್ನಿಕಾಗೆ ವಾರ್ನಿಂಗ್ ಕೊಟ್ಟ ಆಹಾರ ಇಲಾಖೆಯ ನಿರ್ದೇಶಕ, ನಾನು ಇಲ್ಲಿ ಸರಿಯಾಗಿ ಮಾಡ್ತಾ ಇದ್ದೇನೆ.. ನಿಮ್ಮ ಬಳಿ ನಾನು ಅಪ್ರೂವಲ್ ಕೊಡಲ್ಲ ಅಂತ ಮಾತು ಕೊಟ್ಟಿಲ್ಲ.. ನಿಮ್ಮ ಮನೆತನ, ನಿಮ್ಮ ತಂದೆ ಮೇಲೆ ನಮಗೆ ಅಪಾರ ಗೌರವವಿದೆ. ನೀವು ಈರೀತಿಯ ಕೆಲಸ ಮಾಡಿ ಅವರ ಮರಿಯಾದೆಯನ್ನು ಹಾಳು ಮಾಡಬೇಡಿ.. ನೀವು ಎಲ್ಲವನ್ನೂ ದುಡ್ಡುಕೊಟ್ಟು ಕೊಂಡುಕೊಳ್ಳಬಹುದು ಎಂಬ ಮೂಡನಂಬಿಕೆಯಲ್ಲಿದ್ದೀರ, ಮೊದಲು ಅದನ್ನು ತಲೆಯಿಂದ ತೆಗೆದು ರಿಯಾಲಿಟಿಗೆ ಬನ್ನಿ ಎಂದು ಹೇಳಿದ್ದಾರೆ.



ಇದರಿಂದ ಕನ್ನಿಕಾಗೆ ಭಾರೀ ಅವಮಾನ ಉಂಟಾಗಿದೆ. ಅತ್ತ ಭಾಗ್ಯಳಿಗೆ ಸಿಗಬೇಕಿದ್ದ ಫುಡ್ ಲೈಸನ್ಸ್, ನ್ಯಾಯವಾಗಿಯೇ ಸಿಕ್ಕಿದೆ, ಅಹಂಕಾರದ ಮಾತಾಡಿದ್ದ ಫುಡ್ ಇನ್ಸ್‌ಪೆಕ್ಟರ್‌ಗೆ ಸಸ್ಪೆಂಡ್ ಆದೇಶವನ್ನು ನಿರ್ದೇಶಕರು ನೀಡಿದ್ದಾರೆ. ಸದ್ಯ ಭಾಗ್ಯಾಳ ಮುಂದಿನ ಹಾದಿ ಸುಗಮವಾಗಿದೆ. ಆದರೆ, ಈ ಅವಮಾನದಿಂದ ಕನ್ನಿಕಾ, ಶ್ರೇಷ್ಠಾ ಹಾಗೂ ತಾಂಡವ್ ಇನ್ನೇನು ಹೊಸ ಪ್ಲ್ಯಾನ್ ಮಾಡುತ್ತಾರೆ ಎಂಬುದು ನೋಡಬೇಕಿದೆ.

Ravichandran: ಮದುವೆ ಯಾಕೆ ಆಗಬೇಕು? ಎಂಬ ಪ್ರಶ್ನೆಗೆ ರವಿಚಂದ್ರನ್ ಕೊಟ್ಟ ಉತ್ತರ ಏನು ನೋಡಿ