ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಮಿಸ್ಟರಿ ಗರ್ಲ್​ನ ಕಪಾಳಕ್ಕೆ ಬಾರಿಸಿದ ಕುಸುಮಾ: ತಾಂಡವ್-ಶ್ರೇಷ್ಠಾ ನಾಟಕ ಬಯಲು

ಲೊಕೇಷನ್ ಗೆ ಬಂದು ಆ ಹುಡುಗಿ ಭಾಗ್ಯಾಗೆ ಫೋನ್‌ ಮಾಡಿದ್ದಾಳೆ. ಆ ಹುಡುಗಿ ಬರ್ತಿದ್ದಂತೆ, ಕುಸುಮಾ ಬಂದು ಆಕೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಪಾಳಕ್ಕೆ ಎರಡು ಪೆಟ್ಟು ಬಾರಿಸಿದ್ದಾರೆ. ಬಳಿಕ ಸತ್ಯ ಬಾಯಿಬಿಟ್ಟಿದ್ದಾಳೆ.

ಮಿಸ್ಟರಿ ಗರ್ಲ್​ನ ಕಪಾಳಕ್ಕೆ ಬಾರಿಸಿದ ಕುಸುಮಾ

Bhagya Lakshmi Serial

Profile Vinay Bhat May 21, 2025 1:33 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ತಂಗಿ ಪೂಜಾಳ ಮದುವೆಯನ್ನು ಆಳು ಮಾಡಲು ತಾಂಡವ್-ಶ್ರೇಷ್ಠಾ ನಾನಾ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮೊದಲ ಪ್ಲ್ಯಾನ್ ಠುಸ್ ಆಗಿದೆ. ಕಿಶನ್​ನ ಹೆಸರು ಹಾಳು ಮಾಡಬೇಕು, ಅವನನ್ನು ಕೆಟ್ಟವನೆಂದು ಬಿಂಬಿಸಬೇಕು ಎಂದು ಪ್ಲ್ಯಾನ್ ಮಾಡಿದ್ದ ತಾಂಡವ್-ಶ್ರೇಷ್ಠಾಗೆ ಹಿನ್ನಡೆಯಾಗಿದೆ. ಕಿಶನ್​ ಬಳಿಕ ಬೈಕ್​ನಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಆತನ ಜೊತೆ ಅನುಚಿತವಾಗಿ ವರ್ತಿಸಿದ ಹುಡುಗಿ ಈಗ ಭಾಗ್ಯ-ಕುಸುಮಾ ಕೈಗೆ ಸಿಕ್ಕಿದ್ದು, ಇವರಿಬ್ಬರು ಆಕೆಯನ್ನು ಸರಿಯಾಗಿ ಬೆಂಡೆತ್ತಿದ್ದಾರೆ. ಆಕೆ ಎಲ್ಲ ಸತ್ಯವನ್ನೂ ಬಾಯಿಬಿಟ್ಟಿದ್ದಾಳೆ.

ಪೂಜಾಳನ್ನು ಮದುವೆ ಆಗುವ ಹುಡುಗ ಕಿಶನ್​ನ ನಡತೆ ಸರಿಯಿಲ್ಲ ಎಂದು ತೋರಿಸಲು ತಾಂಡವ್-ಶ್ರೇಷ್ಠಾ, ಹುಡುಗಿಯೊಬ್ಬಳನ್ನು ಛೂ ಬಿಟ್ಟಿರುತ್ತಾರೆ. ಆ ಹುಡುಗಿ ಕಿಶನ್‌ ಬಳಿ ಡ್ರಾಪ್‌ ಕೇಳುವ ನೆಪದಲ್ಲಿ ಆತನ ಬೈಕ್‌ ಏರುತ್ತಾಳೆ. ಬೈಕ್ ಏರಿದ ಬಳಿಕ ಆ ಹುಡುಗಿ ಕಿಶನ್‌ನನ್ನು ಅಪ್ಪಿಕೊಂಡಿದ್ದಾಳೆ. ಇದು ಕಿಶನ್​ಗೆ ಇರಿಸು-ಮುರಿಸು ಉಂಟು ಮಾಡುತ್ತದೆ. ಈ ಘಟನೆಯನ್ನು ಭಾಗ್ಯ-ಕುಸುಮಾ ಕೂಡ ನೋಡುತ್ತಾರೆ. ಆದರೆ, ಇದೆಲ್ಲ ಯಾರದ್ದೊ ಪ್ಲ್ಯಾನ್ ಎಂಬುದು ಭಾಗ್ಯ-ಕಿಶನ್​ಗೆ ಅರಿವಾಗಿದೆ.

ಹೀಗಾಗಿ ಕಿಶನ್-ಭಾಗ್ಯ ಜೊತೆಯಾಗಿ ಆ ಹುಡುಗಿಯ ಬಗ್ಗೆ ಪತ್ತೆದಾರಿ ಕೆಲಸ ಮಾಡಿದ್ದಾರೆ. ಕಿಶನ್‌ ಬೈಕ್​ನಲ್ಲಿ ಆಕೆ ಕೂತಾಗ ಆತನ ಜಾಕೆಟ್‌ನಲ್ಲಿ ತನ್ನ ವಿಸಿಟಿಂಗ್‌ ಕಾರ್ಡ್‌ ಇಟ್ಟಿರುತ್ತಾಳೆ. ಆ ನಂಬರ್‌ ಅನ್ನು ಕಿಶನ್ ಭಾಗ್ಯಾಗೆ ನೀಡಿದ್ದಾನೆ. ಭಾಗ್ಯ ಸುಳ್ಳು ಹೇಳಿ ಆ ಹುಡುಗಿಯನ್ನು ಒಂದು ಲೊಕೇಷನ್‌ಗೆ ಬರುವುದಕ್ಕೂ ಹೇಳಿದ್ದಾಳೆ. ಇಂಥ ಕೆಲಸಕ್ಕೆ ಇನ್ನೊಬ್ಬರು ಮುಖ್ಯವಾದ ವ್ಯಕ್ತಿ ಬರಬೇಕು. ಅವರು ಬಂದರೇ ಮಾತ್ರ ಇದಕ್ಕೆ ಕಳೆ ಕಟ್ಟೋದು ಎಂದು ಪೂಜಾಳ ತಾಯಿ ಸುನಂದಾಳನ್ನು ಕೂಡ ಆ ಲೊಕೇಷನ್​ಗೆ ಕರೆದುಕೊಂಡು ಬಂದಿದ್ದಾರೆ.

ಲೊಕೇಷನ್​ಗೆ ಬಂದು ಆ ಹುಡುಗಿ ಭಾಗ್ಯಾಗೆ ಫೋನ್‌ ಮಾಡಿದ್ದಾಳೆ. ಆ ಹುಡುಗಿ ಬರ್ತಿದ್ದಂತೆ, ಕುಸುಮಾ ಬಂದು ಆಕೆಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಪಾಳಕ್ಕೆ ಎರಡು ಪೆಟ್ಟು ಬಾರಿಸಿದ್ದಾರೆ. ಬಳಿಕ ಸತ್ಯ ಬಾಯಿಬಿಟ್ಟಿದ್ದಾಳೆ. ಇದರಲ್ಲಿ ನನ್ನದೇನು ತಪ್ಪಿಲ್ಲ. ಹೀಗೆ ಮಾಡು ಅಂತ ನನ್ನ ಫ್ರೆಂಡ್‌ ಶ್ರೇಷ್ಠಾ ಹೇಳಿದ್ದಳು. ಅವಳು ಹೇಳಿದಂತೆ ನಾನು ಮಾಡಿದ್ದೇನೆ. ಇದನ್ನು ಅವಳಿಗಾಗಿ ಮಾಡಿದ್ದೇನೆ ಎಂದಿದ್ದಾಳೆ. ಇದರಲ್ಲಿ ತಾಂಡವ್​ನದ್ದೂ ಪಾತ್ರವಿದೆ ಎಂಬುದು ಗೊತ್ತಾಗಿದೆ.



ಅಷ್ಟೊತ್ತಿಗೆ ಅಳಿಯನೇ ದೇವರು ಅಂದುಕೊಂಡಿದ್ದ ಸುನಂದಾಳ ಆಗಮನವೂ ಆಗಿದೆ. ಆಕೆಯೂ ಆ ಹುಡುಗಿಗೆ ಸರಿಯಾಗಿಯೇ ಕ್ಲಾಸ್‌ ತೆಗೆದುಕೊಂಡಿದ್ದಾಳೆ. ಇದೆಲ್ಲ ಆ ಮನೆಹಾಳನ ಕೆಲಸನಾ? ಮಗುನೂ ಚೂಟಿ, ತೊಟ್ಟಿಲನ್ನೂ ತೂಗೋ ಕೆಲಸ ಮಾಡಿದ್ದಾನೆ ಆ ತಾಂಡವ್‌ ಎಂದಿದ್ದಾಳೆ. ಈ ಕಿಶನ್‌ನನ್ನು ಕೆಟ್ಟವನು ಎಂದು ಬಿಂಬಿಸಲು ಆ ತಾಂಡವ್‌ ಈ ರೀತಿ ಮಾಡಿದ್ದಾನೆ ಎಂದು ಸುನಂದಾ ಎಲ್ಲರ ಮುಂದೆ ಹೇಳಿಕೊಂಡಿದ್ದಾಳೆ.

ಸದ್ಯ ತಾಂಡವ್-ಶ್ರೇಷ್ಠಾರ ಎಲ್ಲ ಕಳ್ಳಾಟ ಬಟಾಬಯಲಾಗಿದೆ. ಭಾಗ್ಯ-ಕುಸುಮಾ-ಸುನಂದ ತ್ರಿಶಕ್ತಿ ಜೊತೆಯಾಗಿ ಇವರನ್ನ ಏನು ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

Drone Prathap: ಗಗನಾಗೋಸ್ಕರ ಉರುಳು ಸೇವೆ ಮಾಡಿ ಹರಕೆ ಹೊತ್ತ ಡ್ರೋನ್ ಪ್ರತಾಪ್: ಭಾವುಕ ಎಪಿಸೋಡ್