ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trivikram: ವೋಟ್ ಹಾಕಿದವರೆಲ್ಲ ನನ್ನ ಸಿನಿಮಾ ಬಂದು ನೋಡಲ್ಲ: ತ್ರಿವಿಕ್ರಮ್ ಶಾಕಿಂಗ್ ಹೇಳಿಕೆ

ಬಿಗ್ ಬಾಸ್ ಫಿನಾಲೆಯಲ್ಲಿ ತ್ರಿವಿಕ್ರಮ್ ಅವರಿಗೆ ದಾಖಲೆಯ ವೋಟ್ ಬಂದಿತ್ತು. ಹಿಂದಿನ ಸೀಸನ್ಗಳಲ್ಲಿ ವಿನ್ನರ್ಗೆ ಬಂದಿದ್ದ ವೋಟ್ ಈ ಬಾರಿ ರನ್ನರ್-ಅಪ್ ತ್ರಿವಿಕ್ರಮ್ಗೆ ಬಂದಿತ್ತು. ಇದೀಗ ತ್ರಿವಿಕ್ರಮ್ ಖಾಸಗಿ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ತಮಗೆ ಸಿಕ್ಕ ವೋಟಿಂಗ್ ಕುರಿತು ಮಾತನಾಡಿದ್ದಾರೆ.

ವೋಟ್ ಹಾಕಿದವರೆಲ್ಲ ನನ್ನ ಸಿನಿಮಾ ಬಂದು ನೋಡಲ್ಲ: ತ್ರಿವಿಕ್ರಮ್

Trivikram

Profile Vinay Bhat Apr 22, 2025 7:30 AM

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ (Bigg Boss Kannada 11) ಮಿಂಚಿ ಮೊದಲ ರನ್ನರ್-ಅಪ್ ಪ್ರಶಸ್ತಿ ಬಾಚಿಕೊಂಡ ಮಾಸ್ಟರ್ ತ್ರಿವಿಕ್ರಮ್ ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮಂಡ್ಯದಲ್ಲಿ ಬೀಡುಬಿಟ್ಟಿರುವ ತ್ರಿವಿಕ್ರಮ್ ಸೀರಿಯಲ್​ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಎಂದೇ ಜನಪ್ರಿಯತೆ ಪಡೆದಿರುವ ತ್ರಿವಿಕ್ರಮ್​ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

ತ್ರಿವಿಕ್ರಮ್ ಇಂದು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ. ಬಿಗ್ ಬಾಸ್ ಫಿನಾಲೆಯಲ್ಲಿ ಇವರಿಗೆ ದಾಖಲೆಯ ವೋಟ್ ಬಂದಿತ್ತು. ಹಿಂದಿನ ಸೀಸನ್​ಗಳಲ್ಲಿ ವಿನ್ನರ್​ಗೆ ಬಂದಿದ್ದ ವೋಟ್ ಈ ಬಾರಿ ರನ್ನರ್-ಅಪ್ ತ್ರಿವಿಕ್ರಮ್​ಗೆ ಬಂದಿತ್ತು.

ಇದೀಗ ತ್ರಿವಿಕ್ರಮ್ ಖಾಸಗಿ ಯೂಟ್ಯೂಬ್ ಚಾನೆಲ್​ ಒಂದರ ಸಂದರ್ಶನದಲ್ಲಿ ತಮಗೆ ಸಿಕ್ಕ ವೋಟಿಂಗ್ ಕುರಿತು ಮಾತನಾಡಿದ್ದಾರೆ. ‘‘ಎರಡು ಕೋಟಿಗೂ ಅಧಿಕ ವೋಟ್ಸ್‌ ಬಂದಿತ್ತು. ವೋಟ್‌ ಮಾಡಿದ್ದ ಅಷ್ಟು ಜನ ಒಂದು ದಿನ ಬಂದು ನನ್ನ ಸಿನಿಮಾ ನೋಡಿದರೆ, ನಾನು ದೊಡ್ಡ ಸ್ಟಾರ್‌ ಆಗುತ್ತೀನಿ. ಒಬ್ಬನಿಗೆ 99 ವೋಟ್ಸ್‌ ಮಾಡುವ ರೈಟ್ಸ್‌ ಇತ್ತು. ರಿಯಾಲಿಟಿಯಲ್ಲಿ ಒಬ್ಬ 99 ಸಲ ಬಂದು ನನ್ನ ಸಿನಿಮಾ ನೋಡಲ್ಲ. ಹಾಗೆ ನೋಡೋದಿದ್ರೆ ಉತ್ತರ ಕರ್ನಾಟಕದಲ್ಲಿ ಹನುಮಂತು ಸೂಪರ್‌ ಸ್ಟಾರ್‌ ಆಗಬೇಕಿತ್ತು’’ ಎಂದು ಹೇಳಿದ್ದಾರೆ.

Gauthami Jadav: ಪತಿ ಅಭಿಷೇಕ್ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಸೆಲೆಬ್ರೆಟ್ ಮಾಡಿದ ಗೌತಮಿ ಜಾಧವ್

‘‘ಒಂದು ಕಾರ್ಯಕ್ರಮದಿಂದ ಜನ ನಮ್ಮನ್ನು ಇಷ್ಟ ಪಡುತ್ತಾರೆ. ಹಾಗಾಗಿ ಆ ಶೋ ಸೂಪರ್‌ ಸ್ಟಾರ್‌ ಹೊರತು ನಾನಲ್ಲ ಅಥವಾ ಹನುಂಮಂತ ಅಲ್ಲಾ. ಬಿಗ್‌ ಬಾಸ್‌ ಅನ್ನೋದು ಅಷ್ಟು ರೀಚ್‌ ಇದೆ, ನಾವುಗಳಲ್ಲ. ದೊಡ್ಡ ಮನೆ ದೊಡ್ಡದಾಗಿ ಓಡಾಡಿಕೊಂಡು ಬಂದಿದ್ದೀವಿ ಅಷ್ಟೇ. ಶುರುವಿನಲ್ಲಿ ನನಗೆ ಒಂದು ಸೀರಿಯಲ್‌ ಸಿಕ್ಕರೆ ಸಾಕು ಅಂತಿದ್ದೆ. ಇವತ್ತು ನನ್ನ ಸೀರಿಯಲ್‌ ದೊಡ್ಡದಾದರೆ ಸಾಕು ಅಂತ ಅನಿಸುತ್ತಿದೆ. ಇವತ್ತು ಎಲ್ಲಾ ಸಿನಿಮಾಗಳಲ್ಲಿಯೂ ಹೀರೋಗಳು ಮ್ಯಾಟರ್‌ ಅಗುತ್ತಿಲ್ಲ ಅಥವಾ ಕೋ ಆರ್ಟಿಸ್ಟ್‌ಗಳು ಮ್ಯಾಟರ್‌ ಆಗುತ್ತಿಲ್ಲ. ಇವತ್ತಿಗೆ ಕಂಟೆಂಟ್‌ ಅಷ್ಟೇ ಮ್ಯಾಟರ್‌ ಆಗುತ್ತಿದೆ’’ ಎಂದು ತ್ರಿವಿಕ್ರಮ್ ಹೇಳಿದ್ದಾರೆ.