ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura: ‘ಸುಪಾರಿ ನೀಡಿದ್ದಾಳೆ’ ಎಂಬ ತಂದೆಯ ಆರೋಪಕ್ಕೆ ಚೈತ್ರಾ ಕುಂದಾಪುರ ತಿರುಗೇಟು

ತಂದೆಯ ಈ ಹೇಳಿಕೆಗೆ ಚೈತ್ರಾ ಕುಂದಾಪುರ ಇದೀಗ ವಾಟ್ಸ್ಆ್ಯಪ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಹಾಕಿ ತಿರುಗೇಟು ಕೊಟ್ಟಿದ್ದಾರೆ. ಸುಪಾರಿ ಆರೋಪಕ್ಕೆ ಅಡಿಕೆ ಹಿಡಿದು ಚೈತ್ರಾ ಕುಂದಾಪುರ ಅವರು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

‘ಸುಪಾರಿ ನೀಡಿದ್ದಾಳೆ’ ಎಂಬ ತಂದೆಯ ಆರೋಪಕ್ಕೆ ಚೈತ್ರಾ ತಿರುಗೇಟು

Chaithra kundapura Father

Profile Vinay Bhat May 24, 2025 7:05 AM

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) ಮನೆ ಜಗಳ ಈಗ ಬೀದಿಗೆ ಬಂದಿದೆ. ಕಳೆದ ಎರಡು ವಾರಗಳಿಂದ ಚೈತ್ರಾ ಹಾಗೂ ಅವರ ತಂದೆ ಬಾಲಕೃಷ್ಣ ನಡುವೆ ಆರೋಪಗಳ ಗುದ್ದಾಟ ನಡೆಯುತ್ತಿದೆ. ವಾರಗಳ ಹಿಂದೆ ಚೈತ್ರಾ ಅವರ ತಂದೆ, ಮಾಧ್ಯಮದ ಮುಂದೆ ಮಗಳ ಮದುವೆಯನ್ನು ನಾನು ಒಪ್ಪುವುದಿಲ್ಲ. ಚೈತ್ರಾ ಹಾಗೂ ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಮಗಳ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ. ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ ಎಂದು ಹೇಳಿದ್ದರು.

ಇದಾದ ಬಳಿಕ ನಿನ್ನೆ ಚೈತ್ರಾ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮತ್ತೊಂದು ದೊಡ್ಡ ಆರೋಪ ಮಾಡಿದರು. ಆಸ್ತಿಗಾಗಿ ಚೈತ್ರಾ ಕುಂದಾಪುರ ಬೆದರಿಕೆ ಹಾಕಿದ್ದಾಳೆ. ಆಕೆಗೆ ಭೂಗತ ದೊರೆಗಳ ಸಂಪರ್ಕವಿದ್ದು, ಯಾವುದೇ ಹೇಯ ಕೃತ್ಯ ಮಾಡಲು ಹೇಸುವವಳಲ್ಲ. ನನ್ನ ಜೀವ ತೆಗೆಯಲು ಸುಪಾರಿ ನೀಡಿದ್ದಾರೆ ಎಂದು ಮಗಳ ವಿರುದ್ಧ ತಂದೆ ಬಾಲಕೃಷ್ಣ ನಾಯಕ್‌ ದೂರು ಕೊಟ್ಟಿದ್ದರು.

ತಂದೆಯ ಈ ಹೇಳಿಕೆಗೆ ಚೈತ್ರಾ ಕುಂದಾಪುರ ಇದೀಗ ವಾಟ್ಸ್​ಆ್ಯಪ್ ಹಾಗೂ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಾಕಿ ತಿರುಗೇಟು ಕೊಟ್ಟಿದ್ದಾರೆ. ಸುಪಾರಿ ಆರೋಪಕ್ಕೆ ಅಡಿಕೆ ಹಿಡಿದು ಚೈತ್ರಾ ಕುಂದಾಪುರ ಅವರು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಪೋಸ್ಟ್ ಕೂಡ ಮಾಡಿರುವ ಅವರು, ‘ಹೀಗೆ ತೋಟದಲ್ಲಿ ಓಡಾಡುವಾಗ ಒಂದು ಅಡಿಕೆ ಸಿಕ್ಕಿತು. ಇದಕ್ಕೆ ಹಿಂದಿಯಲ್ಲಿ ಸುಪಾರಿ ಅಂತಾರೆ. ತುಳುವಿನಲ್ಲಿ ಏನಂತಾರೆ??’ ಎಂದು ಪ್ರಶ್ನಿಸಿದ್ದಾರೆ.

ಕಳೆದ ವಾರ ಕೂಡ ತಂದೆಯ ಆರೋಪಕ್ಕೆ ಚೈತ್ರಾ ಇದೇರೀತಿ ಸ್ಟೇಟಸ್ ಹಾಕಿಕೊಂಡು ತಿರುಗೇಟು ಕೊಟ್ಟಿದ್ದರು. ಚೈತ್ರಾ ಹಾಗೂ ಶ್ರೀಕಾಂತ್ ಕಳ್ಳರು ಎಂದಿದ್ದಕ್ಕೆ, ‘ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು... ಎಂತಹ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು.. ಎರಡು ಕ್ವಾಟರ್ ನಾನು ಕೊಟ್ರೆ ನನ್ನ ಮಕ್ಕಳು ದೇವರು ಅನ್ನುವವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ’ ಎಂದು ಚೈತ್ರಾ ಬರೆದುಕೊಂಡಿದ್ದರು.

Bhagya Lakshmi Serial: ಕನ್ನಿಕಾಳ ಕೈ ತಿರುವಿದ ಪೂಜಾ: ಘಟನೆ ಕಂಡು ಶಾಕ್ ಆದ ಕಿಶನ್