ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕನ್ನಿಕಾಳ ಕೈ ತಿರುವಿದ ಪೂಜಾ: ಘಟನೆ ಕಂಡು ಶಾಕ್ ಆದ ಕಿಶನ್

ಕಿಶನ್ ಆರ್ಡರ್ ನೀಡಿದ ನಂತರ ದೇವಸ್ಥಾನಕ್ಕೆ ಪೂಜಾ ಜೊತೆ ಬರುವ ಭಾಗ್ಯ ಮತ್ತು ಕುಸುಮಾ ಅಡುಗೆ ಮಾಡಲು ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ಅಲ್ಲಿ ಕನ್ನಿಕಾ ಬಂದಿದ್ದಾಳೆ. ಕನ್ನಿಕಾಳನ್ನು ಕಂಡು ಭಾಗ್ಯಾಗೆ ಕೋಪ ಬರುತ್ತದೆ. ಆದರೆ, ಕನ್ನಿಕಾಳೇ ಕಿಶನ್ ಸಹೋದರಿ ಎನ್ನುವ ವಿಚಾರ ಭಾಗ್ಯಗೆ ಗೊತ್ತಾಗಿಲ್ಲ.

ಕನ್ನಿಕಾಳ ಕೈ ತಿರುವಿದ ಪೂಜಾ: ಘಟನೆ ಕಂಡು ಶಾಕ್ ಆದ ಕಿಶನ್

Bhagya Lakshmi Serial

Profile Vinay Bhat May 23, 2025 12:21 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾಳ ತಂಗಿ ಪೂಜಾಳ ಮದುವೆಗೆ ದೊಡ್ಡ ಅಡ್ಡಿ ಉಂಟಾಗಿದೆ. ಈ ಸಂಬಂಧ ತಪ್ಪಿಸಲು ತಾಂಡವ್-ಶ್ರೇಷ್ಠಾ ನಾನಾ ಕಸರತ್ತು ನಡೆಸಿದ್ದರು. ಆದರೆ, ಇದೆಲ್ಲ ಫೇಲ್ ಆಯಿತು. ಇದೀಗ ಕನ್ನಿಕಾಳಿಂದ ಈ ಮದುವೆಗೆ ಮತ್ತೆ ಕಂಟಕ ಉಂಟಾಗಿದೆ. ಅಸಲಿಗೆ ಪೂಜಾ ಮದುವೆ ಆಗಲಿರುವ ಹುಡುಗ ಕಿಶನ್ ಮತ್ಯಾರೂ ಅಲ್ಲ ಈ ಕನ್ನಿಕಾಳ ಸ್ವಂತ ಅಣ್ಣ. ಆದರೆ, ಈ ವಿಚಾರ ಭಾಗ್ಯ ಫ್ಯಾಮಿಲಿಗೆ ಯಾರಿಗೂ ತಿಳಿದಿಲ್ಲ. ಇಂದು ಅಥವಾ ನಾಳಿನ ಎಪಿಸೋಡ್​ನಲ್ಲಿ ಈ ಅಂಶ ರಿವೀಲ್ ಆಗಲಿದೆ.

ಈ ಹಿಂದೆ ಪೂಜಾಳನ್ನು ಮದುವೆ ಆಗುವ ಹುಡುಗ ಕಿಶನ್​ನ ನಡತೆ ಸರಿಯಿಲ್ಲ ಎಂದು ತೋರಿಸಲು ತಾಂಡವ್-ಶ್ರೇಷ್ಠಾ, ಹುಡುಗಿಯೊಬ್ಬಳನ್ನು ಛೂ ಬಿಟ್ಟಿದ್ದರು. ಬಳಿಮ ಆ ಹುಡುಗಿಯನ್ನು ಭಾಗ್ಯ- ತಾಂಡವ್ ಹುಡುಕಿ ಅವಳ ಕೈಯಿಂದ ಸತ್ಯ ಬಾಯಿಬಿಡಿಸಿದ್ದರು. ಇದರಲ್ಲಿ ನನ್ನದೇನು ತಪ್ಪಿಲ್ಲ. ಹೀಗೆ ಮಾಡು ಅಂತ ನನ್ನ ಫ್ರೆಂಡ್‌ ಶ್ರೇಷ್ಠಾ ಹೇಳಿದ್ದಳು. ಅವಳು ಹೇಳಿದಂತೆ ನಾನು ಮಾಡಿದ್ದೇನೆ. ಇದನ್ನು ಅವಳಿಗಾಗಿ ಮಾಡಿದ್ದೇನೆ ಎಂದಿದ್ದಳು. ಈ ಮೂಲಕ ಇದೆಲ್ಲ ತಾಂಡವ್ಶ್ರೇಷ್ಠಾ ಪ್ಲ್ಯಾನ್ ಎಂಬುದು ಗೊತ್ತಾಗಿತ್ತು.

ಇದಾದ ಬಳಿಕ ಕಿಶನ್ ಭಾಗ್ಯಾಳ ಮನೆಗೆ ಊಟಕ್ಕೆ ಬಂದಿದ್ದಾನೆ. ಹೋಗುವಾಗ ಕಿಶನ್ ನಮ್ಮದೊಂದು ಫಂಕ್ಷನ್ ಇದೆ ನೀವೆ ಕೇಟರಿಂಗ್ ಮಾಡಬೇಕು ಎಂದು ಆರ್ಡರ್ ಕೊಟ್ಟಿದ್ದಾನೆ. ಭಾಗ್ಯ ಕುಟುಂಬ ಮತ್ತು ನನ್ನ ಕುಟುಂಬ ಮೊದಲ ಭೇಟಿಯಲ್ಲಿಯೇ ಒಂದಾಗಲಿ ಎಂದು ಕಿಶನ್ ಪ್ರಾರ್ಥನೆ ಮಾಡಿದ್ದಾನೆ. ಆದರೆ ಕಿಶನ್ ಲೆಕ್ಕಾಚಾರ ತಲೆ ಕೆಳಗಾಗಿದೆ. ಅಲ್ಲಿ ಹೋದ ಭಾಗ್ಯಗೆ ಪದೇ ಪದೇ ಹಿಂಸೆ ಕೊಟ್ಟ, ಮತ್ತೆ ಮತ್ತೆ ಹೀಯಾಳಿಸುತ್ತಿದ್ದ ಕನ್ನಿಕಾ ಎದುರಾಗಿದ್ದಾಳೆ.



ಕಿಶನ್ ಆರ್ಡರ್ ನೀಡಿದ ನಂತರ ದೇವಸ್ಥಾನಕ್ಕೆ ಪೂಜಾ ಜೊತೆ ಬರುವ ಭಾಗ್ಯ ಮತ್ತು ಕುಸುಮಾ ಅಡುಗೆ ಮಾಡಲು ಶುರು ಮಾಡಿದ್ದಾರೆ. ಇದೇ ಸಮಯದಲ್ಲಿ ಅಲ್ಲಿ ಕನ್ನಿಕಾ ಬಂದಿದ್ದಾಳೆ. ಕನ್ನಿಕಾಳನ್ನು ಕಂಡು ಭಾಗ್ಯಾಗೆ ಕೋಪ ಬರುತ್ತದೆ. ಆದರೆ, ಕನ್ನಿಕಾಳೇ ಕಿಶನ್ ಸಹೋದರಿ ಎನ್ನುವ ವಿಚಾರ ಭಾಗ್ಯಗೆ ಗೊತ್ತಾಗಿಲ್ಲ. ಗೊತ್ತಾದರೆ ಭಾಗ್ಯ ಮುಂದೇನು ಮಾಡುತ್ತಾಳೆ ಎನ್ನುವುದನ್ನು ನೋಡಬೇಕಿದೆ. ಭಾಗ್ಯ-ಕನ್ನಿಕಾ ಎದುರೆದುರು ಆದಾಗ ಎಂದಿನಂತೆ ಮಾತಿನ ಚಕಮಕಿ ನಡೆದಿದೆ.

ಭಾಗ್ಯ ಮತ್ತು ಕುಟುಂಬವನ್ನು ಕನ್ನಿಕಾ ಅವಮಾನಿಸಿದ್ದಾಳೆ. ಅಲ್ಲಿ ಪೂಜಾ ಕೂಡ ಇದ್ದಾಳೆ. ಇವರ ನಡುವೆ ಮಾತಿನ ಜಟಾಪಟಿ ನಡೆದಾಗ ಕನ್ನಿಕಾಳಿಗೆ ಪೂಜಾ ತಿರುಗೇಟು ನೀಡಿದ್ದು ಯಾಕೆ ಕನ್ನಿಕಾ ಹೊಟ್ಟೆ ಉರಿಯುತ್ತಿದೆಯಾ, ಹೊಟ್ಟೆ ತಣ್ಣಗಾಗಲು ಲೈಮ್ ಸೋಡಾ ಮಾಡಿ ಕೊಡಲಾ ಎಲ್ಲ ಸರಿ ಹೋಗುತ್ತೆ ಎನ್ನುತ್ತಾಳೆ. ಇದರಿಂದ ಕೆರಳುವ ಕನ್ನಿಕಾ ಏಯ್ ಎಂದು ಕೈ ತೋರಿಸುತ್ತಾಳೆ. ಆಗ ಕನ್ನಿಕಾ ಕೈಯನ್ನು ಪೂಜಾ ತಿರುವುತ್ತಾಳೆ. ಇದೇ ಸಂದರ್ಭ ಅಲ್ಲಿಗೆ ಕಿಶನ್ ಬರುತ್ತಾನೆ.



ಸದ್ಯ ಧಾರಾವಾಹಿ ರೋಚಕತೆ ಸೃಷ್ಟಿಸಿದೆ. ಕಿಶನ್ ಕನ್ನಿಕಾಳ ಅಣ್ಣ ಎಂಬ ಸುದ್ದಿ ಗೊತ್ತಾದಾಗ ಇನ್ನೇನು ಡ್ರಾಮ ನಡೆಯುತ್ತೆ?, ಕನ್ನಿಕ ಅಂತೂ ಈ ಮದುವೆಗೆ ಒಪ್ಪಿಗೆ ಸೂಚಿಸಲು ಸಾಧ್ಯವೇ ಇಲ್ಲ.. ಹೀಗಿರುವಾಗ ಕಿಶನ್ ಏನು ಮಾಡುತ್ತಾನೆ?, ಭಾಗ್ಯಾಳ ಮುಂದಿನ ನಡೆ ಏನು ಎಂಬುದು ನೋಡಬೇಕಿದೆ.

Chaithra Kundapura: ಸ್ವಂತ ತಂದೆಯನ್ನೇ ಕೊಲೆ ಮಾಡಲು ಸುಪಾರಿ ಕೊಟ್ರಾ ಚೈತ್ರಾ ಕುಂದಾಪುರ: ಹೊಸ ಆರೋಪ