ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trivikram: ಬಿಗ್ ಬಾಸ್ ತ್ರಿವಿಕ್ರಮ್ ಮೇಲೆ ಗರಂ ಆದ ಫ್ಯಾನ್ಸ್: ಕ್ಷಮೆ ಕೇಳುವಂತೆ ಆಗ್ರಹ

ತ್ರಿವಿಕ್ರಮ್ ಇಂದು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ, ಈ ಅಭಿಮಾನಿಗಳಿಗೇ ತ್ರಿವಿಕ್ರಮ್ ಅವಮಾನ ಮಾಡಿದ್ದಾರ ಎಂಬ ಪ್ರಶ್ನೆ ಈಗ ಹುಟ್ಟುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ಸಂದರ್ಶನದಲ್ಲಿ ತ್ರಿವಿಕ್ರಮ್ ಆಡಿದ ಮಾತು.

ಬಿಗ್ ಬಾಸ್ ತ್ರಿವಿಕ್ರಮ್ ಮೇಲೆ ಗರಂ ಆದ ಫ್ಯಾನ್ಸ್: ಕ್ಷಮೆ ಕೇಳುವಂತೆ ಆಗ್ರಹ

Trivikram

Profile Vinay Bhat Apr 21, 2025 7:05 AM

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದ ಸ್ಪರ್ಧಿ ಎಂದರೆ ಅದು ತ್ರಿವಿಕ್ರಮ್ (Trivikram). ಬಿಗ್ ಬಾಸ್ ಮುಗಿದ ಬಳಿಕ ಭರ್ಜರಿ ಆಫರ್ ಕೂಡ ಇವರನ್ನು ಹುಡುಕಿಕೊಂಡು ಬಂದಿದ್ದು ಸದ್ಯ ಕಲರ್ಸ್ ಕನ್ನಡದಲ್ಲಿ ಹೊಸದಾಗಿ ಶುರುವಾಗಿರುವ ಮುದ್ದು ಸೊಸೆ ಧಾರಾವಾಹಿಯನ್ನು ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸಾಮ್ರಾಟ್ ಎಂದೇ ಜನಪ್ರಿಯತೆ ಪಡೆದಿರುವ ಬಿಬಿಕೆ 11ರ ಫಸ್ಟ್‌ ರನ್ನರ್‌ ರಪ್ ತ್ರಿವಿಕ್ರಮ್​ಗೆ ಈಗ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.

ತ್ರಿವಿಕ್ರಮ್ ಇಂದು ಎಲ್ಲೇ ಕಂಡರು ಅಭಿಮಾನಿಗಳು ಸೆಲ್ಫಿಗೋಸ್ಕರ ಮುಗಿಬೀಳುತ್ತಿದ್ದಾರೆ. ಇವರು ಜೀವನದಲ್ಲಿ ನಡೆದುಕೊಂಡು ಬಂದ ದಾರಿ, ಇವರ ಕ್ರಿಕೆಟ್ ಪ್ರೇಮ, ಇನ್ನೂ ಏನಾದರು ಮಾಡಬೇಕು ಎಂಬ ಛಲ ಕಂಡು ಅನೇಕ ಫ್ಯಾನ್ಸ್ ಇವರನ್ನು ಫಾಲೋ ಮಾಡುತ್ತಿದ್ದಾರೆ. ಆದರೆ, ಈ ಅಭಿಮಾನಿಗಳಿಗೇ ತ್ರಿವಿಕ್ರಮ್ ಅವಮಾನ ಮಾಡಿದ್ದಾರ ಎಂಬ ಪ್ರಶ್ನೆ ಈಗ ಹುಟ್ಟುಕೊಂಡಿದೆ. ಇದಕ್ಕೆ ಕಾರಣವಾಗಿದ್ದು, ಖಾಸಗಿ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ತ್ರಿವಿಕ್ರಮ್ ಆಡಿದ ಮಾತು.

ಬಿಗ್ ಬಾಸ್ ಕನ್ನಡ ಸೀಸನ್ 11 ರ ಫಸ್ಟ್‌ ರನ್ನರ್‌ ರಪ್ ತ್ರಿವಿಕ್ರಮ್ ಅವರಿಗೆ ಬರೋಬ್ಬರಿ 2 ಕೋಟಿ ವೋಟ್​ಗಳು ಬಿದ್ದಿದ್ದವು. ಈಗ ಅವರು ವೋಟ್ ಹಾಕಿದ ಅಭಿಮಾನಿಗಳಿಗೆ ಅವಮಾನ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಸಂದರ್ಶನವೊಂದರ ಕೆಲವು ಕ್ಲಿಪ್​ಗಳು ಟ್ರೋಲ್​ ಪೇಜ್​ಗಳಲ್ಲಿ ವೈರಲ್ ಆಗಿದ್ದು, ವೋಟ್ ಹಾಕಿದವರಿಗೆ ಅವಮಾನ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ‘ಹೊರ ಬಂದ ಮೇಲೆ ಸಿಕ್ಕಿದರೆಲ್ಲ ವೋಟ್ ಹಾಕಿಸಿದ್ದೇನೆ ಅನ್ನೋಕೆ ಆರಂಭಿಸಿದರು. ವೋಟ್ ಹಾಕಿಸಿದೀಯಾ ಓಕೆ. ಆದರೆ, ಕೊನೆವರೆಗೂ ನನ್ನ ಏಕೆ ಕರೆತಂದೆ? ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ ಮಾತ್ರ ನೀವು ಸ್ಟೇಟಸ್​ ಹಾಕೋದು. ಇಷ್ಟು ದಿನ ಕಾಣಿಸದ ಕೆಎಲ್ ರಾಹುಲ್ ಈಗ ಕಾಣಿಸಿಕೊಳ್ಳುತ್ತಿದ್ದಾನೆ ಎಂದರೆ 93 ಅನ್ನೋದು ಮ್ಯಾಟರ್ ಆಗುತ್ತದೆ’ ಎಂದು ತ್ರಿವಿಕ್ರಮ್ ಹೇಳಿದ್ದಾರೆ.

‘ನಿನಗೆ ಹೆಸರು ಬರುತ್ತದೆ ಎಂದರೆ ಸಪೋರ್ಟ್ ಮಾಡ್ತೀರಿ. ಅದಕ್ಕೆ ಕೆಲಸ ಮಾಡಿದವನು ನಾನು. 120 ದಿನ ಮೊಬೈಲ್ ಇಲ್ಲ, ಪಾಲಕರು ಇಲ್ಲ, ಫ್ರೆಂಡ್ಸ್ ಇಲ್ಲ. ದಿನವೂ ವೈರಿಗಳ ಜೊತೆಯೇ ಇರಬೇಕು. ನೀವು ಆದ್ರೆ ದಿನ ಎರಡು ಫೋನ್, ಟೆನ್ಶನ್ ಆದ್ರೆ ದಮ್, ಇನ್ನೂ ಟೆನ್ಶನ್ ಆದ್ರೆ ಎಣ್ಣೆ, ಇನ್ನೂ ಟೆನ್ಶನ್ ಆದ್ರೆ ಫ್ರೆಂಡ್ಸ್. ಅದಕ್ಕೂ ಮೇಲೆ ಟೆನ್ಶನ್ ಆದ್ರೆ ಟ್ರಿಪ್. ಇದೆಲ್ಲ ಇದ್ದಿದ್ದು ಯಾರಿಗೆ? ಆಚೆ ಇದ್ದವನಿಗೆ’ ಎಂದು ತ್ರಿವಿಕ್ರಮ್ ಆಡಿರುವ ಮಾತು ಭಾರೀ ವೈರಲ್ ಆಗುತ್ತಿದೆ. ಅಭಿಮಾನಿಗಳ ಬಳಿ ಇವರು ಕ್ಷಮೆ ಕೇಳಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Shivraj Kumar: ಕ್ಯಾನ್ಸರ್​ನಿಂದ ಚೇತರಿಸಿಕೊಂಡು ಸರಿಗಮಪ ವೇದಿಕೆ ಮೇಲೆ ಧೂಳೆಬ್ಬಿಸಿದ ಶಿವಣ್ಣ: ವಿಡಿಯೋ