ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauthami Jadav: ಪತಿ ಅಭಿಷೇಕ್ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಸೆಲೆಬ್ರೆಟ್ ಮಾಡಿದ ಗೌತಮಿ ಜಾಧವ್

ಸದ್ದಿಲ್ಲದೆ ಇರುತ್ತಿದ್ದ ಗೌತಮಿ ಇದೀಗ ಪತಿ ಅಭಿಷೇಕ್ ಬರ್ತ್ ಡೇ ಯನ್ನು ಭರ್ಜರಿ ಆಗಿ ಆಚರಣೆ ಮಾಡಿ ಸುದ್ದಿಯಲ್ಲಿದ್ದಾರೆ. ನಿನ್ನೆ ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಗೌತಮಿ ಜಾಧವ್ ಪತಿಗಾಗಿ ಬರ್ತ್ ಡೇ ಪಾರ್ಟಿಯನ್ನು ಅರೇಂಜ್ ಮಾಡಿದ್ದರು.

ಪತಿ ಅಭಿಷೇಕ್ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಸೆಲೆಬ್ರೆಟ್ ಮಾಡಿದ ಗೌತಮಿ

Abhishek and Gauthami Jadav

Profile Vinay Bhat Apr 21, 2025 4:33 PM

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಕ್ತಾಯವಾದ ಬಳಿಕ ಸ್ಪರ್ಧಿಗಳು ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲ ಸ್ಪರ್ಧಿಗಳಿಗೆ ಸಿನಿಮಾ, ಸೀರಿಯಲ್​ಗಳಿಂದ ಆಕರ್ಷಕ ಆಫರ್ ಬರುತ್ತಿದ್ದರೆ ಇನ್ನೂ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿನ್ನರ್ ಹನುಮಂತ, ಧನರಾಜ್, ರಜತ್, ಚೈತ್ರ ಸೇರಿದಂತೆ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ರನ್ನರ್-ಅಪ್ ತ್ರಿವಿಕ್ರಮ್ ಮುದ್ದು ಸೊಸೆ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಉಗ್ರಂ ಮಂಜು ಕೂಡ ಹೊಸ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಭವ್ಯಾ ಕೂಡ ಕರ್ಣ ಧಾರಾವಾಹಿ ಮೂಲಕ ಮತ್ತೊಮ್ಮೆ ಮಿಂಚಲು ರೆಡಿಯಾಗಿದ್ದಾರೆ.

ಆದರೆ, ಗೌತಮಿ ಜಾಧವ್ ಅವರು ಬಿಗ್ ಬಾಸ್ ಶೋ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಹೆಚ್ಚು ಕರಾವಳಿಯಲ್ಲಿ ಬೀಡುಬಿಟ್ಟಿದ್ದರು. ಅನೇಕ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಟೆಂಪಲ್ ರನ್ ನಡೆಸಿದರು. ಇತ್ತೀಚೆಗೆ ಮಂಜು ಕುಟುಂಬದ ಜೊತೆ ಪುನಃ ವನದುರ್ಗ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದರು.

ಸದ್ದಿಲ್ಲದೆ ಇರುತ್ತಿದ್ದ ಗೌತಮಿ ಇದೀಗ ಪತಿ ಅಭಿಷೇಕ್ ಬರ್ತ್ ಡೇ ಯನ್ನು ಭರ್ಜರಿ ಆಗಿ ಆಚರಣೆ ಮಾಡಿ ಸುದ್ದಿಯಲ್ಲಿದ್ದಾರೆ. ನಿನ್ನೆ ಗೌತಮಿ ಜಾಧವ್ ಅವರ ಪತಿ ಅಭಿಷೇಕ್ ಅವರ ಹುಟ್ಟು ಹಬ್ಬವಿತ್ತು. ಹೀಗಾಗಿ ಗೌತಮಿ ಜಾಧವ್ ಪತಿಗಾಗಿ ಬರ್ತ್ ಡೇ ಪಾರ್ಟಿಯನ್ನು ಅರೇಂಜ್​ ಮಾಡಿದ್ದರು. ಗೌತಮಿ ಪತಿಯ ಬರ್ತ್​ ಡೇಯನ್ನು ನೇಚರ್ ರೆಸಾರ್ಟ್​ನಲ್ಲಿ ಮಾಡಿದ್ದಾರೆ.

ಗ್ರ್ಯಾಂಡ್ ಬರ್ತ್​ ಡೇ ವಿಡಿಯೋವನ್ನು ಹಂಚಿಕೊಂಡಿರೋ ನಟಿ ಹ್ಯಾಪಿ ಬರ್ತ್​ ಡೇ ಅಭಿ ಅಂತ ಬರೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಗೌತಮಿ ಕುಟುಂಬಸ್ಥರು ನೇಚರ್ ರೆಸಾರ್ಟ್​ನಲ್ಲಿ ಮಸ್ತ್​ ಮಜಾ ಮಾಡಿದ್ದಾರೆ.

ಸದ್ಯ ಗೌತಮಿ ಮುಂದಿನ ಪ್ಲ್ಯಾನ್ ಏನು?, ಸಿನಿಮಾ ಅಥವಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರ ಎಂಬ ಕುರಿತು ಯಾವುದೇ ಅಪ್ಡೇಟ್ ಇಲ್ಲ. ಮತ್ತೆ ಕಿರುತೆರೆ ಲೋಕಕ್ಕೆ ಕಾಲಿಡುತ್ತಾರಾ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಇತ್ತೀಚೆಗಷ್ಟೆ ಇವರು ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದು ಫುಲ್ ವೈರಲ್ ಆಗಿತ್ತು.

Bhagya Lakshmi Serial: ಕನ್ನಿಕಾಳ ಪ್ಲ್ಯಾನ್ ಮತ್ತೆ ಫೇಲ್: ಭಾಗ್ಯಾಗೆ ಸಿಕ್ಕೇ ಬಿಡ್ತು ಫುಡ್ ಲೈಸನ್ಸ್