Imran Khan: ಭಾರತ ಅಟ್ಯಾಕ್ ಮಾಡ್ತಿದೆ... ರಾವಲ್ಪಿಂಡಿ ಜೈಲಿನಲ್ಲಿ ಇಮ್ರಾನ್ ಖಾನ್ ಪ್ರಾಣಕ್ಕೆ ಅಪಾಯ ಇದೆ- ಗೋಳಾಡಿದ ಬೆಂಬಲಿಗರು
India-Pak Tensions ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ (Imran Khan) ಅವರ ಪ್ರಾಣಹಾನಿ ಬಗ್ಗೆ ಭಯವನ್ನು ವ್ಯಕ್ತಪಡಿಸಿ, ಅವರನ್ನು ಬಿಡುಗಡೆ ಮಾಡುವಂತೆ ಪಿಟಿಐ ಪಕ್ಷವು ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಯಲ್ಲಿ ಖಾನ್ ಅವರ ಆಪ್ತ ಸಹಾಯಕರು ಭಾರತ ಮತ್ತು ಪಾಕಿಸ್ತಾನದ ಕಡೆಯಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ನಡುವೆ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಜೀವಕ್ಕೆ ಅಪಾಯವಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.


ಇಸ್ಲಾಮಾಬಾದ್: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಅನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ (Operation Sindoor) ಹೆಚ್ಚಾಗಿರುವುದರಿಂದ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Former PM Imran Khan) ಅವರ ಜೀವಕ್ಕೆ ಅಪಾಯವಿದೆ. ಹೀಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಅವರ ಆಪ್ತ ಸಹಾಯಕರು ಒತ್ತಾಯಿಸಿದೆ. ಈ ಕುರಿತು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿರುವ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ( Pakistan Tehreek-e-Insaf) ಪಕ್ಷ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಪ್ರಾಣಹಾನಿ ಬಗ್ಗೆ ಭಯವನ್ನು ವ್ಯಕ್ತಪಡಿಸಿ, ಅವರನ್ನು ಬಿಡುಗಡೆ ಮಾಡುವಂತೆ ಪಕ್ಷವು ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಯಲ್ಲಿ ಖಾನ್ ಅವರ ಆಪ್ತ ಸಹಾಯಕರು ಭಾರತ ಮತ್ತು ಪಾಕಿಸ್ತಾನದ ಕಡೆಯಿಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ನಡುವೆ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಜೀವಕ್ಕೆ ಅಪಾಯವಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ದೀರ್ಘಕಾಲದಿಂದ ಬಂಧನದಲ್ಲಿರುವ ಅವರ ಆರೋಗ್ಯ ಮತ್ತು ಭಾರತದೊಂದಿಗಿನ ಪ್ರಸ್ತುತ ಪರಿಸ್ಥಿತಿಯಿಂದ ಉಂಟಾಗಿರುವ ಪರಿಣಾಮವನ್ನು ಅರ್ಜಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ.
ಪ್ರಸ್ತುತ ಯುದ್ಧದಂತಹ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳಗಳಿವೆ. ಭಾರತೀಯ ಡ್ರೋನ್‌ಗಳು ಮಿಲಿಟರಿಯಿಂದ ತಡೆಯಲ್ಪಡದೆ ಪಾಕಿಸ್ತಾನದ ಪ್ರದೇಶದೊಳಗೆ ದಾಳಿ ಮಾಡಿ ರಾವಲ್ಪಿಂಡಿಯಂತಹ ನಗರಗಳನ್ನು ಹೊಡೆದುರುಳಿಸುತ್ತಿವೆ ಎಂದು ಅವರ ಆಪ್ತ ಸಹಾಯಕರೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಡ್ರೋನ್‌ಗಳಲ್ಲಿ ಒಂದು ಅಡಿಯಾಲ ಜೈಲಿನ ಮೇಲೆ ಇಳಿಯಬಹುದೆಂಬ ದೊಡ್ಡ ಭಯವಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸ್ವತಃ ಡ್ರೋನ್ ಜೈಲಿಗೆ ಅಪ್ಪಳಿಸುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದರು. ಇದು ನೇರ ಮಾರಣಾಂತಿಕ ಬೆದರಿಕೆ ಎಂದು ಅವರು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು. ಅವರ ಕುಟುಂಬವು ಇದನ್ನು ಬಯಸುತ್ತಿದೆ. ಇಮ್ರಾನ್ ಖಾನ್ ಅವರಿಗೆ ಇದು ಸೂಕ್ತ ಸ್ಥಳವಲ್ಲ. ಅವರು ಯಾವುದೇ ರೀತಿಯ ಕಾನೂನುಬದ್ಧ ಆರೋಪವಿಲ್ಲದೆ ಸುಳ್ಳು ಆರೋಪಗಳಿಗಾಗಿ ಜೈಲಿನಲ್ಲಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಸುಧಾರಣೆಯಾಗುವವರೆಗೆ ಅವರು ಪೆರೋಲ್ ಮೇಲೆ ಹೊರಗೆ ಇರಬೇಕು ಎಂದು ಪಕ್ಷ ಹೈಕೋರ್ಟ್ ಗೆ ತಿಳಿಸಿರುವುದಾಗಿ ಹೇಳಿದರು.
ಇದನ್ನೂ ಓದಿ: India Pakistan Attack: ಭಾರತದ ಕ್ಷಿಪಣಿ ದಾಳಿಗೆ ಪಾಕ್‌ನ 4 ವಾಯುನೆಲೆ ಧ್ವಂಸ
ಸರ್ಕಾರವೇ ಸಂಚು ರೂಪಿಸುವ ಆತಂಕ
ಇದಲ್ಲದೆ ಗುರುವಾರ ರಾತ್ರಿ ಹೇಳಿಕೆ ನೀಡಿರುವ ಪಿಟಿಐ ಖೈಬರ್ ಪಖ್ತುನ್ಖ್ವಾ ಅಧ್ಯಕ್ಷ ಜುನೈದ್ ಅಕ್ಬರ್, ಅಡಿಯಾಲಾ ಜೈಲಿನೊಳಗೆ ಖಾನ್ ಅವರನ್ನು ಗುರಿಯಾಗಿಸಲು ಸರ್ಕಾರವು ಯುದ್ಧದ ನೆಪವನ್ನು ಮಾಡಬಹುದು. ಮಾಜಿ ಪ್ರಧಾನಿ ಅವರಿಗೆ ಹಾನಿ ಮಾಡಲು ಕ್ಷಿಪಣಿ ಅಥವಾ ಡ್ರೋನ್‌ಗಳನ್ನು ನಿಯೋಜಿಸಬಹುದು ಎಂಬ ಭಯವಿದೆ ಎಂದು ಹೇಳಿದ್ದಾರೆ.
2023ರ ಆಗಸ್ಟ್ ನಿಂದ ಬಂಧನದಲ್ಲಿರುವ 72 ವರ್ಷದ ಇಮ್ರಾನ್ ಖಾನ್ ಸುಮಾರು 200 ಕಾನೂನು ಪ್ರಕರಣಗಳ ಆರೋಪವನ್ನು ಎದುರಿಸುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಎನ್ನುತ್ತಾರೆ ಅವರ ಆಪ್ತರು. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ 14 ವರ್ಷಗಳು ಮತ್ತು ಅವರ ಪತ್ನಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.