ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ತಾಂಡವ್​ನ ಗ್ರಹಚಾರ ಬಿಡಿಸಿದ ಕುಸುಮಾ: ಕ್ಯಾಂಟೀನ್​ನಲ್ಲೇ ಅವಮಾನ

Bhagya Lakshmi Serial Today's Episode: ಆಫೀಸ್ ಮೇಲಿನ ಭಾಗ್ಯಾಳ ಕ್ಯಾಂಟೀನ್ಗೆ ಬಂದ ತಾಂಡವ್, ನನ್ನ ಜೊತೆ ಇದ್ದಾಗ ನೀನು ಆರಾಮವಾಗಿ ಇದ್ದೆ. ಇಲ್ಲಿ ಬಂದು ಕಷ್ಟಪಟ್ಟು ಕೆಲಸ ಮಾಡಿ ಒದ್ದಾಡ್ತಾ ಇದ್ದೀಯ ಎಂದು ಭಾಗ್ಯಾಗೆ ಹೇಳಿದ್ದಾನೆ.

ತಾಂಡವ್​ನ ಗ್ರಹಚಾರ ಬಿಡಿಸಿದ ಕುಸುಮಾ: ಕ್ಯಾಂಟೀನ್​ನಲ್ಲೇ ಅವಮಾನ

Bhagya Lakshmi Serial

Profile Vinay Bhat May 9, 2025 12:11 PM

‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನ್ನ ಮಾಜಿ ಗಂಡನ ಸಹಾಯಕ್ಕೆ ನಿಂತು ಆತನಿಗೆ ಗೊತ್ತಿಲ್ಲದೆ ಅದೇ ಹಳೆಯ ಕಂಪನಿಯಲ್ಲಿ ಕೆಲಸ ತೆಗೆಸಿಕೊಟ್ಟಿದ್ದಾಳೆ. ಆದರೆ, ತಾಂಡವ್ ಇದರಿಂದ ಖುಷಿ ಪಡದೆ ಭಾಗ್ಯಾಳ ಮೇಲೆ ಮತ್ತಷ್ಟು ಕೋಪಗೊಂಡಿದ್ದಾರೆ. ಭಾಗ್ಯ ಮೇಲಿನ ಸೇಡು ಇನ್ನಷ್ಟು ಹೆಚ್ಚಾಗಿದೆ. ಭಾಗ್ಯಾಗೆ ಒಂದಲ್ಲ ಒಂದು ವಿಚಾರದಲ್ಲಿ ತಾಂಡವ್ ಅಡ್ಡಗಾಲು ಹಾಕುತ್ತಲೇ ಇದ್ದಾನೆ. ಇವೆಲ್ಲದರಲ್ಲಿ ಸೋತು ಸುಣ್ಣವಾದರೂ ಆತನಿಗೆ ಬುದ್ದಿ ಬರುತ್ತಿಲ್ಲ. ಇದೀಗ ಮತ್ತೆ ಭಾಗ್ಯಾಳಿಗೆ ಅವಮಾನ ಮಾಡಲು ಹೋಗಿ ಆತನೇ ತನ್ನ ತಾಯಿಯಿಂದ ಹಿಗ್ಗಾ-ಮುಗ್ಗ ಬೈಯಿಸಿಕೊಂಡಿದ್ದಾನೆ.

ಈ ಹಿಂದೆ ತಾಂಡವ್‌ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಕ್ಯಾಂಟೀನ್‌ ನಡೆಸಲು ಭಾಗ್ಯಗೆ ಅನುಮತಿ ಸಿಕ್ಕಿತ್ತು. ಅದೇ ದಿನ ಭಾಗ್ಯಾಗೆ ಅವಮಾನ ಮಾಡಿದ್ದಕ್ಕೆ ತಾಂಡವ್‌, ಶ್ರೇಷ್ಠಾರನ್ನು ಬಾಸ್ ಕಂಪನಿಯಿಂದ ತೆಗೆದು ಹಾಕಿದ್ದರು. ಬಳಿಕ ತಾಂಡವ್​ಗೆ ಒಂದೇ ಒಂದು ಕೆಲಸ ಸಿಕ್ಕಿಲ್ಲ. ಬಂದ ಒಂದೆರಡು ಆಫರ್ ಅನ್ನು ಇದು ನನ್ನ ಲೆವೆಲ್​ಗೆ ಇಲ್ಲ ಎಂದು ರಿಜೆಕ್ಟ್ ಮಾಡಿದ್ದಾನೆ. ಮಗನಿಗೆ ಕೆಲಸವಿಲ್ಲ ಅಂತ ತಾಯಿ ಕುಸುಮಾ ಒಳಗೊಳಗೇ ಸಂಕಟ ಪಡುತ್ತಿರುವುದನ್ನು ಕಂಡು ಭಾಗ್ಯ ಬಾಸ್ ಬಳಿ ಹೋಗಿ ತಾಂಡವ್​ಗೆ ಕೆಲಸ ಪುನಹ ಕೊಡಿಸಿ ಎಂದು ರಿಕ್ವೆಸ್ಟ್ ಮಾಡಿದ್ದಾಳೆ. ಭಾಗ್ಯಾಳ ಮಾತಿಗೆ ಬೆಲೆ ಕೊಟ್ಟು ಅವರು ತಾಂಡವ್-ಶ್ರೇಷ್ಠಾರನ್ನು ಪುನಃ ಕೆಲಸಕ್ಕೆ ಕರೆದಿದ್ದಾರೆ.

ಆದರೆ, ಕೆಲಸ ವಾಪಸ್ ಸಿಕ್ತು ಅಂತ ಖುಷಿ ಪಡುವ ಬದಲು ತಾಂಡವ್-ಶ್ರೇಷ್ಠಾ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾರೆ. ಭಾಗ್ಯಾಳಿಂದ ಈ ಕೆಲಸ ಸಿಕ್ಕಿದ್ದು ಎಂದು ತಿಳಿದ ಕೂಡಲೇ ಆಕೆಯ ಮೇಲೆ ಮತ್ತಷ್ಟು ಕೋಪಗೊಂಡಿದ್ದಾನೆ. ಆದರೆ, ಇದು ಯಾವುದಕ್ಕೂ ಭಾಗ್ಯ ತಲೆಕೊಡುತ್ತಿಲ್ಲ. ಆದರೆ, ಈ ಬಾರಿ ಕುಸುಮಾನೇ ತಾಂಡವ್​ನ ಮೈಚಳಿ ಬಿಡಿಸಿದ್ದಾಳೆ. ಆಫೀಸ್ ಮೇಲಿನ ಭಾಗ್ಯಾಳ ಕ್ಯಾಂಟೀನ್​ಗೆ ಬಂದ ತಾಂಡವ್, ನನ್ನ ಜೊತೆ ಇದ್ದಾಗ ನೀನು ಆರಾಮವಾಗಿ ಇದ್ದೆ. ಇಲ್ಲಿ ಬಂದು ಕಷ್ಟಪಟ್ಟು ಕೆಲಸ ಮಾಡಿ ಒದ್ದಾಡ್ತಾ ಇದ್ದೀಯ ಎಂದು ಭಾಗ್ಯಾಗೆ ಹೇಳಿದ್ದಾನೆ.

ಇಷ್ಟೇ ಅಲ್ಲದೆ ತಿಂದ ತಿಂಡಿಗೆ 500 ರೂಪಾಯಿ ಕೊಟ್ಟು ನಿನ್ಗೆ ಸಿಗೋದೆ ಬಿಡಿಗಾಸು ಚೇಂಜ್ ನೀನೇ ಇಟ್ಕೊ ಎಂದು ಹೇಳಿದ್ದಾನೆ. ಇದರಿಂದ ಕೆರಳಿದ ಕುಸುಮಾ ತಾಂಡವ್​ಗೆ ಟಕ್ಕರ್ ಕೊಟ್ಟಿದ್ದಾರೆ. ನಿನ್ನೆ ಮತ್ತೆ ಕೆಲಸ ಕೊಡಿಸಿರುವುದು ಭಾಗ್ಯ, ನಿನ್ನಂತ ಚಿಲ್ರೆಗಳತ್ರ ಈ ಥರ ಚಿಲ್ರೆಗಳನ್ನು ನೋಡೋಕೆ ಚೆಂದ ಎಂದು ಚೇಂಜ್ ಅನ್ನು ವಾಪಾಸ್ ಕೊಟ್ಟಿದ್ದಾರೆ. ಕೀಪಿಂಗ್ ದಿ ಚೇಂಜ್ ಯು ಎಂದು ಹೇಳಿದ್ದಾರೆ. ಇದರಿಂದ ತಾಂಡವ್​ಗೆ ಮತ್ತೆ ಅವಮಾನ ಆಗಿದೆ.



ಮತ್ತೊಂದೆಡೆ ಭಾಗ್ಯ ತಂಗಿ ಪೂಜಾ ದುಃಖದಲ್ಲಿದ್ದಾಳೆ. ಮನೆಗೆ ಬಂದ ಗಂಡಿನ ಕಡೆಯವರು ಅಕ್ಕನನ್ನು ಗಂಡ ಬಿಟ್ಟವಳು ಎಂದು ಹೇಳಿ ರಿಜೆಕ್ಟ್ ಮಾಡಿದ್ದಕ್ಕೆ ಬೇಸರಗೊಂಡಿದ್ದಾಳೆ. ಇದೇ ದುಃಖದಲ್ಲಿ ಪೂಜಾ ಕೆಲಸಕ್ಕೆ ತೆರಳಿದ್ದಾಳೆ. ಆದರೆ, ಅಲ್ಲಿ ಪೂಜಾಗೆ ಆಘಾತ ಉಂಟಾಗಿದೆ. ಆಫೀಸ್​ನ ಎಂಡಿ ಕಿಶನ್ ಅವರು ಪೂಜಾಗೆ ಪ್ರಪೋಸ್ ಮಾಡಿದ್ದಾರೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನ ಮೇಲೆ ಲವ್ ಹೇಗಾಯಿತು ಅಂತ ಗೊತ್ತಿಲ್ಲ. ನಂಗೆ ನೀನಂದ್ರೆ ತುಂಬಾ ಇಷ್ಟ ಎಂದು ಪೂಜಾಳನ್ನು ತಬ್ಬಿಕೊಂಡಿದ್ದಾನೆ. ಈ ಸಂದರ್ಭ ಪೂಜಾಗೆ ಏನು ಮಾಡಬೇಕು ಎಂದು ತಿಳಿಯದೆ ಸುಮ್ಮನೆ ನಿಂತಿದ್ದಾಳೆ.



ಸದ್ಯ ಧಾರಾವಾಹಿ ಕುತೂಹಲ ಮೂಡಿಸುತ್ತಿದೆ. ಒಂದೆಡೆ ಭಾಗ್ಯಾ-ತಾಂಡವ್ ಜಟಾಪಟಿ ನಡೆಯುತ್ತಿದ್ದರೆ ಮತ್ತೊಂದೆಡೆ ಪೂಜಾ-ಕಿಶನ್ ಲವ್ ಸ್ಟೋರಿ ಶುರುವಾಗುವಂತಿದೆ.

Chaithra Kundapura Marriage: ನ್ಯೂಸ್ ಚಾನೆಲ್​ನಲ್ಲಿ ಒಟ್ಟಿಗೆ ಕೆಲಸ: ಚೈತ್ರಾ ಕುಂದಾಪುರ ಮದುವೆ ಆಗುತ್ತಿರುವ ಈ ಹುಡುಗ ಯಾರು ಗೊತ್ತೇ?