ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಕಿಶನ್ ತುಲಾಭಾರದಲ್ಲಿ ಭಾಗ್ಯ ಯಶಸ್ವಿ: ಮೀನಾಕ್ಷಿ-ಕನ್ನಿಕಾಗೆ ಮುಖಭಂಗ

ಕೊನೆಯಲ್ಲಿ ಒಂದು ಪಾತ್ರೆ ಮಾತ್ರ ಉಳಿದಿರುತ್ತದೆ. ಭಾಗ್ಯ ದೇವರ ಮೇಲೆ ಭಾರ ಹಾಕಿ ಆ ಒಂದು ಪಾತ್ರವನ್ನು ಇಡುತ್ತಾಳೆ. ಪವಾಡ ಎಂಬಂತೆ ತೂಕ ಸರಿಸಮಾನವಾಗಿ ಬಂದು ನಿಲ್ಲುತ್ತದೆ. ಭಾಗ್ಯ ಮನೆಯವರಿಗೆ ಖುಷಿ ಆಗುತ್ತದೆ. ಕಿಶನ್ ಕೂಡ ಕೈಮುಗಿದು ದೇವರಿಗೆ ನಮಸ್ಕರಿಸುತ್ತಾನೆ.

ಕಿಶನ್ ತುಲಾಭಾರದಲ್ಲಿ ಭಾಗ್ಯ ಯಶಸ್ವಿ: ಮೀನಾಕ್ಷಿಗೆ ಮುಖಭಂಗ

Bhagya Lakshmi Serial

Profile Vinay Bhat Jul 4, 2025 12:06 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ನಾನಾ ತಿರುವುಗಳ ಮೂಲಕ ರೋಚಕ ಸೃಷ್ಟಿಸಿದೆ. ಸದ್ಯ ಭಾಗ್ಯ ತಂಗಿ ಪೂಜಾ ಹಾಗೂ ಕಿಶನ್ ಮದುವೆ ಕಾರ್ಯ ಭರ್ಜರಿಯಿಂದ ಸಾಗುತ್ತಿದೆ. ಆದರೆ, ಮೀನಾಕ್ಷಿ ಹಾಗೂ ಕನ್ನಿಕಾ ಈ ಮದುವೆಯನ್ನು ಹೇಗಾದರು ಮಾಡಿ ನಿಲ್ಲಿಸಲೇ ಬೇಕೆಂದು ಯೋಜನೆ ಹೆಣೆದಿದ್ದಾರೆ. ಆದರೆ, ಭಾಗ್ಯಾಳ ಶಕ್ತಿ ಮುಂದೆ ಇವರ ಪ್ಲ್ಯಾನ್ ಎಲ್ಲ ಫ್ಲಾಪ್ ಆಗುತ್ತಿದೆ. ಕಿಶನ್​ನ ತುಲಾಭಾರ ಮಾಡಿಸಲು ಭಾಗ್ಯ ಮನೆಯವರಿಂದ ಸಾಧ್ಯವಿಲ್ಲ.. ಹೀಗಾದಾಗ ಮದುವೆ ನಿಲ್ಲುತ್ತೆ ಎಂದು ಅಂದುಕೊಂಡಿದ್ದ ಮೀನಾಕ್ಷಿಗೆ ಶಾಕ್ ಆಗಿದೆ. ಎಲ್ಲ ಅಡೆತಡೆಗಳನ್ನು ದಾಟಿ ಭಾಗ್ಯ ತುಲಭಾರ ಮಾಡಿಸಿಯೇ ಬಿಟ್ಟಿದ್ದಾಳೆ.

ಮೀನಾಕ್ಷಿ ಹಾಗೂ ಕನ್ನಿಕಾ ಭಾಗ್ಯ ಬಳಿ ಕಿಶನ್​ನ ತುಲಾಭಾರ ಆಗಬೇಕು.. ಇದನ್ನ ಹುಡುಗಿ ಮನೆಯವರೇ ಮಾಡಬೇಕು.. ಅಷ್ಟೇ ಅಲ್ಲ ಇದು ಪಂಚಲೋಹದಲ್ಲಿ ಆಗಬೇಕು ಎಂದು ಹೇಳಿದ್ದಾರೆ. ಇದನ್ನು ಕೇಳಿ ಭಾಗ್ಯ ಮನೆಯವರಿಗೆ ಶಾಕ್ ಆಗಿದೆ. ಅಷ್ಟೊಂದು ಚಿನ್ನ, ಬೆಳ್ಳಿ ಎಲ್ಲ ಎಲ್ಲಿಂದ ತರೋದು.. ಹೇಗೆ ಹಣ ಗೂಡಿಸುವುದು ಎಂದು ಭಾಗ್ಯ ಮನೆಯವರಿಗೆ ಟೆನ್ಶನ್ ಶುರುವಾಗಿದೆ. ಈ ವಿಚಾರ ತಿಳಿದು ಕಿಶನ್​ಗೆ ಕೂಡ ಶಾಕ್ ಆಗಿದೆ. ಇದು ಮದುವೆ ನಿಲ್ಲಿಸಲು ಮೀನಾಕ್ಷಿ ಮಾಡಿರುವ ಪ್ಲ್ಯಾನ್ ಇದಾಗಿದೆ.

ಆದರೆ, ಭಾಗ್ಯ ಇದಕ್ಕೆ ಒಪ್ಪಿಗೆ ಸೂಚಿಸುತ್ತಾಳೆ. ಪೂಜಾ-ಕಿಶನ್​ಗೆ ಒಳ್ಳೆಯದು ಆಗಬೇಕು ಎಂದು ಇದನ್ನ ಎಷ್ಟೇ ಖರ್ಚಾದರೂ ಮಾಡೋಣ ಎಂದು ಹೇಳಿದ್ದಾಳೆ. ಈ ಕೆಲಸ ನಾನು ವಹಿಸುತ್ತೇನೆ ಎಂದು ಸುಂದರಿ ಪೂಜಾ ಜೊತೆ ಸೇರಿ ಕಬ್ಬಿಣದ ಪಾತ್ರೆಗೆ ಚಿನ್ನದ ಕೋಟಿಂಗ್ ಕೊಟ್ಟು ತಯಾರು ಮಾಡಿದ್ದಾಳೆ. ಆದರೆ, ಈ ವಿಚಾರ ಭಾಗ್ಯಾಳಿಗೆ ತಿಳಿದಿಲ್ಲ. ತುಲಭಾರಕ್ಕೆ ಎರಡೂ ಮನೆಯವರು ದೇವಸ್ಥಾನಕ್ಕೆ ಬಂದಿದ್ದಾರೆ. ಭಾಗ್ಯ ಮನೆಯವರು ತುಲಭಾರಕ್ಕೆ ಒಂದೊಂದೆ ವಸ್ತುಗಳನ್ನು ತೆಗೆದುಕೊಂಡು ಬಂದಿದ್ದಾರೆ.

ಆದರೆ, ಈ ವಸ್ತುವನ್ನು ನೋಡಿದಾಗ ಭಾಗ್ಯಾಗೆ ಅನುಮಾನ ಬರುತ್ತದೆ. ಸಾಕಷ್ಟು ಕೇಳಿದ ಬಂತರ ಪೂಜಾ ಹಾಗೂ ಸುಂದರಿ ಸತ್ಯ ಬಾಯಿಬಿಡುತ್ತಾರೆ. ಸಿಕ್ಕಿದ್ದೆ ಚಾನ್ಸ್ ಎಂದು ಮೀನಾಕ್ಷಿ-ಕನ್ನಿಕಾ ಸರಿಯಾಗಿ ಆಡಿಕೊಳ್ಳುತ್ತಾರೆ. ಭಾಗ್ಯ ಇದನ್ನು ಸವಾಲಾಗಿ ತೆಗೆದುಕೊಂಡು ನನಗೆ ಸ್ವಲ್ಪ ಸಮಯ ಕೊಡಿ ನಿಜವಾದ ಪಂಚಲೋಹವನ್ನು ನಾನು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೊರಡುತ್ತಾಳೆ. ಅತ್ತ ಮೀನಾಕ್ಷಿಗೆ ಖುಷಿ ಆಗುತ್ತದೆ.. ಪುನಃ ಪಂಚಲೋಹವನ್ನು ತರಲು ಇವರಿಂದ ಸಾಧ್ಯವೇ ಇಲ್ಲ ಎಂದು ನಗುತ್ತಾಳೆ.



ಆದರೆ ಭಾಗ್ಯ ಎಲ್ಲರಿಗೂ ಶಾಕ್ ಆಗುವಂತೆ ಪಂಚಲೋಹದ ವಸ್ತುಗಳನ್ನು ತೆಗೆದುಕೊಂಡು ಬರುತ್ತಾಳೆ. ಕನ್ನಿಕಾಗೆ ಅನುಮಾನ ಬಂದು ಇದು ಕೂಡ ಡುಪ್ಲಿಕೇಟ್ ಆಗಿರಬಹುದು ಎಂದು ಚೆಕ್ ಮಾಡುತ್ತಾಳೆ. ಆದರೆ ಅದು ನಿಜವಾದ್ದಾಗಿರುತ್ತದೆ. ತುಲಾಭಾರ ಪ್ರಾರಂಭವಾಗುತ್ತದೆ. ಭಾಗ್ಯ ಒಂದೊಂದೆ ವಸ್ತುವನ್ನು ತಕ್ಕಡಿಯಲ್ಲಿ ಇಡುತ್ತಾಳೆ. ಆದರೆ, ತಕ್ಕಡಿ ನೇರಕ್ಕೆ ಬರುವುದೇ ಇಲ್ಲ. ಕೊನೆಯಲ್ಲಿ ಒಂದು ಪಾತ್ರೆ ಮಾತ್ರ ಉಳಿದಿರುತ್ತದೆ. ಭಾಗ್ಯ ದೇವರ ಮೇಲೆ ಭಾರ ಹಾಕಿ ಆ ಒಂದು ಪಾತ್ರವನ್ನು ಇಡುತ್ತಾಳೆ. ಪವಾಡ ಎಂಬಂತೆ ತೂಕ ಸರಿಸಮಾನವಾಗಿ ಬಂದು ನಿಲ್ಲುತ್ತದೆ. ಭಾಗ್ಯ ಮನೆಯವರಿಗೆ ಖುಷಿ ಆಗುತ್ತದೆ. ಕಿಶನ್ ಕೂಡ ಕೈಮುಗಿದು ದೇವರಿಗೆ ನಮಸ್ಕರಿಸುತ್ತಾನೆ.



ಈ ಮೂಲಕ ಮೀನಾಕ್ಷಿ-ಕನ್ನಿಕಾಗೆ ಈ ಪ್ಲ್ಯಾನ್​ನಲ್ಲಿ ಕೂಡ ಹಿನ್ನಡೆ ಆಗಿದೆ. ಪೂಜಾ-ಕಿಶನ್ ಮದುವೆ ನಿಲ್ಲಿಸಲು ಇವರಿಬ್ಬರು ಇನ್ನೇನು ಪ್ಲ್ಯಾನ್ ಮಾಡುತ್ತಾರೆ ಎಂಬುದು ನೋಡಬೇಕಿದೆ. ಮತ್ತೊಂದೆಡೆ ಆದೀಶ್ವರ್ ಕಾಮತ್ ಭಾಗ್ಯ ಗಂಡ ತಾಂಡವ್​ಗೆ ಪ್ರಾಜೆಕ್ಟ್ ವಿಚಾರವಾಗಿ ಕಫೆವೊಂದರಲ್ಲಿ ಭೇಟಿ ಆಗಿದ್ದಾನೆ. ಇಲ್ಲಿ ಭಾಗ್ಯ ವಿಚಾರ ಬೆಳಕಿಗೆ ಬರುವ ಸಾಧ್ಯತೆ ಇದೆ. ಸದ್ಯ ಈ ಧಾರಾವಾಹಿಯ ಮುಂದಿನ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದೆ.

Anusha Rai: ಹಾಫ್ ಸಾರಿಯಲ್ಲಿ ಗೊಂಬೆಯಂತೆ ಕಂಗೊಳಿಸಿದ ಬಿಗ್ ಬಾಸ್ ಅನುಷಾ