ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

OTT Movies: ಈ ವಾರ ಒಟಿಟಿಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಈ ಹಿಟ್ ಸಿನಿಮಾಗಳು

OTT NEW MOVIES: ಬಾಕ್ಸಾಫೀಸ್​ನಲ್ಲಿ ಭರ್ಜರಿ ಸದ್ದು ಮಾಡಿದ್ದ ಪ್ರಥ್ವಿರಾಜ್‌ ಸುಕುಮಾರನ್‌ ನಿರ್ದೇಶನದ, ಮೋಹನ್‌ ಲಾಲ್‌ ಅಭಿನಯದ ಮಳಯಾಳಂ ಸಿನಿಮಾ ಎಲ್2: ಎಂಪುರಾನ್‌ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಜಿಯೋಹಾಟ್‌ ಸ್ಟಾರ್‌ ನಲ್ಲಿ ಏಪ್ರಿಲ್‌ 24ರಂದು ಬಿಡುಗಡೆಯಾಗಲಿದೆ.

ಈ ವಾರ ಒಟಿಟಿಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಈ ಹಿಟ್ ಸಿನಿಮಾಗಳು

OTT Movies

Profile Vinay Bhat Apr 23, 2025 7:32 AM

ಒಟಿಟಿಯಲ್ಲಿ ಹೊಸ ಸಿನಿಮಾಗಳನ್ನು (OTT New Movies) ಹುಡುಕುತ್ತಿದ್ದೀರಾ?. ಕ್ರೈಮ್ ಥ್ರಿಲ್ಲರ್‌ಗಳಿಂದ ಹಿಡಿದು ಭಾವನಾತ್ಮಕ ಡ್ರಾಮಗಳವರೆಗೂ, ಹಲವಾರು ರೋಮಾಂಚಕಾರಿ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಜಿಯೋ ಹಾಟ್‌ಸ್ಟಾರ್ ಮತ್ತು ಇನ್ನೂ ಹೆಚ್ಚಿನ ವೇದಿಕೆಗಳಲ್ಲಿ ಇವುಗಳ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ಕಾಮಿಡಿ ಜತೆಗೆ ಸಸ್ಪೆನ್ಸ್‌ ಸಿನಿಮಾಗಳೂ ಸ್ಟ್ರೀಮಿಂಗ್‌ ಆರಂಭಿಸಲಿವೆ. ಚಿತ್ರಮಂದಿರಗಳಲ್ಲಿ ಹಿಟ್‌ ಪಟ್ಟ ಪಡೆದು, ಒಟಿಟಿಯಲ್ಲಿಯೂ ಕಮಾಲ್‌ ಮಾಡಲು ಸಿದ್ಧವಾಗಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಎಲ್ 2: ಎಂಪುರಾನ್: ಬಾಕ್ಸಾಫೀಸ್​ನಲ್ಲಿ ಭರ್ಜರಿ ಸದ್ದು ಮಾಡಿದ್ದ ಪ್ರಥ್ವಿರಾಜ್‌ ಸುಕುಮಾರನ್‌ ನಿರ್ದೇಶನದ, ಮೋಹನ್‌ ಲಾಲ್‌ ಅಭಿನಯದ ಮಳಯಾಳಂ ಸಿನಿಮಾ ಎಲ್2: ಎಂಪುರಾನ್‌ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಅದ್ಭುತ ಸಾಹಸದೃಶ್ಯ, ಪ್ರೇಕ್ಷಕರನ್ನು ಸೆರೆಹಿಡಿದಿಡುವ ಕಥಾಹಂದರ ಹೊಂದಿದ್ದ ಎಲ್2: ಎಂಪುರಾನ್‌ ಸಿನಿಮಾ ಮಾರ್ಚ್‌ 27ರಂದು ದೇಶಾದ್ಯಂತ ಬಿಡುಗಡೆಗೊಂಡಿತ್ತು. ಬಿಡುಗಡೆಯಾದ ದಿನದಿಂದ ಈವರೆಗೂ ಎಲ್2: ಎಂಪುರಾನ್‌ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಬಾಕ್ಸಾಫೀಸ್‌ ನಲ್ಲೂ ಉತ್ತಮ ಗಳಿಕೆ ಕಂಡಿತ್ತು. ಈ ಸಿನಿಮಾ ಜಿಯೋಹಾಟ್‌ ಸ್ಟಾರ್‌ ನಲ್ಲಿ ಏಪ್ರಿಲ್‌ 24ರಂದು ಬಿಡುಗಡೆಯಾಗಲಿದೆ.

ವೀರ ಧೀರ ಶೂರನ್: ವಿಕ್ರಂ ನಟನೆಯ ತಮಿಳು ಆಕ್ಷನ್ ಥ್ರಿಲ್ಲರ್ ಸಿನಿಮಾ ಈ ವಾರ ಅಮೇಜಾನ್ ಪ್ರೈಂ ವೀಡಿಯೋಗೆ ಬರ್ತಿದೆ. ಅರುಣ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ 25 ದಿನಗಳ ಹಿಂದೆ ತೆರೆಗಪ್ಪಳಿಸಿತ್ತು. ತಕ್ಕಮಟ್ಟಿಗೆ ಪ್ರೇಕ್ಷಕರನ್ನು ರಂಜಿಸಿತ್ತು. ಆದರೆ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಸಾಕಷ್ಟು ಜನ ಚಿತ್ರವನ್ನು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ. ದುಷಾರ ವಿಜಯನ್, ಎಸ್‌. ಜೆ ಸೂರ್ಯ, ಪೃಥ್ವಿರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ. ವೀರ ಧೀರ ಸೂರನ್‌ ಸಿನಿಮಾ ಏಪ್ರಿಲ್‌ 24ರಂದು ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಗೆ ಬರ್ತಿದೆ.

ಕ್ರೇಜಿ: ಬಾಲಿವುಡ್ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ ಕ್ರೇಜಿ ಏಪ್ರಿಲ್ 25ರಂದು ಅಮೆಜಾನ್‌ ಪ್ರೈಂ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಚಿತ್ರವು ಈಗಾಗಲೇ ಬಾಡಿಗೆ ಆಧಾರದ ಮೇಲೆ ವೀಕ್ಷಣೆಗೆ ಲಭ್ಯವಿದೆ. ಆದಾಗ್ಯೂ, ಏಪ್ರಿಲ್ 25ರ ನಂತರ ಎಲ್ಲ ಪ್ರೈಂ ಚಂದಾದಾರರೂ ಉಚಿತವಾಗಿ ವೀಕ್ಷಿಸಬಹುದು. ಕ್ರೇಜಿ ಚಿತ್ರಕ್ಕೆ ಗಿರೀಶ್ ಕೊಹ್ಲಿ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 28 ರಂದು ಈ ಚಿತ್ರವು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ.

ಸೋಮು ಸೌಂಡ್ ಇಂಜಿನಿಯರ್: ಅಭಿ ನಿರ್ದೇಶನದ ಸೋಮು ಸೌಂಡ್ ಇಂಜಿನಿಯರ್ ಕನ್ನಡ ಸಿನಿಮಾ ಈಗಾಗಲೇ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ. ಆದರೆ ಸದ್ಯಕ್ಕೆ 99 ರೂಪಾಯಿ ಪಾವತಿಸಿ ಸಿನಿಮಾ ನೋಡಬೇಕಿದೆ. ಶೀಘ್ರದಲ್ಲೇ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಉತ್ತರ ಕರ್ನಾಟಕ ಸೊಗಡಿನ ಸಿನಿಮಾ ಇದು. ಶ್ರೇಷ್ಠಾ ಹೀರೊ ಆಗಿ ಚಿತ್ರದಲ್ಲಿ ನಟಿಸಿದ್ದಾರೆ.

Bigg Boss Voice: ಅಲ್ಲಿ ಬರುವ ವಾಯ್ಸ್ ನನ್ನದಲ್ಲ: ಬಿಗ್ ಬಾಸ್​ನ ಸತ್ಯ ಬಿಚ್ಚಿಟ್ಟ ಪ್ರದೀಪ್ ಬಡೆಕ್ಕಿಲ

ಜುವೆಲ್ ಥೀಫ್: ಸೈಫ್ ಅಲಿಖಾನ್, ಜೈದೀಪ್ ಅಹ್ವಾಟ್, ನಿಖಿತಾ ದತ್ ನಟನೆಯ ಹಿಂದಿ ಆಕ್ಷನ್ ಥ್ರಿಲ್ಲರ್ ಜುವೆಲ್ ಥೀಫ್ ನೇರವಾಗಿ ಓಟಿಟಿಗೆ ಬರ್ತಿದೆ. ಏಪ್ರಿಲ್ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕೂಕಿ ಗುಲಾಟಿ ಹಾಗೂ ರಾಬಿ ಗ್ರೆವಾಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಸೂಪರ್ ಬಾಯ್ಸ್ ಆಫ್ ಮಾಲೇಂಗಾವ್: ಸೂಪರ್ ಬಾಯ್ಸ್ ಆಫ್ ಮಾಲೇಂಗಾವ್ ಚಿತ್ರ ಏಪ್ರಿಲ್ 25ರಂದು ಅಮೆಜಾನ್‌ ಪ್ರೈಂ ವಿಡಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಆದರ್ಶ್ ಗೌರವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಸದ್ಯ ಬಾಡಿಗೆ ಆಧಾರದ ಮೇಲೆ ವೀಕ್ಷಣೆಗೆ ಲಭ್ಯವಿದೆ. ಆದಾಗ್ಯೂ, ಏಪ್ರಿಲ್ 25 ರಂದು ಎಲ್ಲ ಪ್ರೈಂ ಬಳಕೆದಾರರಿಗೆ ಉಚಿತವಾಗಿ ಲಭ್ಯವಾಗಲಿದೆ.