ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Voice: ಅಲ್ಲಿ ಬರುವ ವಾಯ್ಸ್ ನನ್ನದಲ್ಲ: ಬಿಗ್ ಬಾಸ್​ನ ಸತ್ಯ ಬಿಚ್ಚಿಟ್ಟ ಪ್ರದೀಪ್ ಬಡೆಕ್ಕಿಲ

ಆರಂಭದಲ್ಲಿ ಪ್ರದೀಪ್ ಅವರದ್ದೇ ದನಿ ಬಿಗ್ಬಾಸ್ನದ್ದು ಎಂದು ಯಾರಿಗೂ ತಿಳಿದಿರಲಿಲ್ಲ. ಆದರೆ, ಒಮ್ಮೆ ಯಾರೋ ವೈರಲ್ ಸೋಷಿಯಲ್ ಮೀಡಿಯಾದಲ್ಲಿ ಇವರ ಫೋಟೋಗಳನ್ನು ಹಂಚಿ ಬಿಗ್ ಬಾಸ್ಗೆ ಧ್ವನಿ ನೀಡುತ್ತಿರುವುದು ಇವರೇ ಎಂದು ಹೇಳಿದರು. ಅದು ಸಾಕಷ್ಟು ವೈರಲ್ ಆಯಿತು. ಹಲವು ಸಂದರ್ಶನಗಳೂ ನಡೆದವು.

ಅಲ್ಲಿ ಬರುವ ವಾಯ್ಸ್ ನನ್ನದಲ್ಲ: ಬಿಗ್ ಬಾಸ್​ನ ಸತ್ಯ ಬಿಚ್ಚಿಟ್ಟ ಪ್ರದೀಪ್

Bigg Boss Pradeep Badekkila

Profile Vinay Bhat Apr 22, 2025 4:02 PM

ಪ್ರದೀಪ್ ಬಡೆಕ್ಕಿಲ (Pradeep Badekkila) ಈ ಹೆಸರು ಇಂದು ಕರ್ನಾಟಕದಾದ್ಯಂತ ಚಿರಪರಿಚಿತ. ಬಿಗ್ ಬಾಸ್ ಗೆ ಧ್ವನಿ ನೀಡುವುದಷ್ಟೇ ಅಲ್ಲದೆ, ಕನ್ನಡದ ಜಾಹೀರಾತು ಸಹಿತ ಹಲವು ವಿಭಾಗಗಳಿಗೆ ಹಿನ್ನೆಲೆ ಧ್ವನಿ ನೀಡುವ ಮೂಲಕ ದಕ್ಷಿಣ ಕನ್ನಡದ ಬಡೆಕ್ಕಿಲ ಪ್ರದೀಪ್ ಗುರುತಿಸಿಕೊಂಡಿದ್ದಾರೆ. ನಟ, ಮಾಡೆಲ್ ಕೂಡ ಆಗಿರುವ ಪ್ರದೀಪ್ ಕನ್ನಡದ ನ್ಯೂಸ್ ಚಾನೆಲ್​ನಲ್ಲಿ ವಾರ್ತಾ ವಾಚಕರಾಗಿ ವೃತ್ತಿ ಪ್ರಾರಂಭಿಸಿ, ಆ ನಂತರ ತಮಿಳು, ಕನ್ನಡ ಧಾರಾವಾಹಿಗಳಲ್ಲೂ ನಟಿಸಿದ್ದರು. ಹಲವಾರು ಸೀರಿಯಲ್​ಗಳಿಗೂ ಧ್ವನಿ ನೀಡಿದ್ದಾರೆ.

ಆರಂಭದಲ್ಲಿ ಪ್ರದೀಪ್​ ಅವರದ್ದೇ ದನಿ ಬಿಗ್​ಬಾಸ್​ನದ್ದು ಎಂದು ಯಾರಿಗೂ ತಿಳಿದಿರಲಿಲ್ಲ. ಆದರೆ, ಒಮ್ಮೆ ಯಾರೋ ವೈರಲ್ ಸೋಷಿಯಲ್​ ಮೀಡಿಯಾದಲ್ಲಿ ಇವರ ಫೋಟೋಗಳನ್ನು ಹಂಚಿ ಬಿಗ್ ಬಾಸ್​ಗೆ ಧ್ವನಿ ನೀಡುತ್ತಿರುವುದು ಇವರೇ ಎಂದು ಹೇಳಿದರು. ಅದು ಸಾಕಷ್ಟು ವೈರಲ್ ಆಯಿತು. ಹಲವು ಸಂದರ್ಶನಗಳೂ ನಡೆದವು. ಇದೀಗ ರಾಪಿಡ್‌ ರಶ್ಮಿ ಅವರ ಯೂಟ್ಯೂಬ್ ಚಾನೆಲ್‌ಗೆ ಬಡೆಕ್ಕಿಲ ಪ್ರದೀಪ್ ಸಂದರ್ಶನ ಕೊಟ್ಟಿದ್ದು, ಬಿಗ್ ಬಾಸ್‌ ಧ್ವನಿಯ ಅಸಲಿಯತ್ತಿನ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕನ್ನಡದಲ್ಲಿ ಬಿಗ್ ಬಾಸ್‌ ಲಾಂಚ್‌ ಆಗುವ ಸಮಯದಲ್ಲಿ ‘ನಮಗೆ ವಾಯ್ಸ್ ಬೇಕು’ ಅಂತ ನನಗೆ ಹೇಳಿದರು. ಬಿಗ್ ಬಾಸ್‌ನಲ್ಲಿ ಎರಡು ವಾಯ್ಸ್ ಇದೆ - ಒಂದು ಕಮಾಂಡಿಂಗ್ ವಾಯ್ಸ್, ಇನ್ನೊಂದು ನರೇಟರ್‌ ವಾಯ್ಸ್. ನನಗೆ ಗೊತ್ತಿರುವ ಕೆಲವು ವಾಯ್ಸ್ ಆರ್ಟಿಸ್ಟ್‌ಗಳನ್ನ ಸಜೆಸ್ಟ್ ಮಾಡಿದೆ. ಅದರಲ್ಲಿ ಒಬ್ಬರು ಕಮಾಂಡಿಂಗ್ ವಾಯ್ಸ್‌ಗೆ ಸೆಲೆಕ್ಟ್ ಆದರು. ಒಳಗೆ ಇರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಆಗಿ ಕಮಾಂಡ್ ಮಾಡೋದು ಅವರೇ.! ‘ಇದು ಬಿಗ್ ಬಾಸ್‌..’ ಎಂದು ಕಮಾಂಡ್ಸ್ ಕೊಡ್ತಾರಲ್ವಾ.. ಅದು ಅವರು ನಾನಲ್ಲ ಎಂದು ಹೇಳಿದ್ದಾರೆ.

Bhagya Lakshmi Serial: ಸೇಡಿಗೆ ಸೇಡು: ಕನ್ನಿಕಾ ಆಫೀಸ್ಗೆ ಕೈ ತುತ್ತು ತೆಗೆದುಕೊಂಡು ಹೋಗ ಭಾಗ್ಯ ಟೀಮ್

ಮೊದಲ ಸೀಸನ್​ನಿಂದ ಕೂಡ ನಾನು ನರೇಟರ್‌ ವಾಯ್ಸ್ ಆಗಿ ಕೆಲಸ ಮಾಡುತ್ತಿದ್ದೇನಷ್ಟೆ. ಸೀಸನ್‌ 2 ಮಾತ್ರ ಬೇರೆ ಚಾನೆಲ್‌ಗೆ ಹೋಯ್ತು. ಅದನ್ನ ನಾನು ಮಾಡಿಲ್ಲ. ಜನರಿಗೆ ಈ ವ್ಯತ್ಯಾಸ ಗೊತ್ತಿಲ್ಲದ ಕಾರಣ ಕನ್‌ಫ್ಯೂಸ್ ಆಗಿದೆ. ನಾನಾಗೇ ಎಲ್ಲೂ ಕೂಡ ಇದರ ಬಗ್ಗೆ ಹೇಳಿಲ್ಲ. ನರೇಟರ್‌ ವಾಯ್ಸ್ ಅಂದ್ರೆ, ‘ದಿನ 21.. ಸಮಯ 6.30.. ಇಲ್ಲಿ ಇವರು, ಅವರ ಬಗ್ಗೆ ಮಾತಾಡ್ತಾ ಇದ್ದಾರೆ’ ಅಂತ ವಾಯ್ಸ್ ಬರುತ್ತಲ್ವಾ.. ಅದು ನನ್ನದು. ಎಡಿಟಿಂಗ್ ಸಂದರ್ಭದಲ್ಲಿ ಎಲ್ಲೆಲ್ಲಿ ಅವಶ್ಯಕತೆ ಇದೆಯೋ ಅದಕ್ಕೆ ನಾನು ವಾಯ್ಸ್ ಕೊಡ್ತೀನಿ. ಪ್ರೋಮೋಗಳಿಗೆ ಸ್ಕ್ರಿಪ್ಟ್ ಕಳಿಸ್ತಾರೆ. ಅದಕ್ಕೆ ತಕ್ಕಂತೆ ವಾಯ್ಸ್ ಕೊಡ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.