ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: 24 ದಾಳಿ, 9 ಉಗ್ರರ ನೆಲೆ, 25 ನಿಮಿಷ, 70 ಸಾವು ; ʼಆಪರೇಷನ್‌ ಸಿಂಧೂರ್‌ʼ ರಣರೋಚಕ ಕಥನ

ಏ. 22 ರಂದು ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಭಾರತ ಸರಿಯಾಗಿ ಶಾಸ್ತಿಯನ್ನು ಮಾಡಿದೆ. ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ. ಕೇವಲ 25 ನಿಮಿಷಗಳಲ್ಲಿ 24 ಕ್ಷಿಪಣಿಗಳನ್ನು ಹಾರಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿದ್ದವರನ್ನು ಕೊಲ್ಲಲಾಗಿದೆ.

ʼಆಪರೇಷನ್‌ ಸಿಂಧೂರ್‌ʼ ರಣರೋಚಕ ಕಥನ  ಹೇಗಿತ್ತು ಗೊತ್ತಾ?

Profile Vishakha Bhat May 7, 2025 1:11 PM

ನವದೆಹಲಿ: ಏ. 22 ರಂದು ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಭಾರತ ಸರಿಯಾಗಿ ಶಾಸ್ತಿಯನ್ನು ಮಾಡಿದೆ. ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ (Operation Sindoor) ನಡೆಸಲಾಗಿದೆ. ಕೇವಲ 25 ನಿಮಿಷಗಳಲ್ಲಿ 24 ಕ್ಷಿಪಣಿಗಳನ್ನು ಹಾರಿಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿದ್ದವರನ್ನು ಕೊಲ್ಲಲಾಗಿದೆ. ಮೇ 7 ರಂದು ಬೆಳಿಗ್ಗೆ 1:05 ರಿಂದ ಬೆಳಿಗ್ಗೆ 1:30 ರವರೆಗೆ ನಡೆದ ಈ ದಾಳಿಯನ್ನು ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ್ ಎಂದು ನಾಮಕರಣ ಮಾಡಿದೆ. ದಾಳಿ ನಡೆದ ಆ ರಣ ರೋಚಕ ಕ್ಷಣ ಹೇಗಿತ್ತು? ಉಗ್ರರನ್ನು ಹೊಡೆದುರುಳಿಸಿದ ಸೇನೆ ಹೇಳಿದ್ದೇನು?

ಬೆಳಿಗ್ಗೆ 1:05 ರಿಂದ ಬೆಳಿಗ್ಗೆ 1:30 ರವರೆಗೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ನಡೆಸಲಾಗಿದೆ. ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ , ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕಳೆದ ಮೂರು ದಶಕಗಳಿಂದ, ಪಾಕಿಸ್ತಾನವು ಪಿಒಜೆಕೆ ಮತ್ತು ಪಾಕಿಸ್ತಾನದಾದ್ಯಂತ ನೇಮಕಾತಿ ಕೇಂದ್ರಗಳು, ತರಬೇತಿ ಪ್ರದೇಶಗಳು ಮತ್ತು ಉಡಾವಣಾ ಪ್ಯಾಡ್‌ಗಳನ್ನು ಒಳಗೊಂಡಂತೆ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದೆ. ಭಾರತದ ವಿರುದ್ಧ ಮತ್ತಷ್ಟು ದಾಳಿಗಳು ಸನ್ನಿಹಿತವಾಗಿವೆ ಎಂದು ನಮ್ಮ ಗುಪ್ತಚರ ಇಲಾಖೆ ಸೂಚಿಸಿದೆ. ಹೀಗಾಗಿ ನಮ್ಮ ರಕ್ಷಣೆ ಹಾಗೂ ಭಯೋತ್ಪಾದಕತೆಯನ್ನು ನಿರ್ಮೂಲನೆ ಮಾಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ಸ್ವರಿ, ಭಿಂಬರ್, ನೀಲಂ ಕಣಿವೆ, ಝೇಲಂ ಮತ್ತು ಚಕ್ವಾಲ್‌ನಲ್ಲಿರುವ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, ಈ ಎಲ್ಲಾ ಪ್ರದೇಶಗಳು ಭಯೋತ್ಪಾದಕ ಶಿಬಿರಗಳಿಗೆ ಆಶ್ರಯ ನೀಡುತ್ತಿವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು. ಈ ಸ್ಥಳಗಳು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಅಡಗು ತಾಣಗಳಾಗಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದರು.

ಈ ಸುದ್ದಿಯನ್ನೂ ಓದಿ: Operation Sindoor: 'ರೆಡಿ ಟು ಸ್ಟ್ರೈಕ್' ; ಆಪರೇಷನ್‌ ಸಿಂಧೂರ್‌ಗೂ ಮೊದಲು ಸೇನೆಯಿಂದ ಪೋಸ್ಟ್‌!

ಸರ್ಕಾರದ ಹೇಳಿಕೆಯ ಪ್ರಕಾರ, ಎಲ್ಲಾ ದಾಳಿಗಳು ಯಶಸ್ವಿಯಾಗಿ ನಡೆದಿದೆ. ಕಮಾಂಡ್ ಕೇಂದ್ರಗಳು, ತರಬೇತಿ ಶಿಬಿರಗಳು, ಶಸ್ತ್ರಾಸ್ತ್ರ ಸಂಗ್ರಹ ತಾಣ ಸೇರಿದಂತೆ ಹಲವು ಪ್ರದೇಶಗಳು ನಾಶವಾಗಿವೆ. ಇದಾಗಿಯೂ ಭಾರತೀಯ ಸೇನೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದೆ. ದಾಳಿಯಲ್ಲಿ 70 ಕ್ಕೂ ಅಧಿಕ ಜನರು ಹತರಾಗಿದ್ದರೆ, 60 ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿವೆ.