Operation Sindoor: ಪಾಕ್‌ನ 400 ಡ್ರೋನ್ ಹೊಡೆದುರುಳಿಸಿದ್ದೇವೆ; ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆ ಮಾಹಿತಿ
"36 ಸ್ಥಳಗಳಲ್ಲಿ ಒಳನುಸುಳುವಿಕೆಗೆ ಪ್ರಯತ್ನಿಸಲು ಸುಮಾರು 300 ರಿಂದ 400 ಡ್ರೋನ್‌ಗಳನ್ನು ಬಳಸಲಾಗಿದೆ. ಅದನ್ನು ಯಶಸ್ವಿಯಾಗಿ ತಡೆದಿದ್ದೇವೆ. ಲೇಹ್‌ನಿಂದ ಸಿರ್ ಸೆಕ್ಟರ್‌ವರೆಗೆ ಪಾಕಿಸ್ತಾನಿ ಸೇನೆಯು ಒಳನುಸುಳುವಿಕೆಗಾಗಿ ಡ್ರೋನ್‌ಗಳನ್ನು ಬಳಸಿದೆ ಎಂದು ತಿಳಿದು ಬಂದಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.


ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಗುರುವಾರ ರಾತ್ರಿ ಭಾರತ ಮತ್ತೆ ಪಾಕಿಸ್ತಾನದಿಂದ ಡ್ರೋನ್ ದಾಳಿಯನ್ನು (Operation Sindoor) ವಿಫಲಗೊಳಿಸಿದ ನಂತರ, ವಿದೇಶಾಂಗ ಸಚಿವಾಲಯ ಇಂದು 5. 30 ಕ್ಕೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದೆ. ಪತ್ರಿಕಾ ಗೋಷ್ಠಯಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್, ಕರ್ನಲ್ ಸೋಫಿಯಾ ಖುರೀಷಿ, ಹಾಗೂ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ ಮಿಸ್ರಿ ಮಾಹಿತಿಯನ್ನು ನೀಡಿದ್ದಾರೆ.
ಮೊದಲು ಮಾತನಾಡಿದ ಸೋಫಿಯಾ ಖುರೇಷಿ ಪಾಕಿಸ್ತಾನ ಮೇ 8-9 ಕ್ಕೆ ಭಾರತದ ನಾಗರಿಕ ಹಾಗೂ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿದ್ದತ್ತು. ಅದಕ್ಕೆ ಭಾರತ ಪ್ರತ್ಯುತ್ತರ ನೀಡಿದೆ. ನಮ್ಮ ರಕ್ಷಣೆಗಾಗಿ ಭಾರತ ಪಾಕಿಸ್ತಾನದ 36 ಕಡೆ ದಾಳಿ ನಡೆಸಿದೆ. ಎಲ್‌ಒಸಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಿತ ಗುಂಡಿನ ದಾಳಿ ನಡಸಿದ್ದು, ಭಾರತೀಯ ಸೇನೆಯ ಯೋಧ ಹುತಾತ್ಮರಾಗಿದ್ದಾರೆ ಹಾಗೂ ಹಲವು ಸೈನಿಕರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.
"36 ಸ್ಥಳಗಳಲ್ಲಿ ಒಳನುಸುಳುವಿಕೆಗೆ ಪ್ರಯತ್ನಿಸಲು ಸುಮಾರು 300 ರಿಂದ 400 ಡ್ರೋನ್‌ಗಳನ್ನು ಬಳಸಲಾಗಿದೆ. ಅದನ್ನು ಯಶಸ್ವಿಯಾಗಿ ತಡೆದಿದ್ದೇವೆ. ಲೇಹ್‌ನಿಂದ ಸಿರ್ ಸೆಕ್ಟರ್‌ವರೆಗೆ ಪಾಕಿಸ್ತಾನಿ ಸೇನೆಯು ಒಳನುಸುಳುವಿಕೆಗಾಗಿ ಡ್ರೋನ್‌ಗಳನ್ನು ಬಳಸಿದೆ" ಎಂದು ಕರ್ನಲ್ ಖುರೇಷಿ ಹೇಳಿದ್ದಾರೆ. ಮೇ 8 ರಂದು ಭಾರತವನ್ನು ಗುರಿಯಾಗಿಸಲು ಪಾಕಿಸ್ತಾನ ಟರ್ಕಿಯ ಆಸಿಸ್‌ಗಾರ್ಡ್ ಸೊಂಗಾರ್ ಡ್ರೋನ್ ಅನ್ನು ಬಳಸಿದೆ ಎಂದು ವಿಂಗ್ ಕಮಾಂಡರ್ ವ್ಯೋಮಿಯಾಕ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನಿ ಸೇನೆ ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಶೆಲ್ ದಾಳಿ ನಡೆಸುತ್ತಿದೆ. ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾತನಾಡಿ, ಪಾಕಿಸ್ತಾನ ನಮ್ಮ ಧಾರ್ಮಿಕ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿದೆ. ಅದಕ್ಕೆ ಸಾಕ್ಷಿಯಾಗಿ ಗುರುದ್ವಾರದ ಬಳಿ ಪುರಾವೆ ಲಭಿಸಿದೆ. ಪಾಕಿಸ್ತಾನದಿಂದ ಪೂಂಚ್‌ನ ಶಾಲೆಗಳ ಮೇಲೆ ಶೆಲ್ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಭಾರತಕ್ಕೆ ಪಾಕಿಸ್ತಾನ ಜವಾಬ್ದಾರಿಯುತ ಉತ್ತರ ನೀಡಿದೆ ಎಂದರು.
ಈ ಸುದ್ದಿಯನ್ನೂ ಓದಿ: BLA Attack: ಪಾಕಿಸ್ತಾನದ ಆರು ಕಡೆ BLA ದಾಳಿ; ಪಾಕ್ ಧ್ವಜ ಹರಿದು, ಬಲೂಚ್ ಧ್ವಜ ಏರಿಸಿದ ಬಂಡುಕೋರರು
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ತಾರ್‌ಪುರ ಕಾರಿಡಾರ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.