Ishari Ganesh Daughter's Wedding: ತಮಿಳು ನಿರ್ಮಾಪಕ ಇಶಾರಿ ಗಣೇಶ್ ಪುತ್ರಿ ವಿವಾಹ ಸಂಭ್ರಮ: ರಜನೀಕಾಂತ್- ಕಮಲ್ ಹಾಸನ್ ಭಾಗಿ
ತಮಿಳು ಚಿತ್ರರಂಗದಲ್ಲಿ ಬ್ಯುಸಿ ನಿರ್ಮಾಪಕರಲ್ಲಿ ಇಶಾರಿ ಗಣೇಶ್ ಕೂಡ ಒಬ್ಬರು. ವೆಲ್ಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಟೆಕ್ನಾಲಜಿ & ಅಡ್ವಾನ್ಸ್ಡ್ ಸ್ಟಡೀಸ್ನ ಸಂಸ್ಥಾಪಕ ಇಶಾರಿ ಕೆ.ಗಣೇಶ್ ಅವರ ಪುತ್ರಿ ಪ್ರೀತಾ ಗಣೇಶ್ ವಿವಾಹ ಚೆನ್ನೈನಲ್ಲಿ ನಡೆಯಿತು. ಇಶಾರಿ ಗಣೇಶ್ ಅವರಿಗೆ ಒಬ್ಬಳೇ ಮಗಳಾಗಿದ್ದರಿಂದ ಆಕೆಯ ಮದುವೆಯನ್ನು ಅದ್ಧೂರಿಯಾಗಿ ನಡೆಸಲಾಯಿತು. ಕಾಲಿವುಡ್ನ ವಿವಿಧ ತಾರೆಯರು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.

Ishari Ganesh's daughter's wedding


ಶುಕ್ರವಾರ (ಮೇ 9) ಚೆನ್ನೈನಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಇಶಾರಿ ಗಣೇಶ್ ಅವರ ಪುತ್ರಿ ಪ್ರೀತ ಗಣೇಶ್ ಅವರು ಲುಶ್ವಿನ್ ಕುಮಾರ್ ಅವರ ಜತೆ ಮದುವೆಯಾಗಿದ್ದು, ಈ ಸಮಾರಂಭಕ್ಕೆ ತಮಿಳು ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಹಲವಾರು ಕಾಲಿವುಡ್ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗವಹಿಸಿ, ದಂಪತಿಯನ್ನು ಆಶೀರ್ವದಿಸಿ ದರು. ಸಂಗೀತ್ ಮತ್ತು ಮದುವೆ ಕಾರ್ಯಕ್ರಮದದಲ್ಲಿ ಸೆಲೆಬ್ರಿಟಿಗಳು ಕಂಗೊಳಿಸಿದ್ದಾರೆ. ಮದುವೆಗೆ ಸೆಲೆಬ್ರಿಟಿಗಳು ಸಾಂಪ್ರದಾಯಿಕ ಶೈಲಿಯಲ್ಲಿ ಹಾಜರಾಗಿರುವ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇಶಾರಿ ಗಣೇಶ್ ಅವರ ಪುತ್ರಿಯ ಸಂಗೀತ್ ಕಾರ್ಯಕ್ರಮವು ಕೂಡ ಬಹಳ ಅದ್ಧೂರಿಯಾಗಿ ನೆರವೇರಿದೆ. ಪ್ರೀತಾ ಮತ್ತು ಲುಶ್ವಿನ್ ಸಂಗೀತ ಕಾರ್ಯಕ್ರಮದಲ್ಲಿ ನಟ ಸೂರ್ಯ ಭಾಗವಹಿಸಿ, ಹೂಗುಚ್ಛವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಮದುವೆಗೆ ಸೆಲೆಬ್ರಿಟಿಗಳ ಸಂಗಮವಾಗಿದ್ದು ಈ ಫೋಟೊ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಪ್ರೀತಾ ಮತ್ತು ಲಶ್ವಿನ್ ಅವರ ವಿವಾಹದಲ್ಲಿ ಹಲವಾರು ಕಾಲಿವುಡ್ ತಾರೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಹಾಜರಾಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಕಮಲ್ ಹಾಸನ್, ಸತ್ಯರಾಜ್ ಭಾಗವಹಿಸಿದ್ದರು. ಸಿ. ಸುಂದರ್, ಮಣಿರತ್ನಂ, ಗೌತಮ್ ವಾಸುದೇವ್ ಮೆನನ್ ಮತ್ತು ಇತರ ಚಲನಚಿತ್ರ ನಿರ್ಮಾಪಕರು ವಿವಾಹದಲ್ಲಿ ಭಾಗವಹಿಸಿ, ಕಾರ್ಯಕ್ರಮದ ಮೆರುಗು ಹೆಚ್ಚಿಸಿದ್ದಾರೆ.

ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ರವಿ ಮೋಹನ್ ಅವರು ಕೂಡ ಪ್ರೀತಾ ವಿವಾಹದಲ್ಲಿ ಭಾಗವಹಿಸಿದ್ದರು. ವಿಕ್ರಮ್ ಪ್ರಭು, ಅಧಿಕ್ ರವಿಚಂದ್ರನ್, ಅದಿತಿ ಶಂಕರ್, ವೆಟ್ರಿಮಾರನ್ ಮತ್ತು ಪ್ರಭು ಕೂಡ ಫ್ಯಾಮಿಲಿ ಸಮೇತ ಈ ವಿವಾಹದಲ್ಲಿ ಪಾಲ್ಗೊಂಡಿದ್ದರು.

ಇಶಾರಿ ಗಣೇಶ್ ಅವರು ʼದೇವಿʼ, ʼಕೋಮಾಲಿʼ, ʼಎನೈ ನೋಕಿ ಪಾಯುಮ್ ತೋಟʼ, ʼಕುಟ್ಟಿ ಸ್ಟೋರಿʼ, ʼಮೂಕುತಿ ಅಮ್ಮನ್ʼ, ʼಜೋಶುವಾ ಇಮೈ ಪೋಲ್ ಕಾಖಾʼ ಸೇರಿದಂತೆ ಹಲವು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿ ಮೋಹನ್ ಅಭಿನಯದ ಜಿನೀ ಮತ್ತು ನಯನತಾರಾ ಅಭಿನಯದ ;ಮೂಕುತಿ ಅಮ್ಮನ್ 2ʼ ಸಿನಿಮಾಗಳನ್ನು ಕೂಡ ನಿರ್ಮಿಸುತ್ತಿದ್ದಾರೆ. ಸದ್ಯ ಅವರ ಪುತ್ರಿ ವಿವಾಹದಲ್ಲಿ ತಾರಾಗಣವೇ ಸಂಗಮವಾಗಿದೆ.