MLA C B Suresh Babu: ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನೆ ಬಾಗಿಲಿಗೆ ಬಂದಿದ್ದೇನೆ: ಶಾಸಕ ಸಿ.ಬಿ.ಸುರೇಶ್ ಬಾಬು
ನಮ್ಮ ಕ್ಷೆತ್ರದ ಜನರಿಗಾಗಿ ಅವರ ಸಮಸ್ಯೆಗಳಿಗಾಗಿ ನಡೆಯುತ್ತಿದ್ದು ನಮ್ಮ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಂದ ಪರಿಹಾರವನ್ನು ಕೊಡಿಸುವ ಉದ್ದೇಶಹೊಂದಿದೆ ಎಂದ ಅವರು ಈ ಬಾಗದ ಜನರ ಬೇಡಿಕೆಯಾದ ಬಸ್ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗು ವುದು

ಹಂದನಕೆರೆ ಹೋಬಳಿಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಗಳನ್ನು ಗಳಿಸಿದ ಹುಳಿಯಾರಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿ ದೃವಕುಮಾರ್ ಇವರನ್ನು ಅಭಿನಂದಿಸಲಾಯಿತು.

ಹಂದನಕೆರೆ ಭಾಗಕ್ಕೆ ಗ್ರಾಮೀಣ ಕೆಎಸ್ ಆರ್ ಟಿಸಿ ಬಸ್ ಸೌಲಭ್ಯ ನೀಡುವುದಾಗಿ ಶಾಸಕರ ಭರವಸೆ
ಚಿಕ್ಕನಾಯಕನಹಳ್ಳಿ: ನಿಮ್ಮ ಸಮಸ್ಯೆಗಳ ಪರಿಹಾರಕ್ಕೆಂದೆ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ ನಿಮ್ಮಮನವಿಗಳ ಬಗ್ಗೆ ಅಸಡ್ಡೆ ಮಾಡದೇ ಸಾದ್ಯವಾದಷ್ಟು ಅಧ್ಯತೆಯ ಮೇಲೆ ಪರಿಹಾರ ನೀಡು ವಂತಹ ಕೆಲಸವನ್ನು ಯಾವುದೇ ಜಾತಿ , ಪಕ್ಷ ಬೇದವಿಲ್ಲದೇ ಮಾಡುತ್ತೇನೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ತಾಲ್ಲೂಕಿನ ಹಂದನಕೆರೆ ಹೋಬಳಿಯ ಹಂದನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ವಿನೂತನ ಕಾರ್ಯಕ್ರಮವಾದ ಮನೆಬಾಗಿಲಿಗೆ ಮನೆ ಮಗ ಕಾರ್ಯಕ್ರಮದಡಿಯಲ್ಲಿ ಆಹವಾಲು ಸ್ವೀಕರಿಸಿ ಮಾತನಾಡಿದ ಅವರು ನಿಮ್ಮ ಮನವಿಗಳನ್ನು ಹಂತಹಂತವಾಗಿ ಅದ್ಯತೆಯ ಮೇಲೆ ಪರಿಹರಿಸಲಿದ್ದು ನಿಮ್ಮ ಮನವಿಗಳಿಗೆ ಗೌರವ ನೀಡಿ ಯಾವುದೇ ಕಾರಣಕ್ಕು ಅಸಡ್ಡೆ ಮಾಡುವುದಿಲ್ಲ.
ಈ ಕಾರ್ಯಕ್ರಮವು ನಮ್ಮ ಕ್ಷೆತ್ರದ ಜನರಿಗಾಗಿ ಅವರ ಸಮಸ್ಯೆಗಳಿಗಾಗಿ ನಡೆಯುತ್ತಿದ್ದು ನಮ್ಮ ಕ್ಷೇತ್ರದ ಎಲ್ಲಾ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಂದ ಪರಿಹಾರವನ್ನು ಕೊಡಿಸುವ ಉದ್ದೇಶಹೊಂದಿದೆ ಎಂದ ಅವರು ಈ ಬಾಗದ ಜನರ ಬೇಡಿಕೆಯಾದ ಬಸ್ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು ಎಂದರು.
ತಹಸೀಲ್ದಾರ್ ಪುರಂದರ. ಕೆ ಮಾತನಾಡಿ ಸಾರ್ವಜನಿಕರು ಕಂದಾಯ ಇಲಾಖೆಗೆ ನೀಡಿರುವಂತಹ ಮನವಿಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೆವೆ ಈಗಾಗಲೇ ಶಾಸಕರ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿ ಸಭೆಗಳ ಮೂಲಕ ಸಾಗುವಳಿ ಚೀಟಿ ನೀಡುತ್ತಿದ್ದು ಅವುಗಳ ಖಾತೆಗಳನ್ನು ಮಾಡ ಲಾಗುತ್ತಿದೆ ಇದರೊಂದಿಗೆ ಪೌತಿ ಖಾತೆಗಳನ್ನು ಮಾಡಲಾಗುತ್ತಿದೆ ಹಂದನಕೆರೆ ಹೋಬಳಿಗೆ ಸೇರಿದಂತಹ ಹಳೆಯ ರೆಕಾರ್ಡ್ ಗಳನ್ನು ಹೋಬಳಿ ಕೇಂದ್ರದಲ್ಲೇ ಸಿಗುವಂತೆ ಮಾಡಲಾಗುವುದು ಹಾಗೂ ಆಯಾ ಗ್ರಾಮಾಡಳಿತಾಧಿಕಾರಿಗಳು ಗ್ರಾಮಗಳಲ್ಲೆ ಸಿಗುವಂತಹ ಕೆಲಸವನ್ನು ಮಾಡಲಾಗು ವುದು ಎಂದರು.
ಬಿಇಒ ಕಾಂತರಾಜು ಮಾತನಾಡಿ ಈಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪಲಿತಾಂಶದಲ್ಲಿ ನಮ್ಮ ಎರಡು ಶೈಕ್ಷಣಿಕ ಜಿಲ್ಲೆಗೆ ಚಿಕ್ಕನಾಯಕನಹಳ್ಲಿ ತಾಲ್ಲೂಕು ಮೊದಲ ಸ್ಥಾನ ಪಡೆಯಲು ಶಾಸಕರೇ ಕಾರಣ ಅವರು ನಮ್ಮೊಂದಿಗೆ ಬೆರೆತು ಹೆಚ್ಚು ಪಲಿತಾಂಶ ಬರಲು ಯಾವ ಪ್ರೇರಣಾ ಕಾರ್ಯಕ್ರಮಗಳನ್ನು ಮಾಡಬೇಕು ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವಂತಹ ಕೆಲಸವನ್ನು ಮಾಡಿದ್ದಾರೆ ಇದರೊಂದಿಗೆ ಶಿಕ್ಷಕರು ಹಾಗೂ ವಿದ್ಯಾ ರ್ಥಿಗಳ ಮತ್ತು ಪೋಷಕರ ಸಹಕಾರವು ಇದ್ದು ಈ ಸಾಧನೆಗೆ ಕಾರಣವಾಗಿದೆ ಎಂದ ಅವರು ಸರ್ಕಾರಿ ಶಾಲೆಗಳೆಂದರೆ ಅಸಡ್ಡೆ ಮಾಡುವುದನ್ನು ಬಿಟ್ಟು ಇಂದು ಸರ್ಕಾರಿ ಶಾಲೆಗಳ ಮಕ್ಕಳ ಸಾಧನೆ ಯನ್ನು ನಾವು ಗುರುತಿಸಿ ಅವರನ್ನು ಗೌರವಿಸಬೇಕಿದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್ ಮಾತನಾಡಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ವಿಶಾಲ ವಾದ ತಾಲ್ಲೂಕು ಆಗಿದ್ದು ಮೂರು ಜಿಲ್ಲೆಗಳ ಗಡಿಗಳನ್ನು ಹೊಂದಿದೆ ತಾಲ್ಲೂಕು ಕೇಂದ್ರದಿಂದ ಸುಮಾರು ದೂರ ಇರುವಂತಹ ಗ್ರಾಮಗಳ ಜನರು ಶಾಸಕರನ್ನು ನೋಡವ ಸಲುವಾಗಿ ಹಾಗೂ ತಮ್ಮ ಸಮಸ್ಯೆಗಳಿಗೆ ಆಹವಾಲುಗಳನ್ನು ಸಲ್ಲಿಸಲು ಕೇಂದ್ರಸ್ಥಾನಕ್ಕೆ ಬರಬೇಕಾಗಿತ್ತು ಅದರೆ ಶಾಸಕರು ಇಂತಹ ಕೇಲವು ಸಮಸ್ಯೆಗಳನ್ನು ಮನಗಂಡು ವಿಶೇಷವಾಗಿ ಈ ಮನೆಬಾಗಿಲಿಗೆ ಮನೆ ಮಗ ಎಂಬ ಕಾರ್ಯಕ್ರಮದೊಂದಿಗೆ ನಿಮ್ಮ ಮನೆಗಳ ಬಾಗಿಲಿಗೆ ಬಂದು ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತಹ ಹಾಗೂ ಪರಿಹಾರೋಪಾಯಗಳನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಇಂತಹ ಜನಪಯೋಗಿ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿ ಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಂದನಕೆರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವಮ್ಮ, ಮಾಜಿ ಉಪಾದ್ಯಕ್ಷ ದೀಪ, ಇಒ ದೊಡ್ಡಸಿದ್ದಯ್ಯ, ಇಂಜಿನಿಯರ್ ಇಲಾಖೆಯ ಎಇಇ ಮೋಹನ್ ಕುಮಾರ್, ಲೋಕೊಪಯೋಗಿ ಇಲಾಖೆಯ ಎ ಇಇ ಮಾರುತಿ , ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗ ಭೂಷಣ್ ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮದಡಿಯಲ್ಲಿ ಶುಕ್ರವಾರ ಹಂದನಕೆರೆ ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ಬೇಟಿ ನೀಡಿದ ಶಾಸಕರು ಬೆಳಗ್ಗೆ 9.30ಕ್ಕೆ ಕೆಂಗಾಲಪುರ, ಬೀಮ ನಾಯ್ಕನ ತಾಂಡ್ಯದ ಸೇವಾಲಾಲ್ ದೇವಾಲಯದ ಬಳಿ ಜನರ ಆಹವಾಲುಗಳನ್ನು ಸ್ವೀಕರಿಸುವ ಮೂಲಕ ತಮ್ಮ ಕೆಲಸ ಪ್ರಾರಂಭಿಸಿ ಪುರದಕಟ್ಟೆ, ರಾಮಘಟ್ಟ, ಹಳ್ಳಿ ತಿಮ್ಲಾಪುರ, ಹುಚ್ಚನಹಳ್ಳಿ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಸಮಸ್ಯೆಗಳುನ್ನು ಆಲಿಸಿ ಅಲ್ಲಿನ ಜನರ ಮನವಿ ಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇತ್ಯರ್ಥವಾಗುವಂತಹ ಸಮಸ್ಯೆಗಳನ್ನು ಅಲ್ಲೇ ಬಗೆಹರಿಸಿ ಕೊನೆಯದಾಗಿ ಹೋಬಳಿ ಕೇಂದ್ರವು ಗ್ರಾಮಪಂಚಾಯಿತಿಯ ಕೇಂದ್ರಸ್ಥಾನವಾದ ಹಂದನಕೆರೆ ಯಲ್ಲಿ ಜನರ ಆಹವಾಲು ಗಳನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಹಂದನಕೆರೆ ಹೋಬಳಿಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳನ್ನು ಗಳಿಸಿದ ಹುಳಿಯಾರಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿ ದೃವಕುಮಾರ್ ಇವರನ್ನು ಅಭಿನಂದಿಸಲಾಯಿತು.