ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pahalgam Terror Attack: "ನೀನು ಯಾವತ್ತೂ ನನ್ನೊಂದಿಗೇ ಇರುತ್ತಿಯಾ...." ಪತಿ ಪಾರ್ಥೀವ ಶರೀರದ ಎದುರು ರೋಧಿಸಿದ ಹುತಾತ್ಮ ನೇವಿ ಅಧಿಕಾರಿ ಪತ್ನಿ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಧರ್ಮಾಂದ ಉಗ್ರರು ನಡೆಸಿದ ನರಮೇಧದಲ್ಲಿ 26 ಜನರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ನೌಕಾಪಡೆಯ ಅಧಿಕಾರಿ ವಿನಯ್‌ ನರ್ವಾಲ್‌ ಕೂಡ ಮೃತಪಟ್ಟಿದ್ದಾರೆ. ಆರು ದಿನಗಳ ಹಿಂದೆಯಷ್ಟೇ ಅವರು ವಿವಾಹವಾಗಿದ್ದರು. ಇಂದು ಮುಂಜಾನೆ ವಿನಯ್ ಅವರ ಪಾರ್ಥಿವ ಶರೀರ ದೆಹಲಿಗೆ ತಲುಪುತ್ತಿದ್ದಂತೆ, ಹಿಮಾಂಶಿ ಅವರ ಶವಪೆಟ್ಟಿಗೆಯನ್ನು ಹಿಡಿದು ಗೋಳಾಡಿದ್ದಾರೆ.

ಪತಿ ಪಾರ್ಥೀವ ಶರೀರದ ಎದುರು ರೋಧಿಸಿದ ಹುತಾತ್ಮ ನೇವಿ ಅಧಿಕಾರಿ ಪತ್ನಿ

Profile Vishakha Bhat Apr 23, 2025 5:09 PM

ನವದೆಹಲಿ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಧರ್ಮಾಂದ ಉಗ್ರರು ನಡೆಸಿದ ನರಮೇಧದಲ್ಲಿ 26 ಜನರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ನೌಕಾಪಡೆಯ ಅಧಿಕಾರಿ ವಿನಯ್‌ ನರ್ವಾಲ್‌ ಕೂಡ ಮೃತಪಟ್ಟಿದ್ದಾರೆ. ಆರು ದಿನಗಳ ಹಿಂದೆಯಷ್ಟೇ ಅವರು ವಿವಾಹವಾಗಿದ್ದರು. ಹನಿಮೂನ್‌ಗೆಂದು ಅವರು ತಮ್ಮ ಪತ್ನಿಯ ಜೊತೆ ಕಾಶ್ಮೀರಕ್ಕೆ ತೆರಳಿದ್ದರು. ಪತ್ನಿಯ ಕಣ್ಣೆದುರೇ ಪತಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅವರ ಪಾರ್ಥಿವ ಶರೀರ ಇದೀಗ ದೆಹಲಿ ಬಂದಿದ್ದು, ನರ್ವಾಲ್‌ ಅವರ ಪತ್ನಿ ಪತಿಯ ದೇಹವನ್ನು ಕಂಡು ಗೋಳಾಡಿದ್ದಾರೆ. ಅವರ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಮನಮಿಡಿಯುವಂತಿದೆ.

ಎರಡು ವರ್ಷಗಳ ಹಿಂದೆ ಭಾರತೀಯ ನೌಕಾಪಡೆಯಲ್ಲಿ ನಿಯೋಜನೆಗೊಂಡಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್, ತಮ್ಮ ಪತ್ನಿ ಹಿಮಾಂಶಿ ಜೊತೆ ಹನಿಮೂನ್‌ಗೆ ಹೋಗಿದ್ದಾಗ ಭಯೋತ್ಪಾದಕರಿಂದ ಹತ್ಯೆಗೀಡಾದರು. ಕಳೆದ ವಾರ ಏಪ್ರಿಲ್ 16 ರಂದು ಈ ಜೋಡಿ ವಿವಾಹವಾಗಿದ್ದರು. ಹಿಮಾಂನಿ ಹಾಗೂ ವಿನಯ್‌ ಜೊತೆಯಲ್ಲಿ ಇದ್ದಾಗಲೇ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಇದೀಗ ಅಂತಿಮ ಸಂಸ್ಕಾರಕ್ಕಾಗಿ ವಿನಯ್‌ ಅವರ ದೇಹವನ್ನು ದೆಹಲಿಗೆ ತರಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರನ್ನು ಕಳುಹಿಸಿಕೊಡಲಾಗುವುದು.



ಇಂದು ಮುಂಜಾನೆ ವಿನಯ್ ಅವರ ಪಾರ್ಥಿವ ಶರೀರ ದೆಹಲಿಗೆ ತಲುಪುತ್ತಿದ್ದಂತೆ, ಹಿಮಾಂಶಿ ಅವರ ಶವಪೆಟ್ಟಿಗೆಯನ್ನು ಹಿಡಿದು ಗೋಳಾಡಿದ್ದಾರೆ. ನಾವು ಪ್ರತಿದಿನ ಅವರ ಬಗ್ಗೆ ಹೆಮ್ಮೆ ಪಡುತ್ತೇವೆ... ನಾವು ಅವರ ಬಗ್ಗೆ ಹೆಮ್ಮೆ ಪಡಬೇಕು ಎಂದು ಕಣ್ಣೀರಾಕುತ್ತಾ ಹೇಳಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅವರು ಎಲ್ಲೇ ಇದ್ದರೂ ಅವರಿಗೆ ಅತ್ಯುತ್ತಮ ಜೀವನವಿದೆ, ಮತ್ತು ನಾವು ಅವರನ್ನು ಎಲ್ಲ ರೀತಿಯಲ್ಲೂ ಹೆಮ್ಮೆಪಡುವಂತೆ ಮಾಡುತ್ತೇವೆ. ಅವರ ಕಾರಣದಿಂದಾಗಿ ನಾವು ಇನ್ನೂ ಬದುಕುಳಿದಿದ್ದೇವೆ ಎಂದು ಹಿಮಾಂಶಿ ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Pahalgam Terror Attack: ದಾಳಿ ನಡೆದ ಪಹಲ್ಗಾಮ್‌ನ ಬೈಸರನ್ ಕಣಿವೆ ಹೇಗಿದೆ ಗೊತ್ತಾ? ಕಾರ್ಯಾಚರಣೆಗೆ ಎದುರಾಗುವ ಸವಾಲೇನು?

ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದ 26 ವರ್ಷದ ವಿನಯ್ ಅವರ ಮೃತದೇಹವನ್ನು ಸಂಜೆ ತಡವಾಗಿ ಅವರ ಹುಟ್ಟೂರಿಗೆ ತರಲಾಗುವುದು ಮತ್ತು ನಾಳೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿನಯ್ ನರ್ವಾಲ್ ಅವರ ಅಜ್ಜನಿಗೆ ವಿಡಿಯೋ ಕರೆ ಮಾಡಿ, ಧೈರ್ಯ ತುಂಬಿದ್ದಾರೆ. ಇಂದು ನಾನು ನನ್ನ ಮೊಮ್ಮಗನನ್ನು ಕಳೆದುಕೊಂಡಿದ್ದೇನೆ, ನಾಳೆ ಬೇರೊಬ್ಬರು ಆಗಬಹುದು" ಎಂದು ವಿನಯ್‌ ಅಜ್ಜ ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತಾ ಹೇಳಿದರು. ಕರ್ನಾಲ್ ಜಿಲ್ಲೆಯ ಘರೌಂಡದ ಬಿಜೆಪಿ ಶಾಸಕರೂ ಆಗಿರುವ ಹರಿಯಾಣ ವಿಧಾನಸಭಾ ಸ್ಪೀಕರ್ ಹರ್ವಿಂದರ್ ಕಲ್ಯಾಣ್ ಕೂಡ ದುಃಖಿತ ಕುಟುಂಬದೊಂದಿಗೆ ಇರಲು ಕರ್ನಾಲ್ ನಗರಕ್ಕೆ ಆಗಮಿಸಿದ್ದಾರೆ.