ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಉಗ್ರರ 9 ನೆಲೆಗಳು ಉಡೀಸ್‌; ಧ್ವಂಸಗೊಂಡ ಜೈಶ್ ಪ್ರಧಾನ ಕಚೇರಿಯ ವಿಡಿಯೋ ವೈರಲ್‌

ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕವಾಗಿ ಭಾರತ ಆಪರೇಷನ್‌ ಸಿಂಧೂರದ ಮೂಲಕ ವೈಮಾನಿಕ ದಾಳಿ ನಡೆಸಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ.

ಧ್ವಂಸಗೊಂಡ ಜೈಶ್ ಪ್ರಧಾನ ಕಚೇರಿಯ ವಿಡಿಯೋ ವೈರಲ್‌

Profile Vishakha Bhat May 7, 2025 12:21 PM

ಇಸ್ಲಾಮಾಬಾದ್:‌ ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತೀಕವಾಗಿ ಭಾರತ ಆಪರೇಷನ್‌ ಸಿಂಧೂರದ (Operation Sindoor) ಮೂಲಕ ವೈಮಾನಿಕ ದಾಳಿ ನಡೆಸಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ), ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದೆ. ಜೆಇಎಂನ ಪ್ರಬಲ ಕೋಟೆಯಾದ ಬಹವಾಲ್ಪುರ್ ಮತ್ತು ಮುರಿಡ್ಕೆಯಲ್ಲಿ ಎರಡು ದೊಡ್ಡ ದಾಳಿಗಳನ್ನು ನಡೆಸಲಾಗಿದ್ದು, ಪ್ರತಿ ಸ್ಥಳದಲ್ಲಿ ಅಂದಾಜು 25–30 ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಬಹಾವಲ್ಪುರದ ಜೈಶ್ ಉಗ್ರರ ನೆಲೆಯನ್ನು ಧ್ವಂಸ ಮಾಡಿದ ವಿಡಿಯೋ ವೈರಲ್‌ ಆಗಿದೆ. ವಿಡಿಯೋದಲ್ಲಿ ಮಸೀದಿಯ ಸುತ್ತಲೂ ಅವಶೇಷಗಳ ರಾಶಿ ಮತ್ತು ಅದರ ಛಾವಣಿಯಲ್ಲಿ ರಂಧ್ರವನ್ನು ತೋರಿಸಿದೆ. ಲಾಹೋರ್‌ನಿಂದ 400 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಪಾಕಿಸ್ತಾನದ 12 ನೇ ಅತಿದೊಡ್ಡ ನಗರವಾಗಿದೆ. . ಸುಭಾನ್ ಅಲ್ಲಾ ಕ್ಯಾಂಪಸ್ 18 ಎಕರೆಗಳಲ್ಲಿ ಹರಡಿಕೊಂಡಿದೆ ಮತ್ತು ಇದನ್ನು ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯುತ್ತಾರೆ, ಇದು ಜೆಇಎಂನ ನೇಮಕಾತಿ, ನಿಧಿಸಂಗ್ರಹಣೆ ಮತ್ತು ಬೋಧನೆಗಾಗಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು.



ಈ ಸುದ್ದಿಯನ್ನೂ ಓದಿ: Operation Sindoor: 'ರೆಡಿ ಟು ಸ್ಟ್ರೈಕ್' ; ಆಪರೇಷನ್‌ ಸಿಂಧೂರ್‌ಗೂ ಮೊದಲು ಸೇನೆಯಿಂದ ಪೋಸ್ಟ್‌!

ಈ ಮಸೀದಿಗೆ ಜೆಇಎಂನ ಮುಖ್ಯ ಸಂಘಟನೆಯಾದ ಅಲ್-ರಹಮತ್ ಟ್ರಸ್ಟ್ ಮೂಲಕ ಹಣಕಾಸು ಒದಗಿಸಲಾಯಿತು. ಇದು 2011 ರವರೆಗೆ ಮೂಲ ರಚನೆಯಾಗಿಯೇ ಇತ್ತು ಆದರೆ 2012 ರ ಹೊತ್ತಿಗೆ ಉಗ್ರರ ತರಬೇತಿ ಕೇಂದ್ರವಾಗಿ ಮಾರ್ಪಾಡು ಮಾಡಲಾಯಿತು. 2001 ರ ಸಂಸತ್ತಿನ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತೀಯ ನೆಲದಲ್ಲಿ ನಡೆದ ಹಲವಾರು ಮಾರಕ ದಾಳಿಗಳ ಹಿಂದೆ ಜೆಇಎಂ ಕೈವಾಡವಿದೆ. ಇದನ್ನು ಮೌಲಾನಾ ಮಸೂದ್ ಅಜರ್ ಸ್ಥಾಪಿಸಿದ್ದ. ಇದೀಗ ಲಷ್ಕರ್-ಎ-ತೈಬಾ (ಎಲ್‌ಇಟಿ), ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಎಂಬ ಮೂರು ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಭಾರತ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿದೆ.