Operation Sindoor; 12 ಭಯೋತ್ಪಾದಕರ ಹೊಡೆದುರುಳಿಸಿದ ಭಾರತ
ಕೇಂದ್ರ ಸರ್ಕಾರವು ಸಂಭಾವ್ಯ ಯುದ್ಧ ಸನ್ನಿವೇಶಕ್ಕೆ ಸಿದ್ಧತೆಗಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 7ರಂದು ರಾಷ್ಟ್ರವ್ಯಾಪಿ ಪೂರ್ಣ ಪ್ರಮಾಣದ ಮಾಕ್ ಡ್ರಿಲ್ (Mock Drill) ನಡೆಸಲು ಆದೇಶಿಸಿತ್ತು. ಆದರೆ ಇದಕ್ಕೂ ಮುನ್ನವೇ ಭಾರತ ಪಾಕ್ ಮೇಲೆ ಯುದ್ಧ ಮಾಡಿದೆ.


ನವದೆಹಲಿ: ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿ ನಡೆಸಿದ್ದು ಸದ್ಯ 12 ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ದಾಳಿಯಲ್ಲಿ55ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಎಂದು ತಿಳಿದುಬಂದಿದೆ. ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿದ್ದ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ನೆಲೆಗಳ ಮೇಲೆ ಭಾರತ ತಡ ರಾತ್ರಿ 'ಆಪರೇಷನ್ ಸಿಂಧೂರ್'(Operation Sindoor) ಎಂಬ ಹೆಸರಿನಲ್ಲಿ ಒಟ್ಟು ಒಂಬತ್ತು ಸ್ಥಳಗಳನ್ನು ಗುರಿಯಾಗಿರಿಸಿ ದಾಳಿ ಮಾಡಿದೆ.
ಭಾರತದ ವಿವಿಧ ಸ್ಥಳಗಳ ಮೇಲೆ ಆಂತರಿಕ ಭದ್ರತಾ ಪಡೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಕೊಟ್ಪಿ, ಮುಜಾಫರ್‌ಬಾದ್, ಬಹವಲ್ಪುರ್ ಬಳಿ ಏರ್‌ಸ್ಟ್ರೈಕ್ ನಡೆದಿದೆ.
ಕೇಂದ್ರ ಸರ್ಕಾರವು ಸಂಭಾವ್ಯ ಯುದ್ಧ ಸನ್ನಿವೇಶಕ್ಕೆ ಸಿದ್ಧತೆಗಾಗಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 7ರಂದು ರಾಷ್ಟ್ರವ್ಯಾಪಿ ಪೂರ್ಣ ಪ್ರಮಾಣದ ಮಾಕ್ ಡ್ರಿಲ್ (Mock Drill) ನಡೆಸಲು ಆದೇಶಿಸಿತ್ತು. ಆದರೆ ಇದಕ್ಕೂ ಮುನ್ನವೇ ಭಾರತ ಪಾಕ್ ಮೇಲೆ ಯುದ್ಧ ಮಾಡಿದೆ.
ಬುಧವಾರ ಬೆಳಗಿನ ಜಾವ ನಡೆಸಿದ ಕಾರ್ಯಾಚರಣೆಯಲ್ಲಿ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ ಒಂಬತ್ತು ಭಯೋತ್ಪಾದಕ ತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು, ಇದರಲ್ಲಿ ಜೈಶ್-ಎ-ಮೊಹಮ್ಮದ್ ಗುಂಪಿನ ಕೇಂದ್ರವಾದ ಬಹವಾಲ್ಪುರ್ ಸೇರಿದೆ. 'ಆಪರೇಷನ್ ಸಿಂಧೂರ್' ಅಡಿಯಲ್ಲಿ ನಡೆಸಲಾದ ದಾಳಿಗಳನ್ನು ಭಾರತೀಯ ಸೇನೆಯು ಬೆಳಗಿನ ಜಾವ 1.44 ಘೋಷಿಸಿತು.
Celebration and warm welcome for retaliation of indian army by Punekars at midnight ..🔥🔥🔥#pune #operationsindoor pic.twitter.com/vwYrc5QvnP
— Bhagwat (@Bhagwat4111995) May 6, 2025
ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿಲ್ಲ. ಉಗ್ರರ ದಾಳಿಗೆ ಕಾರಣರಾದವರನ್ನು ಗುರಿಯಾಗಿರಿಸಿ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.