ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೌಂಟಿ ಪಂದ್ಯದ ವೇಳೆ ಬ್ಯಾಟ್ಸ್‌ಮನ್‌ ಜೇಬಿನಿಂದ ಬಿದ್ದ ಮೊಬೈಲ್‌! ನಿಯಮ ಏನು ಹೇಳುತ್ತೆ?

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಲಂಕಾಶೈರ್‌ ಬ್ಯಾಟ್ಸ್‌ಮನ್ ಟಾಮ್ ಬೈಲಿ ರನ್‌ ಓಡುವಾಗ ತಮ್ಮ ಫೋನ್ ಅನ್ನು ಬೀಳಿಸಿಕೊಂಡರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಂದ ಹಾಗೆ ಆಟಗಾರ ಪಂದ್ಯದಲ್ಲಿ ಮೊಬೈಲ್‌ ತೆಗೆದುಕೊಂಡು ಹೋಗಬಹುದಾ? ಎಂಬ ಬಗ್ಗೆ ಐಸಿಸಿ ನಿಯಮಗಳನ್ನು ಇಲ್ಲಿ ವಿವರಿಸಲಾಗಿದೆ.

ಕೌಂಟಿ ಪಂದ್ಯದ ವೇಳೆ ಬ್ಯಾಟ್ಸ್‌ಮನ್‌ ಜೇಬಿನಿಂದ ಬಿದ್ದ ಮೊಬೈಲ್‌!

ರನ್‌ ಓಡುವ ವೇಳೆ ಮೊಬೈಲ್‌ ಬೀಳಿಸಿಕೊಂಡ ಬ್ಯಾಟ್ಸ್‌ಮನ್‌ ಟಾಮ್‌ ಬೈಲಿ.

Profile Ramesh Kote May 6, 2025 11:04 PM

ಮ್ಯಾಂಚೆಸ್ಟರ್‌: ಕೌಂಟಿ ಚಾಂಪಿಯನ್‌ಶಿಪ್ (County Championship) ಪಂದ್ಯದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸುವ ಒಂದು ಘಟನೆ ನಡೆಯಿತು. ಇಂಗ್ಲೆಂಡ್ ಕ್ರಿಕೆಟಿಗ ಟಾಮ್ ಬೈಲಿ ( Tom Bailey) ಬ್ಯಾಟ್‌ ಮಾಡುವಾಗ ರನ್ ತೆಗೆದುಕೊಳ್ಳಲು ಓಡಿಹೋದಾಗ ಅವರ ಫೋನ್ ಜೇಬಿನಿಂದ ಬಿದ್ದಿತು. ಲಂಕಾಶೈರ್‌ ( Lancashire) ಮತ್ತು ಗ್ಲೌಸೆಸ್ಟರ್‌ಶೈರ್ (Gloucestershire) ನಡುವಿನ ಕೌಂಟಿ ಚಾಂಪಿಯನ್‌ಶಿಪ್ ಎರಡನೇ ಡಿವಿಷನ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಮೇ 2 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಇದನ್ನು ನೋಡಿದ ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯೆಂದರೆ, ಒಬ್ಬ ಬ್ಯಾಟ್ಸ್‌ಮನ್ ಫೋನ್ ಹಿಡಿದುಕೊಂಡು ಮೈದಾನಕ್ಕೆ ಹೋಗಲು ಸಾಧ್ಯವೇ ಎಂಬುದು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಈ ಪಂದ್ಯದಲ್ಲಿ ಟಾಸ್‌ ಗೆದ್ದ ಲಂಕಾಶೈರ್ ತಂಡದ ನಾಯಕ ಕೀಟನ್ ಜೆನಿಂಗ್ಸ್ ಮೊದಲು ಬ್ಯಾಟಿಂಗ್ ನಿರ್ಧರಿಸಿದರು. ಬೈಲಿ 10ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದಿದ್ದರು. ಈ ಪಂದ್ಯಕ್ಕೆ ಸಂಬಂಧಿಸಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರಲ್ಲಿ ಲಂಕಾಶೈರ್‌ ಬೈಲಿ ಕ್ರೀಸ್‌ನಲ್ಲಿ ರನ್ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾಗ ಅವರ ಫೋನ್ ಅವರ ಜೇಬಿನಿಂದ ಬಿದ್ದಿತು. 34ರ ವಯಸ್ಸಿನ ಬ್ಯಾಟ್ಸ್‌ಮನ್ 22 ರನ್‌ಗಳೊಂದಿಗೆ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದರು. ಇವರ ತಂಡ 450 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು.

IPL 2025: ವಿರಾಟ್‌ ಕೊಹ್ಲಿಯ ಸ್ಟ್ರೈಕ್‌ ರೇಟ್‌ ಕಡಿಮೆ ಎಂದವರಿಗೆ ಎಬಿಡಿ ತಿರುಗೇಟು!

ಗ್ಲೌಸೆಸ್ಟರ್‌ಶೈರ್ ಬೌಲರ್ ಜಾಶ್‌ ಶಾ, ಬೈಲಿಯ ಜೇಬಿನಿಂದ ಬಿದ್ದ ಮೊಬೈಲ್ ಫೋನ್ ಅನ್ನು ಎತ್ತಿಕೊಂಡು ಅವರಿಗೆ ಹಿಂತಿರುಗಿಸಿದರು. ಇದನ್ನು ನೋಡಿದ ನಂತರ, ಕಾಮೆಂಟರಿ ಬಾಕ್ಸ್‌ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಮೂಡಿ ಬಂದವು. ಒಬ್ಬರು ನಗುತ್ತಾ "ಅವರ ಜೇಬಿನಿಂದ ಏನೋ ಬಿದ್ದಿದೆ. ಅದು ಅವರ ಮೊಬೈಲ್ ಫೋನ್ ಅಂತ ನನಗೆ ಅನಿಸುತ್ತಿದೆ!" ಎಂದರು.

ಮತ್ತೊಬ್ಬ ಕಾಮೆಂಟೇಟರ್‌ ಮಾತನಾಡಿ, "ಮಾಡಲು ಸಾಧ್ಯವಿಲ್ಲ!" ಮತ್ತೊಬ್ಬರು, "ಇದು ತಮಾಷೆಯಾಗಿ ಕಾಣಿಸಬಹುದು ಮತ್ತು ನಾವು ಅದನ್ನು ನೋಡಿ ನಗುತ್ತಿದ್ದೇವೆ ಆದರೆ ಅದನ್ನು ವರದಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಅವರು ಮೊಬೈಲ್ ಫೋನ್‌ನೊಂದಿಗೆ ಮೈದಾನದಲ್ಲಿದ್ದರು ಎಂದು ಎಲ್ಲರೂ ನೋಡಬಹುದು," ಎಂದು ಉತ್ತರಿಸಿದರು.



ಐಸಿಸಿ ನಿಯಮಗಳು ಏನು ಹೇಳುತ್ತವೆ?

ಬೈಲಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕವು ಇಂತಹ ಘಟನೆಗಳ ಮೇಲೆ ನಿಗಾ ಇಡುತ್ತದೆ. ದೇಶಿ ಅಥವಾ ಅಂತಾರಾಷ್ಟ್ರೀಯ ಪಂದ್ಯವಾಗಿರಲಿ, ನಿಯಮಗಳು ತುಂಬಾ ಕಟ್ಟುನಿಟ್ಟಾಗಿವೆ. ಪಂದ್ಯದ ಸಮಯದಲ್ಲಿ ಸಂವಹನಕ್ಕೆ ಅನುಕೂಲವಾಗುವ ಯಾವುದೇ ಉಪಕರಣವನ್ನು ಯಾವುದೇ ಆಟಗಾರನು ಕೊಂಡೊಯ್ಯಲು ಅನುಮತಿ ಇಲ್ಲ. ಐಸಿಸಿ ನಿಯಮಗಳ ಪ್ರಕಾರ, ಪಂದ್ಯ ಮುಗಿಯುವವರೆಗೆ ಆಟಗಾರರು ಡ್ರೆಸ್ಸಿಂಗ್ ಕೋಣೆಗೆ ಅಥವಾ ಮೈದಾನಕ್ಕೆ ಫೋನ್‌ಗಳನ್ನು ತರಲು ಅವಕಾಶವಿಲ್ಲ. ತಂಡವು ಬಸ್ಸಿನಿಂದ ಇಳಿದ ತಕ್ಷಣ ಅದನ್ನು ಸಂಬಂಧಿತ ಸಿಬ್ಬಂದಿಗೆ ಒಪ್ಪಿಸಬೇಕು. ಸ್ಪಾಟ್ ಮತ್ತು ಮ್ಯಾಚ್ ಫಿಕ್ಸಿಂಗ್‌ನಿಂದಾಗಿ ಆಟಕ್ಕೆ ಉಂಟಾದ ಹಾನಿಯಿಂದಾಗಿ ಕಳೆದ ಕೆಲವು ವರ್ಷಗಳಿಂದ ಈ ನಿಯಮಗಳನ್ನು ಬಿಗಿಗೊಳಿಸಲಾಗಿದೆ.

IPL 2025: ಭಾರತ, ಆರ್‌ಸಿಬಿ ನಾಯಕತ್ವವನ್ನು ತೊರೆಯಲು ಕಾರಣ ತಿಳಿಸಿದ ವಿರಾಟ್‌ ಕೊಹ್ಲಿ!

ಟಾಮ್‌ ಬೈಲಿ ಯಾರು?

34ರ ವಯಸ್ಸಿನ ಬೈಲಿ ಎಂದಿಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ ಆದರೆ ಅನುಭವಿ ಕೌಂಟಿ ಚಾಂಪಿಯನ್‌ಶಿಪ್ ಆಟಗಾರ. ಬಲಗೈ ವೇಗದ ಬೌಲರ್ ಆಗಿರುವ ಇವರು, ತಮ್ಮ ವೃತ್ತಿಜೀವನದಲ್ಲಿ 113 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 392 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ರೆಡ್-ಬಾಲ್ ಕ್ರಿಕೆಟ್‌ನಲ್ಲಿ 11 ಅರ್ಧಶತಕಗಳೊಂದಿಗೆ 2415 ರನ್ ಗಳಿಸಿದ್ದಾರೆ.