Vastu Tips: ಆಯುಧಗಳು ಮನೆಯಲ್ಲಿ ಇಡುವುದರಿಂದ ಎದುರಾಗುವ ಆಪತ್ತುಗಳೇನು?
ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು. ಯಾವುದೇ ವಸ್ತುವನ್ನು ವಾಸ್ತು (Vastu Shastra) ಪ್ರಕಾರ ಇಡದಿದ್ದರೆ ಅದು ಮನೆಯಲ್ಲಿರುವವರ ಮೇಲೆ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಉಂಟು ಮಾಡುತ್ತದೆ. ಮನೆಯ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯವರೆಲ್ಲ ಒಳ್ಳೆಯ ಫಲಿತಾಂಶಗಳನ್ನು ಕೂಡ ಪಡೆಯುತ್ತಾರೆ. ಮನೆಯಲ್ಲಿ ಆಯುಧಗಳನ್ನು ಇಡಲು ನಿರ್ಧಿಷ್ಟವಾದ ನಿಯಮಗಳಿವೆ. ಯಾಕೆಂದರೆ ಆಯುಧಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಜೀವನದಲ್ಲಿ ಒಂದರಮೇಲೊಂದು ಸಮಸ್ಯೆಗಳು ಹೆಚ್ಚಾಗುತ್ತದೆ.


ಮನೆಯಲ್ಲಿ ಕೆಲವರು ಚೂರಿ, ಖಡ್ಗದಂತಹ ಆಯುಧಗಳನ್ನು ಇಟ್ಟುಕೊಳ್ಳುತ್ತಾರೆ. ಇವುಗಳ ಬಳಕೆ ಮಾಡುವುದಿಲ್ಲದಿದ್ದರೂ ಶೋಕಿಗಾಗಿ ಅಥವಾ ಸಂಪ್ರದಾಯದ ಭಾಗವಾಗಿ ಇದನ್ನು ಇಟ್ಟುಕೊಂಡಿರುತ್ತಾರೆ. ಇದು ಕೆಲವು ಸಮುದಾಯದ ಸಂಪ್ರದಾಯ ಕೂಡ ಆಗಿದೆ. ಹಾಗಾಗಿ ಈ ರೀತಿ ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಏನಾದರೂ ವಾಸ್ತು ಸಮಸ್ಯೆ ಉಂಟಾಗುತ್ತದೆಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ. ಮನೆಯ ಪ್ರತಿಯೊಂದು ದಿಕ್ಕು ವಾಸ್ತುವಿನ ಒಂದೊಂದು ಗುಣಲಕ್ಷಣಗಳನ್ನು ಹೇಳುತ್ತವೆ. ಇಲ್ಲಿ ಸ್ವಲ್ಪ ವ್ಯತ್ಯಾಸಗಳಾದರೂ ದೊಡ್ಡದೊಡ್ಡ ಸಮಸ್ಯೆಗಳು ಕಾಣಿಸಿಕೊಳ್ಳತೊಡಗುತ್ತದೆ.
ಮನೆಯಲ್ಲಿರುವ ಪ್ರತಿಯೊಂದು ವಸ್ತುವನ್ನು ಇಡಲು ವಾಸ್ತು ಶಾಸ್ತ್ರವು ಸರಿಯಾದ ಸ್ಥಳವನ್ನು ಸೂಚಿಸುತ್ತದೆ. ಇದರಲ್ಲಿ ಖಡ್ಗ, ಚಾಕು, ಚೂರಿ, ಬಂಧೂಕಿನಂತ ಆಯುಧಗಳನ್ನು ಇಡಲು ಮನೆಯ ನಿರ್ದಿಷ್ಟವಾದ ದಿಕ್ಕನ್ನು ಪರಿಗಣಿಸಬೇಕು. ಹಾಗಿದ್ದಾಗ ಮಾತ್ರ ಅದು ಮನೆಗೆ ಶುಭ ಪರಿಣಾಮವನ್ನು ಬೀರುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
ಆಯುಧಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವ ಮಹತ್ವದ ಬಗ್ಗೆ ವಾಸ್ತು ಶಾಸ್ತ್ರ ಹೇಳುವುದು ಹೀಗೆ ಎನ್ನುತ್ತಾರೆ ಜ್ಯೋತಿಷ್ಯಾಚಾರ್ಯ ಪಂಡಿತ್ ಅರವಿಂದ ತ್ರಿಪಾಠಿ.
ಮನೆಯಲ್ಲಿ ಎಲ್ಲಾ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡಬೇಕು. ಯಾವುದೇ ವಸ್ತುವನ್ನು ವಾಸ್ತು ಪ್ರಕಾರ ಇಡದಿದ್ದರೆ ಅದು ಮನೆಯಲ್ಲಿರುವವರ ಮೇಲೆ ನಕಾರಾತ್ಮಕ ಶಕ್ತಿಯ ಪರಿಣಾಮವನ್ನು ಉಂಟು ಮಾಡುತ್ತದೆ. ಮನೆಯ ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಮನೆಯವರೆಲ್ಲ ಒಳ್ಳೆಯ ಫಲಿತಾಂಶಗಳನ್ನು ಕೂಡ ಪಡೆಯುತ್ತಾರೆ.
ಮನೆಯಲ್ಲಿ ಆಯುಧಗಳನ್ನು ಇಡಲು ನಿರ್ಧಿಷ್ಟವಾದ ನಿಯಮಗಳಿವೆ. ಯಾಕೆಂದರೆ ಆಯುಧಗಳನ್ನು ತಪ್ಪು ದಿಕ್ಕಿನಲ್ಲಿ ಇಟ್ಟರೆ ಜೀವನದಲ್ಲಿ ಒಂದರಮೇಲೊಂದು ಸಮಸ್ಯೆಗಳು ಹೆಚ್ಚಾಗುತ್ತದೆ. ಅಲ್ಲದೇ ಮನೆಯ ಯಜಮಾನನ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚುತ್ತದೆ.
ಮನೆಯಲ್ಲಿ ಆಯುಧಗಳನ್ನು ಇಡಲು ಸೂಕ್ತವಾದ ಸ್ಥಳವೆಂದರೆ ವಾಯುವ್ಯ ದಿಕ್ಕು. ಮನೆಯಲ್ಲಿ ಚಾಕು, ಚೂರಿ, ಖಡ್ಗದಂತಹ ಆಯುಧಗಳನ್ನು ಹೊಂದಿದ್ದರೆ ಅದನ್ನು ಮನೆಯ ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಅಲ್ಲದೇ ಅದನ್ನು ಮರೆಯಾಗಿ ಇಡುವುದು ಉತ್ತಮ.
ಮನೆಯ ಆಯುಧಗಳನ್ನು ವಾಯುವ್ಯ ದಿಕ್ಕಿನಲ್ಲಿ ಮರೆಯಾಗಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹರಡುತ್ತದೆ. ಒಂದು ವೇಳೆ ಬೇರೆ ದಿಕ್ಕಿನಲ್ಲಿ ಇಟ್ಟರೆ ಮನೆ ಮಂದಿಯ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಇದರೊಂದಿಗೆ ಕುಟುಂಬದಲ್ಲಿ ಸಂಘರ್ಷದ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ವಾಯುವ್ಯ ದಿಕ್ಕನ್ನು ಗಾಳಿಯ ದಿಕ್ಕು ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ದಿಕ್ಕಿನಲ್ಲಿ ಕತ್ತಿಯಂತಹ ಆಯುಧಗಳನ್ನು ಇಡಬಹುದು.

ಮನೆಯ ಪ್ರವೇಶದ್ವಾರದಲ್ಲಿ ಕತ್ತಿಯನ್ನು ಎಂದಿಗೂ ಇಡಬಾರದು. ಮನೆಯ ಅಲಂಕಾರ, ಸೌಂದರ್ಯದ ಭಾಗವಾಗಿ ಕೆಲವರು ಆಯುಧಗಳನ್ನು ಮನೆಯ ಹಾಲ್ ಅಥವಾ ಮುಖ್ಯ ದ್ವಾರದ ಎದುರು ಇಟ್ಟುಕೊಳ್ಳುತ್ತಾರೆ. ಆದರೆ ಇದು ಸರಿಯಲ್ಲ. ಮನೆಯಲ್ಲಿ ಕತ್ತಿಯನ್ನು ಇಟ್ಟುಕೊಂಡಿದ್ದರೆ ಅದನ್ನು ಎಂದಿಗೂ ಪ್ರವೇಶದ್ವಾರದಲ್ಲಿ ಇಡಬಾರದು. ಇದು ವಾಸ್ತು ದೋಷಕ್ಕೆ ಕಾರಣವಾಗಬಹುದು.
ಇದನ್ನೂ ಓದಿ: Vastu Tips: ಬಾಡಿಗೆ ಮನೆಯಲ್ಲಿ ಮಾಡುವ ಈ ತಪ್ಪುಗಳಿಂದಲೂ ಉಂಟಾಗುತ್ತದೆ ವಾಸ್ತು ಸಮಸ್ಯೆ
ಮನೆಯ ಪ್ರವೇಶ ದ್ವಾರದ ಬಳಿ ಆಯುಧಗಳನ್ನು ಇಡುವುದರಿಂದ ಮನೆಯ ಸಂತೋಷ ಮತ್ತು ಸಮೃದ್ಧಿಗೆ ಅಡೆತಡೆಗಳು ಬರಲು ಪ್ರಾರಂಭವಾಗುತ್ತದೆ. ಇದಲ್ಲದೆ ಅತಿಥಿಯೊಬ್ಬರು ಮನೆಗೆ ಪ್ರವೇಶಿಸಿದ ತಕ್ಷಣ ಆಯುಧಗಳನ್ನು ನೋಡಿದರೆ ಅದು ಪರಸ್ಪರ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ಅಪ್ಪಿತಪ್ಪಿಯೂ ಮನೆಯ ಪ್ರವೇಶ ದ್ವಾರದಲ್ಲಿ ಆಯುಧಗಳನ್ನು ಇಡಬೇಡಿ.
ಆಯುಧಗಳು ಯುದ್ಧ ಮತ್ತು ಕಲಹವನ್ನು ಪ್ರತಿನಿಧಿಸುತ್ತದೆ. ಪ್ರಾಚೀನ ಕಾಲದಲ್ಲಿ ಯುದ್ಧದಲ್ಲಿ ಶತ್ರುಗಳನ್ನು ಸೋಲಿಸಲು ಕತ್ತಿ, ಖಡ್ಗದಂತಹ ಆಯುಧಗಳನ್ನು ಬಳಸಲಾಗುತ್ತಿತ್ತು. ಆದ್ದರಿಂದ ಅದನ್ನು ಮನೆಯಲ್ಲಿ ತೆರೆದ ಸ್ಥಳದಲ್ಲಿ ಇಟ್ಟರೆ ವಾಸ್ತು ದೋಷವೂ ಉದ್ಭವಾಗುತ್ತದೆ. ಹೀಗಾಗಿ ಆಯುಧಗಳನ್ನು ಮರೆಯಾಗಿ ಇರಿಸುವುದು ಉತ್ತಮ.
ಇನ್ನು ಆಯುಧಗಳು ಶನಿದೇವನಿಗೆ ಸಂಬಂಧಿಸಿದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಯಾವುದೇ ಕಬ್ಬಿಣದ ವಸ್ತುವು ಶನಿದೇವನನ್ನು ಗುರುತಿಸುತ್ತದೆ. ಆದ್ದರಿಂದ ಮನೆಯಲ್ಲಿ ಆಯುಧಗಳನ್ನು ಇಡುವುದರಿಂದ ಶನಿ ದೋಷ ಉಂಟಾಗಬಹುದು. ಇದರಿಂದ ಮನೆಯಲ್ಲಿ ಸಂತೋಷ ಕಡಿಮೆಯಾಗುತ್ತದೆ. ಮನೆ ಮಂದಿ ಯಾವಾಗಲೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಮನೆಯಲ್ಲಿ ಕಬ್ಬಿಣದಿಂದ ಮಾಡಿರುವ ಯಾವುದೇ ಆಯುಧಗಳಿದ್ದರೂ ಅದನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಶುಭಫಲಗಳನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ವಾಸ್ತು ತಜ್ಞರು.