Operation Sindoor: ಉಗ್ರರ ಶಿಬಿರಗಳನ್ನು ಹೊಂದಿಲ್ಲ ಎಂದ ಪಾಕ್ ಸಚಿವ; ಲೈವ್‌ನಲ್ಲೇ ಬಾಯಿ ಮುಚ್ಚಿಸಿದ ನಿರೂಪಕಿ
ಭಾರತವು ಬುಧವಾರ ಮುಂಜಾನೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆ ಮೇಲೆ ದಾಳಿ ಮಾಡಿದ ಕೆಲವು ಗಂಟೆಗಳ ಬಳಿಕ ನಡೆದ ಈ ಸಂದರ್ಶನದಲ್ಲಿ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ (Pakistan Information and Broadcasting minister) ಅತ್ತೌಲ್ಲಾ ತರಾರ್ ಅವರು ಮೂಕವಿಸ್ಮಿತರಾಗಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದಕ ಶಿಬಿರಗಳನ್ನು ಹೊಂದಿಲ್ಲ ಎಂದು ತರಾರ್ ಹೇಳಿದ್ದಕ್ಕೆ ನಿರೂಪಕಿ ಯಾಲ್ಡಾ ಹಕೀಮ್, ತಕ್ಷಣ ಸತ್ಯವನ್ನು ಪರಿಶೀಲಿಸಿದರು.


ನವದೆಹಲಿ: ಉಗ್ರರು ಭಾರತದಲ್ಲಿ ನಡೆಸಿರುವ ಭಯೋತ್ಪಾದಕ ದಾಳಿಗೆ ( Terror Attack) ಪ್ರತಿಯಾಗಿ ಭಾರತ ಪಾಕ್ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ (Operation Sindoor) ನಲ್ಲಿ ಭಯೋತ್ಪಾದಕ ಶಿಬಿರಗಳು (Terror Camps) ಧ್ವಂಸವಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಸಚಿವ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ (Pakistan Information and Broadcasting minister) ಅತ್ತೌಲ್ಲಾ ತರಾರ್ (Attaullah Tarar), ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಶಿಬಿರಗಳಿಲ್ಲ ಎಂದು ಹೇಳಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಪಾಕಿಸ್ತಾನವು ಭಯೋತ್ಪಾದಕ ಶಿಬಿರಗಳನ್ನು ಹೊಂದಿಲ್ಲ ಎಂದು ಹೇಳಿದಾಗ ಟಿವಿ ನಿರೂಪಕಿ ಸತ್ಯವನ್ನು ಅವರ ಮುಂದಿಟ್ಟಾಗ ನೀವು ಪಾಕಿಸ್ತಾನಕ್ಕೆ ಬನ್ನಿ ಎಂದು ಹೇಳಿದರು.
ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಕುರಿತು ಮಾಧ್ಯಮವೊಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಅತ್ತೌಲ್ಲಾ ತರಾರ್ ಅವರನ್ನು ಸಂದರ್ಶನ ನಡೆಸಿದ್ದು, ಈ ವೇಳೆ ಸಚಿವರು ಪಾಕಿಸ್ತಾನದಲ್ಲಿ ಭಯೋತ್ಪಾದಕ ಶಿಬಿರಗಳಿವೆ ಎಂಬುದನ್ನು ನಿರಾಕರಿಸಿದರು. ಆದರೆ ನಿರೂಪಕಿ ಸತ್ಯ ಪರಿಶೀಲನೆ ನಡೆಸಿದರು.
ಭಾರತವು ಬುಧವಾರ ಮುಂಜಾನೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆ ಮೇಲೆ ದಾಳಿ ಮಾಡಿದ ಕೆಲವು ಗಂಟೆಗಳ ಬಳಿಕ ನಡೆದ ಈ ಸಂದರ್ಶನದಲ್ಲಿ ಪಾಕ್ ಸಚಿವ ಅತ್ತೌಲ್ಲಾ ತರಾರ್ ಅವರು ಮೂಕವಿಸ್ಮಿತರಾಗಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕ ಶಿಬಿರಗಳನ್ನು ಹೊಂದಿಲ್ಲ ಎಂದು ತರಾರ್ ಹೇಳಿದ್ದಕ್ಕೆ ನಿರೂಪಕಿ ಯಾಲ್ಡಾ ಹಕೀಮ್, ತಕ್ಷಣ ಸತ್ಯವನ್ನು ಪರಿಶೀಲಿಸಿದರು. ಪಾಕಿಸ್ತಾನ ರಕ್ಷಣಾ ಸಚಿವೆ ಖವಾಜಾ ಆಸಿಫ್ ಅವರ ಇತ್ತೀಚಿನ ಕಾರ್ಯಕ್ರಮದಲ್ಲಿ ತಮ್ಮ ದೇಶವು ಮೂರು ದಶಕಗಳಿಂದ ಅಮೆರಿಕಕ್ಕಾಗಿ ಈ ಕೊಳಕು ಕೆಲಸ ಮಾಡುತ್ತಿದೆ ಎಂದು ಒಪ್ಪಿಕೊಂಡಿದ್ದನ್ನು ಯಾಲ್ಡಾ ಹಕೀಮ್ ಅವರಿಗೆ ವಿಡಿಯೋ ಮೂಲಕ ತೋರಿಸಿದರು.
ವಿಡಿಯೊ ಇಲ್ಲಿದೆ
Pakistani information minister Ataullah Tarar just went up on Sky News. It didn’t go as planned. Incredible work by @SkyYaldaHakim 👏 pic.twitter.com/pNKJvrjIGo
— Shubhangi Sharma (@ItsShubhangi) May 6, 2025
ಇದಕ್ಕೆ ಪ್ರತ್ಯುತ್ತರ ನೀಡಿದ ಸಚಿವ, ನಾನು ಸ್ಪಷ್ಟವಾಗಿ ಹೇಳುತ್ತೇನೆ. ಪಾಕಿಸ್ತಾನದಲ್ಲಿ ಯಾವುದೇ ಭಯೋತ್ಪಾದಕ ಶಿಬಿರಗಳಿಲ್ಲ. ಪಾಕಿಸ್ತಾನ ಭಯೋತ್ಪಾದನೆಯ ಬಲಿಪಶು. ನಾವು ಭಯೋತ್ಪಾದನೆಯ ವಿರುದ್ಧ ಮುಂಚೂಣಿಯಲ್ಲಿರುವ ರಾಷ್ಟ್ರ. ಜಾಫರ್ ಎಕ್ಸ್‌ಪ್ರೆಸ್ ಅಪಹರಣನಡೆದಾಗ ಅದನ್ನು ಭಾರತ ಖಂಡಿಸಲಿಲ್ಲ ಎಂದು ತರಾರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಅಲ್ಲದೇ ಟಿವಿ ನಿರೂಪಕಿಯನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ ಸಚಿವರು, 9/11ರ ಅನಂತರ ಭಯೋತ್ಪಾದನೆಯ ನಿರ್ಮೂಲನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ ಪಾಕಿಸ್ತಾನವಾಗಿತ್ತು. ನಾನು ನಿಮ್ಮನ್ನು ಪಾಕಿಸ್ತಾನಕ್ಕೆ ಆಹ್ವಾನಿಸಲು ಬಯಸುತ್ತೇನೆ ಎಂದು ಅವರು ಹೇಳಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ನಿರೂಪಕಿ, 2011ರಲ್ಲಿ ಪಾಕಿಸ್ತಾನದಲ್ಲಿ ಅಮೆರಿಕ ಸೇನೆಯಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ 9/11 ದಾಳಿಯ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡೆನ್ ಅಬೋಟಾಬಾದ್‌ನಲ್ಲಿ ಪತ್ತೆಯಾಗಿದ್ದ ಎಂದು ಅವರು ತರಾರ್‌ಗೆ ನೆನಪಿಸಿದರು.
ನಾನು ಪಾಕಿಸ್ತಾನಕ್ಕೆ ಬಂದಿದ್ದೇನೆ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಪತ್ತೆಯಾಗಿರುವುದು ನಮಗೆ ತಿಳಿದಿದೆ ಎಂದು ನಿರೂಪಕಿ ಹೇಳಿದ್ದಕ್ಕೆ ಭಾರತವನ್ನು ಆಕ್ರಮಣಕಾರಿ ಎಂದು ಕರೆದ ಪಾಕಿಸ್ತಾನಿ ಸಚಿವರು, ಭಾರತದ ಪ್ರಚೋದನೆಗೆ ಪಾಕಿಸ್ತಾನ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು. ಭಾರತದ ದಾಳಿಗೆ ನಾವು ಪ್ರತಿಕ್ರಿಯಿಸುತ್ತೇವೆ. ನಾವು ಅವರ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ. ಭಾರತವು ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆ. ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ ಎಂದು ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಮೊದಲ ಬಾರಿಗೆ ಭಾರತೀಯ ಸೇನೆಯು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 9 ಭಯೋತ್ಪಾದಕ ಗುರಿಗಳ ಮೇಲೆ ದಾಳಿ ನಡೆಸಿದೆ. ಭಾರತೀಯ ಸಶಸ್ತ್ರ ಪಡೆಗಳು ಗಡಿ ನಿಯಂತ್ರಣ ರೇಖೆಯನ್ನು ದಾಟದೆ ಪಾಕಿಸ್ತಾನದ ಆಳದಲ್ಲಿರುವ ಭಯೋತ್ಪಾದಕರ ನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಿವೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿಯೇ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಿದ್ದಾರೆ.