Pak ISI: ದಲಿತ ಬಾಲಕಿಯರೇ ISI ಟಾರ್ಗೆಟ್; ಪಾಕ್ ಕುತಂತ್ರ ಮತ್ತೆ ಬಟಾಬಯಲು
ಪ್ರಯಾಗ್‌ರಾಜ್‌ನಲ್ಲಿ ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆಯೊಂದು ಸಕ್ರಿಯವಾಗಿದ್ದು, ದಲಿತ ಬಾಲಕಿಯರೇ ಈ ಸಂಘಟನೆಯ ಟಾರ್ಗೆಟ್ ಎಂಬ ಭಯಾನಕ ಸಂಗತಿ ಬಟಾಬಯಲಾಗಿದೆ. ಕೇರಳ ಮೂಲದ ಕೆಲವು ಶಂಕಿತರು ಭಯೋತ್ಪಾದಕ ತರಬೇತಿಗೆ ಸಲಫಿ-ವಹಾಬಿ (Salafi-Wahhabi) ಸಿದ್ಧಾಂತವನ್ನು ಬಳಸಿಕೊಂಡು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


ಪ್ರಯಾಗ್‌ರಾಜ್: ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‌ಐ ಭಾರತದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಇದೀಗ ಮತ್ತೊಮ್ಮೆ ಬಯಲಾಗಿದೆ. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾದ ಆರೋಪಿಗಳು ಅಥವಾ ಶಂಕಿತ ವ್ಯಕ್ತಿಗಳ ಬಂಧನದ ವೇಳೆ ಹಲವು ಆಘಾತಕಾರಿ ಸಂಗತಿಗಳು ಬಯಲಾಗಿವೆ. ಪ್ರಯಾಗ್‌ರಾಜ್‌ನಲ್ಲಿ ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆಯೊಂದು ಸಕ್ರಿಯವಾಗಿದ್ದು, ದಲಿತ ಬಾಲಕಿಯರೇ ಈ ಸಂಘಟನೆಯ ಟಾರ್ಗೆಟ್ ಎಂಬ ಭಯಾನಕ ಸಂಗತಿ ಬಟಾಬಯಲಾಗಿದೆ. ಕೇರಳ ಮೂಲದ ಕೆಲವು ಶಂಕಿತರು ಭಯೋತ್ಪಾದನೆ ತರಬೇತಿಗೆ ಸಲಫಿ-ವಹಾಬಿ (Salafi-Wahhabi) ಸಿದ್ಧಾಂತವನ್ನು ಬಳಸಿಕೊಂಡು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಗುಪ್ತಚರ ಮೂಲಗಳ ಪ್ರಕಾರ, ಗಲ್ಫ್ ದೇಶಗಳಿಂದ ಧಾರ್ಮಿಕ ದಾನದ ಹೆಸರಿನಲ್ಲಿ ಬಂದ ಹಣವನ್ನು ಬಳಸಿ, ದಲಿತ ಬಾಲಕಿಯರನ್ನು (Dalit Girls) ಇಸ್ಲಾಂಗೆ (Islam) ಮತಾಂತರಗೊಳಿಸಿ, ಭಯೋತ್ಪಾದನೆಗೆ ಬಳಸುವ ಸಂಚನ್ನು ಐಎಸ್‌ಐ ರೂಪಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ಅಪ್ರಾಪ್ತ ದಲಿತ ಬಾಲಕಿಯೊಬ್ಬಳನ್ನು ಅಪಹರಿಸಿ, ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಆಕೆಯನ್ನು ಕೇರಳಕ್ಕೆ ಕರೆದೊಯ್ದು ಭಯೋತ್ಪಾದಕ ತರಬೇತಿಗೆ ಒಳಪಡಿಸಲಾಗಿತ್ತು ಎಂದು ವರದಿಯಾಗಿದೆ. ಗುಪ್ತಚರ ಮೂಲಗಳು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಇದರ ಗುಂಪುಗಳು ಇಸ್ಲಾಮ್ ಅನ್ನು ದಲಿತರಿಗೆ ಸಮಾನತೆಯ ಮಾರ್ಗವೆಂದು ಬಿಂಬಿಸಿ, 3,000ಕ್ಕೂ ಹೆಚ್ಚು ಮತಾಂತರಗಳನ್ನು ಮಾಡಿವೆ ಎಂದು ತಿಳಿಸಿವೆ. ಗಲ್ಫ್‌ನಿಂದ ವಾರ್ಷಿಕ $26.9 ಬಿಲಿಯನ್ ಧನಸಹಾಯವು ಕೇರಳದ ಸಲಫಿ ಮದರಸಾಗಳು, ಎನ್‌ಜಿಒಗಳು ಮತ್ತು ಮಸೀದಿಗಳ ಮೂಲಕ ದಲಿತರನ್ನು ಗುರಿಯಾಗಿಸಿ ಸಂದಾಯವಾಗಿವೆ.
ಈ ಸುದ್ದಿಯನ್ನು ಓದಿ: Viral Video: ದೇವಸ್ಥಾನದಲ್ಲೇ ನಮಾಜ್ ಮಾಡಿದ ಮುಸ್ಲಿಂ ವ್ಯಕ್ತಿ; ಶಾಕಿಂಗ್ ವಿಡಿಯೊ ವೈರಲ್
ಕೇರಳದ ಅನಿಯಂತ್ರಿತ ಸಲಫಿ ಮದರಸಾಗಳು ದಲಿತ ಬಾಲಕಿಯರಿಗೆ ಉಚಿತ ಆಶ್ರಯ, ಶಿಕ್ಷಣ ಮತ್ತು ಭತ್ಯೆ ಒದಗಿಸಿ, ಜಿಹಾದ್‌ನ ಜೊತೆ ವಹಾಬಿ ಸಿದ್ಧಾಂತವನ್ನು ಬೋಧಿಸುತ್ತವೆ. ಕತಾರ್‌ನ ಶೇಖ್ ಅಬ್ದುಲ್ ರಜಾಕ್‌ರಂತಹ ಮೌಲ್ವಿಗಳು ಮಲಯಾಳಂ ಪ್ರಚಾರ ಚಾನಲ್‌ಗಳ ಮೂಲಕ ಸಲಫಿ ಸಂದೇಶವನ್ನು ಹರಡುತ್ತಿದ್ದಾರೆ. ಎನ್‌ಐಎ ಸಾಕ್ಷ್ಯಗಳನ್ನು ರಾಜ್ಯ ಸರ್ಕಾರಗಳು 'ಲವ್ ಜಿಹಾದ್' ಆರೋಪವೆಂದು ತಿರಸ್ಕರಿಸುವುದರಿಂದ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳು ನಿಷೇಧದ ಹೊರತಾಗಿಯೂ ಕಾರ್ಯನಿರ್ವಹಿಸುತ್ತಿವೆ.
70% ಭಯೋತ್ಪಾದನೆ ಪ್ರಕರಣಗಳು 5 ವರ್ಷಗಳಿಗಿಂತ ಹೆಚ್ಚು ಕಾಲ ಕೋರ್ಟ್‌ನಲ್ಲಿ ಬಾಕಿಯಿವೆ. 2024ರಲ್ಲಿ ಕೇರಳ ಪೊಲೀಸರು ಪಿಎಫ್‌ಐ ಬಾಂಬ್ ತಯಾರಕ ಶಜೀರ್ ಮಂಗಲಸ್ಸೆರಿಯನ್ನು ಬಿಡುಗಡೆಗೊಳಿಸಿದರು. ಮತಾಂತರ ಆದ ದಲಿತರಿಗೆ ಅರೇಬಿಕ್ ಹೆಸರು, ಉಡುಗೆ ಮತ್ತು ಭಾಷೆಯನ್ನು ಹೇರುವ ಮೂಲಕ ಅವರ ವಾಸ್ತವ ರೂಪವನ್ನು ಮರೆಮಾಚಲಾಗುತ್ತಿದೆ.