Thug Life Movie: ಕಮಲ್ ಹಾಸನ್-ಮಣಿರತ್ನಂ ಜೋಡಿಯ ʼಥಗ್ಸ್ ಲೈಫ್ʼ ಚಿತ್ರದ ಸಾಂಗ್ ರಿಲೀಸ್
Kamal Haasan: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಕಾಲಿವುಡ್ನ ಥಗ್ ಲೈಫ್ ಕೂಡ ಒಂದು. ಹೆಸರಾಂತ ನಿರ್ದೇಶಕ ಮಣಿರತ್ನಂ ಮತ್ತು ಕಮಲ್ ಹಾಸನ್ ಅನೇಕ ವರ್ಷಗಳ ನಂತರ ಒಂದಾಗುತ್ತಿರುವ ಈ ಚಿತ್ರದ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿರುವ ಈ ಸಿನಿಮಾದ ಮೊಲ ಹಾಡು ಬಿಡುಗಡೆಯಾಗಿದೆ.

ʼಥಗ್ ಲೈಫ್ʼ ಚಿತ್ರದ ಪೋಸ್ಟರ್.


ಹಾಡು ರಿಲೀಸ್
ಚೆನ್ನೈ: 3 ದಶಕದ ನಂತರ ಕಮಲ್ ಹಾಸನ್ - ಮಣಿರತ್ನಂ ಕಾಂಬಿನೇಷನ್ನಲ್ಲಿ ಮೂಡಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ 'ಥಗ್ ಲೈಫ್'. ಈ ಚಿತ್ರದ ಮೊದಲ ಹಾಡಿನ ಬಿಡುಗಡೆ ಕಾರ್ಯಕ್ರಮ ಶುಕ್ರವಾರ (ಏ. 18) ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಮಲ್ ಹಾಸನ್, ಸಿಂಬು, ಮಣಿರತ್ನಂ, ಅಭಿರಾಮಿ, ಅಶೋಕ್ ಸೆಲ್ವನ್, ತ್ರಿಷಾ ಸೇರಿದಂತೆ ಚಿತ್ರರಂಗದ ಹಲವು ತಾರೆಯರು ಭಾಗವಹಿಸಿದ್ದರು.

ʼಜಿಂಗುಚ್ಚಾʼ ಹಾಡು ಕೇಳಿ
'ಥಗ್ ಲೈಫ್' ಚಿತ್ರದ ʼಜಿಂಗುಚ್ಚಾʼ ಹಾಡು ಬಿಡುಗಡೆ ಆಗಿದ್ದು,ಇದರಲ್ಲಿ ಕಮಲ್ ಹಾಸನ್, ಸಿಂಬು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಮದುವೆ ಸಮಾರಂಭದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷ ಅಂದರೆ ಈ ಹಾಡಿಗೆ ಸ್ವತಃ ಕಮಲ್ ಹಾಸನ್ ಸಾಹಿತ್ಯ ಒದಗಿಸಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಗಮನ ಸೆಳೆಯುವಂತಿದೆ. ಹಾಡಿನ ಬಿಡುಗಡೆ ಜತೆಗೆ ಚೆನ್ನೈನಲ್ಲಿ ಪ್ಯಾನ್ ಇಂಡಿಯಾ ಮಟ್ಟದ ಪ್ರೆಸ್ ಮೀಟ್ ಕೂಡ ನಡೆಯಿತು.

ಬಹು ತಾರಾಗಣ
ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಆರ್.ಮಹೇಂದ್ರನ್, ಮದ್ರಾಸ್ ಟಾಕೀಸ್ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಚಿತ್ರದ ತಾರಾಗಣದಲ್ಲಿ ಕಮಲ್ ಹಾಸನ್, ಸಿಲಂಬರಸನ್ (ಸಿಂಬು), ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮೀ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್ ಮತ್ತಿತರರು ನಟಿಸಿದ್ದಾರೆ. ಈ ಬಹು ನಿರೀಕ್ಷಿತ ಚಿತ್ರಕ್ಕೆ ದಿಗ್ಗಜ ಎ.ಆರ್. ರೆಹಮಾನ್ ಅವರ ಸಂಗೀತವಿದೆ.

ಕಥೆ ಬರೆದ ಕಮಲ್ ಹಾಸನ್
ವಿಶೇಷ ಎಂದರೆ ಈ ಚಿತ್ರದ ಕಥೆ, ಚಿತ್ರಕಥೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದಾರೆ. ಮಣಿರತ್ನಂ ನಿರ್ದೇಶನದ ಈ ಚಿತ್ರಕ್ಕೆ ರವಿ ಆರ್. ಚಂದ್ರನ್ ಅವರ ಸಿನಿಮಾಟೋಗ್ರಫಿ, ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ಇದೆ. ʼಥಗ್ ಲೈಫ್ʼ ಚಿತ್ರದ ಒಟಿಟಿ ಹಕ್ಕು ನೆಟ್ಫ್ಲಿಕ್ಸ್ ಪಾಲಾಗಿದ್ದು, ಆಡಿಯೋ ಹಕ್ಕನ್ನು ಸರೆಗಮ ತನ್ನದಾಗಿಸಿಕೊಂಡಿದೆ.

ವಿತರಣಾ ಪಾಲುದಾರರು
ʼಥಗ್ಸ್ ಲೈಫ್ʼ ಸಿನಿಮಾವನ್ನು ತಮಿಳುನಾಡಿನಲ್ಲಿ ರೆಡ್ ಜೈಂಟ್ ಮೂವೀಸ್ ವಿತರಣೆ ಮಾಡಲಿದೆ. ಓವರ್ ಸೀಸ್ನಲ್ಲಿ ಹೋಮ್ ಸ್ಕ್ರೀನ್ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಎಪಿ ಇಂಟರ್ನ್ಯಾಷನಲ್ ವಿತರಣೆ ಮಾಡುತ್ತಿದೆ. ಇನ್ನು ಉತ್ತರ ಭಾರತದಲ್ಲಿ ಪೆನ್ ಮರುಧರ್ ಸಿನಿ ಎಂಟರ್ಟೈನ್ಮೆಂಟ್, ಆಂಧ್ರ ಪ್ರದೇಶ ಮತ್ತು ತೆಲಂಗಾಣನಲ್ಲಿ ಶ್ರೇಷ್ಠ್ ಮೂವೀಸ್ ಹಾಗೂ ಫೈವ್ ಸ್ಟಾರ್ ಸೆಂಥಿಲ್ ಕರ್ನಾಟಕದಲ್ಲಿ ಚಿತ್ರ ವಿತರಣೆ ಮಾಡಲಿದೆ.