Bollywood Bikini Moments: ಕಿಯಾರಾ ಅಡ್ವಾಣಿ To ಡಿಂಪಲ್ ಕಪಾಡಿಯಾ...ಬಿಕಿನಿಯಲ್ಲಿ ಮಿಂಚಿದ ಬಾಲಿವುಡ್ ನಟಿಯರ ಬೋಲ್ಡ್ ಫೋಟೊ ಇಲ್ಲಿದೆ
ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟಿಯರಿಂದ ಹಿಡಿದು ಸ್ಟಾರ್ ನಟಿಯರವರೆಗೆ ಅನೇಕರು ಬಿಕಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸಿನಿಮಾಗಳಲ್ಲಿ ಬಿಕಿನಿ ಧರಿಸಿ, ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸಿದ ಬಾಲಿವುಡ್ ನಟಿಯರ ಫೋಟೊ ಇಲ್ಲಿದೆ.

Iconic Bollywood Bikini Moments


ಕಿಯಾರಾ ಅಡ್ವಾಣಿ
ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳುತ್ತಿರುವ ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ʼವಾರ್ 2ʼ ಟೀಸರ್ ಇತ್ತೀಚೆವೆ ಬಿಡುಗಡೆಯಾಗಿದ್ದು, ಇದರಲ್ಲಿ ಕಂಡು ಬಂದ ಕಿಯಾರಾ ಅಡ್ವಾಣಿ ಅವರ ಬಿಕಿನಿ ಲುಕ್ ಇಂಟರ್ನೆಟ್ ಸಂಚಲನ ಸೃಷ್ಟಿಸಿದೆ. ನಟಿ ಕಿಯಾರಾ ಈ ʼವಾರ್ 2ʼ ಚಿತ್ರದಲ್ಲಿ ಬಿಕಿನಿ ಧರಿಸಿದ್ದು ಅವರ ಬೋಲ್ಡ್ ಲುಕ್ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ವಾಣಿ ಕಪೂರ್
2019ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 'ವಾರ್' ಚಿತ್ರದಲ್ಲಿನ ನಟಿ ವಾಣಿ ಕಪೂರ್ ಅವರ ಬಿಕಿನಿ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುದ್ದವು. ʼವಾರ್' ಸಿನಿಮಾದ ನಾಯಕಿ ವಾಣಿ ಬಿಕಿನಿ ತೊಟ್ಟು ಎಂಟ್ರಿ ಕೊಡುವ ದೃಶ್ಯ ಅಭಿಮಾನಿಗಳ ಮನಸ್ಸು ಗೆದ್ದಿತ್ತು. ಗುಲಾಬಿ ಬಣ್ಣದ ಬಿಕಿನಿಯಲ್ಲಿ ವಾಣಿ ಕಪೂರ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.

ದೀಪಿಕಾ ಪಡುಕೋಣೆ
ಭಾರತೀಯ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ ದೊಡ್ಡ ಸ್ಟಾರ್ ನಟಿ. ಅವರು ಹಲವು ಬಾಲಿವುಡ್ ಚಿತ್ರಗಳಲ್ಲಿ ಬಿಕಿನಿ ಧರಿಸಿ ಬೋಲ್ಡಾಗಿ ಪೋಸ್ ಕೊಟ್ಟಿದ್ದಾರೆ. 2023ರಲ್ಲಿ ರಿಲೀಸ್ ಆದ ʼಪಠಾಣ್ʼ ಸಿನಿಮಾದಲ್ಲಿ ಶಾರುಖ್ ಖಾನ್ ಜತೆ ತೆರೆ ಹಂಚಿಕೊಂಡಿದ್ದ ಅವರು ಹಳದಿ ಬಿಕಿನಿಯಲ್ಲಿ ಹಾಟ್ ಲುಕ್ ನೀಡಿದ್ದಾರೆ.

ಆಲಿಯಾ ಭಟ್
ತಮ್ಮ ಮೊದಲ ʼಸ್ಟೂಡೆಂಟ್ ಆಫ್ ದಿ ಇಯರ್ʼ ಸಿನಿಮಾದಲ್ಲೇ ಆಲಿಯಾ ಭಟ್ ಹಳದಿ ಬಿಕಿನಿಯಲ್ಲಿ ಗ್ಲಾಮರ್ ಆಗಿ ಕಂಡಿದ್ದರು. ಇವರ ಬಿಕಿನಿ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು.

ಲಾರಾ ದತ್ತಾ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಲಾರಾ ದತ್ತಾ ತಮ್ಮ ಲೇಟೆಸ್ಟ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ. 2009ರಲ್ಲಿ ತೆರೆಕಂಡ ʼಬ್ಲೂʼ ಬಾಲಿವುಡ್ ಸಿನಿಮಾದಲ್ಲಿ ಲಾರಾ ದತ್ತಾ ಬಿಕಿನಿಯಲ್ಲಿ ಮಿಂಚಿದ್ದರು.

ಅನುಷ್ಕಾ ಶರ್ಮಾ
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ಯೂಟ್ ಕಪಲ್ ಎನಿಸಿಕೊಂಡಿದ್ದಾರೆ. ಈ ಜೋಡಿಗೆ ಅಪಾರ ಅಭಿಮಾನಿ ಬಳಗವೇ ಇದೆ. ಸದ್ಯ ಸಿನಿಮಾಗಳಿಂದ ದೂರು ಉಳಿದಿರುವ ಅನುಷ್ಕಾ ಶರ್ಮಾ ʼಲೇಡೀಸ್ ವರ್ಸಸ್ ರಿಕಿ ಬಹ್ಲ್ʼ ಚಿತ್ರದಲ್ಲಿ ಬ್ಲಾಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.

ದಿಶಾ ಪಟಾನಿ
ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಬಿಕಿನಿ ತೊಟ್ಟು ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಕಾಣಿಸಿಕೊಂಡ ಕೆಂಪು ಬಿಕಿನಿಯಲ್ಲಿ ದಿಶಾ ಪಟಾನಿಯ ಲುಕ್ ಇಂದಿಗೂ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ.

ಡಿಂಪಲ್ ಕಪಾಡಿಯಾ
ಡಿಂಪಲ್ ಕಪಾಡಿಯಾ ಮತ್ತು ರಿಷಿ ಕಪೂರ್ ಅಭಿನಯದ ಮೊದಲ ಚಿತ್ರ ʼಬಾಬಿʼ. ಇದರಲ್ಲಿ ಡಿಂಪಲ್ ಕೆಂಪು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಆ ಲುಕ್ ಇಂದಿಗೂ ಟ್ರೆಂಡ್ನಲ್ಲಿದೆ.

ಪ್ರಿಯಾಂಕಾ ಚೋಪ್ರಾ
ಬಾಲಿವುಡ್ನ ಸೂಪರ್ ಸ್ಟಾರ್ ಪ್ರಿಯಾಂಕಾ ಚೋಪ್ರಾ 40 ವರ್ಷ ಕಳೆದರು ಇನ್ನೂ ಫಿಟ್ನೆಸ್ ಉಳಿಸಿಕೊಂಡಿದ್ದಾರೆ. ಬಾಲಿವುಡ್ ಬಿಟ್ಟು ಹಾಲಿವುಡ್ನಲ್ಲಿಯೇ ಸೆಟಲ್ ಆಗಿರುವ ಪ್ರಿಯಾಂಕಾ ಚೋಪ್ರಾ ಈ ಹಿಂದೆ ಹಲವು ಬಾರಿ ಬಿಕಿನಿತೊಟ್ಟು ಫೋಸ್ ನೀಡಿದ್ದರು.

ಕತ್ರೀನಾ ಕೈಫ್
ಬಾಲಿವುಡ್ನ ಟಾಪ್ ನಟಿಯರಲ್ಲಿ ಕತ್ರೀನಾ ಕೈಫ್ ಕೂಡ ಒಬ್ಬರು. ಬಾಲಿವುಡ್ನಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಒಬ್ಬರೆಸಿಕೊಂಡಿರುವ ಕತ್ರೀನಾ ʼಬ್ಯಾಂಗ್ ಬ್ಯಾಂಗ್ʼ ಚಿತ್ರದಲ್ಲಿ ಬಿಕಿನಿ ತೊಟ್ಟು ಸೆಕ್ಸಿಯಾಗಿ ಕಾಣಿಸಿಕೊಂಡಿದ್ದರು.