Mukesh Ambani: ಮುಖೇಶ್ ಅಂಬಾನಿ ಬಗ್ಗೆ ಮೆಹೆಂದಿ ಆರ್ಟಿಸ್ಟ್ ಹೇಳಿದ್ದೇನು ಗೊತ್ತಾ?
ವ್ಯಕ್ತಿ ಎಷ್ಟೇ ಎತ್ತರಕ್ಕೆ ಏರಿದರೂ ತಾನು ಬೆಳೆದು ಬಂದ ಹಾದಿಯನ್ನು ಮರೆಯಬಾರದು ಎನ್ನುತ್ತಾರೆ ಹಿರಿಯರು. ಆದರೆ ಈ ಗುಣ ಎಲ್ಲರಲ್ಲೂ ಇರುವುದಿಲ್ಲ. ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಹಿಂದಿನ ದಿನಗಳ ನೆನಪುಗಳನ್ನು, ವ್ಯಕ್ತಿಗಳನ್ನು ಸದಾ ನೆನಪಿಸಿಕೊಳ್ಳುತ್ತಾರೆ. ಎಲ್ಲಾದರೂ ಸಿಕ್ಕಿದರೆ ಹತ್ತಿರ ಬಂದು ಮಾತನಾಡುತ್ತಾರೆ. ಅಂತವರಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಒಬ್ಬರು.



ಭಾರತದ ಅತಿದೊಡ್ಡ ಖಾಸಗಿ ವಲಯದ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಖೇಶ್ ಅಂಬಾನಿ ಎಷ್ಟೇ ಎತ್ತರಕ್ಕೆ ಏರಿದ್ದರೂ ತಾವು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಅವರ ಈ ಗುಣವನ್ನು ಮೆಹೆಂದಿ ಕಲಾವಿದರೊಬ್ಬರು ಬಹಿರಂಗಪಡಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಖ್ಯಾತ ಮೆಹಂದಿ ಕಲಾವಿದೆ ವೀಣಾ ನಾಗ್ಡಾ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಿಗೆ ಶುಭಾಶಯ ಸಂದೇಶವನ್ನು ಹಾಕಿ ಅವರ ಒಂದು ವಿಶೇಷ ಗುಣದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ.

ಮುಖೇಶ್ ಅಂಬಾನಿಯವರ ಹುಟ್ಟುಹಬ್ಬದಂದು ಖ್ಯಾತ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ಅವರು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರ ವಿಶೇಷ ಗುಣದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ ಅವರು ತಾವು ಬೆಳೆದು ಬಂದ ಹಾದಿಯನ್ನು ಮರೆತಿಲ್ಲ. ಇದನ್ನು ಪ್ರದರ್ಶಿಸುವ ಅವರ ವ್ಯಕ್ತಿತ್ವದ ಲಕ್ಷಣವನ್ನು ಅವರು ಬಹಿರಂಗಪಡಿಸಿದರು.

ವೀಣಾ ನಾಗ್ಡಾ ಅವರು ಅಂಬಾನಿ ಕುಟುಂಬದೊಂದಿಗೆ ಸುದೀರ್ಘ ಕಾಲದಿಂದ ಸಂಬಂಧವನ್ನು ಹೊಂದಿದ್ದಾರೆ. ದಶಕಗಳಿಂದ ಅವರ ಖಾಸಗಿ ಕುಟುಂಬ ಕಾರ್ಯಕ್ರಮಗಳಲ್ಲಿ ಮೆಹೆಂದಿ ಕಲಾವಿದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರು ಅಂಬಾನಿ ಕುಟುಂಬವನ್ನು ಹೆಚ್ಚು ನಿಕಟವಾಗಿ ತಿಳಿದುಕೊಂಡಿದ್ದಾರೆ.

ಇತ್ತೀಚೆಗೆ ಅನಂತ್ ಮತ್ತು ರಾಧಿಕಾ ಅವರ ವಿವಾಹದಲ್ಲಿ ನೀತಾ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಗೆ ವೀಣಾ ಅವರೇ ಮೆಹೆಂದಿ ಹಚ್ಚಿದರು. ಅಂಬಾನಿ ಕುಟುಂಬದೊಂದಿಗೆ ಅವರ ಸಂಬಂಧ ಸುಮಾರು 40 ವರ್ಷಗಳಿಂದ ಇದೆ. ಈ ಹಿಂದೆ ಮುಖೇಶ್ ಅಂಬಾನಿ ಅವರ ಸಹೋದರಿ ದೀಪ್ತಿ ಸಲ್ಗಾಂವ್ಕರ್ ಅವರ ವಿವಾಹದಲ್ಲಿ ಕೂಡ ತಾವೇ ಅವರಿಗೆ ಮೆಹೆಂದಿ ಹಚ್ಚಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಮುಖೇಶ್ ಅಂಬಾನಿ ಅವರು ಕೇವಲ ಯಶಸ್ವಿ ಉದ್ಯಮಿ ಮಾತ್ರವಲ್ಲ. ವೈಯಕ್ತಿಕ ಬಾಂಧವ್ಯಗಳನ್ನು ಬೆಳೆಸುವ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಮುಖೇಶ್ ಅಂಬಾನಿ ಅವರು ತುಂಬಾ ಸರಳ ವ್ಯಕ್ತಿ ಎಂಬುದನ್ನು ತೋರಿಸುವ ಅವರ ಒಂದು ವ್ಯಕ್ತಿತ್ವದ ಲಕ್ಷಣವೆಂದರೆ ಅವರು ಪ್ರತಿ ಬಾರಿ ಭೇಟಿಯಾದಾಗಲೂ ತಮ್ಮ ಕುಟುಂಬ ಸದಸ್ಯರ ಬಗ್ಗೆ ಕೇಳುತ್ತಾರೆ ಎಂದಿದ್ದಾರೆ ವೀಣಾ.

ಮುಖೇಶ್ ಅಂಬಾನಿ ವ್ಯವಹಾರದಲ್ಲಿ ಮಾತ್ರ ದೊಡ್ಡ ವ್ಯಕ್ತಿಯಲ್ಲ. ಅವರು ಆಳವಾದ ವೈಯಕ್ತಿಕ ಬಾಂಧವ್ಯಗಳನ್ನು ಗೌರವಿಸುವ ವ್ಯಕ್ತಿಯೂ ಆಗಿದ್ದಾರೆ ಎಂಬುದಾಗಿ ವೀಣಾ ನಾಗ್ಡಾ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ. ಅವರು ನನ್ನನ್ನು ಭೇಟಿಯಾದಾಗಲೆಲ್ಲಾ ನನ್ನ ಕುಟುಂಬದ ಬಗ್ಗೆ ಕೇಳಲು ಮರೆಯುವುದಿಲ್ಲಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. ಮುಖೇಶ್ ಭಾಯ್ ಅಂಬಾನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದಿರುವ ನಾಗ್ಡಾ ಅವರು ಅಂಬಾನಿ ಕುಟುಂಬದೊಂದಿಗೆ ಇರುವ ಹಲವಾರು ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಫೋರ್ಬ್ಸ್ ಪ್ರಕಾರ ಮುಖೇಶ್ ಅಂಬಾನಿ 96 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, ಅವರು 1957ರ ಏಪ್ರಿಲ್ 19ರಂದು ಧೀರೂಭಾಯಿ ಅಂಬಾನಿ ಮತ್ತು ಕೋಕಿಲಾಬೆನ್ ಅಂಬಾನಿ ದಂಪತಿಯ ಮಗನಾಗಿ ಜನಿಸಿದರು. ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ರಿಲಯನ್ಸ್ ಫೌಂಡೇಶನ್ನ ಅಧ್ಯಕ್ಷೆ ನೀತಾ ಅಂಬಾನಿ ದಂಪತಿಗೆ ಮೂವರು ಮಕ್ಕಳು. ಅವಳಿ ಮಕ್ಕಳಾದ ಇಶಾ, ಆಕಾಶ್ ಮತ್ತು ಅವರ ಕಿರಿಯ ಮಗ ಅನಂತ್ ಅಂಬಾನಿ.