ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tej Pratap Yadav: ಮತ್ತೆ ಸುದ್ದಿಯಲ್ಲಿ ಲಾಲೂ ಪುತ್ರ- ಪ್ರೇಯಸಿ ಜೊತೆಗಿನ ಫೋಟೋ ವೈರಲ್‌ ಆಗಿದ್ದಂತೆ ತೇಜ್ ಪ್ರತಾಪ್ ಯಾದವ್ ಹೇಳಿದ್ದೇನು?

Tej Pratap Yadav: ಆರ್‌ಜೆಡಿ ನಾಯಕ ಮತ್ತು ಲಾಲು ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅನುಷ್ಕಾ ಯಾದವ್ ಅವರೊಂದಿಗಿನ 13 ವರ್ಷಗಳ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲದೇ ಕಳೆದ ಕೆಲ ವರ್ಷಗಳಿಂದ ಅನುಷ್ಕಾ ಅವರೊಂದಿಗೆ ಸಂಬಂಧದಲ್ಲಿದ್ದು, ಈಗ ಈ ಸಂಬಂಧವನ್ನು ಪ್ರಪಂಚದ ಮುಂದೆ ತರಬೇಕಾದ ಅಗತ್ಯವಿದೆ ಅವರು ಬರೆದುಕೊಂಡಿದ್ದರು.

ಮತ್ತೆ ಸುದ್ದಿಯಲ್ಲಿ ಲಾಲೂ ಪುತ್ರ- ಪ್ರೇಯಸಿ ಜೊತೆಗಿನ ಫೋಟೋ ವೈರಲ್‌!

ತೇಜ್ ಪ್ರತಾಪ್ ಯಾದವ್ ಹಾಗೂ ಅನುಷ್ಕಾ ಯಾದವ್

Profile Sushmitha Jain Jul 2, 2025 12:31 PM

ಪಾಟ್ನಾ: ಕಳೆದ ತಿಂಗಳಷ್ಟೇ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಮನೆಯಲ್ಲಿ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಹಾಗೂ ಅನುಷ್ಕಾ ಯಾದವ್ (Anushka Yadav) ನಡುವಿನ ಫೋಟೋ ವೈರಲ್ ಆಗಿ ಕೋಲಾಹಲವೇ ನಡೆಯುತ್ತಿತ್ತು. ಅವರಿಬ್ಬರ ಸಂಬಂಧ ಜಗಜ್ಜಾಹೀರಾಗಿತ್ತು. ಇದಾಗುತ್ತಿದ್ದಂತೆ ಲಾಲೂ ಪ್ರಸಾದ್ ಯಾದವ್ ಮಗನನ್ನು ಮನೆಯಿಂದ ಹೊರಹಾಕಿದ್ದಲ್ಲದೇ, ತಮ್ಮ ಆರ್‌ಜೆಡಿಯಿಂದಲೂ (RJD) 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ್ದರು. ಇದರ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಮಾಜಿ ಪತ್ನಿ ಐಶ್ವರ್ಯಾ ರೈ (Aishwarya Rai) ಸಿಡಿದೆದ್ದಿದ್ದರು.

ಆದರೆ ಇದೀಗ ಆರ್‌ಜೆಡಿ ನಾಯಕ ಮತ್ತು ಲಾಲು ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ಹೌದು ಇತ್ತೀಚೆಗೆ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಅನುಷ್ಕಾ ಯಾದವ್ ಅವರೊಂದಿಗಿನ 13 ವರ್ಷಗಳ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲದೇ ಕಳೆದ ಕೆಲ ವರ್ಷಗಳಿಂದ ಅನುಷ್ಕಾ ಅವರೊಂದಿಗೆ ಸಂಬಂಧದಲ್ಲಿದ್ದು, ಈಗ ಈ ಸಂಬಂಧವನ್ನು ಪ್ರಪಂಚದ ಮುಂದೆ ತರಬೇಕಾದ ಅಗತ್ಯವಿದೆ ಅವರು ಬರೆದುಕೊಂಡಿದ್ದರು. ಇದೀಗ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಅನುಷ್ಕಾ ಜೊತೆಗಿನ ಫೋಟೋವನ್ನು ನಾನೇ ಪೋಸ್ಟ್‌ ಮಾಡಿದ್ದು ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದು, ಎಲ್ಲರೂ ನನ್ನ ಪೋಸ್ಟ್ ನೋಡಿ, ಅದು ಏನೆಂದು ಅರ್ಥ ಮಾಡಿಕೊಂಡಿದ್ದಾರೆ. ಎಲ್ಲರೂ ಪ್ರೀತಿಯಲ್ಲಿ ಬೀಳುವಂತೆ ನನ್ನಗೂ ಅನುಷ್ಕಾ ಜೊತೆ ಪ್ರೇಮಾಂಕುರವಾಗಿದ್ದು, ಅದಕ್ಕೆ ನಾನು ಯಾವ ಬೆಲೆ ತೆರಬೇಕಾಗಿತ್ತೋ ಅದನ್ನು ತೆತ್ತಿದ್ದೇನೆ. ಹಾಗಾಗಿ ಈಗ ಅದನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ನನ್ನ ಗಮನ ಬಿಹಾರ ಮತ್ತು ಇಲ್ಲಿನ ಜನರ ಮೇಲಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: ಬಲು ಅಪರೂಪ ನಮ್ಮ ಜೋಡಿ, ಚುನಾವಣೆಗೆ ನಾವು ರೆಡಿ!

ಯಾರೂ ನನ್ನನ್ನು ಜನರ ಹೃದಯದಿಂದ ತೆಗೆಯಲು ಸಾಧ್ಯವಿಲ್ಲ. ನಾನು ಖಂಡಿತವಾಗಿಯೂ ಪಕ್ಷಕ್ಕೆ ಮರಳುವೆ. ಜನರೇ ನಮ್ಮನ್ನು ಮುನ್ನಡೆಸುತ್ತಾರೆ. ಚುನಾವಣೆಯಲ್ಲಿ ಏನಾಗುತ್ತದೆ ಎಂದು ನೋಡೋಣ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ. ತಮ್ಮ ವಿವಾದಾತ್ಮಕ ಪೋಸ್ಟ್ ಮತ್ತು ಪಕ್ಷದಿಂದ ಉಚ್ಚಾಟನೆಯ ಬಗ್ಗೆ ಕೇಳಿದಾಗ, "ಈಗ ಹಿಂದಿನದನ್ನು ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಗಮನ ಬಿಹಾರ ಮತ್ತು ಮುಂಬರುವ ಚುನಾವಣೆಯ ಮೇಲಿದೆ. ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ, ಜನರೊಂದಿಗಿನ ಈ ಬಾಂಧವ್ಯವನ್ನು ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ” ಎಂದಿದ್ದಾರೆ.

ಜನರಿಗಾಗಿ ಯಾತ್ರೆ ಕೈಗೊಳ್ಳುವ ಯೋಜನೆಯಿದೆ ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ. ಯಾತ್ರೆಯ ಹೆಸರನ್ನು ಆ ಸಮಯದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು. ನನ್ನ ಪಾತ್ರವನ್ನು ಜನರೇ ನಿರ್ಧರಿಸುತ್ತಾರೆ. ನಾನು ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ನನ್ನ ತಂದೆಯೇ ನನಗೆ ಸರ್ವಸ್ವ. ನಾನು ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಶತ್ರುಗಳು ಪ್ರತಿ ಹೆಜ್ಜೆಯಲ್ಲೂ ಇದ್ದಾರೆ, ಕೆಲವೊಮ್ಮೆ ಮನೆಯೊಳಗೂ ಇದ್ದಾರೆ. ನನ್ನ ವಿರೋಧಿಗಳಿಗೆ ಜನತೆಯೇ ಯೋಗ್ಯ ಉತ್ತರ ನೀಡುತ್ತಾರೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.